Homeರಾಜಕೀಯಹಾಸನ: ಇಲ್ಲಿ ಜೆಡಿಎಸ್ ಭದ್ರ

ಹಾಸನ: ಇಲ್ಲಿ ಜೆಡಿಎಸ್ ಭದ್ರ

- Advertisement -
- Advertisement -
  • ಆಕಾಶ್ ಕೆರೆಕಟ್ಟೆ |

ಮತದಾನದ ದಿನ ಹತ್ತಿರವಾಗುತ್ತಿದ್ದಂತೆ ಹಾಸನದಲ್ಲಿ ಕಾವು ಹೆಚ್ಚುತ್ತಿವೆ. ಏಳು ಕ್ಷೇತ್ರಗಳ ಪೈಕಿ ಜಾತ್ಯತೀತ ಜನತಾದಳ ಮತ್ತು ಕಾಂಗ್ರೆಸ್ ನೇರ ಎದುರಾಳಿಗಳಾಗಿರುವುದು ನಾಲ್ಕು ಕ್ಷೇತ್ರಗಳಲ್ಲಿ. ಇನ್ನು ಮೂರು ಕ್ಷೇತ್ರಗಳಲ್ಲಿ ಈ ಬಾರಿ ಬಿಜೆಪಿ ತೀವ್ರ ಪೈಪೋಟಿ ಕೊಡುವ ಮಟ್ಟಿಗೆ ತನ್ನ ಪಡೆಯನ್ನು ಸಿದ್ಧಪಡಿಸಿಕೊಂಡಿದೆ.

ರೇವಣ್ಣ

ಮಾಜಿ ಪ್ರಧಾನಿ ದೇವೇಗೌಡರು ಆರು ಬಾರಿ ಪ್ರತಿನಿಧಿಸಿದ್ದ ಹೊಳೆನರಸೀಪುರ ಕ್ಷೇತ್ರ ಇಬ್ಬರು ಪ್ರಬಲ ಎದುರಾಳಿಗಳ ಕಾರಣದಿಂದ ರಾಜ್ಯದ ಗಮನ ಸೆಳೆದಿದೆ. ದೇವೇಗೌಡರ ಮಗ ಹಾಗೂ ಮಾಜಿ ಮಂತ್ರಿ ಎಚ್.ಡಿ.ರೇವಣ್ಣ, ಕಾಂಗ್ರೆಸ್‍ನ ಬಿ.ಪಿ.ಮಂಜೇಗೌಡರ ವಿರುದ್ಧ ಸೆಣೆಸುತ್ತಿದ್ದಾರೆ. ಕ್ಷೇತ್ರಕ್ಕೆ ಹೊಸಮುಖವಾದ ಮಂಜೇಗೌಡ ಪಕ್ಷದ ಹಿರಿಯ ನೇತಾರರ ಬೆಂಬಲದಿಂದ ಪ್ರಬಲ ಪೈಪೋಟಿ ಕೊಡುತ್ತಿದ್ದಾರೆ. ಅವರ ಸ್ಪರ್ಧೆಗೆ ಮಹತ್ವ ಸಿಕ್ಕಿದ್ದೇ ರೇವಣ್ಣನ ಪ್ರತಿಕ್ರಿಯೆಗಳಿಂದ. ಸಾರಿಗೆ ಇಲಾಖೆಯ ನೌಕರನಾಗಿದ್ದ ಮಂಜೇಗೌಡ ಕೆಲಸಕ್ಕೆ ರಾಜೀನಾಮೆ ನೀಡಿ ಚುನಾವಣಾ ಕಣ ಪ್ರವೇಶಿಸುವ ಮೊದಲೇ, ರೇವಣ್ಣ ಆತನ ವಿರುದ್ಧ ಟೀಕೆಗೆ ಇಳಿದರು. ಆತನ ರಾಜೀನಾಮೆಯನ್ನು ಸರಕಾರ ಒಪ್ಪಬಾರದು ಎಂದು ಒತ್ತಾಯಿಸಿದರು. ಕೊನೆಗೆ ಸರಕಾರ ರಾಜೀನಾಮೆ ಒಪ್ಪಿದ ಮೇಲೆ, ಚುನಾವಣಾ ಆಯೋಗಕ್ಕೆ ದೂರು ನೀಡಿದರು. ಹಾಗಾಗಿ, ಮಂಜೇಗೌಡ ಅಂಕಣ ಪ್ರವೇಶಿಸುವ ಮೊದಲೇ ರೇವಣ್ಣ ಆತನಿಗೆ ‘ಪ್ರಬಲ ಪ್ರತಿಸ್ಪರ್ಧಿ’ ಎಂಬ ಪಟ್ಟ ದಯಪಾಲಿಸಿದ್ದರು.

ಮಂಜೇಗೌಡ

ಪ್ರಚಾರದ ವೇಳೆ ಅಲ್ಲಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಮುಖಾಮುಖಿಯಾಗುತ್ತಿದ್ದಾರೆ. ಬಿರುಸಿನ ಮಾತುಕತೆ, ಕೈ ಮಿಲಾಯಿಸುವ ಮಟ್ಟಕ್ಕೆ ಘಟನೆಗಳು ನಡೆದಿವೆ. ರೇವಣ್ಣನ ಮಡದಿ ಭವಾನಿ, ಮಕ್ಕಳು ಪ್ರಜ್ವಲ್ ಹಾಗೂ ಸೂರಜ್ ಕ್ಷೇತ್ರದಲ್ಲಿ ಬಿಡುವಿಲ್ಲದೆ ಓಡಾಡುತ್ತಿದ್ದಾರೆ. ಕಳೆದ ಬಾರಿಯ ಚುನಾವಣೆಯಲ್ಲಿ ಪ್ರಜ್ವಲ್ ಅಪ್ಪನ ಕ್ಷೇತ್ರ ಅಷ್ಟೇ ಅಲ್ಲದೆ ಬೇರೆಡೆಯೂ ಪ್ರಚಾರ ಮಾಡಿದ್ದರು. ಆದರೆ ಈಗ ಅವರು ತಮ್ಮ ಶ್ರಮವನ್ನು ಸಂಪೂರ್ಣವಾಗಿ ಅಪ್ಪನ ಕ್ಷೇತ್ರಕ್ಕೆ ಸೀಮಿತಗೊಳಿಸಿದಂತೆ ಕಾಣುತ್ತಿದೆ. ಅತ್ತ ಕಾಂಗ್ರೆಸ್ ಪಾಳಯದಲ್ಲಿ ಪಕ್ಷದ ಬೆಂಬಲದ ಜೊತೆಗೆ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿ ಗಮನಾರ್ಹ ಮತ ಗಳಿಸಿದ್ದ ಮಾಜಿ ಮಂತ್ರಿ ಜಿ.ಪುಟ್ಟಸ್ವಾಮಿಗೌಡರ ಸೊಸೆ ಅನುಪಮ ಮಹೇಶ್ ಅವರ ಬೆಂಬಲ ಕೂಡ ಮಂಜೇಗೌಡರಿಗಿದೆ. ಆದರೂ ರೇವಣ್ಣನ ಪ್ರಾಬಲ್ಯಕ್ಕೇ ಮತದಾರರು ಜೈ ಎನ್ನುವ ಸಾಧ್ಯತೆ ಇದೆ. ಈ ಕ್ಷೇತ್ರದಲ್ಲಿ ಬಿಜೆಪಿ ಲೆಕ್ಕಕ್ಕೂ ಇಲ್ಲ, ಆಟಕ್ಕೂ ಇಲ್ಲ.

ಎ ಮಂಜು

ಜಿಲ್ಲಾ ಮಂತ್ರಿ ಎ.ಮಂಜು (ಕಾಂಗ್ರೆಸ್) ಪ್ರತಿನಿಧಿಸುವ ಅರಕಲಗೂಡು ಕ್ಷೇತ್ರದಲ್ಲಿ ಎರಡು ಬಾರಿ ಸೋಲು ಅನುಭವಿಸಿದ್ದ ಎ.ಟಿ.ರಾಮಸ್ವಾಮಿ (ಜೆಡಿಎಸ್) ಪ್ರಬಲ ಪೈಪೋಟಿ ನೀಡುತ್ತಿದ್ದಾರೆ. ‘ಒಳ್ಳೆಯ ಮನುಷ್ಯ’ ಎಂಬ ಮೆಚ್ಚುಗೆಯ ಮಾತುಗಳಿಗೆ ಪಾತ್ರರಾಗಿರುವ ರಾಮಸ್ವಾಮಿ ಎದುರಾಳಿಯ ತಂತ್ರಗಳಿಗೆ ಸೆಡ್ಡು ಹೊಡೆಯುತ್ತಾರಾ ಎನ್ನುವುದೇ ಪ್ರಶ್ನೆ. ಇವರಿಬ್ಬರ ಜೊತೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಯೋಗಾರಮೇಶ್ ಕೂಡಾ ಸಾಕಷ್ಟು ಪ್ರಚಾರ ಮಾಡುತ್ತಿದ್ದಾರೆ. ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೂವತ್ತೆರಡು ಸಾವಿರಕ್ಕೂ ಹೆಚ್ಚು ಮತ ಗಳಿಸಿದ್ದರು. ಅವರು ಅಂದಿನಂತೆ ಈ ಬಾರಿಯೂ ಪ್ರಬಲ ಪೈಪೋಟಿ ನೀಡಿ ಸಾಂಪ್ರದಾಯಿಕ ಜೆಡಿಎಸ್ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿಗೆ ಅನುಕೂಲ.

ಎಚ್.ಎಸ್. ಪ್ರಕಾಶ್

ಹಾಸನದಲ್ಲಿ ಮೂವರು ಗಂಭೀರ ಅಭ್ಯರ್ಥಿಗಳಿದ್ದಾರೆ. ಜೆಡಿಎಸ್‍ನ ಎಚ್.ಎಸ್.ಪ್ರಕಾಶ್ ಈ ಬಾರಿ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಂದ ಪೈಪೋಟಿ ಎದುರಿಸುತ್ತಿದ್ದಾರೆ. ಕಳೆದ ಬಾರಿ ಕಡಿಮೆ ಅಂತರದಲ್ಲಿ ಸೋತಿದ್ದ ಕಾಂಗ್ರೆಸ್ ಅಭ್ಯರ್ಥಿ ಎಚ್.ಕೆ.ಮಹೇಶ್ ಮತ್ತು ಬಿಜೆಪಿಯ ಪ್ರೀತಂ ಗೌಡ ಅವರ ಪ್ರಬಲ ಪೈಪೋಟಿಯಿಂದ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ. ಬಿಜೆಪಿ ಅಭ್ಯರ್ಥಿ ಗೆಲುವಿನ ಹಂತಕ್ಕೆ ತಲುಪುತ್ತಾರೋ ಇಲ್ಲವೋ, ಆದರೆ ಗಮನಾರ್ಹ ಮತಗಳನ್ನಂತೂ ಪಡೆಯುತ್ತಾರೆ ಎನ್ನುವುದು ಸದ್ಯದ ಲೆಕ್ಕಾಚಾರ. ಅವರ ಮತಗಳಿಕೆ ಫಲಿತಾಂಶ ನಿರ್ಧರಿಸಲಿದೆ. ಕಾಂಗ್ರೆಸ್ ತನ್ನ ರಾಜ್ಯಮಟ್ಟದ ತಂತ್ರಗಾರಿಕೆಯ ಕಾರಣಕ್ಕೆ ಮುಸ್ಲಿಂ ಮತಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುವ ಸಾಧ್ಯತೆ ಇದೆ. ಆದರೆ ದೇವೇಗೌಡರು ಮತದಾನದ ಹಿಂದಿನ ಎರಡು ದಿನಗಳ ಕಾಲ ಒಂದು ಸುತ್ತು ಬಂದು ಬದಲಾವಣೆ ಮಾಡುವ ಸಾಮಥ್ರ್ಯ ಉಳ್ಳವರು. ಎಲ್ಲಾ ಅಭ್ಯರ್ಥಿಗಳು ಆ ಎರಡು ದಿನಗಳಿಗಾಗಿ ಕಾಯುತ್ತಿದ್ದಾರೆ. ಹಿಂದಿನಂತೆ ದೇವೇಗೌಡರು ಪ್ರಭಾವ ಬೀರುವಲ್ಲಿ ಯಶಸ್ವಿಯಾದರೆ ಜೆಡಿಎಸ್ ಮತ್ತೆ ಬಾವುಟ ಹಾರಿಸುವಲ್ಲಿ ಸಂಶಯವಿಲ್ಲ.

ಎ.ಟಿ.ರಾಮಸ್ವಾಮಿ

ಶ್ರವಣಬೆಳಗೊಳ ಮತ್ತು ಅರಸೀಕೆರೆ ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳಿಗೆ ಪ್ರಬಲ ಪೈಪೋಟಿ ಇದ್ದಂತಿಲ್ಲ. ಅರಸೀಕೆರೆಯಲ್ಲಿ ಕುಡಿವ ನೀರು ಪೂರೈಕೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯಕ್ರಮ ಮಾಡಿ ಖ್ಯಾತಿ ಹೊಂದಿರುವ ಕೆ.ಎಂ.ಶಿವಲಿಂಗೇಗೌಡರ ಎದುರು ಕಾಂಗ್ರೆಸ್ ಅಭ್ಯರ್ಥಿ ಶಶಿಧರ್ ದುರ್ಬಲರಾಗಿ ಕಾಣುತ್ತಾರೆ. ಶ್ರವಣಬೆಳಗೊಳದಲ್ಲಿ ಕಾಂಗ್ರೆಸ್‍ನ ಸಿ.ಎಸ್.ಪುಟ್ಟೇಗೌಡರು ಕಳೆದ ಬಾರಿಯಂತೆಯೇ ಸೋಲು ಅನುಭವಿಸಬಹುದು. ಜೆಡಿಎಸ್‍ನ ಸಿ.ಎನ್.ಬಾಲಕೃಷ್ಣ ಗೆಲ್ಲುವ ಸಾಧ್ಯತೆಗಳಿವೆ.

ಸಕಲೇಶಪುರದಲ್ಲಿ ಬಿಜೆಪಿ ಅಭ್ಯರ್ಥಿ ನಾರ್ವೆ ಸೋಮಶೇಖರ್ ಚುನಾವಣೆ ಘೋಷಣೆಗೆ ಮೊದಲೇ ಅಲೆ ಎಬ್ಬಿಸಿದ್ದರು. ಹೇರಳವಾಗಿ ಹಣ ಖರ್ಚು ಮಾಡಿ ಪಾರ್ಟಿ ಮಾಡಿದ್ದರು. ಅವರ ಕ್ರಿಮಿನಲ್ ಹಿನ್ನೆಲೆ ಹೊರತಾಗಿಯೂ ಈ ಮೀಸಲು ಕ್ಷೇತ್ರದ ಮೇಲ್ವರ್ಗಗಳು ಅವರನ್ನು ಬೆಂಬಲಿಸುತ್ತಿವೆ. ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅವರು ‘ಸ್ಪೃಶ್ಯ’ ಸಮುದಾಯಕ್ಕೆ ಸೇರಿದವರು. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಸ್ಪೃಶ್ಯರು ಅವರನ್ನು ಬೆಂಬಲಿಸುವುದು ಅಷ್ಟಕಷ್ಟೆ. ಕಾಂಗ್ರೆಸ್ ಕೊನೆಕ್ಷಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯನವರನ್ನು ಕಣಕ್ಕೆ ತಂದರು. ಅವರು ಬಂದಿದ್ದು ತಡವಾಯ್ತು, ಹಾಗಾಗಿ ಕ್ಷೇತ್ರವನ್ನು ಪರಿಚಯ ಮಾಡಿಕೊಳ್ಳುವುದರಲ್ಲಿಯೇ ಅವರಿಗೆ ಸಾಕಷ್ಟು ಸಮಯ ಬೇಕಾಗಿದೆ. ಈ ಎಲ್ಲಾ ಕಾರಣಗಳಿಗೆ ಮತದಾರ ಮತ್ತೊಮ್ಮೆ ಜೆಡಿಎಸ್ ಅಭ್ಯರ್ಥಿ ಎಚ್.ಕೆ.ಕುಮಾರಸ್ವಾಮಿಯವರನ್ನು ಬೆಂಬಲಿಸುವ ಸಾಧ್ಯತೆ ಇದೆ. ಹೇಗೂ ದೇವೇಗೌಡರ ಕಾರಣಕ್ಕೆ ಮೇಲ್ವರ್ಗದ ಮತಗಳಲ್ಲಿ ದೊಡ್ಡ ಮೊತ್ತ ಅವರ ಪಾಲಾಗಬಹುದು.

ಜೆಡಿಎಸ್ ಪಕ್ಷ ಬಿಎಸ್‍ಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರೂ, ಹಾಸನದ ಮಟ್ಟಿಗೆ ಅದರ ಪರಿಣಾಮ ನಗಣ್ಯ. ಮೇಲಾಗಿ ಈ ಜಿಲ್ಲೆಯಲ್ಲಿ ಬಿಎಸ್‍ಪಿ ಪ್ರತಿನಿಧಿಸುವ ದಲಿತರು ದಬ್ಬಾಳಿಕೆ ಅನುಭವಿಸುತ್ತಿರುವುದೇ ಜೆಡಿಎಸ್ ಜೊತೆ ಪ್ರಬಲವಾಗಿ ಗುರುತಿಸಿಕೊಂಡಿರುವ ಸಮುದಾಯದಿಂದ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ಶಾಲಾ ಬಸ್ಸಿನ ನೆಲಹಾಸು ಕುಸಿದು 7 ವರ್ಷದ ಬಾಲಕಿ ಸಾವು; ಇಬ್ಬರ ಬಂಧನ

ಉತ್ತರ ಪ್ರದೇಶದ ಅಲಿಗಢದಲ್ಲಿ ಶಾಲಾ ಬಸ್ಸಿನ ನೆಲಹಾಸು ಕುಸಿದು ಕೆಳಗೆ ಬಿದ್ದ ಏಳು ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಸೋಮವಾರ ನಡೆದಿದೆ. ಖಾಸಗಿ ಶಾಲೆಯ ವ್ಯವಸ್ಥಾಪಕ ಮತ್ತು ಬಸ್ ಚಾಲಕನನ್ನು ಬಂಧಿಸಲಾಗಿದೆ ಎಂದು...

ಇಸ್ರೇಲ್-ಇರಾನ್ ಸಂಘರ್ಷ: ನವದೆಹಲಿಯಲ್ಲಿ 24×7 ನಿಯಂತ್ರಣ ಕೊಠಡಿ ಸ್ಥಾಪಿಸಿದ ತೆಲಂಗಾಣ

ಹೈದರಾಬಾದ್: ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ಅವರ ನಿರ್ದೇಶನಗಳನ್ನು ಅನುಸರಿಸಿ, ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಮಧ್ಯಪ್ರಾಚ್ಯದಲ್ಲಿರುವ ತೆಲಂಗಾಣ ನಾಗರಿಕರಿಗೆ ಸಹಾಯ ಮಾಡಲು ನವದೆಹಲಿಯ ತೆಲಂಗಾಣ ಭವನದಲ್ಲಿ 24×7 ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಪ್ರಯಾಣ...

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಡ್ರೋನ್ ದೋಣಿ ಡಿಕ್ಕಿ; ಭಾರತೀಯ ಸಿಬ್ಬಂದಿ ಸಾವು

ಒಮಾನ್ ಕರಾವಳಿಯಲ್ಲಿ ತೈಲ ಟ್ಯಾಂಕರ್‌ಗೆ ಮಾನವರಹಿತ ಡ್ರೋನ್ ದೋಣಿ ಡಿಕ್ಕಿ ಹೊಡೆದ ಪರಿಣಾಮ ಭಾರತೀಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಹಗೆತನವು ಪ್ರದೇಶದಾದ್ಯಂತ ಉಲ್ಬಣಗೊಳ್ಳುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡು ಹಡಗಿನಲ್ಲಿದ್ದ...

ನಾಗ್ಪುರ ಕಾರ್ಖಾನೆ ಸ್ಫೋಟ: ಸ್ಫೋಟಕ ಕಂಪನಿಯ ಒಂಬತ್ತು ನಿರ್ದೇಶಕರ ಬಂಧನ

ನಾಗ್ಪುರ: ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ 18 ಜನರು ಸಾವನ್ನಪ್ಪಿದ್ದು, ಸ್ಫೋಟಕ ತಯಾರಿಕಾ ಕಂಪನಿಯ ಒಂಬತ್ತು ನಿರ್ದೇಶಕರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇಲ್ಲಿನ ಕಲ್ಮೇಶ್ವರ ಪೊಲೀಸರು ಎಸ್‌ಬಿಎಲ್ ಎನರ್ಜಿ...

ಅಪ್ರಾಪ್ತ ಮಗಳ ಮರ್ಯಾದೆಗೇಡು ಹತ್ಯೆ : ದಂಪತಿಗೆ ಜೀವಾವಧಿ ಶಿಕ್ಷೆ ಖಾಯಂಗೊಳಿಸಿದ ಅಲಹಾಬಾದ್‌ ಹೈಕೋರ್ಟ್

ಮರ್ಯಾದೆಗೇಡು ಹತ್ಯೆ ಪ್ರಕರಣದಲ್ಲಿ, 2014ರಲ್ಲಿ ತಮ್ಮ ಅಪ್ರಾಪ್ತ ಮಗಳು ಮತ್ತು ಬಾಡಿಗೆದಾರರನ್ನು ಕೊಲೆ ಮಾಡಿದ್ದ ದಂಪತಿಗೆ ಜೀವಾವಧಿ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಖಾಯಂಗೊಳಿಸಿದೆ. ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ವಿನಯ್ ಕುಮಾರ್ ದ್ವಿವೇದಿ...

ಇಸ್ರೇಲ್-ಇರಾನ್ ಸಂಘರ್ಷ: ಕೇರಳದ ಗಲ್ಫ್ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ, ಪ್ಲಸ್-II ಪರೀಕ್ಷೆಗಳನ್ನು ಮುಂದೂಡಲು ನಿರ್ಧಾರ

ತಿರುವನಂತಪುರಂ: ಪಶ್ಚಿಮ ಏಷ್ಯಾ ಪ್ರದೇಶದಲ್ಲಿನ ಪ್ರಚಲಿತ ಅಶಾಂತಿಯನ್ನು ಗಮನದಲ್ಲಿಟ್ಟುಕೊಂಡು, ಸಾಮಾನ್ಯ ಶಿಕ್ಷಣ ಇಲಾಖೆಯು ಗಲ್ಫ್ ರಾಷ್ಟ್ರಗಳಲ್ಲಿನ ಕೇಂದ್ರಗಳಲ್ಲಿ ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ ಮತ್ತು ಪ್ಲಸ್-II ಪರೀಕ್ಷೆಗಳನ್ನು ಮುಂದೂಡಲು ನಿರ್ಧರಿಸಿದೆ.   ಮಾರ್ಚ್ 5 ರಂದು ನಿಗದಿಯಾಗಿದ್ದ ಎಸ್‌ಎಸ್‌ಎಲ್‌ಸಿ...

ಚಿಕ್ಕಬಳ್ಳಾಪುರ| ಆಯತುಲ್ಲಾ ಖಮೇನಿ ಹತ್ಯೆ; ಅಲಿಪುರದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ

ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತುಲ್ಲಾ ಖಮೇನಿ ಹತ್ಯೆಯಿಂದ ನೊಂದಿರುವ ಗೌರಿಬಿದನೂರು ತಾಲ್ಲೂಕಿನ ಅಲಿಪುರ ಗ್ರಾಮದ ಶಿಯಾ ಸಮುದಾಯವು, ಗ್ರಾಮದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ...

ಸೌದಿ ಅರೇಬಿಯಾ | ಡ್ರೋನ್ ದಾಳಿ ಬಳಿಕ ರಾಸ್ ತನುರಾ ಸಂಸ್ಕರಣಾಗಾರ ಮುಚ್ಚಿದ ತೈಲ ದೈತ್ಯ ಅರಾಮ್ಕೊ

ಸೌದಿ ಅರೇಬಿಯಾದ ಸರ್ಕಾರಿ ಸ್ವಾಮ್ಯದ ತೈಲ ದೈತ್ಯ ಸಂಸ್ಥೆ ಅರಾಮ್ಕೊ ಡ್ರೋನ್ ದಾಳಿಗೆ ಒಳಗಾದ ನಂತರ ತನ್ನ ರಾಸ್ ತನುರಾ ತೈಲ ಸಂಸ್ಕರಣಾಗಾರವನ್ನು ಮುಚ್ಚಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಯಿಟರ್ಸ್ ಸೋಮವಾರ (ಫೆ.2)...

ದೆಹಲಿ ನ್ಯಾಯಾಲಯದಿಂದ ತಕ್ಷಣ ಬಿಡುಗಡೆ ಆದೇಶ: ತಿಹಾರ್ ಜೈಲಿನಿಂದ ಹೊರಬಂದ 14 ಜೆಎನ್‌ಯು ವಿದ್ಯಾರ್ಥಿಗಳು 

ಫೆಬ್ರವರಿ 26 ರಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘ (ಜೆಎನ್‌ಯುಎಸ್‌ಯು) ಪ್ರತಿಭಟನೆಯ ಸಂದರ್ಭದಲ್ಲಿ ಬಂಧಿಸಲ್ಪಟ್ಟಿದ್ದ ಹದಿನಾಲ್ಕು ವಿದ್ಯಾರ್ಥಿ ನಾಯಕರನ್ನು ದೆಹಲಿ ನ್ಯಾಯಾಲಯವು ಭಾನುವಾರ ತಕ್ಷಣ ಬಿಡುಗಡೆ ಮಾಡಲು ಆದೇಶಿಸಿದ ನಂತರ, 14...

ಉತ್ತರ ಪ್ರದೇಶ| ಇಂಜೆಕ್ಷನ್ ನೀಡಿದ ಗೋರಖ್‌ಪುರದ ಮೆಡಿಕಲ್ ಸ್ಟೋರ್‌ ನಿರ್ವಾಹಕ; ಬಾಲಕಿ ಸಾವು

ಗೋರಖ್‌ಪುರದ ಉರುವಾ ಪ್ರದೇಶದ ಮೆಡಿಕಲ್ ಸ್ಟೋರ್‌ ನಿರ್ವಾಹಕನಿಂದ ಇಂಜೆಕ್ಷನ್ ಪಡೆದ ಒಂಬತ್ತು ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಈ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತ ದಿವ್ಯಾ ಬನ್ಸ್‌ಗಾಂವ್ ಪೊಲೀಸ್...