ದೇಶದ ಖ್ಯಾತ ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಅವರ ಬಂಧನ ಮತ್ತು ಸೆರೆವಾಸವನ್ನು ಭಾರತದ ಮತ್ತು ಯುಎನ್‌ನ ಮಾನವ ಹಕ್ಕುಗಳ ವರ್ಕಿಂಗ್ ಗ್ರೂಪ್ (WGHR) ಖಂಡಿಸಿದ್ದು, ತನ್ನ ಸದಸ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಅದು ಒತ್ತಾಯಿಸಿದೆ.
2002ರ ಗುಜರಾತ್ ಗಲಭೆಯಲ್ಲಿ ಹತರಾದ ಕಾಂಗ್ರೆಸ್ ಸಂಸದ ಎಹ್ಸಾನ್ ಜಾಫ್ರಿ ಅವರ ಪತ್ನಿ ಝಕಿಯಾ ಜಾಫ್ರಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ ಒಂದು ದಿನದ ನಂತರ ಗುಜರಾತ್ ಪೊಲೀಸರು ತೀಸ್ತಾ ಅವರನ್ನು ಮುಂಬೈನಲ್ಲಿ ಬಂಧಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
2002 ರ ಗುಜರಾತ್ ಗಲಭೆ ಪ್ರಕರಣದಲ್ಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿದ ಆರೋಪದಲ್ಲಿ ತೀಸ್ತಾ ಜೊತೆಗೆ ಎಫ್‌ಐಆರ್‌ನಲ್ಲಿ ಹೆಸರಿಸಲಾದ ಗುಜರಾತ್‌ನ ಮಾಜಿ ಪೊಲೀಸ್ ಮಹಾನಿರ್ದೇಶಕ ಆರ್‌ಬಿ ಶ್ರೀಕುಮಾರ್ ಮತ್ತು ಅಮಾನತುಗೊಂಡ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಬಿಡುಗಡೆ ಮಾಡುವಂತೆ ಸಂಘಟನೆಯು ಆಗ್ರಹಿಸಿದೆ.
ಇದನ್ನೂ ಓದಿ: ತೀಸ್ತಾ ಬಂಧನ: ಜಾಗರೂಕತೆಯಿಂದ ಪ್ರತಿಕ್ರಿಯಿಸಿದ ಕಾಂಗ್ರೆಸ್; ಬಂಧನವನ್ನು ಪ್ರಶ್ನಿಸಿ, ಬಿಡುಗಡೆಗೆ ಆಗ್ರಹಿಸಿದ ಎಡಪಕ್ಷಗಳು
ತೀಸ್ತಾ ಅವರು 2002ರ ಗುಜರಾತ್ ಗಲಭೆಗಳ ಸಂತ್ರಸ್ತರ ಪರವಾಗಿ ವಾದಿಸಲು ರಚಿಸಲಾದ ಸಂಸ್ಥೆಯಾದ ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್ (CJP) ನ ಕಾರ್ಯದರ್ಶಿಯಾಗಿದ್ದಾರೆ.
‘ಭಾರತ ಸರ್ಕಾರ ಮಾನವ ಹಕ್ಕುಗಳ ರಕ್ಷಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸುವುದು ನಿಲ್ಲಬೇಕು’
‘ಭಾರತ ಸರ್ಕಾರ ಮಾನವ ಹಕ್ಕುಗಳ ರಕ್ಷಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸುವುದು ನಿಲ್ಲಬೇಕು’ ಎಂದು ಸಂಸ್ಥೆ ತನ್ನ ಹೇಳಿಕೆಯಲ್ಲಿ ಹೇಳಿದ್ದು, ಕಾನೂನುಬದ್ಧ ಮಾನವ ಹಕ್ಕುಗಳ ಕೆಲಸವನ್ನು ನಡೆಸುವ ರಕ್ಷಕರು ಮತ್ತು ನಾಗರಿಕ ಸಮಾಜ ಸಂಸ್ಥೆಗಳ ವಿರುದ್ಧ ಪ್ರತೀಕಾರವು ಸಾಂವಿಧಾನಿಕ ಪ್ರಜಾಪ್ರಭುತ್ವಕ್ಕೆ ಸಂಪೂರ್ಣವಾಗಿ ‘ಸ್ವೀಕಾರಾರ್ಹವಲ್ಲ ಮತ್ತು ಹೊಂದಾಣಿಕೆಯಾಗುವುದಿಲ್ಲ’ ಎಂದು ಅದು ಹೇಳಿದೆ.
ತೀಸ್ತಾ ಅವರು ಭಾರತದಲ್ಲಿ ಕೋಮುಗಲಭೆಯ ಸಂತ್ರಸ್ತರ ನ್ಯಾಯಕ್ಕಾಗಿ ಅವಿರತವಾಗಿ ಹೋರಾಡುತ್ತಿದ್ದಾರೆ ಎಂದು ಹೇಳಿರುವ WGHR, “ಅವರು ಅತ್ಯಂತ ದುರ್ಬಲರ ಹಕ್ಕುಗಳ ಧೈರ್ಯಶಾಲಿ ಚಾಂಪಿಯನ್ ಎಂದು ಪ್ರಸಿದ್ಧರಾಗಿದ್ದಾರೆ ಮತ್ತು ಗೌರವಿಸಲ್ಪಡುತ್ತಿದ್ದಾರೆ’’ ಎಂದು ಹೇಳಿದೆ.
ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿರುವುದು ಹೇಗೆ?: ತೀಸ್ತಾ
“ಎಹ್ಸಾನ್ ಜಾಫ್ರಿ ಅವರ ಪತ್ನಿ ಝಾಕಿಯಾ ಜಾಫ್ರಿ ಸೇರಿದಂತೆ ದಾಳಿಯ ಸಂತ್ರಸ್ತ್ರರ ಜೊತೆ ನಿಂತಿದ್ದಕ್ಕಾಗಿ ಮತ್ತು ಅಧಿಕಾರದ ಸ್ಥಾನದಲ್ಲಿರುವವರು ಸೇರಿದಂತೆ ಎಲ್ಲರಿಂದಲೂ ಉತ್ತರದಾಯಿತ್ವವನ್ನು ಕೋರಿದ್ದಕ್ಕಾಗಿ ತೀಸ್ತಾ ಅವರ ಬಂಧನ ನಡೆದಿದ್ದು ಪ್ರತೀಕಾರಕ್ಕೆ ಸಮಾನವಾಗಿದೆ ಎಂದು WGHR ದೃಢವಾಗಿ ನಂಬುತ್ತದೆ” ಎಂದು ಸಂಸ್ಥೆ ಹೇಳಿದೆ.
“ಭಾರತೀಯ ಸಂವಿಧಾನದ ಅಡಿಯಲ್ಲಿ ನಾಗರಿಕರಿಗೆ ಖಾತರಿಪಡಿಸಿದ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಗಂಭೀರ ಉಲ್ಲಂಘನೆ ನಡೆದಿದ್ದು, ಆಡಳಿತ ಯಂತ್ರದಿಂದ ಅಧಿಕಾರ ಮತ್ತು ಕಾನೂನಿನ ಆಕ್ರಮಣಕಾರಿ ದುರುಪಯೋಗವನ್ನು ಪ್ರತಿಬಿಂಬಿಸುತ್ತಿರುವ ಕಾರಣ ತೀಸ್ತಾ ಅವರ ಬಂಧನದಿಂದ ನಾವು ತೀವ್ರವಾಗಿ ಕಳವಳಗೊಂಡಿದ್ದೇವೆ” ಹೇಳಿಕೆ ತಿಳಿಸಿದೆ.
ಅವರ ಬಂಧನಕ್ಕೆ ಕಾರಣವಾಗುವ ಘಟನೆಗಳ ತಿರುವು ದೇಶೀಯವಾಗಿ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳು ಮತ್ತು ಮಾನವ ಹಕ್ಕುಗಳ ರಕ್ಷಕರಿಗೆ (HRDs) ಭಾರತ ಸರ್ಕಾರದ ಬದ್ಧತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸಂಸ್ಥೆ ಹೇಳಿದೆ.
ಇದನ್ನೂ ಓದಿ: ತೀಸ್ತಾ – ಧರ್ಮಗ್ಲಾನಿಯಾದಾಗ ದಿಢೀರನೇ ಎತ್ತಿದ ಅವತಾರ ಅಲ್ಲ
WGHR ಅನ್ನು ಜನವರಿ 2009 ರಲ್ಲಿ ಭಾರತದಲ್ಲಿ ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಸ್ವತಂತ್ರ ತಜ್ಞರ ಗುಂಪು ಸ್ಥಾಪಿಸಿತ್ತು. WGHR ದೇಶದಲ್ಲಿನ ಎಲ್ಲಾ ನಾಗರಿಕ, ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಮಾನವ ಹಕ್ಕುಗಳ ಸಾಕ್ಷಾತ್ಕಾರಕ್ಕೆ ಮತ್ತು ಅದರ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬಾಧ್ಯತೆಗಳಿಗೆ ಭಾರತ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡಲು ಕೆಲಸ ಮಾಡುತ್ತಿದೆ.



ಕಮ್ಯೂನಿಸ್ಟ್ ರಿಗೆ, ಅವರ ಒಡೆತನದ ಪತ್ರಿಕೆಗಳಿಗೆ ದೇಶದಲ್ಲಿನ ಬುದ್ದಿ ಜೀವಿಗಳ ಹೇಳಿಕೆಗಳು ಕಾಣೋದಿಲ್ಲಾ ,ಆದರೆ ಪರದೇಶಿಗಳ ಕಪಿಗಳ ವಾಖ್ಯೆಗಳು ಇವರಿಗೆ ದೈವ ವಾಣಿಯಂತೆ ಕೇಳುತ್ತೇ ,ನಿಮ್ಮ ಮೆದುಳಿಗೆ ಸ್ವಂತಿಕೆ ,ಸ್ವದೇಶಿ ಬುದ್ದಿ ಸಹ ಇಲ್ಲವೇ ,ಕಮ್ಯೂನಿಸ್ಟ್ ರಿಗೆ ಬ್ರಿಟಿಶ್ ರ ಗುಲಾಮಗಿರಿ ಇನ್ನೂ ಬಿಟ್ಟಲ್ಲಾ