Homeಕರೋನಾ ತಲ್ಲಣಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಮೇಲೆ ಒತ್ತಡ ತನ್ನಿ: 187 ಜನ ಗಣ್ಯರಿಂದ ವಿರೋಧ ಪಕ್ಷಗಳಿಗೆ ಪತ್ರ

ಕೊರೋನಾ ನಿಯಂತ್ರಣಕ್ಕೆ ಸರ್ಕಾರದ ಮೇಲೆ ಒತ್ತಡ ತನ್ನಿ: 187 ಜನ ಗಣ್ಯರಿಂದ ವಿರೋಧ ಪಕ್ಷಗಳಿಗೆ ಪತ್ರ

- Advertisement -
- Advertisement -

ಕೇಂದ್ರ ಸರ್ಕಾರದ ಕೊರೋನಾ ನಿಯಂತ್ರಣ ಕ್ರಮಗಳ ಬಗ್ಗೆ ಅಸಮಧಾನಗೊಂಡಿರುವ ಪ್ರಪಂಚದ 180 ಜನ  ಗಣ್ಯರು ಕೇಂದ್ರ ಸರ್ಕಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಡ ಹೇರಿ ಎಂದು ಆಗ್ರಹಿಸಿ ವಿರೋಧ ಪಕ್ಷಗಳಿಗೆ ಬಹಿರಂಗ ಪತ್ರ ಬರೆದಿದ್ದಾರೆ.

187 ಜನ ಗಣ್ಯರಲ್ಲಿ ಉನ್ನತ ವಿಶ್ವ ವಿದ್ಯಾಲಯಗಳ ಪ್ರೊಫೆಸರ್‌ಗಳು, ಸಾಮಾಜಿಕ ಹೋರಾಟಗಾರರು, ಹಿರಿಯ ಪತ್ರಕರ್ತರು, ಸಾಹಿತಿಗಳು, ಶ್ರೇಷ್ಠ ನ್ಯಾಯವಾದಿಗಳು, ಚಲನಚಿತ್ರ ನಿರ್ದೇಶಕರು ಸೇರಿದ್ದಾರೆ.

ಗಣ್ಯರ ಪತ್ರದ ಸಾರಾಂಶ ಇಲ್ಲಿದೆ

“ದೇಶದ ಬಗ್ಗೆ ಕಾಳಜಿಯಿರುವ ನಾಗರಿಕರಾದ ನಾವು ಕೇಂದ್ರ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಸಮರ್ಪಕವಾಗಿಲ್ಲ. ಕೇಂದ್ರ ಸರ್ಕಾರ ವಿರೋಧಪಕ್ಷಗಳನ್ನು ದೇಶದ ಇತರ ಗಣ್ಯರನ್ನು ಮತ್ತು ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ವರ್ತಿಸುತ್ತಿದೆ. ವಿರೋಧ ಪಕ್ಷಗಳ ಮೌಲ್ಯಯುತ ಸಲಹೆ ಸೂಚನೆಗಳನ್ನು ಪರಿಗಣಿಸದೇ ಎಡವುತ್ತಿದೆ. ಇದರ ವಿರುದ್ಧ ದೇಶದ ಪ್ರಗತಿಪರ ವಿರೋಧ ಪಕ್ಷಗಳು ಎದ್ದು ನಿಂತು ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದ್ದಾರೆ.

ವಿರೋಧಪಕ್ಷಗಳು ರಾಜಕೀಯವನ್ನು ಮರೆತು ದೇಶದ ಜನರ ಹಿತಾಸಕ್ತಿಗಾಗಿ ಕೇಂದ್ರ ಸರ್ಕಾರದ ಜೊತೆ ಕೈಜೋಡಿಸಲು ಮುಂದೆ ಬಂದಿವೆ.  ಆದರೆ ಕೇಂದ್ರ ಸರ್ಕಾರ ವಿರೋಧ ಪಕ್ಷಗಳ ಸಹಕಾರವನ್ನು ಉಪೇಕ್ಷಿಸಿದೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ಆಡಳಿತದ ಅನುಭವ ಹೊಂದಿರುವ ವಿರೋಧ ಪಕ್ಷಗಳ ನಾಯಕರನ್ನು, ರಾಜ್ಯ ಸರ್ಕಾರಗಳನ್ನು, ತಜ್ಞರನ್ನು ಒಳಗೊಂಡ ಒಂದು ರಾಷ್ಟ್ರೀಯ ಟಾಸ್ಕ್‌ ಫೋರ್ಸ್‌ ಅನ್ನು ಕೂಡ ರಚನೆ ಮಾಡಿಲ್ಲ.  ಸಲಹೆ ಸೂಚನೆಗಳನ್ನು ತಿರಸ್ಕರಿಸುವ ಮೂಲಕ ತಜ್ಞರ, ಆಡಳಿತದ ಅನುಭವಿಗಳ ಜ್ಞಾನಕ್ಕೆ ಅವಮಾನ ಮಾಡುತ್ತಿದೆ. ಮತ್ತೊಂದೆಡೆ ದೇಶದಲ್ಲಿ ಲಕ್ಷಾಂತರ ಜನರು ಸಕಾಲದಲ್ಲಿಆರೋಗ್ಯ ಸೇವೆಗಳು ಮತ್ತು ಚಿಕಿತ್ಸೆಗಳು ಸಿಗದೆ ಪರದಾಡುತ್ತಿದ್ದಾರೆ. ಮನುಕುಲಕ್ಕೆ, ಭಾರತಕ್ಕೆ ಪಿಡುಗಾಗಿರುವ ಕೊರೋನಾ ಸಾಂಕ್ರಾಮಿಕದ ವಿರುದ್ಧ ದೇಶ ಒಂದಾಗಿ ಹೋರಾಡಬೇಕಾದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ರಾಜಕೀಯ ದ್ವೇಷವನ್ನು ಮರೆತಿಲ್ಲದಿರುವುದು ದೇಶದಲ್ಲಿ ಇನ್ನಷ್ಟು ಆರೋಗ್ಯ ಬಿಕ್ಕಟ್ಟನ್ನು ಸೃಷ್ಟಿಸಿದೆ. ಇಂತಹ ಸಂದರ್ಭದಲ್ಲಿ ವಿರೋಧ ಪಕ್ಷಗಳು ಏನು ಮಾಡಬೇಕು?

  1. ಜನರು ಕೊರೋನಾ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ವಿರೋಧ ಪಕ್ಷಗಳು ಜನರ ಜೊತೆ ನಿಂತು ಅಗತ್ಯ ಸಹಕಾರವನ್ನು ನೀಡುವ ಮೂಲಕ ಕೇಂದ್ರ ಸರ್ಕಾರದ ಗೈರು ಹಾಜರಾತಿಯನ್ನು ತುಂಬಬೇಕು. ನಾಗರಿಕರ ಕೊರೋನಾ ವಿರುದ್ಧದ ಹೋರಾಟದ ಪ್ರಯತ್ನಗಳಿಗೆ ಸಹಕಾರ ಮತ್ತು ಆರ್ಥಿಕ ಸಹಾಯಗಳನ್ನು ನೀಡಬೇಕು. ಅಧಿಕಾರಿಗಳು ಮತ್ತು ಆಡಳಿತ ವ್ಯವಸ್ಥೆ ಸೂಕ್ತ ಕ್ರಮ ಕೈಗೊಳ್ಳುವಂತೆ ವಿರೋಧ ಪಕ್ಷಗಳು ನೋಡಿಕೊಳ್ಳಬೇಕು.
  2. ವಿರೋಧ ಪಕ್ಷಗಳು ತಮ್ಮ ಪ್ರಭಾವದಿಂದ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿ ಕೊರೋನಾ ಮೂರನೇ ಅಲೆಯ ವಿರುದ್ಧ ಸರ್ಕಾರಗಳು ಸೂಕ್ತ ಸಿದ್ಧತೆ ಮಾಡಿಕೊಳ್ಳುವಂತೆ ಪ್ರಯತ್ನ ಮಾಡಬೇಕು. ಮಕ್ಕಳಿಗೆ ವಿಶೇಷ ಆಕ್ಸಿಜನ್‌ ಮಾಸ್ಕ್‌ಗಳ ಅಗತ್ಯತೆ ಇದೆ. ಸದ್ಯ ದೇಶದ ಆಸ್ಪತ್ರೆಗಳಲ್ಲಿ ಆಕ್ಸಿಜನ್‌ ಮಾಸ್ಕ್‌ ಗಳ ಸಂಗ್ರಹಣೆ ಇಲ್ಲ. ನಾಗರಿಕ ಸಮುದಾಯ ಮತ್ತು ಅನೇಕ ಸಂಘಟನೆಗಳು ಆಕ್ಸಿಜನ್‌ ಮಾಸ್ಕ್‌ ಪೂರೈಕೆಯ ಪ್ರಯತ್ನ ಮಾಡುತ್ತಿದ್ದು ವಿರೋಧಪಕ್ಷಗಳು ಅವರ ಜೊತೆ ನಿಲ್ಲಬೇಕು.
  3.  ಕೊರೋನಾ ಸಾಂಕ್ರಾಮಿಕ ದೇಶವನ್ನು ತೀವ್ರವಾಗಿ ಕಾಡುತ್ತಿರುವ ಈ ಸಂದರ್ಭದಲ್ಲಿ ಎಲ್ಲರಿಗೂ ಉಚಿತ ವ್ಯಾಕ್ಸೀನ್‌ ನೀಡುವುದು ಅತ್ಯಂತ ಅಗತ್ಯವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ವ್ಯಾಕ್ಸೀನ್‌ ಪೂರೈಕೆ ವಿಫಲವಾಗಿರುವ ಹೊತ್ತಿನಲ್ಲಿ ಪ್ರಗತಿಪರ ವಿರೋಧಪಕ್ಷಗಳೆಲ್ಲ ಒಂದಾಗಿ ಯುನಿವರ್ಸಲ್‌ ಫ್ರೀ ವ್ಯಾಕ್ಸಿನೇಶನ್‌ ನೀತಿಯನ್ನು ಜಾರಿಗೆ ತರುವಂತೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಹೇರಬೇಕು.
  4. ದೇಶದ ಆರೋಗ್ಯ ವ್ಯವಸ್ಥೆಯನ್ನು ಮೇಲೆತ್ತುವ ಮತ್ತು ಸುಧಾರಣೆಯನ್ನು ಮಾಡುವ ಪ್ರಯತ್ನದಲ್ಲಿ ವಿರೋಧ ಪಕ್ಷಗಳು ತಮ್ಮ ಬಲವಾದ ಪ್ರತಿಪಾದನೆಯನ್ನು ಮಾಡಬೇಕು. ದೇಶದ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆ ಈಗಾಗಲೇ ಅನೇಕ ದುರಂತಗಳಿಗೆ ದಾರಿ ಮಾಡಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇಂತಹ ದುರ್ಘಟನೆ, ದುರಂತಗಳು ಆಗದಂತೆ ತಡೆಯುವ ಶಕ್ತಿ ದೇಶದ ವಿರೋಧಪಕ್ಷಗಳಿಗೆ ಮಾತ್ರ ಇದೆ. ಎಲ್ಲಾ ವಿರೋಧ ಪಕ್ಷಗಳು ಒಟ್ಟಾಗಿ ದೇಶದ ಆರೋಗ್ಯ ವ್ಯವಸ್ಥೆಯ ಸುಧಾರಣೆಯ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದು ಕ್ಷಿಪ್ರ ಗತಿಯಲ್ಲಿ ಸರ್ಕಾರಗಳು ಕಾರ್ಯೋನ್ಮುಖರಾಗುವಂತೆ  ಆಗ್ರಹಿಸಬೇಕು.
  5. ಖಾಸಗಿ ಆಸ್ಪತ್ರೆಗಳು ಜನರ ಸುಲಿಗೆಯಲ್ಲಿ ತೊಡಗಿವೆ. ಖಾಸಗಿ ಆಸ್ಪತ್ರೆಗಳು ವಿಧಿಸುವ ಲಸಿಕೆ, ಔಷಧ ಮತ್ತು ಚಿಕಿತ್ಸೆಗಳ ಬೆಲೆಯನ್ನು ದೇಶದ ಬಹುಪಾಲು ಜನರಿಂದ ಭರಿಸಲು ಸಾಧ್ಯವಾಗುತ್ತಿಲ್ಲ. ವಿರೋಧ ಪಕ್ಷಗಳು ಈ ಸಾಂಕ್ರಾಮಿಕದ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಕೂಡ ಜನರಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ಆರೋಗ್ಯ ಚಿಕಿತ್ಸೆಗಳು ಲಭಿಸುವಂತೆ ಒಂದು ನೀತಿಯನ್ನು ಜಾರಿ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು.
  6. ದೇಶದಲ್ಲಿ ಮುಕ್ಕಾಲು ಪಾಲು ಜನರು ಕೊರೋನಾ ಸಾಂಕ್ರಾಮಿಕ ಮತ್ತು ಲಾಕ್‌ಡೌನ್‌ ಕಾರಣದಿಂದ ಕೆಲಸ ಕಳೆದುಕೊಂಡಿದ್ದಾರೆ. ಜನರನ್ನು ಹಸಿವು ಮತ್ತು ಬಡತನ ವ್ಯಾಪಕವಾಗಿ ಕಾಡುತ್ತಿದೆ. ಇದು ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಮೇಲೆ ತೀವ್ರ ಪರಿಣಾಮಗಳನ್ನು ಬೀರಲಿದೆ. ಹಾಗೇ ದೇಶದ ಭವಿಷ್ಯವನ್ನು ಮಂಕಾಗಿಸಲಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದಲ್ಲಿ ಕೊರೋನಾ ಸಾಂಕ್ರಾಮಿಕದ ಕಾರಣದಿಂದ ಹಸಿವು ಮತ್ತು ಬಡತನಕ್ಕೆ ತುತ್ತಾಗಿ ಸಾಯದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಹೊಂದಿದೆ. ಆದರೆ ಕೇಂದ್ರ ಸರ್ಕಾರದಿಂದ ಜನರಿಗೆ ಈ ನಿಟ್ಟಿನಲ್ಲಿ ಯಾವ ಭರವಸೆಗಳು ಮತ್ತು ಸಹಕಾರಗಳು ಲಭಿಸಿಲ್ಲ. ಹೀಗಿರುವಾಗ ದೇಶದ ವಿರೋಧ ಪಕ್ಷಗಳೆಲ್ಲ ಒಂದಾಗಿ ಜನರ ನಿರುದ್ಯೋಗ ಹಸಿವು ಬಡತನವನ್ನು ನೀಗಿಸಲು ಒಂದು ಸಮಗ್ರ ಯೋಜನೆಯನ್ನು ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ತೀವ್ರ ಒತ್ತಡವನ್ನು ಹೇರಬೇಕು.
  7. ಕೇಂದ್ರ ಸರ್ಕಾರದ ಸತತ ನಿರ್ಲಕ್ಷ ಮತ್ತು ತಿರಸ್ಕಾರಗಳ ನಡುವೆಯೂ ದೇಶದ ಜನರ ಹಿತದ ದೃಷ್ಟಿಯಿಂದ ವಿರೋಧ ಪಕ್ಷಗಳು ಒಟ್ಟಾಗಿ ಸರ್ಕಾರದ ಜೊತೆ ಮಾತುಕತೆ ಮತ್ತು ಚರ್ಚೆಯನ್ನು ನಡೆಸುವ ಪ್ರಯತ್ನವನ್ನು ಮುಂದುವರಿಸಬೇಕು.

ನಾವೆಲ್ಲರೂ  ದೇಶದ ಜನರೆಲ್ಲರಿಗೂ ಸೂಕ್ತ ಆರೋಗ್ಯ ಮತ್ತು  ಒದಗಿಸುವ ಭಾರತದ ಬೃಹತ್‌ ಹೋರಾಟಕ್ಕೆ  ಭಾರತ ಸರ್ಕಾರ ನಾಯಕತ್ವವನ್ನು ವಹಿಸಲಿ ಎಂದು ಬಯಸುತ್ತೇವೆ . ಕೊರೋನಾ ಸಾಂಕ್ರಾಮಿಕದ ಭಾರತದ ಹೋರಾಟಕ್ಕೆ ಆಡಳಿತ, ವಿರೋಧ ಪಕ್ಷಗಳು, ತಜ್ಞರು, ಅಧಿಕಾರಿಗಳು ಎಲ್ಲರನ್ನು ಒಳಗೊಂಡ ಒಂದು ರಾಷ್ಟ್ರೀಯ ಟಾಸ್ಕ್‌ಫೋರ್ಸ್‌ ಅತ್ಯಂತ ಅವಶ್ಯಕವಾಗಿದೆ. ಕಳೆದ ಕೆಲವು ವರ್ಷಗಳ ಅನುಭವದಿಂದ ಕೇಂದ್ರ ಸರ್ಕಾರ ಅಂತಹ ಯಾವ ಒಮ್ಮತದ ಕ್ರಮಗಳನ್ನು ಕೈಗೊಳ್ಳುವುದಿಲ್ಲ ಎಂಬುದು ವೇದ್ಯವಾಗಿದೆ. ದೇಶದ ಸ್ವಾತಂತ್ರ್ಯದ ಹೋರಾಟದಲ್ಲಿ ಎಲ್ಲರೂ ಒಂದಾದಂತೆ ಕೊರೋನಾ ವಿರುದ್ಧವೂ ಎಲ್ಲರು ಒಗ್ಗಾಟ್ಟಾಗಿ ಹೋರಾಡಬೇಕಾದ ಸಂದರ್ಭ ಬಂದಿದೆ. ಸರ್ಕಾರದ ವೈಫಲ್ಯ ಅದನ್ನು ಮುಚ್ಚಲು ಅಂಕಿ ಅಂಶಗಳ ತಿರುಚುವಿಕೆ, ಸುಳ್ಳುಗಳ ಹರಡುವಿಕೆಗಳ ವಿರುದ್ಧ ಸಂಸತ್ತು ಮತ್ತು ಮಾಧ್ಯಮಗಳಲ್ಲಿ ಮಾತ್ರವಲ್ಲದೇ ಪತ್ರಿಕೆ, ಡಿಜಿಟಲ್‌ ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ವಿರೋಧ ಪಕ್ಷಗಳು ಒಟ್ಟಾಗಿ ಆಂದೋಲನವನ್ನು ರೂಪಿಸಬೇಕು. ಕೇಂದ್ರ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವವರೆಗೂ ಜನರ ಪರವಾದ ತಮ್ಮ ಹೋರಾಟ, ಬೇಡಿಕೆ ಮತ್ತು ಆಗ್ರಹಗಳನ್ನು ನಿಲ್ಲಿಸಬಾರದು.

ಭಾರತ ಕಳೆದ 70 ವರ್ಷದಲ್ಲಿ ಪೊಲೀಯೋ ಸೇರಿದಂತೆ ವಿವಿಧ ವೈರಸ್‌ಗಳಿಗೆ ಬೃಹತ್‌ ಪ್ರಮಾಣದ ಲಸಿಕಾ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಯಶಸ್ವಿಯೂ ಆಗಿದೆ. ಸಾಂಕ್ರಾಮಿಕವನ್ನು ಎದುರಿಸಿದ ದೇಶದ ಹಿಂದಿನ ಎಲ್ಲ ಅನುಭವಗಳನ್ನು ಒಟ್ಟುಗೂಡಿಸಿ ಕೊರೋನಾ ವಿರುದ್ಧ ಒಂದು ಸಮಗ್ರ ಆರೋಗ್ಯ ಮತ್ತು ಲಸಿಕಾ ಯೋಜನೆಗಳನ್ನು ರೂಪಿಸುವಲ್ಲಿ ದೇಶದ ವಿರೋಧ ಪಕ್ಷಗಳು ಜನರ ಜೊತೆ ಮತ್ತು ಸರ್ಕಾರದ ಜೊತೆ ಭಾಗಿಯಾಗಬೇಕೆಂದು ದೇಶದ ಜವಾಬ್ಧಾರಿಯುತ ನಾಗರಿಕರಾದ ನಾವು ನಮ್ಮ ಸಹ ದೇಶವಾಸಿಗಳೆಲ್ಲರ ಪರವಾಗಿ ಪ್ರಾರ್ಥಿಸುತ್ತೇವೆ.

ಇಂತಿ ತಮ್ಮ ವಿಶ್ವಾಸಿಗಳಾದ

  1. ಅರುಣ್ ರೊಯ್‌, ಮಾಜಿ ಸದಸ್ಯರು ರಾಷ್ಟ್ರೀಯ ಸಲಹಾ ಮಂಡಳಿ
  2. ಕೌಶಿಕ್‌ ಬಸು, ಮುಖ್ಯ ಹಣಕಾಸು ತಜ್ಞರು, ವಿಶ್ವ ಬ್ಯಾಂಕ್‌
  3. ಫ್ರೊ. ರೋಮಿಲಾ ಥಾಪರ್‌, ಇತಿಹಾಸ ತಜ್ಞೆ ಮತ್ತು ಹಿರಿಯ ಪ್ರಾಧ್ಯಾಪಕರು ಜೆಎನ್‌ಯು
  4. ಹರ್ಷ ಮಂದರ್‌, ನಿವೃತ್ತ ಐಎಎಸ್‌ ಅಧಿಕಾರಿ
  5. ಫ್ರೊ. ಬಾರ್ಬರಾ ಹ್ಯಾರಿಸ್‌, ಆಕ್ಸ್ಫರ್ಡ್‌ ವಿಶ್ವವಿದ್ಯಾಲಯ
  6. ಗಣೇಶ್‌ ದೇವಿ, ಹಿರಿಯ ಸಾಹಿತಿ
  7. ಅಹಿಸ್‌ ರಾಯ್‌,  ಅಧ್ಯಕ್ಷರು ಭಾರತ ಪತ್ರಕರ್ತರ ಸಂಘ (ಯುರೋಪ್)‌
  8. ಸುಮಿತ್‌ ಸರ್ಕಾರ್‌, ಇತಿಹಾಸಕಾರರು
  9. ನಿಶಾ ಅಗರ್ವಾಲ್‌, ಒಕ್ಸ್‌ ಫಾಮ್‌ ಇಂಡಿಯಾ ಸಂಸ್ಥೆಯ ಮಾಜಿ ನಿರ್ದೇಶಕರು
  10. ಫ್ರೋ. ಇರ್ಫಾನ್ ಹಬೀಬ್‌‌, ನ್ಯಾಯಶಾಸ್ತ್ರಜ್ಞರು

ಇವರನ್ನು ಒಳಗೊಂಡು ದೇಶದ ಪ್ರತಿಷ್ಠಿತ ಗಣ್ಯರು, ಉದ್ಯಮಿಗಳು, ಅಂತರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು, ವಿವಿಧ ಕಂಪನಿಗಳ ಮುಖ್ಯಸ್ಥರು ಸೇರಿ 187 ಜನರು ದೇಶದ ಜನರ ಪರವಾಗಿ ವಿರೋಧ ಪಕ್ಷಗಳಿಗೆ ಬರೆದ ಬಹಿರಂಗ ಪತ್ರಕ್ಕೆ ಸಹಿ ಹಾಕಿದ್ದಾರೆ.


ಇದನ್ನೂ ಓದಿ: ಬ್ಲ್ಯಾಕ್ ಫಂಗಸ್: ವಾಸ್ತವವೇನು? ವೈದ್ಯರೇನು ಹೇಳುತ್ತಿದ್ದಾರೆ?: ಡಾ. ವಾಸು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...