ಬೀದಿ ಬದಿಯಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದ ವೃದ್ಧ ಮುಸ್ಲಿಂ ವ್ಯಕ್ತಿಯನ್ನು ನಿಂದಿಸಿ, ಅಲ್ಲಿಂದ ಅಂಗಡಿ ತೆಗೆಯುವಂತೆ ಒತ್ತಾಯಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ದುಷ್ಕಮಿ ವ್ಯಾಪಾರಿಯನ್ನು ಬೆದರಿಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ದುಷ್ಕರ್ಮಿಯನ್ನು ಹಿಂದೂ ಸಮನ್ವಯ ಸಮಿತಿ ಯುವ ಮೋರ್ಚಾ ಅಧ್ಯಕ್ಷ ತುಷಾರ್ ಶುಕ್ಲಾ ಎಂದು ಗುರುತಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ವಿಡಿಯೊದಲ್ಲಿ ದುಷ್ಕರ್ಮಿಯೂ, ನಮ್ಮ ಮೇಲೆಯೆ ಕಲ್ಲು ತೂರಾಟ ಮಾಡುತ್ತೀರಾ ಎಂದು ವ್ಯಾಪಾರಿಗೆ ಬೆದರಿಸುತ್ತಾನೆ. ಈ ವೇಳೆ ಅವರು, ‘ಅಣ್ಣಾ ಬಡ ವ್ಯಕ್ತಿ ನಾನು’ ಎಂದು ಹೇಳುತ್ತಾರೆ.
ಘಟನೆಯ ವಿಡಿಯೊ ವೈರಲ್ ಆದ ನಂತರ ಪೊಲೀಸರು ದುಷ್ಕರ್ಮಿ ತುಷಾರ್ ಶುಕ್ಲಾನನ್ನು ಬಂಧಿಸಿದ್ದಾಗಿ ಮಾಧ್ಯಮಗಳು ವರದಿ ಮಾಡಿವೆ.
कानपुर: कपड़ा बेच रहे मुस्लिम बुजुर्ग को दुकान हटाने को कहता दिख रहा ये शख्स हिन्दू समन्वय समिति का युवा मोर्चा अध्यक्ष “तुषार शुक्ला” है…
महोदय @kanpurnagarpol मामले को संज्ञान में लेकर जाँच के बाद आवयश्क कार्रवाई करें… pic.twitter.com/jpLDl1BvHh— Ashraf Hussain (@AshrafFem) June 8, 2022
ಈ ನಡುವೆ ಟಿವಿ ಚರ್ಚೆಯೊಂದರಲ್ಲಿ ಪ್ರವಾದಿಯ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕೆ ಅಮಾನತುಗೊಂಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮಾ ಅವರ ವಿರುದ್ಧ ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಪ್ರವಾದಿ ನಿಂದನೆಯನ್ನು ಸುಮಾರು 17 ಇಸ್ಲಾಮಿಕ್ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ.


