HomeUncategorizedಗಾಂಧಿ ಸಾವು ಆಕಸ್ಮಿಕ ಎನ್ನುತ್ತಿವೆ ಒಡಿಶಾದ ಪುಸ್ತಕಗಳು: ಹಲವರಿಂದ ತೀವ್ರ ಖಂಡನೆ

ಗಾಂಧಿ ಸಾವು ಆಕಸ್ಮಿಕ ಎನ್ನುತ್ತಿವೆ ಒಡಿಶಾದ ಪುಸ್ತಕಗಳು: ಹಲವರಿಂದ ತೀವ್ರ ಖಂಡನೆ

- Advertisement -
- Advertisement -

ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಗೋಡ್ಸೆ ಎಂಬ ಹಂತಕ ಗುಂಡಿಕ್ಕಿ ಹತ್ಯೆಗೈದದ್ದು ಇಡೀ ಜಗತ್ತೇ ಕಂಡ ಸತ್ಯ. ಆದರೆ ಅದನ್ನು ಒಡಿಶಾದಲ್ಲಿ ತಿರುಚಲಾಗಿದೆ. ಎರಡು ಪುಟಗಳ ಕಿರು ಪುಸ್ತಕವನ್ನು ಸಮೂಹ ಶಿಕ್ಷಣ ಇಲಾಖೆ ಪ್ರಕಟಿಸಿ, ವಿತರಿಸಿದೆ. ರಾಜ್ಯದ ಶಾಲೆಗಳಲ್ಲಿ ಗಾಂಧೀಜಿ ಹತ್ಯೆಯ ಸುತ್ತ ವಿವಾದ ಹುಟ್ಟುವಂತೆ ಮಾಡಿದೆ.

ಸಮೂಹ ಶಿಕ್ಷಣ ಇಲಾಖೆಯಿಂದ ಪ್ರಕಟಗೊಂಡಿರುವ ಎರಡು ಪುಟಗಳ ಕಿರು ಪುಸ್ತಕದಲ್ಲಿ ಮಹಾತ್ಮಾ ಗಾಂಧೀಜಿ ಅವರು ಆಕಸ್ಮಿಕವಾಗಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವಿವಾದಾತ್ಮಕ ವಿಷಯವನ್ನು ಬರೆಯಲಾಗಿದೆ. ಜನವರಿ 30, 1948 ರಂದು ನಡೆದ ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟರು ಎಂದು ತಿರುಚಲಾಗಿದೆ. ಇದರಿಂದ ಶಿಕ್ಷಣ ಇಲಾಖೆಯನ್ನು ಒಡಿಶಾ ಸರ್ಕಾರ ತರಾಟೆಗೆ ತೆಗೆದುಕೊಂಡಿದೆ. ಇಂತಹ ವಿವಾದಾತ್ಮಕ ಪುಸ್ತಕವನ್ನು ಬರೆದವರು ಯಾರು, ಪ್ರಕಟಿಸಿ, ವಿತರಿಸಿದವರ ವಿರುದ್ಧ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ.

ಒಡಿಶಾ ಶಿಕ್ಷಣ ಮಂತ್ರಿ ಸಮೀರ್‌ ರಂಜನ್‌ ದಾಸ್‌ ಮಾತನಾಡಿ, ’ನಮ್ಮ ಬಾಪೂಜಿ, ಒಂದು ನೋಟ’ ಎಂಬ ಶೀರ್ಷಿಕೆಯಿರುವ ಎರಡು ಪುಟಗಳ ವಿವಾದಾತ್ಮಕ ಪುಸ್ತಕವನ್ನು ಬಿಡುಗಡೆ ಮಾಡಲಾಗಿದೆ. ಇದೆಲ್ಲಾ ಹೇಗೆ ನಡೆಯಿತು ಎಂಬ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಯಾರೇ ಕೃತ್ಯವೆಸಗಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಿರುಪುಸ್ತಕವನ್ನು ಹಿಂತೆಗೆದುಕೊಳ್ಳಲಾಗುವುದು. ಪುಸ್ತಕದಲ್ಲಿ ಗಾಂಧೀಜಿ ಸಾವು ಆಕಸ್ಮಿಕ ಅಪಘಾತ ಎಂದು ಉಲ್ಲೇಖಿಸುವ ಬದಲು ಅವರನ್ನು ಹೇಗೆ ಹತ್ಯೆಗೈದರು ಎಂಬ ಬಗ್ಗೆ ಸ್ಪಷ್ಟವಾಗಿ ಬರೆಯಬೇಕಾಗಿತ್ತು ಎಂದು ಹೇಳಿದ್ದಾರೆ.

ಮಹಾತ್ಮ ಗಾಂಧೀಜಿ ಅವರ ಬಗ್ಗೆ ಕಿರು ಪುಸ್ತಕದಲ್ಲಿ ವಿವಾದಾತ್ಮಕವಾಗಿ ನಿರೂಪಿಸಿರುವ ಬಗ್ಗೆ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣವೇ ಸರ್ಕಾರ ಪುಸ್ತಕವನ್ನು ಹಿಂತೆಗೆದುಕೊಳ್ಳಬೇಕು ಎಂದು ಪ್ರಫುಲ್ಲಾ ಸಮಂತ್ರಾ ಒತ್ತಾಯಿಸಿದ್ದರು. ಪುಸ್ತಕದಲ್ಲಿ ತಪ್ಪುಗಳೇ ಹೆಚ್ಚಿವೆ. ಗಾಂಧೀಜಿಯವರು ಯಾವುದೋ ಅಪಘಾತದಿಂದ ನಿಧನರಾದರು ಎಂದು ತಿರುಚಲಾಗಿದೆ. ನಾಥುರಾಮ್ ಗೋಡ್ಸೆ ಅವರಂತಹ ಧರ್ಮಾಂಧರಿಂದ ಕೊಲ್ಲಲ್ಪಟ್ಟಿಲ್ಲ ಎಂದು ಬರೆಯುವ ಮೂಲಕ ಯುವ ಪೀಳಿಗೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಗಾಂಧೀಜಿ ಅವರ 150ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ನಾವು, ನಮ್ಮ ರಾಷ್ಟ್ರಪಿತನಿಗೆ ಅವಮಾನ ಮಾಡುತ್ತಿದ್ದೇವೆ. ಇದು ನಾವು ತೋರಿದ ಅಗೌರವ ಎಂದು ಪ್ರಫುಲ್ಲಾ ಖಂಡಿಸಿದರು.

ಗಾಂಧಿ ಸ್ಮಾರಕ ಗ್ರಂಥಾಲಯದ ಕಾರ್ಯದರ್ಶಿ ಮನೋರಂಜನ್ ಸಾಹು ಮಾತನಾಡಿ, ಕಿರುಪುಸ್ತಕ ಸತ್ಯವನ್ನು ಮರೆಮಾಚಲು ಯತ್ನಿಸಿ, ವಿಫಲವಾಗಿದೆ. ಗಾಂಧೀಜಿ ಅವರು ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂದರೆ ಏನರ್ಥ..? ಅವರು ರಸ್ತೆಯಲ್ಲಿ ಹೋಗುವಾಗ ಮುಗ್ಗರಿಸಿ ಬಿದ್ದು ಮೃತಪಟ್ಟರೇ..? ಇಲ್ಲ. ಅವರನ್ನು ನಾಥುರಾಮ್‌ ಗೋಡ್ಸೆ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ ಎಂದು ಹೇಳಿದರು.

ಸಮಾಜವಾದಿ ಪತ್ರಿಕೆಯ ಸಂಪಾದಕ ಸುಧೀರ್‌ ಪಟ್ನಾಯಕ್‌ ಮಾತನಾಡಿ, ಒಡಿಶಾ ಶಿಕ್ಷಣದಲ್ಲಿ ಉಂಟಾಗುತ್ತಿರುವ ಕೇಸರೀಕರಣ ಮತ್ತು ಸಾಂಸ್ಥಿಕೀಕರಣ ಹೇಗೆ ನಡೆಯುತ್ತಿದೆ ಎಂಬುದು ಪುಸ್ತಕದಿಂದ ಗೊತ್ತಾಗಿದೆ. ಇದೊಂದು ದುರುದ್ದೇಶಪೂರಿತ ಯತ್ನವಾಗಿದೆ. ಒಡಿಶಾ ಸಿಎಂ, ಮಹಾತ್ಮಾ ಗಾಂಧೀಜಿಯವರ ಆದರ್ಶಗಳ ಬಗ್ಗೆ ದೊಡ್ಡದಾಗಿ ಮಾತನಾಡುತ್ತಾರೆ. ಆದರೆ ಅವರ ಇಲಾಖೆಯಲ್ಲೇ ಇಂಥದ್ದೊಂದು ಅವಮಾನ ಮಾಡುವ ಘಟನೆ ನಡೆದಿದೆ ಎಂದು ಟೀಕಿಸಿದರು.

ಇನ್ನು ಕಳೆದ ತಿಂಗಳಷ್ಟೇ ಗುಜರಾತ್‌ನಲ್ಲಿ ಇದೇ ರೀತಿಯ ವಿವಾದ ಭುಗಿಲೆದ್ದಿತ್ತು. ಒಂಭತ್ತನೇ ತರಗತಿಯ ಆಂತರಿಕ ಮೌಲ್ಯಮಾಪನ ಪರೀಕ್ಷೆಯಲ್ಲಿ ‘ಮಹಾತ್ಮ ಗಾಂಧಿ ಹೇಗೆ ಆತ್ಮಹತ್ಯೆ ಮಾಡಿಕೊಂಡರು?’ ಎಂಬ ಪ್ರಶ್ನೆಯನ್ನು ವಿದ್ಯಾರ್ಥಿಗಳಿಗೆ ಕೇಳಲಾಗಿತ್ತು. ಒಟ್ಟಿನಲ್ಲಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾತ್ಮನಿಗೆ ದೇಶವಿಂದು ವಿವಾದದ ಕೊಡುಗೆ ನೀಡುತ್ತಿರುವುದು ಶೋಚನೀಯ ಸಂಗತಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...