Homeಮುಖಪುಟಸಿದ್ದೀಕ್ ಕಪ್ಪನ್ ಮುಸ್ಲಿಮರನ್ನು ಸಂತ್ರಸ್ತ್ರರಂತೆ ಚಿತ್ರಿಸಿ, ಪ್ರಚೋದಿಸುತ್ತಿದ್ದರು: ಅವರ ಲೇಖನಗಳೆ ಚಾರ್ಜ್‌ಶೀಟ್‌ಗೆ ಆಧಾರ!

ಸಿದ್ದೀಕ್ ಕಪ್ಪನ್ ಮುಸ್ಲಿಮರನ್ನು ಸಂತ್ರಸ್ತ್ರರಂತೆ ಚಿತ್ರಿಸಿ, ಪ್ರಚೋದಿಸುತ್ತಿದ್ದರು: ಅವರ ಲೇಖನಗಳೆ ಚಾರ್ಜ್‌ಶೀಟ್‌ಗೆ ಆಧಾರ!

- Advertisement -
- Advertisement -

ಕಳೆದ ವರ್ಷ ಅಕ್ಟೋಬರ್‌ 5 ರಂದು ಉತ್ತರ ಪ್ರದೇಶದ ಹತ್ರಾಸ್‌‌ ದಲಿತ ಬಾಲಕಿಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ವರದಿ ಮಾಡಲು ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಪ್ಪನ್‌ ರವರನ್ನು ದೇಶದ್ರೋಹದ ಮೇಲೆ ಬಂಧಿಸಿ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಳೆದ ಒಂದು ವರ್ಷದಿಂದ ಅವರು ಜೈಲಿನಲ್ಲಿದ್ದಾರೆ. ಅವರ ವಿರುದ್ಧ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಅವರು ‘ಮುಸ್ಲಿಮರನ್ನು ಸಂತ್ರಸ್ತ್ರರಂತೆ ಚಿತ್ರಿಸಿ, ಪ್ರಚೋದಿಸುತ್ತಿದ್ದರು’ ಎಂಬುದೇ ಅವರ ವಿರುದ್ಧ ಸಾಕ್ಷ್ಯ ಎಂದು ಪರಿಗಣಿಸಲಾಗಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಸಿದ್ದೀಕ್ ಕಪ್ಪನ್‌ ಜವಾಬ್ದಾರಿಯುತ ಪತ್ರಕರ್ತನಂತೆ ಬರೆದಿಲ್ಲ. ಅವರು ಕೇವಲ ಮುಸ್ಲಿಮರನ್ನು ಪ್ರಚೋದಿಸುವ, ಮಾವೋವಾದಿಗಳು ಮತ್ತು ಕಮ್ಯುನಿಷ್ಟರ ಬಗ್ಗೆ ಸಿಂಪಥಿ ತೋರುವ ಲೇಖನಗಳನ್ನು ಮಾತ್ರ ಬರೆದರು ಎಂದು ಅವರು ವಿರುದ್ಧ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದೆ.

ಒಟ್ಟು 5000 ಪುಟಗಳ ಚಾರ್ಜ್‌ ಶೀಟ್ ಕೇಸ್‌ ಡೈರಿಯನ್ನು ಸಹ ಒಳಗೊಂಡಿದ್ದು, ಅವರು ಮಲೆಯಾಳಂ ಮಾಧ್ಯಮಗಳಿಗೆ ಬರೆದ 36 ಲೇಖನಗಳನ್ನು ಸಾಕ್ಷ್ಯಗಳಾಗಿ ಬಳಸಲಾಗಿದೆ. ಅವುಗಳಲ್ಲಿ ಕೋವಿಡ್ ಸಂದರ್ಭದಲ್ಲಿ ನಡೆದ ನಿಜಾಮುದ್ದೀನ್ ಮರ್ಕಜ್ ಸಭೆ, ಸಿಎಎ ವಿರೋಧಿ ಹೋರಾಟಗಳು, ದೆಹಲಿ ಗಲಭೆ, ರಾಮಜನ್ಮಭೂಮಿ ವಿವಾದ ಮತ್ತು ಶಾರ್ಜಿಲ್ ಇಮಾಮ್ ವಿರುದ್ಧ ಚಾರ್ಜ್‌ಶೀಟ್‌ ಕುರಿತ ಲೇಖನಗಳು ಮುಖ್ಯವಾದವುಗಳಾಗಿವೆ.

“ಅಲಿಘರ್ ಮುಸ್ಲಿಂ ವಿವಿಯಲ್ಲಿ ನಡೆದ ಸಿಎಎ ವಿರುದ್ಧದ ಪ್ರತಿಭಟನೆ ಕುರಿತು, ಮುಸ್ಲಿಮರನ್ನು ಪೊಲೀಸರು ಥಳಿಸಿದರು, ಪಾಕಿಸ್ತಾನಕ್ಕೆ ಹೋಗುವಂತೆ ನಿಂದಿಸಲಾಯಿತು” ಎಂದು ಬರೆದಿದ್ದಾರೆ. ಅಲ್ಲದೆ ದೆಹಲಿ ಗಲಭೆ ಸಂದರ್ಭದಲ್ಲಿ ಮುಸ್ಲಿಮರನ್ನು ಹೆಸರನ್ನು ಬಳಸಿ ಅವರು ಪ್ರಚೋದನೆಗೊಳ್ಳುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಇವರು ಕೇವಲ ಮುಸ್ಲಿಮರನ್ನು ಪ್ರಚೋದಿಸುವ ಲೇಖನಗಳನ್ನೆ ಬರೆದಿದ್ದಾರೆ. ಇದು ಪಿಎಫ್ಐ ಸಂಘಟನೆಯ ಅಜೆಂಡಾವಾಗಿದೆ ಎಂದು ಚಾರ್ಜ್ ಶೀಟ್‌ನಲ್ಲಿ ದೂರಲಾಗಿದೆ. ಇದನ್ನು ಏಪ್ರಿಲ್‌ನಲ್ಲಿ ಸಲ್ಲಿಸಲಾಗಿದೆ.

ಹತ್ರಾಸ್ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಘಟನೆಯನ್ನು ಬಳಸಿಕೊಂಡು ಗಲಭೆ ಸೃಷ್ಟಿಸಲು ಪಿಎಫ್‌ಐ ಬಯಸಿತ್ತು. ಸಿದ್ದೀಕ್ ಕಪ್ಪನ್ ಆ ಸಂಘಟನೆಯ ಥಿಂಕ್ ಟ್ಯಾಂಕ್ ಥರ ಕೆಲಸ ಮಾಡುತ್ತಿದ್ದರು. ಅವರು ನಿಷೇಧಿತ ಸಂಘಟನೆ ಸಿಮಿ ನಡೆಸಿದ ಭಯೋತ್ಪಾದನೆಯನ್ನು ನಿರಾಕರಿಸಲು ಪ್ರಯತ್ನಿಸಿದ್ದಾನೆ ಎಂದು ತನಿಖಾ ಸಂಸ್ಥೆ ಆರೋಪಿಸಿದೆ. ಕಪ್ಪನ್ ಪ್ರಚೋದಿಸಿದ್ದಾರೆ ಎಂಬುದಕ್ಕೆ ಇಬ್ಬರು ಸಾಕ್ಷಿಗಳನ್ನು ಸಹ ಒದಗಿಸಲಾಗಿದೆ.

ಇದನ್ನು ಕಪ್ಪನ್ ವಕೀಲರು ತೀವ್ರವಾಗಿ ವಿರೋಧಿಸಿದ್ದಾರೆ. ಘಟನೆ ನಡೆದ ಉತ್ತರ ಪ್ರದೇಶ ಹತ್ರಾಸ್ ಸ್ಥಳದಲ್ಲಿ ಸಿದ್ದೀಕ್ ಕಪ್ಪನ್ ಇರಲೇ ಇಲ್ಲ. ಘಟನೆ ನಡೆದ ಎರಡು ದಿನಗಳ ನಂತರ ಹತ್ರಾಸ್‌ಗೆ ಹೋಗುವ ದಾರಿಯಲ್ಲಿ ಅವರನ್ನು ಬಂಧಿಸಲಾಯಿತು. ಹೀಗಿದ್ದಾಗ ಅವರು ಅಲ್ಲಿ ಗಲಭೇ ಪ್ರಚೋದಿಸಲು ಸಾಧ್ಯವೇ ಇಲ್ಲ. ಅವರು ಸ್ಥಳಕ್ಕೆ ಹೋಗದಿದ್ದರೆ ಅವರ ವಿರುದ್ಧ ಸಾಕ್ಷಿಗಳು ಹೇಗೆ ಇರಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಪತ್ರಕರ್ತ ಸಿದ್ದೀಕ್ ಕಪ್ಪನ್ ಮತ್ತು ಇತರ ಮೂವರ ವಿರುದ್ಧ ದಾಖಲಾದ, ‘ಶಾಂತಿ ಕದಡುವ ಭೀತಿ’ಯ ಆರೋಪದ ವಿಚಾರಣೆಯನ್ನು ಉತ್ತರ ಪ್ರದೇಶದ ಮಥುರಾದ ನ್ಯಾಯಾಲಯವು ಜೂನ್ 16 ರಂದು ಕೈಬಿಟ್ಟಿದೆ. ನಿಗದಿತ ಆರು ತಿಂಗಳೊಳಗೆ ಅವರ ವಿರುದ್ಧದ ವಿಚಾರಣೆಯನ್ನು ಪೂರ್ಣಗೊಳಿಸಲು ಪೊಲೀಸರು ವಿಫಲರಾಗಿದ್ದಾರೆ ಎಂದು ಪ್ರತಿವಾದಿ ವಕೀಲರು ತಿಳಿಸಿದ್ದಾರೆ.ನ ಯುಎಪಿಎ ಅಡಿಯಲ್ಲಿನ ಪ್ರಕರಣದ ವಿಚಾರಣೆ ನಡೆಯುತ್ತಿದೆ.


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...