Homeಮುಖಪುಟಅತ್ಯಾಚಾರದ ದೂರು ದಾಖಲಿಸಲು 900 ಕಿ.ಮೀ ಪ್ರಯಾಣಿಸಿದ ಸಂತ್ರಸ್ತೆ!

ಅತ್ಯಾಚಾರದ ದೂರು ದಾಖಲಿಸಲು 900 ಕಿ.ಮೀ ಪ್ರಯಾಣಿಸಿದ ಸಂತ್ರಸ್ತೆ!

ಸಂತ್ರಸ್ತೆಯು ಲಖೌನದ ಠಾಣೆಯೊಂದರಲ್ಲಿ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಪೊಲೀಸರು ದೂರು ದಾಖಲಿಸುವ ಬದಲು ರಾಜಿ ಮಾಡಿಕೊಳ್ಳಲು ಸೂಚಿಸಿದ್ದರು.

- Advertisement -
- Advertisement -

ಉತ್ತರ ಪ್ರದೇಶದ ಹತ್ರಾಸ್‌ನಲ್ಲಿ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ದೇಶಾದ್ಯಂತ ಹೋರಾಟ ನಡೆಯುತ್ತಿರುವುದರ ನಡುವೆಯೆ ಮತ್ತೊಂದು ಅಮಾನುಷ ಅತ್ಯಾಚಾರದ ಪ್ರಕರಣ ಲಖನೌದಲ್ಲಿ ವರದಿಯಾಗಿದೆ. 22 ವರ್ಷದ ನೇಪಾಳಿ ಯುವತಿ ತನ್ನ ಪರಿಚಯಸ್ಥರಿಂದಲೇ ಪದೇ ಪದೇ ಲೈಂಗಿಕ ಕಿರುಕುಳ ಅನುಭವಿಸಿದ್ದಾಳೆ. ಕೊನೆಗೆ  ತನಗಾದ ಅನ್ಯಾಯದ ಬಗ್ಗೆ ದೂರು ದಾಖಲಿಸಲು ಆಕೆ ಬರೋಬ್ಬರಿ 900 ಕಿ.ಮೀ ದೂರದಲ್ಲಿರುವ ನಾಗ್ಪುರಕ್ಕೆ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಿಸಿದ್ದಾಳೆ..

ಎರಡು ವರ್ಷಗಳ ಹಿಂದೆ ಕೆಲಸ ಅರಸಿ ಭಾರತಕ್ಕೆ ಬಂದಿದ್ದ ಯುವತಿಯ ಮೇಲೆ ಪ್ರವೀಣ್‌ ರಾಜ್‌ಪಾಲ್ ಯಾದವ್‌ ಎಂಬ ವ್ಯಕ್ತಿ ಅತ್ಯಾಚಾರ ನಡೆಸಿದ್ದ. ತನ್ನ ಮೊಬೈಲ್‌ನಲ್ಲಿ ಯುವತಿಯ ಆಕ್ಷೇಪಾರ್ಹ ಚಿತ್ರಗಳನ್ನು ಸೆರೆಹಿಡಿದುಕೊಂಡಿದ್ದಲ್ಲದೆ ವಿಡಿಯೊ ಕೂಡ ಚಿತ್ರಿಸಿಕೊಂಡಿದ್ದು, ಪೊಲೀಸರಿಗೆ ದೂರ ನೀಡದಂತೆ ಬ್ಲಾಕ್ ಮೇಲ್ ಮಾಡುತ್ತಿದ್ದ ಎಂದು ಯುವತಿ ಆರೋಪಿಸಿದ್ದಾಳೆ.

ಕಿರುಕುಳ ತಾಳಲಾರದೇ ಸಂತ್ರಸ್ತೆಯು ಲಖೌನದ ಠಾಣೆಯೊಂದರಲ್ಲಿ ದೂರು ನೀಡಲು ಮುಂದಾಗಿದ್ದಾಳೆ. ಆದರೆ ಆರೋಪಿ ಪ್ರವೀಣ್ ಯಾದವ್ ಸ್ಥಳೀಯ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದರಿಂದ, ಪೊಲೀಸರು ದೂರು ದಾಖಲಿಸುವ ಬದಲು ರಾಜಿ ಮಾಡಿಕೊಳ್ಳಲು ಸೂಚಿಸಿದ್ದಾರೆ. ಕೊನೆಗೆ ನಾಗ್ಪುರದಲ್ಲಿ ವಾಸಿಸುತ್ತಿರುವ ತನ್ನ ನೇಪಾಳಿ ಸ್ನೇಹಿತೆ ಬಳಿಗೆ ಹೋಗುವುದು ಸೂಕ್ತವೆಂದು ತಿಳಿದು ಆರೋಪಿಯ ಕಣ್ತಪ್ಪಿಸಿ ಉತ್ತರ ಪ್ರದೇಶದ ಲಖನೌದಿಂದ ಮಹಾರಾಷ್ಟ್ರದ ನಾಗಪುರಕ್ಕೆ ಬಂದು ಅಲ್ಲಿನ ಕೊರಾಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಗುರುಗ್ರಾಮ: 25 ವರ್ಷದ ಹುಡುಗಿ ಮೇಲೆ ಸಾಮೂಹಿಕ ಅತ್ಯಾಚಾರ, ತೀವ್ರ ಹಲ್ಲೆ

ಸ್ನೇಹಿತೆಯೊಬ್ಬರ ಮೂಲಕ ಆರೋಪಿ ಯಾದವ್ ಸಂತ್ರಸ್ತೆಗೆ ಈ ಹಿಂದೆ ಪರಿಚಿತರಾಗಿದ್ದಾರೆ.  ಯಾದವ್ ಆಕೆಯ ಆಕ್ಷೇಪಾರ್ಯ ಚಿತ್ರಗಳನ್ನು ಸೆರೆಹಿಡಿದು, ಆಕೆ ತನ್ನೊಂದಿಗೆ ಸಹಕರಿಸದಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಸಿ ಸಂತ್ರಸ್ತೆಯನ್ನು ಲೈಂಗಿಕವಾಗಿ ಕಿರುಕುಳ ನೀಡಿದ್ದಾನೆ. ಅದೆಲ್ಲವನ್ನು ವಿಡಿಯೋ ಮಾಡಿಕೊಂಡು ನೇಪಾಳದ ಕಠ್ಮಂಡುವಿನಲ್ಲಿರುವ ಆಕೆಯ ಕುಟುಂಬಕ್ಕೆ ತಿಳಿಯಲು ಎಂದು ಆಕೆಯ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದ ಎಂದು ತಿಳಿದುಬಂದಿದೆ.

ಕೊರಾಡಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಜೀರ್ ಶೇಖ್ ಮಾತನಾಡಿ, ಯುವತಿ ದೂರು ನೀಡಲು ಕೊರಾಡಿಯ ಮಹಾದುಲಕ್ಕೆ ಬಂದಿದ್ದಾಳೆ. “ಮಹಿಳೆ ಆರಂಭದಲ್ಲಿ ಲಖನೌದಲ್ಲಿ ದೂರು ದಾಖಲಿಸಲು ಬಯಸಿದ್ದಳು ಆದರೆ ಪೊಲೀಸರು ರಾಜಿ ಮಾಡಿಕೊಳ್ಳಲು ಸೂಚಿಸಿದ್ದರಿಂದ ಯುವತಿ ಯುಪಿ ಪೊಲೀಸರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾಳೆ” ಎಂದಿದ್ದಾರೆ.

ಕೊರಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವಾಸವಾಗಿರುವ ಲಖನೌದಲ್ಲಿ ಈ ಘಟನೆ ನಡೆದಿದ್ದರಿಂದ ಅದನ್ನು ಈಗ ಉತ್ತರ ಪ್ರದೇಶ ಪೊಲೀಸರಿಗೆ ರವಾನಿಸಲಾಗಿದೆ ಎಂದು ನಗರ ಪೊಲೀಸ್ ಮುಖ್ಯಸ್ಥ ಅಮಿತೇಶ್ ಕುಮಾರ್ ತಿಳಿಸಿದ್ದಾರೆ.


ಇದನ್ನೂ ಓದಿ: ಹತ್ರಾಸ್‌‌ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್‌

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...