Homeಮುಖಪುಟನೂತನ ಹೆಪಟೈಟಿಸ್‌ 'ಸಿ' ವೈರಸ್‌ ಬಗೆಗಿನ ಸಂಶೋಧನೆಗೆ 2020ರ ನೊಬೆಲ್‌ ಪ್ರಶಸ್ತಿ

ನೂತನ ಹೆಪಟೈಟಿಸ್‌ ‘ಸಿ’ ವೈರಸ್‌ ಬಗೆಗಿನ ಸಂಶೋಧನೆಗೆ 2020ರ ನೊಬೆಲ್‌ ಪ್ರಶಸ್ತಿ

ಪ್ರತಿವರ್ಷ ಕನಿಷ್ಠ 4,00,000 ಜನರನ್ನು ಬಲಿತೆಗೆದುಕೊಳ್ಳುವ ರೋಗವೊಂದಕ್ಕೆ ಪತ್ತೆದಾರಿಕೆ ನಡೆಸಿ, ಔಷಧೋಪಚಾರ ಕಂಡುಹಿಡಿಯಲು ಈ ಸಂಶೋಧಕರು ನೆರವಾಗಿದ್ದಾರೆ.

- Advertisement -
- Advertisement -

ಈ ವರ್ಷ 2020ರ ವೈದ್ಯಕೀಯ ವಿಭಾಗದ ನೊಬೆಲ್‌ ಪ್ರಶಸ್ತಿಯು ಮೂವರು ವೈರಸ್‌ ಕುರಿತ ಸಂಶೋಧಕರ ಪಾಲಿಗೆ ಸಂದಿದೆ. ವರ್ಷವಿಡೀ ಕರೊನಾ ವೈರಸ್ಸಿನಿಂದ ಹೈರಾಣಾಗಿರುವ ಹೊತ್ತಿನಲ್ಲಿ ಅಂತಹದ್ದೇ ಕುರಿತಾದಂತಹ ವೈಜ್ಞಾನಿಕ ಶೋಧಗಳು ಪ್ರಮುಖ ಎಂಬುದನ್ನು ಸಾಬೀತು ಮಾಡುವಂತಹಾ ಸಂದರ್ಭಕ್ಕೆ ಇದು ಸಾಕ್ಷಿಯಾಗಿದೆ.

ಹೌದು, ವೈರಸ್ಸುಗಳು ಇಂದಲ್ಲಾ, ಹಿಂದಿನಿಂದಲೂ ಜೀವ ಸಂಕುಲವನ್ನು, ವಿಶೇಷವಾಗಿ ಮಾನವ ಸಂಕುಲವನ್ನು ತೀವ್ರವಾಗಿ ಕಾಡುವಲ್ಲಿ ಹೆಸರಾಗಿವೆ. ಸಣ್ಣಗೆ ಕೆಮ್ಮು-ನೆಗಡಿಯಿಂದ ಆರಂಭಿಸಿ, ಉರಿಯೂತವನ್ನು ತಂದು, ಆ ಮೂಲಕ ಕ್ಯಾನ್ಸರ್ ತರುವಲ್ಲಿ ಕಾರಣವಾಗಿವೆ. ಈಗಂತೂ ಜಗತ್ತನ್ನೇ ಆವರಿಸಿ ಸಾಂಕ್ರಾಮಿಕ ಪಿಡುಗನ್ನು ತಂದೊಡ್ಡಿವೆ. ಹಾಗಾಗಿ ವೈರಾಲಜಿಗೆ ವಿಜ್ಞಾನದ ಹೆಮ್ಮೆಯ ಬಹುಮಾನ ಈ ವರ್ಷವೇ ಬಂದುದರಲ್ಲಿ ಅಚ್ಚರಿ ಏನಿಲ್ಲ.

ಈ ವರ್ಷ ಹಾರ್ವಿ ಜೆ. ಆಲ್ಟರ್‌, ಮೈಕೆಲ್‌ ಹೌಟನ್‌ ಮತ್ತು ಚಾರ್ಲ್ಸ್‌ ಎಂ. ರೈಸ್‌ ಎಂಬ ಮೂವರು ವೈರಸ್ಸುಗಳ ಕುರಿತ ಸಂಶೋಧಕರಿಗೆ ವೈದ್ಯಕೀಯ ವಿಭಾಗ ನೊಬೆಲ್‌ ಬಹುಮಾನವನ್ನು ಅವರ ಹೆಪಟೈಟಿಸ್‌-ಸಿ ಕುರಿತ ವಿವರಗಳಿಗಾಗಿ ಕೊಡಲಾಗಿದೆ. ಹೆಪಟೈಟಿಸ್‌- ಎ ಮತ್ತು ಬಿ-ಯಿಂದ ಮುಂದುವರೆದು ರೋಗವನ್ನು ಮತ್ತಷ್ಟು ಅರ್ಥಪೂರ್ಣವಾಗಿ ವಿವರಿಸಿ, ಅದನ್ನು ಪತ್ತೆ ಹಚ್ಚುವ, ಪ್ರತ್ಯೇಕಿಸಿ ಅವಲೋಕಿಸುವ ಹಾಗೂ ಗುರಿಹೊಂದಿದ ಚಿಕಿತ್ಸೆಯನ್ನೂ ಸಾಧ್ಯಮಾಡಿದ ಅನುಶೋಧಕ್ಕಾಗಿ ಈ ಮೂವರೂ ಈ ಶ್ರೇ಼ಷ್ಠ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವೈರಸ್ಸುಗಳ ಅರ್ಥಮಾಡಿಕೊಳ್ಳುವಲ್ಲಿ ಹಾಗೂ ಅವುಗಳಿಂದಾಗ ಪಿಡುಗನ್ನು ನಿರ್ವಹಿಸುವಲ್ಲಿ ಈ ಮೂವರ ಸಂಶೋಧನಾ ವಿವರಗಳು ವಿಜ್ಞಾನದಲ್ಲಿ ಮೈಲುಗಲ್ಲುಗಳಾಗಿವೆ. ಇದರಿಂದಾಗಿ ಪ್ರತಿವರ್ಷ ನಾಲ್ಕು ಲಕ್ಷ ಜನರ ಜೀವವನ್ನು ಉಳಿಸುವಲ್ಲಿ ನೆರವಾಗಿವೆ.

Photo Courtesy: Harvard health University

ಹೆಪಟೈಟಿಸ್ – ಸಿ (Hepatitis C) ಹೆಸರನ್ನು ಒಮ್ಮೆಲೆ ಕೇಳಿದಾಗ ಅಷ್ಟೇನೂ ಜನಪ್ರಿಯವಲ್ಲದ್ದು ಎನಿಸಬಹುದು. ಸಾಮಾನ್ಯ ಕಾಮಾಲೆಯಾದ ಹೈಪಟೈಟಿಸ್‌ -ಎ ಜನಪ್ರಿಯ ಹೌದು. ಅದರಲ್ಲೂ ಅದಕ್ಕೆ ಔಷಧಿ ಕೊಡುವ ಸಾವಿರಾರು ಜನರನ್ನೂ ಪಟ್ಟಿ ಮಾಡಬಹುದು. ಅಂತಹದರಲ್ಲಿ ಇದ್ಯಾವುದು ಎನಿಸಬಹುದು. ಅದರಲ್ಲೂ ಅದಕ್ಕೊಂದು ಹೊಸ ಹೆಸರನ್ನಿಟ್ಟು (ಹೆಪಟೈಟಿಸ್-ಸಿ) ನೊಬೆಲ್‌ ಬಹುಮಾನ ಕೊಡುವುದೇ ಎನ್ನುವ  ಕುತೂಹಲಕ್ಕೆ ಮುಂದಿನ ಟಿಪ್ಪಣಿಗಳು ವಿವರಗಳಾಗುತ್ತವೆ.

ಹೆಪಟೈಟಿಸ್‌, ಇದೊಂದು ಗ್ರೀಕ್‌ ಭಾಷೆಯ ಪದ. ನಮ್ಮ ದೇಹದ ಲಿವರ್‌ ಅಥವಾ ಯಕೃತ್ತು ಅಥವಾ ಪಿತ್ತಜನಕಾಂಗ ಮತ್ತು ಅದಕ್ಕೆ ಕಾಡುವ ಉರಿಯೂತ (Inflammation) ಇವೆರಡರ ಅರ್ಥವನ್ನೂ ಒಂದಾಗಿಸಿ ಕೊಡುವ ಒಂದೇ ಪದ ಹೆಪಟೈಟಿಸ್‌. ಅಂದರೆ ಉರಿಯೂತ ಅಥವಾ ಇನ್‌ಫ್ಲಮೇಶನ್‌ ನಿಂದ ಬಾಧೆಗೆ ಒಳಗಾಗುವ ಲಿವರ್‌, ವೈರಸ್‌ನಿಂದ ಅಲ್ಲದೆ ಹೆಚ್ಚು ಮದ್ಯಪಾನದಿಂದಲೂ ಅಥವಾ ಕೆಲವೊಂದು ಪರಿಸರದ ವಿಷಯಗಳಿಂದಲೂ ದೇಹಕ್ಕೆ ತೊಂದರೆ ಕೊಡುತ್ತಿರುವ ವಿವರಗಳು ದೊರತಿದ್ದವು.

ಈ ಹಿಂದೆ 1940ರಲ್ಲೇ ಎರಡು ಬಗೆಯ ಹೆಪಟೈಟಿಸ್‌ಗಳು ಇರುವ ಬಗ್ಗೆ ತಿಳಿಯಲಾಗಿತ್ತು. ಒಂದು “ಎ” ಟೈಪ್‌ ಅದೇ ಸಾಮಾನ್ಯ ಕಾಮಾಲೆ. ಮತ್ತೊಂದನ್ನು ಹಾಗೆ ಆ ರೀತಿಯಲ್ಲಿ ಬಾರದ “ಬಿ” ಟೈಪ್‌ ಎಂದು ವರ್ಗೀಕರಸಲಾಗಿತ್ತು. ಈ “ಬಿ” ಟೈಪ್‌ ರಕ್ತದಿಂದ ರಕ್ತಕ್ಕೆ ಸಂಪರ್ಕವಿದ್ದಾಗ ಮಾತ್ರ ಅಂದರೆ ರಕ್ತ ನೀಡಿಕೆಯಲ್ಲಿ ಬರುವಂತಹದ್ದೆಂದೂ ತಿಳಿಯಲಾಗಿತ್ತು ಆದರೆ “ಎ” ಆಹಾರ ಹಾಗೂ ನೀರಿನಿಂದಲೂ ಒಬ್ಬರಿಂದ ಒಬ್ಬರಿಗೆ ಹಬ್ಬುವುದು ತಿಳಿದೇ ಇತ್ತು. ಹಾಗದರೇ ಇದೇನಿದು “ಸಿ” ಟೈಪ್‌?

ಇದನ್ನೂ ಓದಿ: ನ್ಯಾಯಾಂಗ ವ್ಯವಸ್ಥೆ ಇಂದು ನ್ಯಾಯ ಕೊಡುವಲ್ಲಿ ವಿಫಲವಾಗಿದೆ: ಜಸ್ಟಿಸ್ ಗೋಪಾಲಗೌಡ

ಒಟ್ಟಾರೆ ರೋಗ ಲಕ್ಷಣಗಳು ಒಂದೇ ಆದರೂ ಕಾರಣಗಳು ಮತ್ತು ಅವುಗಳಿಂದ ಉಂಟಾಗುವ ಜೀವಿರಾಸಾಯನಿಕ ವಿವರಗಳು ಭಿನ್ನ ಭಿನ್ನವಾದವು. “ಎ” ಹಾಗೂ “ಬಿ” ಅಲ್ಲದ ಒಂದು ಹೆಪಟೈಟಿಸ್‌ ಗೊತ್ತಾಗಿದ್ದೇ ತೀರಾ ತಡವಾಗಿ! “ಎ” ಯ ಹೊರತಾದ “ಬಿ” ರಕ್ತದಿಂದ ರಕ್ತಕ್ಕೆ ದಾಟುವ ಬಗೆಯನ್ನು 1960ರಲ್ಲೇ ಪತ್ತೆ ಹಚ್ಚಿ ವಿವರ ನೀಡಿದ್ದ ಬ್ಲುಮ್‌ ಬರ್ಗ್‌ ಅವರಿಗೂ 1976ರಲ್ಲೇ ನೊಬೆಲ್‌ ಬಹುಮಾನ ಸಂದಿತ್ತು. ಆದರೆ ಮತ್ತೆ ಅದೇ ಬಗೆಯಲ್ಲಿ ರಕ್ತ ನೀಡಿಕೆಯಲ್ಲೇ ಬರುವ ಮತ್ತಂತಹದೇ ರೋಗ “ಬಿ”ಯಂತೆ ವಾಸಿಯಾಗದ ಸಂಗತಿ ಹೊಸತಾಗಿತ್ತು. ಹಾಗಾಗಿ ಇದನ್ನು “ಎ” ಮತ್ತು “ಬಿ” ಅಲ್ಲದ ಹೆಪಟೈಟಿಸ್‌ ಎಂದು ಗುರುತಿಸಲಾಗಿತ್ತು.

ಆದರೆ ಇಲ್ಲೊಂದು ತೊಡಕಿತ್ತು. ಏನೆಂದರೆ ಇದನ್ನು ಪತ್ತೆ ಹಚ್ಚುವ ವೈಧಾನಿಕತೆಗಳು ಇರಲಿಲ್ಲ. ಅದಕ್ಕಿರುವ ಮೂಲ ಸಮಸ್ಯೆಯು ಆ ರೋಗ ಬಂದಾಗ ಹಿಂದೆ ಬಿಡುವ ಆಂಟಿಜನ್‌ಗಳ ಬಗೆಯದ್ದಾಗಿತ್ತು. ಅವುಗಳು ಸಾಮಾನ್ಯ ಕಾಮಾಲೆಯಂತೆಯೇ ಅಣಕು ಮಾಡುತ್ತಿದ್ದುದರಿಂದ ಅರಿಯುವುದು ಮತ್ತೂ ಕಷ್ಟವಾಗಿತ್ತು. ಇದರ ಜೀವರಾಸಾಯನಿಕ ವಿವರಗಳು ತುಂಬಾ ಸಂಕೀರ್ಣವಾದವು. (ಅವನ್ನೆಲ್ಲಾ ಸಮೀಕರಣ-ಚಿತ್ರ ಸಹಿತ ಬಿಡಿಸಿ, ನಿಮ್ಮ ಓದಿನ ಸಹಜ ಆನಂದಕ್ಕೆ ಅಡ್ಡಿಪಡಿಸುವುದಿಲ್ಲ) ಆ ವಿಧಾನಗಳನ್ನು ಪತ್ತೆ ಮಾಡಿದ್ದು ಹಾರ್ವಿ ಜೆ. ಆಲ್ಟರ್‌ ಅವರು.

ಹೆಪಟೈಟಿಸ್‌ “ಬಿ” ವಿವರಗಳು ದೊರತೆ ಕಾಲಕ್ಕೇ ಸಂಶೋಧನೆಗಳನ್ನು ಅದೇ ರಕ್ತ ನೀಡಿಕೆಯ ಹಿಂದಿನ ಹೆಪಟೈಟಿಸ್‌ ಕುರಿತಂತೆ ನಡೆಸುತ್ತಿದ್ದ ಆಲ್ಟರ್‌ ಮೂಲತಃ ವೈದ್ಯರು. ಹಾಗಾಗಿ ರೋಗಪತ್ತೆಯ ದೃಢಿಕರಣ ಅವರಿಗೆ ಒಲಿದ ತಿಳಿವು. ಅಂತೂ ಅವರಿಂದ “ಎ” ಹಾಗೂ “ಬಿ” ಅಲ್ಲದ ಮತ್ತೊಂದು ಬಗೆಯ ವೈರಸ್ ಇದೆಯೆಂಬುದೂ ಮತ್ತು ಅದನ್ನು ಪತ್ತೆ ಹಚ್ಚುವ ರಕ್ತ ಪರೀಕ್ಷೆಯ ವಿಧಾನ ಸಾಧುವಾಯಿತು.

ಇದನ್ನೂ ಓದಿ: ಮಹಿಳಾ ನಾಯಕಿ ಬಟ್ಟೆಗೆ ಕೈಹಾಕಲು ಆತನಿಗೆಷ್ಟು ಧೈರ್ಯ..?- ಬಿಜೆಪಿಯ ಚಿತ್ರಾ ವಾಘ್ ಆಕ್ರೋಶ

ಅದೇನೋ ಸರಿ ಆದರೆ ಅದು ವೈರಸ್ಸೇ ಹೌದು ಎನ್ನುವುದರ ಸೂಕ್ಷ್ಮ ವಿವರಗಳು ಬೇಕಲ್ಲವೇ? ಇದಕ್ಕೆಲ್ಲಾ ವೈರಸ್ಸಿನ ಗುಣಾಣುಗಳ ವಿವರಗಳು ಹಾಗೂ ಅವುಗಳು ವಿಸ್ತರಿಸುವ ಸೂಕ್ಷ್ಮ ಸಂಗತಿಗಳೂ ಜೊತೆಗೆ ಅವುಗಳಿಂದಾಗುವ ರೋಗ ವಿವರಗಳು ಬೇಕಿದ್ದವು. ಇದನ್ನು ಸಂಶೋಧಿಸಲು ಬ್ರಿಟನ್‌ ಮೂಲದ ಮೈಕೆಲ್‌ ಹೌಟನ್‌ ಮತ್ತು ಅವರ ತಂಡದ ಅಧ್ಯಯನಗಳು ನೆರವಾದವು. ಅದಕ್ಕೆ ಪ್ರಬಲ ಪ್ರೇರಣೆ ದೊರೆತದ್ದು ಹೌಟನ್‌ ಅವರು ಲಂಡನ್ನಿನ ಕಿಂಗ್ಸ್‌ ಕಾಲೇಜಿನಿಂದ “ಚಿರಾನ್‌” ಎಂಬ ಔಷಧ ಉದ್ಯಮದ ಪ್ರಯೋಗಾಲಯ ಸೇರಿ ನಡೆಸಿದ ಪ್ರಯೋಗಗಳಿಂದ! ಅಲ್ಲಿ ಅವರು ತಮ್ಮ ತಂಡದವರೊಡನೆ ಸೇರಿ ಆ ಉದ್ಯಮದ ರೋಗ ನಿಯಂತ್ರಣ ಪ್ರಯೋಗಾಲಯದಲ್ಲಿ ವೈರಸ್ಸಿನ ವಿವರಗಳನ್ನು ಅದರ ವಂಶವಾಹಿ ವಿವರಗಳಿಂದ ಪತ್ತೆ ಹಚ್ಚಿ “ಹೆಪಟೈಟಿಸ್ ‌- ಸಿ” ಎಂದು ಹೆಸರಿದರು.

Photo Courtesy: ZeeNewsIndia

ಹೆಸರಿಟ್ಟು ಕರೆದರೆ ಸಾಕೆ..? ವಿಜ್ಞಾನವೆಂದೂ ನಾಮಕರಣದ ಭ್ರಮೆಯಿಂದ ಮತ್ತು ಅದಕ್ಕಷ್ಟು ಹೊಗಳಿಕೆ ಪರಾಕುಗಳಿಂದ ವೈಭವಗೊಳ್ಳುವುದಿಲ್ಲ. ಅದೇನಿದ್ದರೂ ಪ್ರಾಯೋಗಿಕ ಸಾಬೀತು ಹಾಗೂ ಮರು ಪರೀಕ್ಷೆಯಲ್ಲಿ ಉತ್ತೀರ್ಣವಾಗುವುದನ್ನು ನಂಬಿಕೊಂಡಿದೆ. “ಹೆಪಟೈಟಿಸ್‌ -ಸಿ” ಎಂಬುದೇನೋ ನಿರ್ಣಾಯಕವಾಗಿತ್ತು. ಆದರೆ ಅದರೊಳಗೊಂದು ಗುಟ್ಟು ಇನ್ನೂ ಬಗೆಹರಿದಿರಲಿಲ್ಲ. ಅದೆಂದರೆ ಈ ಹೊಸತಾದ “ಎ” ಹಾಗೂ “ಬಿ” ಅಲ್ಲದ “ಸಿ”ಯು, ಎ-ಬಿ ಯಂತೆ ಸ್ವತಂತ್ರವಾಗಿ ರೋಗವನ್ನು ಉಂಟುಮಾಡುತ್ತದೆಯೋ ಇಲ್ಲವೋ ಎಂಬುದಾಗಿತ್ತು. ಆಗ ನೆರವಿಗೆ ಬಂದದದ್ದು. ಪ್ರೊ. ಚಾರ್ಲ್ಸ್‌ ರೈಸ್‌ ಅವರ ಸಂಶೋಧನೆಗಳು.

ಸೆಂಟ್‌ ಲೂಯಿಸ್‌ನ ವಾಷಿಂಗ್‌ಟನ್‌ ವಿಶ್ವವಿದ್ಯಾಲಯದಲ್ಲಿ ವೈರಾಲೊಜಿ ಪ್ರೊಫೆಸರ್‌ ಜೆನೆಟಿಕ್‌ ಇಂಜನಿಯರಿಂಗ್‌ನಿಂದ ಆ ವೈರಸ್ಸುಗಳ ಪ್ರತಿ ರೂಪದ ನಿರ್ಮಿತಿಯಿಂದ ಅವುಗಳೇ ಸ್ವತಂತ್ರವಾಗಿ ಹೆಪಟೈಟಿಸ್‌ ಅನ್ನು ತರಬಲ್ಲವು ಎಂಬುದನ್ನು ಸಾಬೀತು ಮಾಡಿದರು. ಇದು ಹಾಗೆ ರಕ್ತ ನೀಡಿಕೆಯಲ್ಲಿ ಆವರೆಗೂ ವಿವರಿಸಲಾಗದ ಹೆಪಟೈಟಿಸ್ ಮಾದರಿಯ ವಿವರಗಳ ಪತ್ತೆದಾರಿಕೆಗೆ ಉತ್ತರವಾಗಿತ್ತು. ಕಡೆಗೂ ರೈಸ್‌ ವಿವರಿಸಲಾಗದ ಕಾರಣದ ಹೆಪಟೈಟಿಸ್ ಬಗ್ಗೆ ಕೊನೆಯ ಪ್ರೂಫ್ ಕೊಡುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: ಮನಿಷಾಳನ್ನು ಸುಟ್ಟ ಜಾಗದಿಂದ ಒಂದು ಹಿಡಿ ಮಣ್ಣು ತಂದು ಸ್ಮಾರಕ ನಿರ್ಮಿಸೋಣ: ದೇವನೂರು ಮಹಾದೇವ

ಈ ಎಲ್ಲಾ ವಿವರವಾದ ತಿಳಿವಳಿಕೆಯಿಂದ ಪ್ರತಿವರ್ಷ ಕನಿಷ್ಠ 4,00,000 ಜನರನ್ನು ಬಲಿತೆಗೆದುಕೊಳ್ಳುವ ರೋಗವೊಂದಕ್ಕೆ ಪತ್ತೆದಾರಿಕೆ ನಡೆಸಿ, ಔಷಧೋಪಚಾರ ಒದಗಿಸುವ ಮಾನವತೆಯ ಅನುಸಂಧಾನವನ್ನು ಗುರುತಿಸಿ ವರ್ಷ-2020ರ ವೈದ್ಯಕೀಯ ನೊಬೆಲ್‌ ಬಹುಮಾನವನ್ನು ಹಾರ್ವಿ ಆಲ್ಟರ್‌, ಮೈಕೆಲ್‌ ಹೌಟನ್‌ ಹಾಗೂ ಚಾರ್ಲ್ಸ್‌ ರೈಸ್‌ ಅವರುಗಳಿಗೆ ಘೋಷಿಸಲಾಗಿದೆ. ಈ ಮೂವರ ಪುಟ್ಟ ಪರಿಚಯ ಹೀಗಿದೆ.

ಪ್ರೊ. ಹಾರ್ವಿ ಆಲ್ಟರ್‌ 1935ರಲ್ಲಿ ನ್ಯೂಯಾರ್ಕ್‌ ನಲ್ಲಿ ಜನಿಸಿದರು. ರೊಚೆಸ್ಟರ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯಿಂದ ವೈದ್ಯಕೀಯ ಪದವಿ ಪಡೆದು ಮುಂದೆ ಇಂಟರ್‌ನಲ್‌ ಮೆಡಿಸನ್‌ ಅಲ್ಲಿ ವಿಶೇಷ ತರಬೇತಿಯನ್ನು ವಿಶ್ವವಿದ್ಯಾಲಯದ ಆಸ್ಪತ್ರೆಯಿಂದ ಪಡೆದರು. ನಂತರ 1961ರಲ್ಲಿ ನ್ಯಾಷನಲ್‌ ಇನ್ಸ್‌ಟಿಟ್ಯೂಟ್‌ ಆಫ್‌ ಹೆಲ್ತ್‌ (NIH) ನಲ್ಲಿ ಕ್ಲಿನಿಕಲ್‌ ಅಸೋಸಿಯೇಟ್‌ ಆಗಿ ಸೇರಿದರು. ಜೊತೆಗೆ ಜಾರ್ಜ್‌ಟೌನ್‌ ವಿಶ್ವವಿದ್ಯಾಲಯದಲ್ಲೂ ದುಡಿದು NIH ನಲ್ಲಿಯೇ ರಕ್ತವನ್ನು ನೀಡುವ ವೈದ್ಯಕೀಯ ಸೇವೆಯ ವಿಭಾಗದಲ್ಲಿ 1969ರಿಂದಲೂ ಇದ್ದಾರೆ. ಪ್ರಸ್ತುತ ಹಿರಿಯ ಸಂಶೋಧಕರಾಗಿ ಅಲ್ಲಿಯೇ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರೊ. ಮೈಕೆಲ್‌ ಹೌಟನ್‌ ಬ್ರಿಟನ್ನಿನ್ನಲಿ ಜನಿಸಿದವರು. ಲಂಡನ್ನಿನ ಕಿಂಗ್ಸ್‌ ಕಾಲೇಜಿನಲ್ಲಿ ಪಿ.ಎಚ್‌.ಡಿ ಗಳಿಸಿ ಅಲ್ಲಿಯೇ ಸಂಶೋಧಕರಾಗಿದ್ದರು. ಮುಂದೆ ಅಮೆರಿಕದ “ಚಿರಾನ್‌” ಎಂಬ ಔಷಧ ಉದ್ಯಮದ ಪ್ರಯೋಗಾಲಕ್ಕೆ ಸೇರಿ ಸಂಶೋಧನೆಯನ್ನು ಮುಂದುವರೆಸಿದರು. ಕಳೆದ ಹತ್ತು ವರ್ಷದ ಹಿಂದೆ ಕೆನಡಾದ ಅಲ್ಬರ್ಟಾ ವಿಶ್ವವಿದ್ಯಾಲಯಕ್ಕೆ ಸೇರಿ ವೈರಸ್ಸುಗಳ ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಪ್ರೊ. ಚಾರ್ಲ್ಸ್‌ ರೈಸ್‌ ಅಮೆರಿಕದಲ್ಲಿ 1952ರಲ್ಲಿ ಜನಿಸಿದರು. ಅವರು ತಮ್ಮ ಪಿ.ಎಚ್.ಡಿ. ಪದವಿಯನ್ನು ಕ್ಯಾಲಿಫೋರ್ನಿಯಾ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಿಂದ ಗಳಿಸಿದರು. ಅಲ್ಲಿಯೆ ಪೋಸ್ಟ್‌ ಡಾಕ್ಟೊರೆಲ್‌ ಸಂಶೋಧನೆಯನ್ನೂ ನಡೆಸಿ ಮುಂದೆ ವಾಶಿಂಗ್‌ಟನ್‌ ವಿಶ್ವವಿದ್ಯಾಲಯದ ವೈದ್ಯಕೀಯ ಸಂಸ್ಥೆಯನ್ನು ಸೇರಿದರು. ಅಲ್ಲಿಯೇ ಪ್ರೊಫೆಸರ್‌ ಆಗಿದ್ದ ರೈಸ್‌ ಮುಂದೆ 2001ರಲ್ಲಿ ರಾಕೆಫೆಲ್ಲರ್‌ ವಿಶ್ವವಿದ್ಯಾಲಯವನ್ನು ಸೇರಿ ಅಲ್ಲಿ ಹೆಪಟೈಟಿಸ್‌ ಅಧ್ಯಯನ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ಕೃಪೆ – ಟೆಕ್ ಕನ್ನಡ 

ಸೌಜನ್ಯ: ಡಾ.ಟಿ.ಎಸ್ ಚನ್ನೇಶ್


ಇದನ್ನೂ ಓದಿ: ಅತ್ಯಾಚಾರದ ದೂರು ದಾಖಲಿಸಲು 900 ಕಿ.ಮೀ ಪ್ರಯಾಣಿಸಿದ ಸಂತ್ರಸ್ತೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...