Homeಮುಖಪುಟಸಿದ್ದೀಕ್ ಕಪ್ಪನ್ ಬಂಧನಕ್ಕೆ 1 ವರ್ಷ: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕಚೇರಿ ಹೊರಗೆ ಪತ್ರಕರ್ತರ...

ಸಿದ್ದೀಕ್ ಕಪ್ಪನ್ ಬಂಧನಕ್ಕೆ 1 ವರ್ಷ: ಪ್ರೆಸ್ ಕ್ಲಬ್ ಆಫ್ ಇಂಡಿಯಾ ಕಚೇರಿ ಹೊರಗೆ ಪತ್ರಕರ್ತರ ಪ್ರತಿಭಟನೆ

- Advertisement -
- Advertisement -

ಕಳೆದ ವರ್ಷ ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ದಲಿತ ಯುವತಿಯ ಅತ್ಯಾಚಾರ ನಡೆದಿತ್ತು. ಈ ಘಟನೆಯನ್ನು ವರದಿ ಮಾಡಲು ತೆರಳುತ್ತಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್ ಅವರ ಬಂಧನವಾಗಿತ್ತು. ಅವರನ್ನು ಬಂಧಿಸಿ ಇದೀಗ ವರ್ಷ ತುಂಬಿದೆ. ಈ ಬಂಧನವನ್ನು ವಿರೋಧಿಸಿ ಮಂಗಳವಾರಂದು ಹಲವಾರು ಸಂಘಟನೆಗಳ ಪತ್ರಕರ್ತರು ಪ್ರೆಸ್ ಕ್ಲಬ್ ಆಫ್ ಇಂಡಿಯಾ ಹೊರಗೆ ಪ್ರತಿಭಟನೆ ನಡೆಸಿದ್ದಾರೆ.

19 ವರ್ಷದ ದಲಿತ ಬಾಲಕಿ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ನಡೆದಿದ್ದಲ್ಲದೆ, ಆರೋಪಿಗಳ ಪರವಾಗಿ ಸರ್ಕಾರ ನಿಂತಿತ್ತು. ಇದರ ವಿರುದ್ದ ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಈ ಪ್ರಕರಣದ ವರದಿಗಾಗಿ ಉತ್ತರ ಪ್ರದೇಶಕ್ಕೆ ತೆರಳುತ್ತಿದ್ದ ಸಿದ್ದೀಕ್ ಕಪ್ಪನ್‌ ಅವರನ್ನು ಪೊಲೀಸರು ಬಂಧಿಸಿದ್ದರು. ಅವರು ಕಳೆದ ಒಂದು ವರ್ಷದಿಂದ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: ಸಿದ್ದೀಕ್ ಕಪ್ಪನ್ ಮುಸ್ಲಿಮರನ್ನು ಸಂತ್ರಸ್ತ್ರರಂತೆ ಚಿತ್ರಿಸಿ, ಪ್ರಚೋದಿಸುತ್ತಿದ್ದರು: ಅವರ ಲೇಖನಗಳೆ ಚಾರ್ಜ್‌ಶೀಟ್‌ಗೆ ಆಧಾರ!

“ಕಪ್ಪನ್‌ ಅವರು ಜವಾಬ್ದಾರಿಯುತ ಪತ್ರಕರ್ತನಂತೆ ಬರೆಯುತ್ತಿರಲಿಲ್ಲ. ಮುಸ್ಲಿಮರನ್ನು ಪ್ರಚೋದಿಸಲು ಮತ್ತು ಮಾವೋವಾದಿಗಳು ಹಾಗೂ ಕಮ್ಯುನಿಸ್ಟರ ಬಗ್ಗೆ ಸಹಾನುಭೂತಿ ಹೊಂದುವ ಹಾಗೆ ಬರೆಯುತ್ತಿದ್ದರು” ಎಂದು ಪ್ರಕರಣದಲ್ಲಿ ಸಲ್ಲಿಸಲಾಗಿರುವ ಆರೋಪಪಟ್ಟಿ ಹೇಳುತ್ತದೆ ಎಂದು ಮಾಧ್ಯಮ ವರದಿಗಳು ಹೇಳುತ್ತಿವೆ.

ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಕಪ್ಪನ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ನೊಂದಿಗೆ ಸಂಬಂಧ ಹೊಂದಿದೆಯೆಂದು ಸೂಚಿಸಿದೆ. ಆದರೆ ಈ ಆರೋಪವನ್ನು ಕೇರಳದ ಪತ್ರಕರ್ತರ ಸಂಘಗಳು ಸ್ಪಷ್ಟವಾಗಿ ನಿರಾಕರಿಸಿವೆ.

ಅವರಿಗೆ ಪಿಎಫ್‌ಐ ಜೊತೆ ಸಂಬಂಧವಿದೆ ಎಂಬ ಆರೋಪವು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಉದ್ದೇಶದಿಂದ ಮಾಡಲಾಗಿದೆ ಪ್ರತಿಭಟನಾಕಾರ ಪತ್ರಕರ್ತರು ಹೇಳಿದ್ದಾರೆ. ಕಪ್ಪನ್‌ ಮೇಲಿನ ಪ್ರಕರಣಗಳನ್ನು ರದ್ದುಗೊಳಿಸಿ, ಅವರನ್ನು ಬಿಡುಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ನಡುವೆ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಸಿದ್ದೀಕ್ ಕಪ್ಪನ್ ಅವರನ್ನು ಯುಪಿ ಸರ್ಕಾರದ ಅಧಿಕಾರಿಗಳು ಮೇ 6 ರಂದು ಬಲವ೦ತವಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಿಸಿದ್ದರು ಎ೦ದು ಆರೋಪಿಸಿದೆ. ಇದನ್ನು ವಿರೋಧಿಸಿ ಕೇರಳದ ಪತ್ರಕರ್ತರ ಒಕ್ಕೂಟವು ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾ೦ಗ ನಿ೦ದನೆ ಅರ್ಜಿ ಸಲ್ಲಿಸಿದೆ.

ಇದನ್ನೂ ಓದಿ: PFI ಸಂಬಂಧ ಆರೋಪ; ಹತ್ರಾಸ್‌ಗೆ ಹೊರಟ ಕೇರಳದ ಪತ್ರಕರ್ತ ಸೇರಿ ಮೂವರ ಬಂಧನ

ಇದನ್ನೂ ಓದಿ: ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ – ಸಂಪೂರ್ಣ ವಿವರ

ಇದನ್ನೂ ಓದಿ: ಹತ್ರಾಸ್‌: ಬಂಧಿತ ಪತ್ರಕರ್ತನ ಮೇಲೆ “ಭಯೋತ್ಪಾದನೆ ನಿಗ್ರಹ” ಕಾನೂನಿನಡಿಯಲ್ಲಿ FIR!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಯುಎಸ್ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, ಹರ್ದೀಪ್ ಸಿಂಗ್‌ ಹತ್ಯೆ ಬಗ್ಗೆ ಉಲ್ಲೇಖ

0
ಯುನೈಟೆಡ್ ಸ್ಟೇಟ್ಸ್ ತನ್ನ 2023ರ ಮಾನವ ಹಕ್ಕುಗಳ ವರದಿಯಲ್ಲಿ ಮಣಿಪುರ ಹಿಂಸಾಚಾರ, BBC ಮೇಲೆ ತೆರಿಗೆ ಅಧಿಕಾರಿಗಳ ದಾಳಿ, ಕೆನಡಾದಲ್ಲಿ ಸಿಖ್ ಕಾರ್ಯಕರ್ತ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಂತಹ ಭಾರತಕ್ಕೆ ಸಂಬಂಧಿಸಿದ ಪ್ರಮುಖ...