Homeಕರ್ನಾಟಕರಾಷ್ಟ್ರಪತಿ ಆಡಳಿತದ ಕಡೆಗೆ ಕರ್ನಾಟಕ?

ರಾಷ್ಟ್ರಪತಿ ಆಡಳಿತದ ಕಡೆಗೆ ಕರ್ನಾಟಕ?

ರಾಜ್ಯಪಾಲರು, ಸುಪ್ರೀಂಕೋರ್ಟಿನ ಮಧ್ಯಪ್ರವೇಶದಿಂದ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಯೂ ಇದೆ.

- Advertisement -
- Advertisement -

ರಾಜ್ಯ ಸರ್ಕಾರದ ಸುತ್ತ ನಡೆಯುತ್ತಿರುವ ಘಟನಾವಳಿಗಳು ರಾಷ್ಟ್ರಪತಿ ಆಡಳಿತದ ಕಡೆಗೆ ನಡೆಯುತ್ತಿರುವ ಹಾಗೆ ಕಾಣುತ್ತಿದೆ. ಕುಮಾರಸ್ವಾಮಿಯವರು ವಿಶ್ವಾಸಮತ ಯಾಚನೆಗೆ ಎಷ್ಟು ಸಮಯ ತೆಗೆದುಕೊಂಡರೂ ಪರವಾಗಿಲ್ಲ, ಆ ನಂತರ ಬಿದ್ದು ಹೋಗುವ ಸಾಧ್ಯತೆಯೇ ಹೆಚ್ಚಿದೆ. ಆದರೆ, ಬಿಜೆಪಿಯವರು ಅಷ್ಟು ಹೊತ್ತು ಕಾಯಲು ಸಿದ್ಧವಿಲ್ಲ. ಹಾಗೆ ಆದರೆ, ಮುಂಬೈನಲ್ಲಿ ಇರುವ ಶಾಸಕರು ಮರಳಿ ತಮ್ಮ ಪಕ್ಷಗಳಿಗೆ ಹೋಗಿಬಿಡಬಹುದೆಂಬ ಆತಂಕ ಬಿಜೆಪಿಯದ್ದು. ಹಾಗಾಗಿ ರಾಜ್ಯಪಾಲರಿಗೆ ಪದೇ ಪದೇ ಮನವಿ ಕೊಟ್ಟು ಅವರಿಂದ ಸ್ಪೀಕರ್‍ಗೆ ಸಂದೇಶ ಬರುವಂತೆ ನೋಡಿಕೊಂಡರು. ಆದರೆ, ಸ್ಪೀಕರ್‍ಗೆ ಸದನವನ್ನು ಯಾವ ರೀತಿ ನಡೆಸಬೇಕೆಂಬ ನಿರ್ದೇಶನ ಕೊಡುವ ಅಧಿಕಾರ ರಾಜ್ಯಪಾಲರಿಗಿಲ್ಲವಾದ್ದರಿಂದ ಅದಕ್ಕೆ ಸ್ಪೀಕರ್ ಕವಡೆ ಕಾಸಿನ ಕಿಮ್ಮತ್ತು ನೀಡಲಿಲ್ಲ.

ಆ ನಂತರ ಸಭಾನಾಯಕ ಕುಮಾರಸ್ವಾಮಿಯವರಿಗೇ ರಾಜ್ಯಪಾಲರಿಂದ ಸಮಯ ನಿಗದಿ ಮಾಡಿಸಿದರು. ತಾಂತ್ರಿಕವಾಗಿ ಇದು ಸರಿಯಿತ್ತು. ಹಾಗಾಗಿ ಅದನ್ನು ಕುಮಾರಸ್ವಾಮಿಯವರು ಒಪ್ಪಲೇಬೇಕಾಗುತ್ತದೆ ಎಂಬ ನಿರೀಕ್ಷೆ ಎಲ್ಲರದ್ದಾಗಿತ್ತು. ಅದರ ಕುರಿತು ಮತ್ತೆ ರಾಜ್ಯಪಾಲರಿಗೆ ಪತ್ರ ಬರೆದರು. ಮಧ್ಯಾಹ್ನ 1.30ರ ಡೆಡ್‍ಲೈನ್‍ಗೆ ಡೋಂಟ್‍ಕೇರ್ ಎಂಬಂತೆ ಸದನದ ಕಲಾಪ ನಡೆಯಿತು. ಅಷ್ಟೇ ಅಲ್ಲದೇ ರಾಜ್ಯಪಾಲರು ಇಂತಹ ಡೆಡ್‍ಲೈನ್ ತಾಂತ್ರಿಕವಾಗಿಯೂ ತಪ್ಪಿರಬಹುದೇ ಎಂಬ ಅನುಮಾನ ಮೂಡುವ ರೀತಿಯಲ್ಲಿ ಹಲವು ಕೋರ್ಟ್ ಆದೇಶಗಳನ್ನು ಉಲ್ಲೇಖಿಸಲಾಯಿತು.

ಇಷ್ಟು ಹೊತ್ತಿಗೆ ರಾಜ್ಯಪಾಲರಿಂದ ಇನ್ನೊಂದು ಗಡುವು, ಸಂಜೆ 6 ಗಂಟೆ ನಿಗದಿಯಾಯಿತು. ಅದನ್ನು ಉಲ್ಲೇಖಿಸಿದ ಕುಮಾರಸ್ವಾಮಿಯವರು ರಾಜ್ಯಪಾಲರು ಈ ಅವಧಿಯಲ್ಲಿ ನಡೆದುಕೊಂಡ ಪಕ್ಷಪಾತದ ರೀತಿಯನ್ನು ಸದನದಲ್ಲಿ ಪ್ರಸ್ತಾಪಿಸಿದರು. ಅಂದರೆ, ರಾಜ್ಯಪಾಲರ ಈ ನಡೆಗೆ ನಮ್ಮ ಮಾನ್ಯತೆ ಇಲ್ಲ ಎನ್ನುವುದನ್ನು ಸೂಚಿಸಿದರು. ತನ್ನ ಪತ್ರದಲ್ಲಿ ಕುದುರೆ ವ್ಯಾಪಾರ ಎಂಬ ಪದವನ್ನು ಬಳಸಿರುವ ರಾಜ್ಯಪಾಲರು, ಕುದುರೆ ವ್ಯಾಪಾರ ಯಾರು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಲ್ಲವಾ ಎಂದು ಹರಿಹಾಯ್ದರು.

ಮುಂದುವರೆದು, ಯಡಿಯೂರಪ್ಪನವರನ್ನುದ್ದೇಶಿಸಿ ‘ಬಹಳ ಆತುರದಲ್ಲಿದ್ದೀರಿ. ಅದು ಅಷ್ಟು ಒಳ್ಳೆಯದಲ್ಲ. ನೋಡೋಣ, ಏನಾಗುತ್ತೆ ಅಂತ. ರಾಷ್ಟ್ರಪತಿ ಆಡಳಿತ ಬರುತ್ತದೋ ಅಥವಾ ನೀವು ಮುಖ್ಯಮಂತ್ರಿಯಾಗ್ತೀರೋ ಎನ್ನೋದನ್ನು ನೋಡೋಣ’ ಎಂದೂ ಹೇಳಿದರು.

ಇದರ ಅರ್ಥ ಇಷ್ಟೇ. ರಾಜ್ಯಪಾಲರ (ಸರ್ಕಾರದ ಪ್ರಕಾರ) ಅನೈತಿಕ ನಡೆಗೆ ಸರ್ಕಾರವು ಬದ್ಧವಾಗುವುದಿಲ್ಲ. ಅದರ ಬದಲಿಗೆ ಸುಪ್ರೀಂಕೋರ್ಟಿಗೆ ಹೋಗುತ್ತದೆ. ಸುಪ್ರೀಂಕೋರ್ಟು ತೀರ್ಮಾನ ಘೋಷಿಸುವುದೇ ತಡವಾಗುವ ಸಾಧ್ಯತೆಯೂ ಇದೆ. ಏಕೆಂದರೆ, ಇದರಲ್ಲಿ ಹಲವು ಸಾಂವಿಧಾನಿಕ ಅಂಶಗಳಿವೆ. ಅಸಾಂವಿಧಾನಿಕವಾದ ತೀರ್ಪು ಬಂದರೆ, ಶಾಸಕಾಂಗದ ಸ್ವಾಯತ್ತತೆಗೆ ಧಕ್ಕೆ ತಂದರೆ ಒಪ್ಪಲ್ಲ ಎನ್ನುವ ಸರ್ಕಾರ ಇದೆ. ಹಾಗಾಗಿ ಕೋರ್ಟೂ ಎಚ್ಚರಿಕೆಯಿಂದ ಹೆಜ್ಜೆಗಳನ್ನಿಡಬೇಕಾಗುತ್ತದೆ. ಆ ಮಧ್ಯೆ ಸದನದಲ್ಲಿ ವಿಶ್ವಾಸಮತ ಯಾಚನೆ ಮುಗಿಯದೇ ಹೋದರೆ ರಾಜ್ಯಪಾಲರು ಏನು ಮಾಡುತ್ತಾರೆ?

ಇದನ್ನೂ ಓದಿ: ಪಕ್ಷಾಂತರ ನಿಷೇಧ ಕಾಯ್ದೆ: ಸ್ಪೀಕರ್ v/s ಸುಪ್ರೀಂ ಕೋರ್ಟ್

ಸರ್ಕಾರವನ್ನು ಮತ್ತು ಸದನವನ್ನು ಅಮಾನತ್ತಿನಲ್ಲಿಡುವ ಸಂಭವವಿದೆ. ಆಗ ಅನಿವಾರ್ಯವಾಗಿ ರಾಷ್ಟ್ರಪತಿ ಆಡಳಿತ ಬರುತ್ತದೆ. ಅದೇ ಹೊತ್ತಿನಲ್ಲಿ ಸುಪ್ರೀಂಕೋರ್ಟಿನಲ್ಲಿ ಉಳಿದ ವಿಚಾರಗಳು ಬಗೆಹರಿದಿರುವುದಿಲ್ಲ. ಹಾಗಿರುವಾಗ ಬಿಜೆಪಿಯನ್ನು ಆಡಳಿತದಲ್ಲಿ ಕೂರಿಸುವ ಕೆಲಸವನ್ನು ರಾಜ್ಯಪಾಲರು ಮಾಡುತ್ತಾರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆಲ್ಲದರ ಕಾರಣದಿಂದ ರಾಷ್ಟ್ರಪತಿ ಆಡಳಿತದ ಪ್ರಶ್ನೆ ಉದ್ಭವಿಸಿದೆ. ಆ ನಂತರ ಈ ಬಿಕ್ಕಟ್ಟು ಹೇಗೆ ಮತ್ತು ಯಾವಾಗ ಬಗೆಹರಿಯುತ್ತದೆಂಬುದರ ಮೇಲೆ ಮುಂದಿನ ಬೆಳವಣಿಗೆಗಳು ಇರುತ್ತವೆ. ಶಾಸಕರು ಅನರ್ಹಗೊಂಡರೂ ಬಿಜೆಪಿಗೆ ಹೆಚ್ಚಿನ ಸೀಟುಗಳು ಇರುವುದರಿಂದ ಅವರದ್ದೇ ಸರ್ಕಾರ ಬರುವ ಸಾಧ್ಯತೆಗಳು ಹೆಚ್ಚು. ಅನರ್ಹಗೊಂಡ ನಂತರ ಮತ್ತೆ ಆ ಶಾಸಕರು ಬಿಜೆಪಿ ಟಿಕೆಟ್‍ನಿಂದ ಸ್ಪರ್ಧಿಸಿ ಗೆಲ್ಲಬೇಕು. ಕೆಲವರು ಸೋಲಲೂಬಹುದು. ಒಟ್ಟಿನಲ್ಲಿ ಅತಂತ್ರ ಸ್ಥಿತಿ ಸಾಕಷ್ಟು ಕಾಲ ಮುಂದುವರೆಯುವುದಂತೂ ಖಂಡಿತ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...