HomeಮುಖಪುಟPFI ಸಂಬಂಧ ಆರೋಪ; ಹತ್ರಾಸ್‌ಗೆ ಹೊರಟ ಕೇರಳದ ಪತ್ರಕರ್ತ ಸೇರಿ ಮೂವರ ಬಂಧನ

PFI ಸಂಬಂಧ ಆರೋಪ; ಹತ್ರಾಸ್‌ಗೆ ಹೊರಟ ಕೇರಳದ ಪತ್ರಕರ್ತ ಸೇರಿ ಮೂವರ ಬಂಧನ

ಪತ್ರಕರ್ತನ ಶೀಘ್ರ ಬಿಡುಗಡೆಗಾಗಿ 'ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್' ಯುಪಿ ಸಿಎಂ ಆದಿತ್ಯನಾಥ್‌ರವರಿಗೆ ಪತ್ರ ಬರೆದಿದೆ.

- Advertisement -
- Advertisement -

PFI ಜೊತೆಗೆ ಸಂಪರ್ಕ ಹೊಂದಿದ್ದಾರೆಂದು ಆರೋಪಿಸಿ ಕೇರಳ ಮೂಲದ ಜನಪ್ರಿಯ ವೆಬ್‌ಸೈಟ್‌ ಒಂದರ ಪತ್ರಕರ್ತ ಸೇರಿದಂತೆ ಇತರ ಮೂವರನ್ನು ಉತ್ತರ ಪ್ರದೇಶ ಪೊಲೀಸರು ಮಥುರಾದಲ್ಲಿ ಬಂಧಿಸಿದ್ದಾರೆ. ಇವರು ವರದಿ ಮಾಡುವುದಕ್ಕಾಗಿ ದೆಹಲಿಯಿಂದ ಹತ್ರಾಸ್‌ಗೆ ಹೊರಟಿದ್ದರು ಎನ್ನಲಾಗಿದೆ.

ಬಂಧಿತರನ್ನು ಅತೀಕ್-ಉರ್ ರೆಹಮಾನ್, ಸಿದ್ದೀಕ್ ಕಪ್ಪನ್, ಮಸೂದ್ ಅಹ್ಮದ್ ಮತ್ತು ಆಲಂ ಎಂದು ಗುರುತಿಸಲಾಗಿದೆ. ’ಸಂಶಯಾಸ್ಪದ ವ್ಯಕ್ತಿಗಳು ದೆಹಲಿಯಿಂದ ಹತ್ರಾಸ್‌ಗೆ ತೆರಳುತ್ತಿದ್ದಾರೆ’ ಎಂಬ ಮಾಹಿತಿ ಮೇರೆಗೆ ಅವರನ್ನು ಟೋಲ್‌‌ನಲ್ಲಿ ತಡೆಯಲಾಯಿತು. ಮೊಬೈಲ್ ಫೋನ್‌ಗಳು, ಲ್ಯಾಪ್‌ಟಾಪ್ ಮತ್ತು ಕೆಲ ಪುಸ್ತಕಗಳನ್ನು ಒಯ್ಯುತ್ತಿದ್ದರಿಂದ ’ರಾಜ್ಯದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು’ ಎಂದು ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಮ್ಮ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಲ್ಲದೇ ಪತ್ರಕರ್ತನಿಗೆ ಪಿಎಫ್‌ಐ ಮತ್ತು ಅದರ ವಿದ್ಯಾರ್ಥಿ ಘಟಕದೊಂದಿಗೆ ಸಂಬಂಧವಿದೆ. ಹಗಾಗಿ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ಹತ್ರಾಸ್‌‌ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್‌

ಸಿದ್ದೀಕ್ ಕಪ್ಪನ್ ಪಕತ್ರಕರ್ತರಾಗಿದ್ದು, ’ಹತ್ರಾಸ್‌‌ನ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ವರದಿಗಾಗಿ ಹೊರಟಿದ್ದರು’ ಎಂದು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ಹೇಳಿಕೆಯಲ್ಲಿ ತಿಳಿಸಿದೆ. ಅವರು ಕೇರಳ ಯೂನಿಯನ್ ಆಫ್ ವರ್ಕಿಂಗ್ ಜರ್ನಲಿಸ್ಟ್ಸ್ ದೆಹಲಿ ಘಟಕದ ಕಾರ್ಯದರ್ಶಿಯೂ ಆಗಿದ್ದಾರೆ.

ಸಂಘವು ಮುಖ್ಯಮಂತ್ರಿ ಆದಿತ್ಯನಾಥ್‌ಗೆ ಬರೆದ ಪತ್ರದಲ್ಲಿ, ಅವರನ್ನು ಆದಷ್ಟು ಶೀಘ್ರ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದೆ.

“ಅವರನ್ನು ಹತ್ರಾಸ್ ಟೋಲ್ ಪ್ಲಾಜಾದಿಂದ ಉತ್ತರ ಪ್ರದೇಶ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಅವರನ್ನು ವಶಕ್ಕೆ ಪಡೆದುಕೊಂಡ ಬಗ್ಗೆಗಿನ ಯಾವುದೇ ಮಾಹಿತಿ ಹತ್ರಾಸ್ ಪೊಲೀಸ್‌ ಠಾಣೆಯಾಗಲಿ, ರಾಜ್ಯ ಪೊಲೀಸ್‌ ಇಲಾಖೆಯಾಗಲಿ ಒದಗಿಸಿಲ್ಲ. ನಾವು ಸೇರಿದಂತೆ ದೆಹಲಿ ಮೂಲದ ಕೆಲವು ವಕೀಲರು ಅವರನ್ನು ಸಂಪರ್ಕಿಸಲು ಮಾಡಿದ ಪ್ರಯತ್ನಗಳು ಯಶಸ್ವಿಯಾಗಲಿಲ್ಲ” ಎಂದು ಪತ್ರಕರ್ತರ ಸಂಘವು ತಮ್ಮ ಪತ್ರದಲ್ಲಿ ಒತ್ತಿ ಹೇಳಿದೆ.

ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದು ಹಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ ಕರೆ

“ನಮಗೆ ತಿಳಿದಿರುವಂತೆ ಅವರಿಗೆ ಪಿಎಫ್‌ಐಯೊಂದಿಗೆ ಯಾವುದೇ ಸಂಬಂಧಗಳಿಲ್ಲ. ಅವರು ನಿನ್ನೆ (ಸೋಮವಾರ) ಬೆಳಿಗ್ಗೆ ಹತ್ರಾಸ್‌ಗೆ ಹೊರಟಿರುವುದಾಗಿ ಹೇಳಿದ್ದರು. ಇದರ ನಂತರ ಅವರನ್ನು ಸಂಪರ್ಕಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಆದರೆ ಸಾಧ್ಯವಾಗುತ್ತಿಲ್ಲ. ಅವರ ಬಂಧನವಾಗಿದೆ ಎಂಬುವುದು ಮಾಧ್ಯಮಗಳ ವರದಿಯಿಂದ ತಿಳಿಯಿತು” ಎಂದು ಸಿದ್ದೀಕ್ ಕಪ್ಪನ್ ಅವರೊಂದಿಗೆ ಕೆಲಸ ಮಾಡುತ್ತಿರುವ ಮಲಯಾಳಂ ವೆಬ್‌ಸೈಟ್ ಅಳಿಮುಖಮ್‌ನ ಸಂಪಾದಕ ಕೆ.ಎನ್.ಅಶೋಕ್ ಹೇಳಿದ್ದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ಹತ್ರಾಸ್‌ನಲ್ಲಿ ದಲಿತ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ನಿರ್ವಹಿಸಿದ ರೀತಿಯ ಬಗ್ಗೆ ಭಾರಿ ಟೀಕೆಗಳನ್ನು ಎದುರಿಸುತ್ತಿರುವ ಉತ್ತರ ಪ್ರದೇಶ ಪೊಲೀಸರು, ಹತ್ರಾಸ್ ಘಟನೆಯಲ್ಲಿ ಪಿತೂರಿ ಮಾಡಲಾಗುತ್ತಿದೆ ಎಂದು 18 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಪೊಲೀಸರು ದಾಖಲಿಸಿದ ಎಫ್‌ಐಆರ್‌‌ನಲ್ಲಿ, ಹತ್ರಾಸ್‌ ಘಟನೆಯನ್ನು ಇಟ್ಟುಕೊಂಡು ರಾಜ್ಯದ ಶಾಂತಿಗೆ ಭಂಗ ತರುವ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಇದನ್ನೂ ಓದಿ: ಅತ್ಯಾಚಾರದ ದೂರು ದಾಖಲಿಸಲು 900 ಕಿ.ಮೀ ಪ್ರಯಾಣಿಸಿದ ಸಂತ್ರಸ್ತೆ!

ನಮ್ಮ ಯೂಟ್ಯೂನ್ ಚಾನೆಲ್‌ಗೆ Subscribe ಆಗಲು ಇಲ್ಲಿ ಕ್ಲಿಕ್ ಮಾಡಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...