Homeಮುಖಪುಟಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಗುಜರಾತ್ ಪೊಲೀಸರ ವಶಕ್ಕೆ

ಪತ್ರಕರ್ತೆ, ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಗುಜರಾತ್ ಪೊಲೀಸರ ವಶಕ್ಕೆ

ತೀಸ್ತಾರವರು 2002ರ ಗುಜರಾತ್ ಗಲಭೆ ಕುರಿತು ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಹೇಳಿದ್ದರು. ಅದಾಗಿ ಕೆಲವೇ ಘಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

- Advertisement -
- Advertisement -

ನಾಗರಿಕ ಹಕ್ಕುಗಳ ಹೋರಾಟಗಾರ್ತಿ ಮತ್ತು ಪತ್ರಕರ್ತೆ ತೀಸ್ತಾ ಸೆಟಲ್ವಾಡ್‌ರವರ ಮುಂಬೈ ಮನೆಯಲ್ಲಿ ಬೀಡು ಬಿಟ್ಟದ್ದ ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳವು ಅವರನ್ನು ವಶಕ್ಕೆ ಪಡೆದಿದ್ದು, ಸಾಂತಾಕ್ರೂಸ್ ಪೊಲೀಸ್ ಠಾಣೆಗೆ ಕರೆದೊಯ್ದಿದೆ.

ತೀಸ್ತಾರವರು 2002ರ ಗುಜರಾತ್ ಗಲಭೆ ಕುರಿತು ಪೊಲೀಸರಿಗೆ ಆಧಾರರಹಿತ ಮಾಹಿತಿ ನೀಡಿದ್ದರು ಎಂದು ಗೃಹ ಸಚಿವ ಅಮಿತ್‌ ಶಾ ಇಂದು ಬೆಳಿಗ್ಗೆ ಸುದ್ದಿ ಸಂಸ್ಥೆ ಎಎನ್‌ಐಗೆ ಹೇಳಿದ್ದರು. ಅದಾಗಿ ಕೆಲವೇ ಘಂಟೆಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಫೋರ್ಜರಿ ಆರೋಪದ ಮೇಲೆ ತೀಸ್ತಾ ಸೆಟಲ್ವಾಡ್ ಸೇರಿದಂತೆ ಹಲವರ ವಿರುದ್ಧ ಇಂದು ಐಪಿಸಿ ಸೆಕ್ಷನ್ 468 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಪೊಲೀಸರು ತೀಸ್ತಾರನ್ನು ವಿಚಾರಣೆಗಾಗಿ ಅಹಮದಾಬಾದ್‌ಗೆ ಕರೆದೊಯ್ಯಲು ಬಯಸಿದ್ದಾರೆ ಎಂದು ಸ್ಕ್ರೋಲ್ ವರದಿ ಮಾಡಿದೆ.

ಪೊಲೀಸರು ಇಂದು ಮಧ್ಯಾಹ್ನ 3 ಗಂಟೆಯಿಂದ ಮುಂಬೈನ ಜುಹು ಪ್ರದೇಶದಲ್ಲಿರುವ ತೀಸ್ತಾರವರ ಮನೆಯಲ್ಲಿ ಬೀಡು ಬಿಟ್ಟಿದ್ದರು. ಬಂಧನಕ್ಕೆ ತಮ್ಮ ಬಳಿ ವಾರೆಂಟ್ ಇದೆ ಎನ್ನಲಾಗುತ್ತಿದ್ದು, ಇದುವರೆಗೂ ಯಾವುದೇ ವಾರಂಟ್ ಅನ್ನು ನಮಗೆ ತೋರಿಸಿಲ್ಲ ಎಂದು ತೀಸ್ತಾರವರ ಪತಿ ಆನಂದ್ ಜಾವೇದ್ ಹೇಳಿದ್ದಾರೆ.

ಗುಜರಾತ್ ಗಲಭೆಯಲ್ಲಿ ಮೋದಿಯವರ ಪಾತ್ರವಿಲ್ಲ ಎಂಬ SIT ಕ್ಲೀನ್ ಚಿಟ್ ವಿರೋಧಿಸಿ ಗಲಭೆಯಲ್ಲಿ ಹತ್ಯೆಯಾಗಿದ್ದ ಸಂಸದ ಎಷನ್ ಜಾಫ್ರಿಯವರ ಮಡದಿ 84ರ ವಯಸ್ಸಿನ ಜಾಕಿಯಾ ಜಾಫ್ರಿ ಅವರು ಕೋಮುಗಲಭೆಗಳ ಕುರಿತು ಹೊಸದಾಗಿ ತನಿಖೆ ನಡೆಸುವಂತೆ ಸುಪ್ರೀಂಕೋರ್ಟ್‌ ಅನ್ನು ಕೋರಿದ್ದರು. ಅದಕ್ಕೆ ಸಹಾಯ ಮಾಡಿದ್ದ ತೀಸ್ತಾ ಸೆಟ್ಲವಾದ್ ಸಹ ಅರ್ಜಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟ್ ಆ ಅರ್ಜಿಯನ್ನು ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್ ಅರ್ಜಿದಾರರ ಭಾವನೆಗಳನ್ನು ದುರಪಯೋಗಪಡಿಸಿಕೊಂಡಿದ್ದೀರಿ ಎಂದು ದೂರಿತ್ತು.

ಸೆಟಲ್ವಾಡ್ ಯಾರು?

ತೀಸ್ತಾ ಸೆಟಲ್ವಾಡ್ ಅವರು ನಾಗರಿಕರ ನ್ಯಾಯ ಮತ್ತು ಶಾಂತಿ (ಸಿಜೆಪಿ) ವೇದಿಕೆಯ ಕಾರ್ಯದರ್ಶಿಯಾಗಿದ್ದಾರೆ. ಸಿಜೆಪಿ 2002 ರಲ್ಲಿ ಗುಜರಾತ್ ರಾಜ್ಯದಲ್ಲಿ ಕೋಮು ಹಿಂಸಾಚಾರಕ್ಕೆ ಒಳಗಾದವರಿಗೆ ನ್ಯಾಯಕ್ಕಾಗಿ ಹೋರಾಡಲು ರಚಿಸಲಾದ ಒಂದು ಸಂಘಟನೆಯಾಗಿದೆ. 2002 ರ ಗುಜರಾತ್‌ ಗಲಭೆ ಕುರಿತು ಸಿಜೆಪಿ ಸಹ-ಅರ್ಜಿದಾರರಾಗಿದ್ದು, ನರೇಂದ್ರ ಮೋದಿ ಮತ್ತು ಇತರ ಅರವತ್ತೆರಡು ರಾಜಕಾರಣಿಗಳು ಮತ್ತು ಸರ್ಕಾರಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ವಿಚಾರಣೆ ನಡೆಸಬೇಕೆಂದು ಕೋರಿದೆ.

ತೀಸ್ತಾ ತನ್ನ ಪತಿ ಜಾವೇದ್ ಆನಂದ್ ಅವರೊಂದಿಗೆ Cammunalisam cambat ನಿಯತಕಾಲಿಕದ ಸಹ-ಸ್ಥಾಪಕ ಮತ್ತು ಸಹ ಸಂಪಾದಕರಾಗಿದ್ದಾರೆ. ಇದು ಕೋಮು ಹಿಂಸಾಚಾರವನ್ನು ಉತ್ತೇಜಿಸುವ ಘಟಕಗಳ ಮೇಲೆ ಆಕ್ರಮಣ ಮಾಡುವ ಮೂಲಕ ಕೋಮು ಸೌಹಾರ್ದತೆಯನ್ನು ಬೆಳೆಸುತ್ತದೆ. ಅವರು ಪೀಪಲ್ಸ್ ಯೂನಿಯನ್ ಫಾರ್ ಹ್ಯೂಮನ್ ರೈಟ್ಸ್ (ಪಿಯುಹೆಚ್ಆರ್) ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ತೀಸ್ತಾರವರು ಬರೆದ Foot Soldier of the Constitution ಪುಸ್ತಕವು ಬಹಳಷ್ಟು ಜನರ ಗಮನಸೆಳೆದಿದ್ದು ಕನ್ನಡ ಸೇರಿದಂತೆ ಹತ್ತಾರು ಭಾಷೆಗಳಿಗೆ ಅನುವಾದಗೊಂಡಿದೆ.

ತೀಸ್ತಾ ಸೆಟಲ್ವಾಡ್‌ರವರು ಕರ್ನಾಟಕದೊಂದಿಗೆ ನಿಕಟ ಸಂಬಂಧ ಹೊಂದಿದ್ದು, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಹತ್ತಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ. ಗೌರಿ ಲಂಕೇಶ್‌ರವರ ನಿಕಟವರ್ತಿಯಾಗಿದ್ದ ಇವರು ಕಳೆದ ವರ್ಷ ಖ್ಯಾತ ಪತ್ರಕರ್ತ ರವೀಶ್‌ ಕುಮಾರ್‌ರವರಿಗೆ ’ಗೌರಿ ಲಂಕೇಶ್‌’ ಪ್ರಶಸ್ತಿ ಪ್ರಧಾನ ಸಮಾರಂಭದ ಮುಖ್ಯ ಅತಿಥಿಯಾಗಿದ್ದರು.

ಇವರ ಸೇವೆಯನ್ನು ಪರಿಗಣಿಸಿ 2020 ರಲ್ಲಿ ಬ್ರಿಟಿಷ್ ಕೊಲಂಬಿಯಾ ವಿಶ್ವವಿದ್ಯಾಲಯದ (ಯುಬಿಸಿ) ಪ್ರತಿಷ್ಠಿತ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ.

ಲೇಖಕಿ ತೀಸ್ತಾ ಸೆಟಲ್ವಾಡ್ ಅವರು “ನಾಗರಿಕ ಹಕ್ಕುಗಳ ಹೋರಾಟಗಾರ್ತಿಯಾಗಿದ್ದು, ಗುಜರಾತ್ ರಾಜ್ಯದಲ್ಲಿ 2002 ರ ಸಾವಿರಾರು ಮುಸ್ಲಿಮರ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯಕ್ಕಾಗಿ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಜಾತ್ಯತೀತವಾದಿಯಾಗಿ, ಅವರು ಭಾರತದಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಬಹುಸಂಖ್ಯಾತತೆ ಮತ್ತು ಧಾರ್ಮಿಕ ಮತಾಂಧತೆಯನ್ನು ಬಹಿರಂಗಪಡಿಸಲು ಮಾನವ ಹಕ್ಕುಗಳು ಮತ್ತು ಕಾನೂನು ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ. ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು, LGBTQ ಸಮುದಾಯ, ಸ್ಥಳೀಯರ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಇದುವರೆಗೂ ಪಿಯುಸಿಎಲ್ ಜರ್ನಲಿಸಮ್ ಫಾರ್ ಹ್ಯೂಮನ್ ರೈಟ್ಸ್ ಅವಾರ್ಡ್ 1993, ಅತ್ಯುತ್ತಮ ಮಹಿಳಾ ಮಾಧ್ಯಮ ವ್ಯಕ್ತಿ, 1993 ರ ಚಮೇಲಿ ದೇವಿ ಜೈನ್ ಪ್ರಶಸ್ತಿ ಜೊತೆಗೆ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ವ್ಯವಹಾರಕ್ಕಾಗಿ ಭಾರತ ಸರ್ಕಾರದಿಂದ 2007 ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ.

ಕೋಮುವಾದದ ವಿರುದ್ಧ, ಸೌಹಾರ್ದತೆಯ ಪರ ಸದಾ ದುಡಿಯುತ್ತಿರುವ ತೀಸ್ತಾ ಸೆಟಲ್ವಾದ್‌ ಮೇಲೆ ಪ್ರಭುತ್ವ ಕೆಂಗಣ್ಣು ಬೀರಿದೆ. ಅವರ ವಿರುದ್ಧ ಹತ್ತಾರು ಪ್ರಕರಣಗಳನ್ನು ದಾಖಲಿಸಿ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದರೂ ಸಹ ಅದನ್ನು ಅವರು ದಿಟ್ಟವಾಗಿ ಎದುರಿಸುತ್ತಿದ್ದಾರೆ.

ಇದನ್ನೂ ಓದಿ: ಭಾರತದ ಪ್ರಜಾಪ್ರಭುತ್ವವನ್ನು ತಲೆಕೆಳಗಾಗಿಸುತ್ತಿರುವುದು ಹೇಗೆ?: ತೀಸ್ತಾ ಸೆಟ್ಲ್‍ವಾಡ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಕುಟುಂಬದ ಮೂವರ ಹತ್ಯೆ ಪ್ರಕರಣ: ಪೊಲೀಸರ ವರ್ಗಾವಣೆ

0
ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಸಂದೀಪನ್ ಘಾಟ್ ಪ್ರದೇಶದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿ ದಲಿತ ಕುಟುಂಬದ ಮೂವರು ಸದಸ್ಯರ ಹತ್ಯೆ ನಡೆದಿದ್ದು, ಇದೀಗ ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮತ್ತು ಹೊರಠಾಣೆ ಪ್ರಭಾರ ಅಧಿಕಾರಿಯನ್ನು ವರ್ಗಾಯಿಸಲಾಗಿದೆ. ಸಾಂದೀಪನ್...