Homeಚಳವಳಿರೈತ ಚಳವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು: ಪುರುಷೋತ್ತಮ ಬಿಳಿಮಲೆ

ರೈತ ಚಳವಳಿಯನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳು: ಪುರುಷೋತ್ತಮ ಬಿಳಿಮಲೆ

- Advertisement -
- Advertisement -

ಅನ್ನದ ಋಣ ಆಯೋಜಿಸಿದ್ದ “ದೆಹಲಿ ರೈತ ಹೋರಾಟ- ಕನ್ನಡಿಗರ ಒಳನೋಟ” ವೆಬಿನಾರ್‌ನಲ್ಲಿ ಲೇಖಕರು, ಸಂಶೋಧಕರು ಆಗಿರುವ ಪುರುಷೋತ್ತಮ ಬಿಳಿಮಲೆ ಅವರು ಐತಿಹಾಸಿಕ ರೈತ ಹೋರಾಟವನ್ನು ಯಶಸ್ವಿಗೊಳಿಸುತ್ತಿರುವ 11 ಮುಖ್ಯ ಅಂಶಗಳನ್ನು ಪಟ್ಟಿ ಮಾಡಿದ್ದಾರೆ.

1. ಒಗ್ಗಟ್ಟು: ಸಂಯಕ್ತ ಕಿಸಾನ್ ಮೋರ್ಚಾವು ದೇಶದಾದ್ಯಂತ ಇರುವ ಸುಮಾರು 450 ಕ್ಕೂ ಹೆಚ್ಚು ರೈತ ಸಂಘಟನೆಗಳನ್ನು ಒಂದು ವೇದಿಕೆಗೆ ತಂದು ಒಗ್ಗಟ್ಟು ಪ್ರದರ್ಶಿಸಿದ್ದು.


2. ಹಣಕಾಸಿನ ನಿರ್ವಹಣೆಯಲ್ಲಿ ಪಾರದರ್ಶಕತೆ: ಆಧಾರ್ ಕಾರ್ಡ್, ಪಾನ್ ನಂಬರ್, ಇತ್ಯಾದಿ ಆಧಾರಗಳಿಲ್ಲದೆ ಯಾರಿಂದಲೂ ಹಣ ಸ್ವೀಕೃತಿಯಾಗಿಲ್ಲ. ಚಳವಳಿ ಕೇಂದ್ರಗಳಲ್ಲಿ ನಗದು ಸ್ವೀಕರಣೆ ಇಲ್ಲ. ರೈತರು ತಿಂಗಳಿಗೊಮ್ಮೆ ನೀಡಿದ ದೇಣಿಗೆಯಿಂದಲೇ ಖರ್ಚುಗಳನ್ನು ಭರಿಸಿಕೊಳ್ಳಲಾಗಿದೆ. ದಾನಿಗಳು ನೀಡಿದ ಧನಸಹಾಯ ನೇರವಾಗಿ ಬ್ಯಾಂಕಿಗೇ ರವಾನೆಯಾಗಿದೆ.


3. ಶಿರೋಮಣಿ ಗುರುದ್ವಾರ ಪ್ರಬಂಧಕ ಕಮಿಟಿ ಮತ್ತು ದೆಹಲಿ ಗುರುದ್ವಾರ ಮೇನೇಜ್ ಮೆಂಟ್ ಕಮಿಟಿ ರೈತರಿಗೆ ನೀಡಿದ ನಿರಂತರ ಬೆಂಬಲ.


4. ಲಂಗರ್: ಸಿಖ್ ಪರಂಪರೆಯ ಎಲ್ಲರಿಗೂ ಉಚಿತ ಆಹಾರ ನೀಡಿಕೆ ಮತ್ತು ಸಾಮೂಹಿಕ ಭೋಜನದ ಪರಿಕಲ್ಪನೆಯು ಹೋರಾಟವನ್ನು ಕಳೆಗುಂದದಂತೆ ನೋಡಿಕೊಂಡದ್ದು.


5. ಉಚಿತ ಸೇವೆಗಳು: ವೈದ್ಯರು, ಪ್ಲಂಬರ್ ಗಳು, ಇಲೆಕ್ಟ್ರಿಕಲ್ ಕೆಲಸಗಾರರು – ಹೀಗೆ ದೈನಂದಿನ ಅಗತ್ಯದ ಎಲ್ಲ ಸೇವೆಗಳೂ ರೈತರಿಗೆ ಉಚಿತವಾಗಿ ದೊರೆಯಿತು. ಸೇವೆ ಸಲ್ಲಿಸಿದವರೂ ಯಾವುದೇ ಸಂಭಾವನೆ ಪಡೆದಿಲ್ಲ.


6. ಪರ್ಯಾಯ ಮಾಧ್ಯಮಗಳ ಸೃಷ್ಟಿ: ಮುಖ್ಯ ಮಾಧ್ಯಮಗಳನ್ನು ಹೊರಗಿಟ್ಟು ( ಅವರಿಗೆ ಪ್ರವೇಶವಿಲ್ಲ ಎಂಬ ಫಲಕ ಹಾಕಿಯೇ) ಪರ್ಯಾಯ ಮಾಧ್ಯಮಗಳನ್ನು ಸೃಷ್ಟಿಸಿಕೊಂಡು ಪರಿಣಾಮಕಾರೀ ಸಂವಹನವನ್ನು ಸಾಧಿಸಿದ್ದು. ಈ ಕೆಲಸದಲ್ಲಿ ಚಂಡೀಗಡ ಮತ್ತು ಅಮೃತಸರದ ಇಂಜಿನೀಯರಿಂಗ್ ಓದುವ ವಿದ್ಯಾರ್ಥಿಗಳು ಅಸಾಧ್ಯವಾದ್ದನ್ನೇ ಸಾಧ್ಯಮಾಡಿದರು.

ಇದನ್ನೂ ಓದಿ: ಭಾಷಾ ರಾಜಕಾರಣ ಮತ್ತು ತುಳು ರಾಜ್ಯದ ಬೇಡಿಕೆ: ಪ್ರೊ. ಪುರುಷೋತ್ತಮ ಬಿಳಿಮಲೆ


7. ಕೋಮುವಾದದಿಂದ ದೂರ: ಭಾರತ ವಿಭಜನೆಗೆ ದೊಡ್ಡ ಮಟ್ಟದಲ್ಲಿ ಬಲಿಯಾದ ಪಂಜಾಬಿಗಳು ಮುಂದಿನ ದಿನಗಳಲ್ಲಿ ಕೋಮುವಾದ ತಮ್ಮೊಳಗೆ ಪ್ರವೇಶಿಸದ ಎಚ್ಚರವನ್ನು ತೋರಿಸಿದ್ದು. ಜೊತೆಗೆ ಮಹಿಳೆಯರು, ದಲಿತರು, ಮುಸ್ಲಿಮರು ಮತ್ತು ವಿದ್ಯಾರ್ಥಿಗಳು ಚಳವಳಿಯಲ್ಲಿ ತೊಡಗಿಸಿಕೊಳ್ಳುವಂತೆ ಸಂಘಟನೆಯನ್ನು ರೂಪಿಸಿದ್ದು.


8. ಸಕ್ರಿಯ ವಾತಾವರಣ: ಪ್ರತಿಭಟನೆಯ ಸ್ಥಳದಲ್ಲಿ ಸಂಗೀತ, ಉಪನ್ಯಾಸ, ಪ್ರವಚನ, ಜಿಮ್, ಕಲಾಶಿಬಿರ, ಗ್ರಂಥಾಲಯ ಇತ್ಯಾದಿಗಳು ಇರುವಂತೆ ಮಾಡಿ, ಹೋರಾಟದ ವಾತಾವರಣವನ್ನು ಜೀವಂತ ಇರಿಸಿದ್ದು.


9. ಒಳಗೊಳ್ಳುವಿಕೆಯ ಕೆಲಸಗಳು: ಪ್ರತಿಭಟನಕಾರರು ಸದಾ ಹೋರಾಟದೊಂದಿಗೇ ಇರುವಂತೆ ಮಾಡಲು ಟ್ರಾಕ್ಟರ್ ಮೆರವಣಿಗೆ, ಮಹಾಪಂಚಾಯತ್, ಕಿಸಾನ್ ಸಭಾ ಇತ್ಯಾದಿಗಳನ್ನು ನಿರಂತರವಾಗಿ ಆಯೋಜಿಸುತ್ತಾ ರೈತರು ಜಡವಾಗದಂತೆ ನೋಡಿಕೊಂಡದ್ದು.


10. ಹೋರಾಟವು ದೇಶ-ವಿದೇಶಗಳ ಗಮನಸೆಳೆಯುವಂತೆ ತಂತ್ರಗಳನ್ನು ರೂಪಿಸಿದ್ದು.


11. ವಿರೋಧಿಗಳು ಕಟ್ಟಿದ ಕಥನಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಸಮಯ ವ್ಯರ್ಥವಾಗದಂತೆ ನೋಡಿಕೊಂಡ ಹೋರಾಟಗಾರರು, ತಮ್ಮದೇ ಕಥನಗಳು ಜನರಿಗೆ ತಲುಪುವಂತೆ ಮಾಡಿದ್ದು.


ಇದನ್ನೂ ಓದಿ: ಪುಸ್ತಕ ವಿಮರ್ಶೆ; ಬಿಳಿಮಲೆಯವರ ’ಕಾಗೆ ಮುಟ್ಟಿದ ನೀರು’ ಮೌಢ್ಯ ಕಾನನಕೆ ಬೆಂಕಿ ಹಚ್ಚಿ …

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ರೈತ ಚಳುವಳಿಯ ಬಗೆಗಿನ ಬಿಳಿಮಲೆಯವರ ಲೇಖನ ಅತ್ಯುಪಯುಕ್ತ ವಿಶ್ಲೇಷಣೆ!ಲಂಗುಲಗಾಮು ಇಲ್ಲದೆ, ಸಾರ್ವಜನಿಕ ಎನಿಸುವ ಕನಿಷ್ಠ ನಾಚಿಕೆಯೂ ಇಲ್ಲದೆ, ಸಂಸತ್ತಿನ ಭೀಮ ಬಲ ಉಪಯೋಗಿಸಿ ಕಾರ್ಯರೂಪಕ್ಕೆ ತರಲೆತ್ನಿಸಿದ ಗುಪ್ತ ಮತ್ತು ಸಮಾಜ ವಿರೋಧಿ ಕಾರ್ಯಸೂಚಿಯನ್ನು ಸಂಘಟಿತವಲ್ಲದ ಜನಸಮೂಹ ವಿರೋಧಿಸಿ ಗೆಲ್ಲುವುದು ಕಷ್ಟಸಾಧ್ಯ! ಅದು, ವಿರೋಧ ಪಕ್ಷಗಳ ಅಸಹಾಯಕ ಸ್ಥಿತಿ; ಅದು, ಧ್ವನಿ ಇಲ್ಲದವರ ಧ್ವನಿ ಆಗಿರಬೇಕಿದ್ದ ಮಾಧ್ಯಮಗಳ ಎಗ್ಗಿಲ್ಲದ ಬಫೂನ್ಗಿರಿ ವಾತಾವರಣ; ಅಂತಹ ಸಂದರ್ಭದಲ್ಲಿ, ರೈತಾಂದೋಲನ ಸಾರ್ವಜನಿಕ ಸದಭಿಪ್ರಾಯ ಕ್ರೋಡೀಕರಿಸಿಕೊಂಡು, ಬಲಪಡೆದು, ಹೋರಾಟವನ್ನು ಮುನ್ನಡೆಸಲು ಸಹಾಯ ಮಾಡಿದ್ದು, ರೈತ ನಾಯಕರ ಮುಂದಾಲೋಚನೆ, ಸಮಯಪ್ರಜ್ಞೆ, ಕೈಚೆಲ್ಲದ ಪ್ರಯತ್ನ ಮತ್ತು, ಅದ್ಭುತ ಸಂವಹನ ಸಾದ್ಯವಾಗಿಸಿದ ಇಂಟರ್ನೆಟ್!!

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...