ಮೇ 6, ಮಂಗಳವಾರದಂದು ಸಿಪಿಐ (ಮಾವೋವಾದಿ)ನ ವಿವಿಧ ಕೇಡರ್‌ಗಳ ಹದಿನಾಲ್ಕು ಸದಸ್ಯರು ತೆಲಂಗಾಣದ ಭದ್ರಾದ್ರಿ-ಕೊಥಗುಡೆಮ್ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆಗಳ ಮುಂದೆ ಶರಣಾಗಿದ್ದಾರೆ ಎಂದು ವರದಿಯಾಗಿದೆ.
ಶರಣಾದವರಲ್ಲಿ ಹನ್ನೊಂದು ಮಂದಿ ಪುರುಷರು ಮತ್ತು ಉಳಿದವರು ಮಹಿಳೆಯರು. ಅವರಲ್ಲಿ ಹದಿಮೂರು ಮಂದಿ ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯವರು ಮತ್ತು ಒಬ್ಬರು ತೆಲಂಗಾಣದ ಭದ್ರಾದ್ರಿ-ಕೊಥಗುಡೆಮ್ ಜಿಲ್ಲೆಯ ಚರ್ಲಾ ಮಂಡಲದವರು ಎಂದು ಭದ್ರಾದ್ರಿ-ಕೊಥಗುಡೆಮ್ ಪೊಲೀಸ್ ವರಿಷ್ಠಾಧಿಕಾರಿ ಬಿ. ರೋಹಿತ್ ರಾಜು ತಿಳಿಸಿದ್ದಾರೆ.
ಶರಣಾದ ಮಾವೋವಾದಿಗಳಲ್ಲಿ ಇಬ್ಬರು ಪ್ರದೇಶ ಸಮಿತಿ ಸದಸ್ಯರು (ಎಸಿಎಂಗಳು), ನಾಲ್ವರು ಪಕ್ಷದ ಸದಸ್ಯರು ಮತ್ತು ಗ್ರಾಮ ಸಮಿತಿ ಸದಸ್ಯರು (ವಿಸಿಎಂಗಳು), ಮೂವರು ಕ್ರಾಂತಿಕಾರಿ ಪೀಪಲ್ಸ್ ಕಮಿಟಿ (ಆರ್‌ಪಿಸಿ) ಸದಸ್ಯರು ಮತ್ತು ಕ್ರಾಂತಿಕಾರಿ ಆದಿವಾಸಿ ಮಹಿಳಾ ಸಂಘಟನೆಯ (ಕೆಎಎಂಎಸ್) ಒಬ್ಬರು ಸದಸ್ಯ ಸೇರಿದ್ದಾರೆ ಎಂದು ವರದಿಗಳು ಹೇಳಿವೆ.
ನಕ್ಸಲಿಸಂನ ಹಾದಿಯನ್ನು ತೊರೆದು ಶರಣಾದರು ತಮ್ಮ ಕುಟುಂಬಗಳೊಂದಿಗೆ ಶಾಂತಿಯುತ ಜೀವನ ನಡೆಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಶರಣಾದ ಮಾವೋವಾದಿಗಳಿಗೆ ‘ಆಪರೇಷನ್ ಚೆಯುತ’ ಅಡಿಯಲ್ಲಿ ಪುನರ್ವಸತಿ ಕಲ್ಪಿಸಲಾಗುವುದು ಎಂದಿದ್ದಾರೆ.
ಶರಣಾದ ಮಾವೋವಾದಿಗಳಿಗೆ ಪೊಲೀಸ್ ವರಿಷ್ಠಾಧಿಕಾರಿ ಪ್ರೋತ್ಸಾಹ ಧನ ವಿತರಿಸಿದ್ದಾರೆ. ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಜೀವನೋಪಾಯಕ್ಕಾಗಿ ಸರ್ಕಾರಿ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಹತ್ತಿರದ ಜಿಲ್ಲಾ ಪೊಲೀಸ್ ಠಾಣೆಗಳಲ್ಲಿ ಶರಣಾಗುವಂತೆ ಮಾವೋವಾದಿಗಳಿಗೆ ಮನವಿ ಮಾಡಿದ್ದಾರೆ.
14 naxal cadres have surrendered before Bhadradri kothagudem police.
"Development activities, community programs, effective surrender and rehabilitation policy" paying results.@TelanganaDGP @TelanganaCOPs @TelanganaCMO pic.twitter.com/5vmtvXuoxd— SP KOTHAGUDEM (@SpKothagudem) May 6, 2025
ಏಪ್ರಿಲ್ ಆರಂಭದಲ್ಲಿ, ಸಿಪಿಐ (ಮಾವೋವಾದಿ)ನ 86 ಸದಸ್ಯರು ಭದ್ರಾದ್ರಿ ಕೊಥಗುಡೆಮ್ ಜಿಲ್ಲಾ ಪೊಲೀಸರ ಮುಂದೆ ಶರಣಾಗಿದ್ದರು. ಅವರಲ್ಲಿ 82 ಮಂದಿ ಭದ್ರಾದ್ರಿ-ಕೊಥಗುಡೆಮ್ ಜಿಲ್ಲೆಯವರಾಗಿದ್ದರೆ, ನಾಲ್ವರು ಮುಲುಗು ಜಿಲ್ಲೆಯವರು.
ಪಹಲ್ಗಾಮ್ ದಾಳಿ ಕುರಿತು ಪೋಸ್ಟ್: ಗಾಯಕಿ ನೇಹಾ ಸಿಂಗ್ ರಾಥೋಡ್ ವಿರುದ್ಧದ ದೂರು ವಜಾಗೊಳಿಸಿದ ಕೋರ್ಟ್


