Homeಕರ್ನಾಟಕಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಹಿಳಾ ವಿರೋಧಿ ಹೇಳಿಕೆ: ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಆಕ್ರೋಶ

ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮಹಿಳಾ ವಿರೋಧಿ ಹೇಳಿಕೆ: ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಆಕ್ರೋಶ

’ಕರ್ನಾಟಕದ ಮಹಿಳೆಯರು ಪಕ್ಷಭೇದ ಮರೆತು ಇದನ್ನು ಪ್ರತಿಭಟಿಸಬೇಕು- ಪುರುಷೋತ್ತಮ ಬಿಳಿಮಲೆ’

- Advertisement -
- Advertisement -

‘‘ರಾತ್ರಿ ರಾಜಕಾರಣದ ಸಂಸ್ಕೃತಿ ತಿಳಿದಿರುವುದರಿಂದಲೆ ಕಾಂಗ್ರೆಸ್‌ನ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ” ಎಂದು ಮಹಿಳಾ ವಿರೋಧಿ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ, ಬೆಳಗಾವಿ ಗ್ರಾಮಾಂತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಪಾಟೀಲ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ನಟ, ಸಾಮಾಜಿಕ ಹೋರಾಟಗಾರ ಚೇತನ್ ಕುಮಾರ್‌, ಯಾವುದೇ ಪಕ್ಷದ ಮಹಿಳಾ ರಾಜಕಾರಣಿಯು ಈ ರೀತಿಯ ಕೀಳುಮಟ್ಟದ ಮಾತುಗಳನ್ನು ಕೇಳಲು ಅರ್ಹರಲ್ಲ. ಪಕ್ಷದ ಸದಸ್ಯರು ಕ್ಷಮೆ ಕೇಳುವಂತೆ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಆಗ್ರಹಿಸಬೇಕು ಎಂದಿದ್ದಾರೆ.

“ಮಾಜಿ ಬಿಜೆಪಿ ಶಾಸಕರೊಬ್ಬರು ಬೆಳಗಾವಿ ಗ್ರಾಮೀಣ ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರೆಡೆಗೆ ಸಂಶಯಾಸ್ಪದ ಟೀಕೆಗಳನ್ನು ಮಾಡುತ್ತಾ, ಆಕೆ “ನೈಟ್ ಪಾಲಟಿಕ್ಸ್” ಮೂಲಕ ಶಾಸಕರಾಗಿದ್ದಾರೆ ಎಂದು ಹೇಳಿದ್ದಾರೆ. ಯಾವುದೇ ಪಕ್ಷದ ಮಹಿಳಾ ರಾಜಕಾರಣಿಯು ಈ ರೀತಿಯ ಕೀಳುಮಟ್ಟದ ಮಾತುಗಳನ್ನು ಕೇಳಲು ಅರ್ಹರಲ್ಲ. ಕರ್ನಾಟಕದ ಮುಖ್ಯಮಂತ್ರಿಗಳಾದ ಬೊಮ್ಮಾಯಿ ಅವರು, ಅವರ ಪಕ್ಷದ ಸದಸ್ಯರಿಂದ ಕ್ಷಮೆ ಕೇಳಿಸಬೇಕು” ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮನುಕುಲಕ್ಕೇ ಕಪ್ಪುಚುಕ್ಕೆಯಂತೆ ಕುಪ್ಪಳಿಸಿದ ಅಸ್ಸಾಂ ಫೋಟೋಗ್ರಾಫರ್

ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಕೂಡ ಮಾಜಿ ಶಾಸಕ ಸಂಜಯ್ ಪಾಟೀಲ್ ಮಾತು ಅಸಹ್ಯದ ಪರಮಾವಧಿ ಎಂದು ವಿರುದ್ಧ ಕಿಡಿ ಕಾರಿದ್ದಾರೆ. 

“ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ಆಡಿರುವ ಮಾತು ಅಸಹ್ಯದ ಪರಮಾವಧಿ. ಇದು ಬಿಜೆಪಿಯವರ ಕೀಳು ಮನಸ್ಥಿತಿಯ ಅನಾವರಣ. ಸಿ.ಟಿ ರವಿಯವರು RSS ಎಂಬುವುದು ಸಂಸ್ಕೃತಿ ಹಾಗೂ ಸಂಸ್ಕಾರ ಕಲಿಸುವ ಗರಡಿ ಮನೆ ಎಂದಿದ್ದಾರೆ. ಹಾಗಾದರೆ RSS ಗರಡಿ ಮನೆಯಲ್ಲಿ‌ ಬಿಜೆಪಿ ನಾಯಕರು ಕಲಿಯುವುದು ಈ ಸಂಸ್ಕಾರವನ್ನೇ..? ಹೇಳಿ ಸಿ.ಟಿ ರವಿಯವರೆ..?” ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಹೋರಾಟಗಾರ್ತಿ, ಬರಹಗಾರ್ತಿ ಪಲ್ಲವಿ ಐದೂರು, ಬಿಜೆಪಿಯ ಸಂಜಯ ಪಾಟೀಲ ವಿರುದ್ಧ ಕಿಡಿಕಾರಿದ್ದಾರೆ.

“ಹಗಲೆಲ್ಲ ನಾಯಕರ ಮನೆ ಮುಂದೆ ಗೇಟ್ ಕೀಪರ್‌ಗಳ ತರ, ನಾಯಿಯ ತರ ಕಾವಲು ಕಾಯ್ಕೊಂಡು ಒಂದೇ ಒಂದು ಸೀಟಿಗೆ, ಅವಕಾಶಕ್ಕೆ ತಲೆ ಹಿಡಿಯೋದಕ್ಕೂ ಹಿಂದೆ ಮುಂದೆ ನೋಡದ ಇಂಥ ನಾಯಕರು ಹೆಣ್ಣುಮಕ್ಕಳು ಏನಾದರೂ ಸಾಧಿಸಿದರೆ, ಬೆಳೆದರೆ ಮಾತ್ರ ನಾಲಿಗೆಯನ್ನು ಮೋರಿಗಿಂತ ಗಲೀಜಾಗಿ ಹರಿಬಿಡ್ತಾರೆ!!” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸಂಶೋಧಕ, ಜೆಎನ್‌ಯು ಮಾಜಿ ಪ್ರಾಧ್ಯಪಕ ಪುರುಷೋತ್ತಮ ಬಿಳಿಮಲೆ ಅವರು ಕರ್ನಾಟಕದ ಮಹಿಳೆಯರು ಪಕ್ಷಭೇದ ಮರೆತು ಇದನ್ನು ಪ್ರತಿಭಟಿಸಬೇಕು ಎಂದು ಕರೆ ನೀಡಿದ್ದಾರೆ.
“ಇಷ್ಟು ವರ್ಷಗಳು ಆದ ಮೇಲೆಯೂ ಕರ್ನಾಟಕಕ್ಕೆ ಒಬ್ಬರು ಮಹಿಳಾ ಮುಖ್ಯಮಂತ್ರಿಯನ್ನು ಪಡೆಯಲಾಗಲಿಲ್ಲ.‌ ಜೊತೆಗೆ ಮಹಿಳೆಯರು ರಾಜಕಾರಣಕ್ಕೆ ಬಂದರೆ ಇವರೆಲ್ಲ ಹೇಗೆ ನಾಲಗೆ ಹರಿಯಬಿಡುತ್ತಾರೆ ಗಮನಿಸಿ.‌
ಈ ಸಂಜಯ ಪಾಟೀಲರನ್ನು ಬಿಜೆಪಿ ಕೂಡಲೇ ಪಕ್ಷದಿಂದ ಹೊರಹಾಕಬೇಕು ಮತ್ತು ಮಾಡಿದ ತಪ್ಪಿಗೆ ಹೆಬ್ಬಾಳ್ಕರ್ ಅವರ ಕ್ಷಮೆ ಕೇಳಬೇಕು. ಇದೇನಾ ಇವರು ನಾಡಿಗೆ ಕಲಿಸುವ ಸಂಸ್ಕೃತಿ! ಕರ್ನಾಟಕದ ಮಹಿಳೆಯರು ಪಕ್ಷಭೇದ ಮರೆತು ಇದನ್ನು ಪ್ರತಿಭಟಿಸಬೇಕು” ಎಂದಿದ್ದಾರೆ.

 

ಸಂಜಯ ಪಾಟೀಲ ಅವರ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಲಕ್ಷ್ಮಿ ಹೆಬ್ಬಾಳ್ಕರ್ ಅವರು, “ನನಗೆ ಅಭಿವೃದ್ಧಿಯ ರಾಜಕಾರಣ ಮಾತ್ರ ಗೊತ್ತಿದೆ. ಸಂಜಯ ಪಾಟೀಲ ಅವರು ಹೇಳಿರುವಂತೆ ಇತರ ರಾಜಕಾರಣ ನನಗೆ ಗೊತ್ತಿಲ್ಲ. ಹೆಣ್ಣನ್ನು ಪೂಜಿಸುವ ಸಮಾಜ ನಮ್ಮದು. ಒಬ್ಬ ಶಾಸಕಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು. ಶ್ರೀರಾಮನ 2 ನೇ ಅವತಾರವಾಗಿರುವ ಸಂಜಯ ಪಾಟೀಲರಿಗೆ ದೇವರು ಒಳ್ಳೆಯದು ಮಾಡಲಿ” ಎಂದು ತಿರುಗೇಟು ನೀಡಿದ್ದರು.

ಇದನ್ನೂ ಓದಿ: ರಾತ್ರಿ ರಾಜಕಾರಣದ ಸಂಸ್ಕೃತಿಯಿಂದ ಲಕ್ಷ್ಮಿ ಹೆಬ್ಬಾಳ್ಕರ್ ಶಾಸಕಿಯಾಗಿದ್ದಾರೆ: ಬಿಜೆಪಿ ಮಾಜಿ ಶಾಸಕ ವಿವಾದ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಣಿಪುರ ಬೆತ್ತಲೆ ಮೆರವಣಿಗೆ: ಗಲಭೆಕೋರರ ಗುಂಪಿಗೆ ಮಹಿಳೆಯರನ್ನು ಒಪ್ಪಿಸಿದ್ದ ಪೊಲೀಸರು, ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳು...

0
ಮಣಿಪುರ ಹಿಂಸಾಚಾರದ ಸಮಯದಲ್ಲಿ ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಮಹತ್ವದ ಅಂಶಗಳ ಉಲ್ಲೇಖವಾಗಿದ್ದು, ಮಹಿಳೆಯರನ್ನು ಗಲಭೆಕೋರರ ಗುಂಪಿಗೆ ಪೊಲೀಸರೇ ಒಪ್ಪಿಸಿದ್ದಾರೆ ಎಂದು ತಿಳಿಸಿದೆ. ಪೊಲೀಸರ...