ಹೊಸದಿಲ್ಲಿ: ಅಖಿಲ ಭಾರತ ಇಮಾಮ್ ಅಸೋಸಿಯೇಷನ್ ಸೋಮವಾರ ಬಾಕಿ ವೇತನ ಬಿಡುಗಡೆಗಾಗಿ ಒತ್ತಾಯಿಸಿ, ತಮ್ಮ ಕುಂದುಕೊರತೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರ ನಿವಾಸದ ಹೊರಗೆ ಇಮಾಮ್‌ಗಳ ಗುಂಪು ಜಮಾಯಿಸಿ ತಮ್ಮ ಬೇಡಿಕೆಗಳಿಗೆ ಒತ್ತಾಯಿಸಿತು.
ಮಾಧ್ಯಮಗಳೊಂದಿಗೆ ಮಾತನಾಡಿದ ಮೌಲಾನಾ ಮಹ್ಫೂಜ್ ರೆಹಮಾನ್, “ನಾವು ಗುರುವಾರ ಬಂದಿದ್ದೇವು ಮತ್ತು ಶನಿವಾರದಂದು ಕೇಜ್ರಿವಾಲ್ ಅವರನ್ನು ಭೇಟಿಯಾಗಬಹುದೆಂದು ಭರವಸೆ ನೀಡಲಾಗಿತ್ತು. ಆದರೆ ಆ ಭೇಟಿ ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ಇದು ಈಗ ನಮ್ಮ ಮೂರನೇ ಪ್ರಯತ್ನ. ಇಂದು ಅವರನ್ನು ಭೇಟಿ ಮಾಡಲು ನಮಗೆ ಅವಕಾಶ ನೀಡದಿದ್ದರೆ, ನಾವು ಧರಣಿ ನಡೆಸುತ್ತೇವೆ ಮತ್ತು ಕಳೆದ 17 ತಿಂಗಳಿನಿಂದ ಬಾಕಿಯಿರುವ ನಮ್ಮ ಸಂಬಳ ಬಿಡುಗಡೆಯಾಗುವವರೆಗೆ ಬಿಡುವುದಿಲ್ಲ ಎಂದಿದ್ದಾರೆ.
ಇಮಾಮ್‌ಗಳು ತಮ್ಮ ಎರಡು ಪ್ರಮುಖ ಸಮಸ್ಯೆಗಳನ್ನು ಇಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ ವಕ್ಫ್ ಬೋರ್ಡ್‌ನಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಯನ್ನು ಭರ್ತಿ ಮಾಡುವುದು ಒಂದು ಬೇಡಿಕೆಯಾಗಿದೆ. ನಮ್ಮ ಬೇಡಿಕೆ ಕುರಿತು ಕೇಜ್ರಿವಾಲ್ ಅಥವಾ ಅವರ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ನಾವು ರಾಜಕೀಯಕ್ಕಾಗಿ ಈ ಬೇಡಿಕೆಯನ್ನು ಇಡುತ್ತಿಲ್ಲ, ನಮಗೆ ನಿಜವಾದ ಕಾಳಜಿ ಇದೆ. ಸಿಇಒ ಇಲ್ಲದೆ ಇರುವ ಕಾರಣ ಹಣ ಬಿಡುಗಡೆಯಾದರೂ ನಮಗೆ ಸಂಬಳ ಸಿಗುವುದಿಲ್ಲ. ಸಿಇಒ ಅವರನ್ನು ತಕ್ಷಣವೇ ನೇಮಕಾತಿ ಮಾಡಬೇಕೆಂದು ಮೌಲಾನಾ ಮಹಫೂಜ್ ರೆಹಮಾನ್ ಹೇಳಿದ್ದಾರೆ.
ಮತ್ತೊಬ್ಬ ಮೌಲಾನಾ ಗಯ್ಯೂರ್ ಹಸನ್ ಮಾತನಾಡಿ, ಕಳೆದ 17 ತಿಂಗಳಿಂದ ನಮಗೆ ವೇತನ ನೀಡಿಲ್ಲ. ಹಲವು ಬಾರಿ ಭೇಟಿ ನೀಡಿ ಮನವಿ ಮಾಡಿದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ನಾವು ಈಗ ಪ್ರತಿಭಟನೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
1988ರಿಂದ ದೆಹಲಿ ವಕ್ಫ್ ಬೋರ್ಡ್ ಅಡಿಯಲ್ಲಿ ಇಮಾಮ್ ಆಗಿ ಸೇವೆ ಸಲ್ಲಿಸಿದ ಮುಫ್ತಿ ನರಜುಲ್ ಹಕ್ ಕಾಸ್ಮಿ ಮಾತನಾಡಿ, “ನಮ್ಮ ಬೇಡಿಕೆಗಳನ್ನು ಈಗ ಪರಿಹರಿಸದಿದ್ದರೆ, ಚುನಾವಣಾ ಅಧಿಸೂಚನೆ ಹೊರಡಿಸಿದ ನಂತರ ಪರಿಹಾರಕ್ಕೆ ಅವಕಾಶವಿಲ್ಲ. ಬಿಡುಗಡೆಯಾದ ಹಣವಿದ್ದರೂ ಕಾರ್ಯನಿರ್ವಹಣಾ ಸಿಇಒ ಇಲ್ಲದೆ ವೇತನ ನೀಡಲು ಸಾಧ್ಯವಿಲ್ಲ. ಸಿಇಒ ನೇಮಕ ಕಡ್ಡಾಯವಾಗಿದೆ ಎಂದಿದ್ದಾರೆ.
ತಮ್ಮ ಸಂಬಳ ತೀರಾ ಕಡಿಮೆ, ಕೇವಲ 18,000 ರೂ. ಮತ್ತು ಅದು ಕೂಡ 17 ತಿಂಗಳಿಂದ ಪಾವತಿಸಿಲ್ಲ ಹಲವಾರು ಇಮಾಮ್‌ಗಳು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು, ಇಮಾಮ್ ಗಳ ತಂಡವು ದೆಹಲಿ ಮುಖ್ಯಮಂತ್ರಿ ಅತಿಶಿ ಅವರನ್ನು ಭೇಟಿಯಾಗಿ ಸಮಸ್ಯೆಗಳ ಬಗ್ಗೆ ಚರ್ಚಿಸಿತ್ತು. ಆದರೆ ಅವರಿಂದ ಯಾವುದೇ ನಿರ್ದಿಷ್ಟ ಪರಿಹಾರಗಳನ್ನು ನೀಡಲಾಗಿಲ್ಲ ಎಂದು ದೂರಿದ್ದಾರೆ.
ತಮ್ಮ ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸದಿದ್ದರೆ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಿದ್ಧ ಎಂದು ಇಮಾಮ್‌ಗಳು ಸ್ಪಷ್ಟಪಡಿಸಿದ್ದಾರೆ.
ರೈತ ಮುಖಂಡ ದಲ್ಲೆವಾಲ್‌ರನ್ನು ಆಸ್ಪತ್ರೆಗೆ ಸ್ಥಳಾಂತರಿಸುವ ಕುರಿತ ವಿಚಾರಣೆ ಮುಂದೂಡಿದ ಸುಪ್ರೀಂಕೋರ್ಟ್


