Homeಕರ್ನಾಟಕಸಂವಿಧಾನ ದಿನ: ಅಂಬೇಡ್ಕರ್‌ ಬದಲಿಗೆ ಶ್ಯಾಂ ಪ್ರಸಾದ್‌ ಮುಖರ್ಜಿ ಫೋಟೋ ಹಾಕಿದ್ದಕ್ಕೆ ಛೀಮಾರಿ, ನಂತರ ಬದಲಾವಣೆ.

ಸಂವಿಧಾನ ದಿನ: ಅಂಬೇಡ್ಕರ್‌ ಬದಲಿಗೆ ಶ್ಯಾಂ ಪ್ರಸಾದ್‌ ಮುಖರ್ಜಿ ಫೋಟೋ ಹಾಕಿದ್ದಕ್ಕೆ ಛೀಮಾರಿ, ನಂತರ ಬದಲಾವಣೆ.

ಭಾರೀ ಪ್ರತಿರೋಧದ ನಂತರ ವಿವಾದಾತ್ಮಕ ಪೋಸ್ಟರ್ ಹಿಂಪಡೆದು ಅಂಬೇಡ್ಕರ್‌ ಭಾವಚಿತ್ರ ಇರುವ ಪೋಸ್ಟರ್‌ ಬಿಡುಗಡೆ ಮಾಡಿದ ಆಯೋಜಕರು

- Advertisement -
- Advertisement -

ಸಂವಿಧಾನದ ಶಿಲ್ಪಿ, ಭಾರತ ಸಂವಿಧಾನದ ಪಿತಾಮಹಾ ಬಾಬಾ ಸಾಹೇಬ್‌ ಅಂಬೇಡ್ಕರ್ ರವರನ್ನು ನೆನಪಿಸಿಕೊಳ್ಳದೇ ಸಂವಿಧಾನ ದಿನಾಚರಣೆ ಮಾಡಲು ಸಾಧ್ಯವೇ? ಅಂತಹ ದುಸ್ಸಾಹಸಕ್ಕೆ ಮುಂದಾಗಿ ಕೈ ಸುಟ್ಟುಕೊಂಡ ಘಟನೆ ಬೆಂಗಳೂರಿನಲ್ಲಿ ಇಂದು ನಡೆದಿದೆ.

ನವ ಬೆಂಗಳೂರು ಫೌಂಡೇಶನ್‌ ಎಂಬ ಸಂಸ್ಥೆಯು ನವೆಂಬರ್‌ 24ರ ಭಾನುವಾರ ಬೆಂಗಳೂರಿನ ಜಯನಗರದ ಆರ್‌ವಿ ಟೀಚರ್ಸ್‌ ಕಾಲೇಜಿನಲ್ಲಿ ಸಂವಿಧಾನ ದಿನಾಚರಣೆ ಹಮ್ಮಿಕೊಂಡಿದೆ. ಅದಕ್ಕಾಗಿ ಸಿದ್ದಪಡಿಸಿದ ಪೋಸ್ಟರ್‌ನಲ್ಲಿ ಭಾರತ ಸಂವಿಧಾನದ ಪಿತಾಮಹಾ ಬಾಬಾ ಸಾಹೇಬ್‌ ಅಂಬೇಡ್ಕರ್ ಫೋಟೊ ಹಾಕುವ ಬದಲು ಜನಸಂಘದ ಸ್ಥಾಪಕ ಶ್ಯಾಂ ಪ್ರಸಾದ್‌ ಮುಖರ್ಜಿಯವರ ಫೋಟೊ ಮತ್ತು ಕಾಶ್ಮೀರದ ಭೂಪಟ ಹಾಕಿದ್ದಾರೆ.

ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ಬಂದಿದ್ದೆ ತಡ ಪ್ರಗತಿಪರ ಸಂಘಟನೆಗಳು ಮತ್ತು ವ್ಯಕ್ತಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ನೂರಾರು ಜನ ಸಂಘಟಕರಿಗೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಾಬಾ ಸಾಹೇಬ್ ಅಂಬೇಡ್ಕರರ ಭಾವಚಿತ್ರವಿಲ್ಲದೆ “ಸಂವಿಧಾನ ದಿನಾಚರಣೆ” ಆಚರಿಸುತ್ತಿರುವುದಲ್ಲದೆ, ಅಂಬೇಡ್ಕರರ ಜಾಗದಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿಯವರ ಭಾವಚಿತ್ರ ಇಟ್ಟು ಅವಮಾನಿಸಲಾಗಿದೆ. ಇದನ್ನು ಅಂಬೇಡ್ಕರ್ ಸೇನೆ ತೀವ್ರವಾಗಿ ಖಂಡಿಸುತ್ತದೆ ಎಂದು ವಜ್ರಮುನಿ ಸಿಂಗ್‌ ಎಂಬುವವರು ತಿಳಿಸಿದ್ದಾರೆ.

ಇದು ಯಾವ ಸಂವಿಧಾನ ದಿನಾಚರಣೆ? ಸಂವಿಧಾನ ರೂಪಿಸಿದವರು,ಬಾಬಾ ಸಾಹೇಬರಾ ಇಲ್ಲ ಸಂಘೀ ನಾಯಕ ಶ್ಯಾಮ ಪ್ರಸಾದ ಮುಖರ್ಜಿಯಾ? ಕುಚೇಷ್ಟೆಗೂ ಒಂದು ಮಿತಿಯಿರಲಿ ಎಂದು ಹಿರಿಯ ಪತ್ರಕರ್ತರಾದ ಸನತ್‌ ಕುಮಾರ್‌ ಬೆಳಗಲಿಯವರು ಕಿಡಿಕಾರಿದ್ದಾರೆ.

ನಮ್ಮ ಕಾಲದ ಭಂಡಾಟ ಎಂದರೆ ಇದು!! ಎಲ್ಲೂ ಬಾಬಾಸಾಹೇಬರ ಪ್ರಸ್ತಾಪವೇ ಇಲ್ಲ. ಶಾಂಪ್ರಸಾದ್ ಮುಖರ್ಜಿ ಪಟ.ಕೂತಿದೆ. ಚರಿತ್ರೆ ಅಳಿಸಿ ಫೇಕ್ ಚರಿತ್ರೆ ಪ್ರತಿಷ್ಠಾಸುವ ಕ್ರಮ ಇದು. ಸ್ಪೀಕರುಗಳು ಯಾರು ಅಂತ ನೋಡಿದರೆ ಸಾಕು.. ಎಂದು ಹಿರಿಯ ಚಿಂತಕರಾದ ಸುರೇಶ್ ಕಂಜರ್ಪಣೆಯವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಷ್ಟು ಧೈರ್ಯ ಇವರಿಗೆ ಅಂತ. ಬಹಳ ಅತಿ ಆಗಿದೆ ಈ RSS ಅವರದ್ದು ಬಾಬಾಸಾಹೇಬರ ಫೋಟೋ ತಗೆದುಹಾಕ್ತಾರೆ ಅಂದ್ರೆ‍? ನಿಜಕ್ಕೂ ಇವರಿಗೆ ಪಾಠ ಕಲಿಸದೇ ಬಿಡಬಾರದು ಎಂದು ಸರೋವರ್‌ ಬೆಂಕಿಕೆರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ದೇಶದ ಜಾತಿವ್ಯಾದಿ ಮನುವಾದಿಗಳ ಮನಸ್ಸು ಅದೆಷ್ಟು ಪೂರ್ವಾಗ್ರಹ ಪೀಡಿತರಾಗಿ ಕೊಳೆತು ನಾರುತ್ತಿದೆ ಎಂಬುದನ್ನು ಇಲ್ಲಿ ನೋಡಿ…
#ಅಂಬೇಡ್ಕರರ ಭಾವಚಿತ್ರವಿಲ್ಲದೆ ಸಂವಿಧಾನ ದಿನಾಚರಣೆ ಆಚರಿಸುತ್ತಿರುವುದಲ್ಲದೆ, ಅಂಬೇಡ್ಕರರ ಜಾಗದಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿಯವರನ್ನು ಇಟ್ಟು ಶೋಷಿತರಿಗೆ ಸಂದೇಶ ನೀಡುತ್ತಿದ್ದಾರೆ. ನೀವು ನಮ್ಮ ಕೆಳಗೇ ಇರಬೇಕು ಅಂತ. ನಾವು ಒಗ್ಗಟ್ಟಾಗದಿದ್ದರೆ ಕೆಲವೇ ವರ್ಷಗಳಲ್ಲಿ ಭಾರತವನ್ನ ಸರ್ವಾಧಿಕಾರಕ್ಕೆ ದೂಡಿ ಚಾತುರ್ವರ್ಣ ಸಿದ್ಧಾಂತವನ್ನು ಅಧಿಕೃತವಾಗಿ ಜಾರಿ ಮಾಡಿಬಿಡುತ್ತಾರೆ. ಎಂದು ಅಶೋಕ್‌ ಮೌರ್ಯಯವರು ನುಡಿದಿದ್ದಾರೆ.

#ಅಂಬೇಡ್ಕರರ ಭಾವಚಿತ್ರವಿಲ್ಲದೆ ಸಂವಿಧಾನ ದಿನಾಚರಣೆ ಆಚರಿಸುತ್ತಿರುವುದಲ್ಲದೆ, ಅಂಬೇಡ್ಕರರ ಜಾಗದಲ್ಲಿ ಶ್ಯಾಮ್ ಪ್ರಕಾಶ್ ಮುಖರ್ಜಿಯವರನ್ನು ಇಟ್ಟು ಶೋಷಿತರಿಗೆ ಸಂದೇಶ ನೀಡುತ್ತಿದ್ದಾರೆ. ನೀವು ನಮ್ಮ ಕೆಳಗೇ ಇರಬೇಕು ಅಂತ. ನಾವು ಒಗ್ಗಟ್ಟಾಗದಿದ್ದರೆ ಕೆಲವೇ ವರ್ಷಗಳಲ್ಲಿ ಭಾರತವನ್ನ ಸರ್ವಾಧಿಕಾರಕ್ಕೆ ದೂಡಿ ಚಾತುರ್ವರ್ಣ ಸಿದ್ಧಾಂತವನ್ನು ಅಧಿಕೃತವಾಗಿ ಜಾರಿ ಮಾಡಿಬಿಡುತ್ತಾರೆ ಎಂದು ವಿಕಾಸ್ ಆರ್‌ ಮೌರ್ಯ ಹೇಳಿದ್ದಾರೆ.

ಈ ರೀತಿಯಾಗಿ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಸಂಘಟಕರು ಕೂಡಲೇ ಅಂಬೇಡ್ಕರ್‌ ಭಾವಚಿತ್ರವುಳ್ಳ ಹೊಸ ಪೋಸ್ಟರ್ ಬಿಟ್ಟಿದ್ದಾರೆ. ಶ್ಯಾಂ ಪ್ರಸಾದ್ ಮುಖರ್ಜಿಯವರ ಫೋಟೊವನ್ನು ಕೈಬಿಟ್ಟಿದ್ದಾರೆ.

ಫೋಟೊ ಮಾತ್ರ ಬದಲಾಗಿದೆ ಅಷ್ಟೇ. ಆದರೆ ನಿಮ್ಮ ಮನಸ್ಸಿನಲ್ಲಿನ ವಿಷ ಬದಲಾಗಿಲ್ಲ. ಇರಲಿ ಹೋರಾಟ ಮುಂದುವರೆಯುತ್ತದೆ. ಕೆಟ್ಟ ಮೇಲೆ ನಿಮಗೆ ಬುದ್ದಿ ಬರುತ್ತದೆ ಎಂದು ಹಲವಾರು ಜನ ಕಿಡಿ ಕಾರಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...