Homeರಾಷ್ಟ್ರೀಯತೀಸ್ತಾ ಬಂಧನ: ಜಾಗರೂಕತೆಯಿಂದ ಪ್ರತಿಕ್ರಿಯಿಸಿದ ಕಾಂಗ್ರೆಸ್; ಬಂಧನವನ್ನು ಪ್ರಶ್ನಿಸಿ, ಬಿಡುಗಡೆಗೆ ಆಗ್ರಹಿಸಿದ ಎಡಪಕ್ಷಗಳು

ತೀಸ್ತಾ ಬಂಧನ: ಜಾಗರೂಕತೆಯಿಂದ ಪ್ರತಿಕ್ರಿಯಿಸಿದ ಕಾಂಗ್ರೆಸ್; ಬಂಧನವನ್ನು ಪ್ರಶ್ನಿಸಿ, ಬಿಡುಗಡೆಗೆ ಆಗ್ರಹಿಸಿದ ಎಡಪಕ್ಷಗಳು

- Advertisement -
- Advertisement -

ದೇಶದ ಖ್ಯಾತ ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್‌ ಅವರನ್ನು ಗುಜರಾತ್‌ ಪೊಲೀಸರು ಬಂಧಿಸಿರುವ ಕುರಿತು ಕಾಂಗ್ರೆಸ್‌ ಶನಿವಾರ ಜಾಗರೂಕತೆಯಿಂದ ಪ್ರತಿಕ್ರಿಯಿಸಿದ್ದು, ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಲಾಗುವುದು ಎಂಬ ಭರವಸೆ ಮತ್ತು ನಂಬಿಕೆಯನ್ನು ವ್ಯಕ್ತಪಡಿಸಿದೆ. ಮತ್ತೊಂದೆಡೆ ಎಡಪಕ್ಷಗಳು ಅವರ ಬಂಧನಗಳನ್ನು ಪ್ರಶ್ನಿಸಿದ್ದು, ಬಿಡುಗಡೆಗಾಗಿ ಆಗ್ರಹಿಸಿವೆ.

ತೀಸ್ತಾ ಅವರ ಜೊತೆಗೆ ಗುಜರಾತ್‌ನ ನಿವೃತ್ತ ಡಿಜಿಪಿ ಆರ್‌ಬಿ ಶ್ರೀಕುಮಾರ್‌ ಅವರನ್ನೂ ಪೊಲೀಸರು ಬಂಧಿಸಿದ್ದಾರೆ. 2002ರ ಗುಜರಾತ್ ಗಲಭೆಯಲ್ಲಿ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಎಸ್‌ಐಟಿ ನೀಡಿದ ಕ್ಲೀನ್ ಚಿಟ್ ಅನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದ ಒಂದು ದಿನದ ನಂತರ ಈ ಬಂಧನಗಳು ನಡೆದಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಪ್ರಕರಣದಲ್ಲಿ ಅರ್ಜಿದಾರರಾದ ಜಾಕಿಯಾ ಜಾಫ್ರಿ ಅವರನ್ನು ತೀಸ್ತಾ ಅವರು ಬೆಂಬಲಿಸಿದ್ದರು. ಇದರಲ್ಲಿ ಶ್ರೀಕುಮಾರ್ ಪಾತ್ರವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಕ್ರಿಮಿನಲ್ ಪಿತೂರಿ, ಫೋರ್ಜರಿ ಮತ್ತು ಭಾರತೀಯ ದಂಡ ಸಂಹಿತೆಯ ಇತರ ಸೆಕ್ಷನ್‌ಗಳ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಗುಜರಾತ್ ಪೊಲೀಸರ ವಶಕ್ಕೆ

“ನಾವು ಬಂಧನದ ಬಗ್ಗೆ ಕೇಳಿದ್ದೇವೆ. ಎಫ್‌ಐಆರ್ ದಾಖಲಾದದ್ದು ಜೂನ್ 25, 2022 ಎಂದು ತೋರುತ್ತಿದ್ದರೂ ಸಹ, 2002 ರ ನಂತರದ ವರ್ಷಗಳ ನಡುವೆ ಸಂಭವಿಸಿದ ಘಟನೆಗಳಿಂದ ಉಂಟಾದ ನಕಲಿ ಮತ್ತು ಕಟ್ಟುಕಥೆಯ ಆಪಾದಿತ ಅಪರಾಧಗಳಿಗೆ ಸಂಬಂಧಿಸಿದಂತೆ ಇದು ತೋರುತ್ತಿದೆ. ಕಾನೂನಿನ ಪ್ರಕ್ರಿಯೆಯನ್ನು ಸೂಕ್ಷ್ಮವಾಗಿ ಅನುಸರಿಸಲಾಗುವುದು” ಎಂದು ಹಿರಿಯ ಕಾಂಗ್ರೆಸ್ ನಾಯಕ ಅಭಿಷೇಕ್ ಸಿಂಘ್ವಿ ದಿ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದ್ದಾರೆ

“ಇದಲ್ಲದೆ, ಒಂದು ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ತನಗೆ ಯಾವುದೇ ಸಂಬಂಧವಿಲ್ಲದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.

ಆದರೆ ಭಾರತೀಯ ಕಮ್ಯೂನಿಷ್ಟ್‌ ಪಕ್ಷ(ಮಾರ್ಕ್ಸ್‌ವಾದಿ) ತೀಸ್ತಾ ಅವರ ಬಂಧನವನ್ನು ಬಲವಾಗಿ ಖಂಡಿಸಿದ್ದು, ಅವರನ್ನು “ಮಾನವ ಹಕ್ಕುಗಳ ಅವಿಶ್ರಾಂತ ರಕ್ಷಕಿ” ಎಂದು ಕರೆದಿದೆ. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪನ್ನು ಉಲ್ಲೇಖಿಸಿ ಸಂಶಯಾಸ್ಪದ ಆಧಾರದ ಮೇಲೆ ಅವರನ್ನು  ಗುಜರಾತ್ ಪೊಲೀಸರು ಬಂಧಿಸಿದ್ದು, ಅವರನ್ನು ಕೂಡಲೇ ಬಿಡುಗಡೆಗೊಳಿಸಬೇಕು ಮತ್ತು ಅವರ ವಿರುದ್ಧದ ‘‘ಸುಳ್ಳು ಆರೋಪಗಳನ್ನು’’ ಹಿಂಪಡೆಯಬೇಕು ಎಂದು ಒತ್ತಾಯಿಸಿದೆ.

ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿರುವುದು ಹೇಗೆ?: ತೀಸ್ತಾ ಸೆಟ್ಲ್‍ವಾಡ್

“ನಾಗರಿಕ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ಪಟ್ಟುಬಿಡದ ಹೋರಾಟಗಾರ್ತಿಯ ಕಿರುಕುಳ ಮತ್ತು ಕಾನೂನು ಕ್ರಮವನ್ನು ನಿಲ್ಲಿಸಿ. ಸುಳ್ಳು ಆರೋಪಗಳನ್ನು ಹಿಂಪಡೆದು ಬಿಡುಗಡೆ ಮಾಡಿ” ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಟ್ವೀಟ್ ಮಾಡಿದ್ದಾರೆ.

ಗುಜರಾತ್ ದಂಗೆಯ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲು ತೀಸ್ತಾ ಅವರು ನಿರಂತರ ಹೋರಾಟ ನಡೆಸುತ್ತಿದ್ದಾರೆ ಎಂದು ಅವರ ಭಾರತೀಯ ಕಮ್ಯುನಿಷ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿ ಡಿ ರಾಜಾ ಹೇಳಿದ್ದಾರೆ.

“ಗೃಹ ಸಚಿವ (ಅಮಿತ್ ಶಾ) ತೀಸ್ತಾ ಅವರ ಕೆಲಸದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಗಂಟೆಗಳ ನಂತರ ಎಟಿಎಸ್ ಅವರ ಬಂಧನ ನಡೆದಿದೆ. ಇದು ಪ್ರಶ್ನಾರ್ಹವಾಗಿದೆ. ಅವರನ್ನು ಬಿಡುಗಡೆ ಮಾಡಬೇಕು. ಮಾನವ ಹಕ್ಕುಗಳ ಹೋರಾಟಗಾರರ ಮೇಲೆ ನಡೆಯುತ್ತಿರುವ ಕಿರುಕುಳ ನಿಲ್ಲಬೇಕು” ಎಂದು ಹೇಳಿದ್ದಾರೆ.

ತೀಸ್ತಾ ಅವರ ಬಂಧನದ ಬಗ್ಗೆ ಕಾಂಗ್ರೆಸ್ ಜಾಗರೂಕತೆಯಿಂದ ಮಾತನಾಡಿದ್ದರೂ, ತೀರ್ಪನ್ನು ಸಂಭ್ರಮಿಸುತ್ತಿರುವ ಬಿಜೆಪಿಯನ್ನು ತರಾಟೆಗೆ ಪಡೆದಿದೆ. ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಎಂದಿಗೂ ರಾಜಕೀಯಗೊಳಿಸಬಾರದು ಎಂದು ಸಿಂಘ್ವಿ ಹೇಳಿದ್ದಾರೆ.

ಇದನ್ನೂ ಓದಿ: ಸಂವಿಧಾನದ ಕಾಲಾಳು : ತೀಸ್ತಾ ಸೆತಲ್ವಾಡ್ ನೆನಪುಗಳು

“ಯಾವುದೇ ಪಿತೂರಿಯಿಂದ ಹಿಂಸಾಚಾರ ನಡೆದಿಲ್ಲ, ಅದು ಸ್ವಯಂಪ್ರೇರಿತವಾಗಿ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಎಸ್‌ಐಟಿ ನಿರ್ಧಾರವನ್ನು ಎತ್ತಿಹಿಡಿದಿದೆ. ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ರಾಜಕೀಯ ಜುಮ್ಲಾಗಳು ಮತ್ತು ಸಂಬಂಧವಿಲ್ಲದೆ ಕ್ಲೀನ್ ಚಿಟ್‌ಗಳನ್ನು ಉಲ್ಲೇಖಿಸುತ್ತಿರುವುದು ತಪ್ಪುದಾರಿಗೆಳೆಯುವಂತಿದೆ. ಗೋಧ್ರಾ ನಂತರದ ಗಲಭೆಯಲ್ಲಿ ಅನೇಕರ ಕೊಲೆ ಅಪರಾಧಗಳನ್ನು ನಿರೂಪಿಸಲಾಗಿದೆ. ವೈಯಕ್ತಿಕ ಅಪರಾಧವನ್ನೂ ನಿರೂಪಿಸಲಾಗಿದೆ. ಪಿತೂರಿ ಅಥವಾ ಗೈರುಹಾಜರಾಗಿರುವ ಕೆಲವು ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಪ್ರಧಾನ ಮಂತ್ರಿ ನೀಡಿದ ಹೇಳಿಕೆಗಳನ್ನು ಮಾತ್ರ ಸುಪ್ರೀಂಕೋರ್ಟ್‌ ತಳ್ಳಿಹಾಕಿದೆ. ಅದನ್ನು ಸುಪ್ರೀಂ ಕೋರ್ಟ್‌ನ ಆದೇಶದಂತೆ ಗೌರವಿಸಬೇಕು. ಹೆಚ್ಚೂ ಇಲ್ಲ, ಕಡಿಮೆಯೂ ಇಲ್ಲ” ಎಂದು ಸಿಂಘ್ವಿ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...