Homeಅಂಕಣಗಳುಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

ಸ್ವಾಮೀಜಿಗಳ ಅವಾಂತರಗಳು ಇನ್ನೂ ಮುಂದಿವೆಯಂತಲ್ಲಾ!

- Advertisement -
- Advertisement -

| ಯಾಹೂ |

ಹಿಂದೂ ಧರ್ಮಕ್ಕಂಟಿದ ಜಾತಿ ಎಂಬ ಶಾಪದ ಕಾಯಿಲೆ ಉಲ್ಬಣಿಸಿದೆಯಂತಲ್ಲಾ. ಒಂದು ಕಲಸಿದ ಪದಾರ್ಥ ಶೇಖರಗೊಂಡ ತುದಿ, ಕುತುರೆ ಎನ್ನಿಸಿಕೊಳ್ಳುತ್ತದೆ. ಜಾತಿಗಳ ಮೇಲೆ ಕುಳಿತ ಸ್ವಾಮಿಗಳೂ ಈ ಕುತುರೆಯೇ, ಅದಕ್ಕೆ ಯಾವಾಗಲೂ ಊಧ್ರ್ವ ಮುಖವಿರಬೇಕು. ಒಳ್ಳೆ ಭಾಷೆ, ನಡವಳಿಕೆ ಬಹಳ ಮುಖ್ಯ. ಅದರಲ್ಲೂ ಭಾಷೆ ಬಸವಣ್ಣ ಹೇಳಿದಂತೆ ಸ್ಪಟಿಕದ ಸಲಾಕೆಯಂತಿರಬೇಕು. ಕಬ್ಬಿಣದ ರಾಡು ಅಥವಾ ಚೂರಿಯಂತಿರಬಾರದು. ಆದರೆ, ಈ ಆಧುನಿಕ ಯುಗದ ಸ್ವಾಮಿಗಳನ್ನು ನೋಡಿದರೆ, ಬಗಲಲ್ಲಿ ಚೂರಿ ಇಟ್ಟುಕೊಂಡವರಂತೆ ಕಾಣುತ್ತಾರಲ್ಲಾ. ಈಚೆಗೆ ವಾಲ್ಮೀಕಿ ಜನಾಂಗ ಮೀಸಲಾತಿ ಬೇಡಿಕೆಗಾಗಿ ಸಂಘಟಿತಗೊಂಡು, ನೂರಾರು ಮೈಲಿ ಕಾಲ್ನಡಿಗೆ ಮಾಡಿ ಬೆಂಗಳೂರು ತಲುಪಿತು. ಸಾವಿರಾರು ಜನರ ತಲೆ ನೋಡಿದ ಪ್ರಸನ್ನಾನಂದ ಪುರಿಯವರ ತಲೆ ತಿರುಗಿತು. ನಾಲಿಗೆ ಹೊರಳಿತು, “ನಮ್ಮ ಜನಾಂಗದ 17 ಶಾಸಕರು ಕೈಕೊಟ್ಟರೆ ಕುಮಾರಸ್ವಾಮಿ ಗೊಟಕ್ ಅಂತಾರೆ, ಇಲ್ಲಿಗೆ ಕುಮಾರಸ್ವಾಮಿನೂ ಬರಬೇಕು, ಅವರಪ್ಪನೂ ಬರಬೇಕು ಎಂದರು”. ಅಲ್ಲಿಗೆ ಪಾದಯಾತ್ರೆಯ ಸಾಧನೆ ಗೊಟಕ್ ಅಂತು. ಕುಂಬಾರನಿಗೆ ನೂರು ದಿವಸ, ದೊಣ್ಣೆ ನಾಯಕನಿಗೆ ಮೂರು ನಿಮಿಷ ಎಂಬಂತೆ ಮಾಡಿದ ಪ್ರಸನ್ನಾನಂದ ಪುರಿ ಸ್ವಾಮಿಗೆ ಯಾರಾದರೂ `ಪ್ರಸನ್ನ’ ಅಂದರೇನೆಂದು ಹೇಳಿಕೊಡಬೇಕಾಗಿದೆಯಲ್ಲಾ, ಥೂತ್ತೇರಿ!

ಈ ಸ್ವಾಮಿಗಳ ಅವಾಂತರಗಳು ಇನ್ನ ಭವಿಷ್ಯದಲ್ಲಿ ಭೀಕರವಾಗಿವೆಯಂತಲ್ಲಾ. ಹವ್ಯಕ ಜನಾಂಗದ ವಿದ್ವಾಂಸರನ್ನ ಕೇಳಿದರೆ, ನಮ್ಮ ಜನಾಂಗದ ಗುರುಗಳ ಸಾಧನೆ ಯಾರಿಂದಲೂ ಸಾಧ್ಯವಿಲ್ಲ ಬಿಡಿ. ಅವರು ಮಾಡಿದ್ದು ರೇಪಲ್ಲ ಒಪ್ಪಿತ ಸಂಭೋಗ ಎಂಬ ಕೋರ್ಟ್ ತೀರ್ಪನ್ನೇ ಮಠೋಪಜೀವಿಗಳು “ಹುರ್ರೇ ನಮ್ಮ ಸ್ವಾಮಿಗಳು ರೇಪು ಮಾಡಿಲ್ಲವಂತೆ ಬರೀ ಸಂಭೋಗವಂತೆ” ಎಂದು ಪಟಾಕಿ ಸಿಡಿಸಿ ಮಲೆನಾಡೇ ಮಾರ್ದನಿಗೊಳ್ಳುವಂತೆ ಮಾಡಿದರು. ಅದಷ್ಟೇ ಅಲ್ಲ, ಸ್ವಾಮಿಗಳಾದವರಿಗೆ ಸಂಭೋಗ ಕಡ್ಡಾಯ; ಅದರಲ್ಲಿ ಯಾವ ಅಪಮಾನವೂ ಇಲ್ಲ, ಅಂಜಿಕೆಯೂ ಇಲ್ಲ ಎಂಬಂತೆ ಕುಣಿದು ಕುಪ್ಪಳಿಸಿವೆ. ಸ್ವಾಮಿಗಳ ಹಿಂಬಾಲಕರ ಎದುರು ನೈತಿಕತೆ ಉಳಿಸಿಕೊಂಡ ಜನ ನೆಮ್ಮದಿಯಿಂದ ಬದುಕುವುದೇ ದುಸ್ತರವಾಗಿದೆ. ಅಂತೂ ನಮ್ಮ ರಘುಪತಿ ರಾಘವನ ಸಾಧನೆ ಸರಿಗಟ್ಟುವ ಸ್ವಾಮಿ ಇನ್ನು ಬರಲಾರ ಎಂದರಲ್ಲಾ. “ಸ್ವಲ್ಪ ಇರಿ ಉಡುಪಿಯ ಮಠೋಪಜೀವಿಗಳ ಬಗ್ಗೆ ಏನು ಹೇಳತ್ತೀರಿ” ಎಂದಾಗ, ಉಡುಪಿ ಬಿಡಿ ಅಲ್ಲಿ ವ್ಯಭಿಚಾರ ಕಡ್ಡಾಯ, ಮಕ್ಕಳಾದರೆ ಅಲ್ಲಿ ಇಲ್ಲಿ ಬಿಟ್ಟು ಓದಿಸಬಹುದು. ಇಂತದೊಂದು ಆಪಾದನೆಗೆ ಬಲರಾಮನ ಗೋವಿನಂತಹ ಪೇಜಾವರರೇ ಗುರಿಯಾಗಿರುವಾಗ ಉಳಿದವರ ಬಗ್ಗೆ ಮಾತನಾಡುವುದೇ ಮಹಾಪರಾಧ ಎಂದರಲ್ಲಾ, ಥೂತ್ತೇರಿ!!

ಇನ್ನ ಸಿದ್ದರಾಮಯ್ಯನ ಅಭಿಮಾನಿ ಸ್ವಾಮಿಯೊಬ್ಬರು ಆಗಾಗ್ಗೆ ಸುದ್ದಿ ಮಾಡುತ್ತಲೇ ಇರುತ್ತಾರೆ. ಅದಕ್ಕೂ ಮೊದಲು `ಆ ಸಿದ್ದರಾಮಯ್ಯ ನನಗೆ ಬರೀ ನಮಸ್ಕಾರ ಮಾಡುತ್ತಾನೆಯೇ ಹೊರತು, ಕಾಲಿಗೆ ಬೀಳುವುದಿಲ್ಲ’ ಎಂದು ಗುಟುರು ಹಾಕಿದ್ದ ಆ ಗುರುಗಳು, `ಸಿದ್ದು ಮತ್ತೆ ಮುಖ್ಯಮಂತ್ರಿಯಾಗಬೇಕು. ನನ್ನ ಆಶೀರ್ವಾದ ಸದಾ ಅವರ ಜೊತೆಯಲ್ಲಿರುತ್ತದೆ’ ಎಂದಿದ್ದರು. ಈ ಆಶೀರ್ವಾದ ಅಂದರೇನು, ಅದು ಸದಾ ಜೊತೆಯಲ್ಲಿರಬೇಕಾದರೆ ಅದರ ಆಕಾರ ಏನು ಎಂಬುದನ್ನು ಗುರುಗಳು ವಿವರಿಸಿಲ್ಲ. ಏಕೆಂದರೆ ಅವರಾಡಿದ ಮಾತನ್ನೇ ಭಕ್ತಾದಿಗಳು ತಮಗೆ ತಿಳಿದಂತೆ ಅರ್ಥೈಸಿಕೊಳ್ಳಬೇಕು. ಇದೆಲ್ಲಕ್ಕಿಂತ ಮುಖ್ಯವಾಗಿ ಸದರಿ ಗುರುಗಳು ಕುರಿ ರಾಷ್ಟ್ರೀಯ ಪ್ರಾಣಿ. ಅದರ ಹತ್ಯೆ ನಿಲ್ಲಿಸಿ ಗೌರವ ಸಲ್ಲಿಸಬೇಕೆಂದು ಕರೆಕೊಟ್ಟಿದ್ದರು. ಈ ವಿಷಯವಾಗಿ ಕುರಿಗಳ ಕಡೆಯಿಂದ ಯಾವ ಬೆಂಬಲ ಬರದಿದ್ದರೂ, ಕುರಿ ಕೂದು ಧರ್ಮ ಸುಲಿದು ದುಗ್ಗಾಣಿಗೆ ತೆಗೆದುಕೊಂಡು ಹೋಗುವ ಸಾಬರು, ಬೋಟಿಪ್ರಿಯರು, ಚಾಪೀಸ್ ಭಕ್ಷುಗಳು, ಕೈಮಾಕಾಂಕ್ಷಿಗಳು ಮತ್ತೆ ತಲೆಕಾಲು ಸೂಪಿನ ವ್ಯಸನಿಗಳು ಒಕ್ಕೊರಲಿನಿಂದ ಪ್ರತಿಭಟಿಸಿದಾಗ ಕುರಿಗಳೇ ತಲೆಯಲ್ಲಾಡಿಸಿ ಬೆಂಬಲ ಸೂಚಿಸಿದವಲ್ಲಾ, ಥೂತ್ತೇರಿ!!!

ಜಗದ್ಗುರುಗಳೇ ದಿಕ್ಕು ತಪ್ಪಿದ ಭಾಷೆ ಬಳಸಿ, ಅಸಂಬದ್ದ ಮಾತನಾಡುತ್ತಿರುವಾಗ, ಇನ್ನ ಅವರ ಕಾಲಿಗೆ ಬೀಳುತ್ತಿರುವ ರಾಜಕಾರಣಿಗಳ ಮಾತು ಕೇಳಬೇಕೆ, ಅದರಲ್ಲೂ ನಮ್ಮ ಈಶ್ವರಪ್ಪನ ನಾಲಿಗೆಯಂತೂ ಬಳ್ಳಾರಿ ಜಾಲಿ ಮುಳ್ಳಿನಂತೆ. ಎಷ್ಟೇ ಆಗಲಿ ಅಲ್ಲಿಂದಲೇ ಶಿವಮೊಗ್ಗದ ಕಡೆ ಹೋದವರಲ್ಲವೇ. ಆದರೂ ಕಲೆ, ಸಾಹಿತ್ಯ, ಸಂಗೀತ, ಸಂಸ್ಕøತಿಗಳನ್ನ ಪೋಷಿಸಿಕೊಂಡು ಬರುತ್ತಿರುವ ಆ ಶಿವಮೊಗ್ಗದ ಸಂಸ್ಕøತಿಯ ಕಿಂಚಿತ್ ಸ್ಪರ್ಶವೂ ತಮ್ಮ ಮೇಲಾಗದಂತೆ ಎಚ್ಚರಿಕೆ ವಹಿಸಿ ಮೇಲೇರಿದ ಈಶ್ವರಪ್ಪನ ಒರಿಜಿನಾಲಿಟಿಯನ್ನ ಮೆಚ್ಚಲೇಬೇಕಂತಲ್ಲಾ. ಯಾರೇ ಆಗಲಿ ತಮ್ಮ ಮೂಲ ಸಂಸ್ಕøತಿ ಬಿಟ್ಟುಕೊಟ್ಟರೆ ವ್ಯಕ್ತಿತ್ವವೇ ನಾಶವಾಗಿ ಹೋದಂತೆ, ಇದನ್ನ ಇಟ್ಟುಕೊಂಡರೆ “ಪಾಪ ಅವನೆಡ್ತಿ ಸರಿಯಿಲ್ಲ ಇನ್ನೇನು ಮಾಡ್ತನೆ” ಎನ್ನುತ್ತಾರೆ. ಯಾರಾದರೂ ಹೆಣ್ಣು ಮಗಳು ರೇಪಿಗೆ ಒಳಗಾದರೆ “ಕೇಳಿದ ಕೂಡ್ಳೆ ಕೊಟ್ಟಿದ್ರೆ ರೇಪ್ಯಾಕಾಗದು” ಎನ್ನುತ್ತಾರೆ. ಹಾಗೆಯೇ “ಮಂತ್ರಿಯಾಗಿ ಇಷ್ಟು ಆಸ್ತಿ ಮಾಡಿಕೊಂಡಿರಲ್ಲಾ” ಎಂದರೆ, ಮಿನಿಸ್ಟರಾಗಿ ಪಾರ್ಟಿ ಜನಗಳನ್ನ ಸಾಕಬೇಕಲ್ಲ ಏಣು ಮಾಡ್ಳಿ ಎಂದು ಇನ್ನ ಅಂದಿಲ್ಲವಂತಲ್ಲಾ, ಥೂತ್ತೇರಿ!!!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...