Homeಕರೋನಾ ತಲ್ಲಣ3ನೇ ಅಲೆ ಆತಂಕ: ಸೆಪ್ಟೆಂಬರ್‌ ವೇಳೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣ 30 ಲಕ್ಷಕ್ಕೆ ಏರಿಕೆ

3ನೇ ಅಲೆ ಆತಂಕ: ಸೆಪ್ಟೆಂಬರ್‌ ವೇಳೆಗೆ ರಾಜ್ಯದಲ್ಲಿ ಕೊರೊನಾ ಪ್ರಕರಣ 30 ಲಕ್ಷಕ್ಕೆ ಏರಿಕೆ

- Advertisement -
- Advertisement -

ಕೊರೊನಾ ಎರಡನೆ ಅಲೆಯಿಂದ ಹೈರಾಣಾಗಿರುವ ದೇಶಕ್ಕೆ ಮೂರನೆ ಅಲೆಯ ಆತಂಕ ಎದುರಾಗಿದೆ. ಈ ಮಧ್ಯೆ ಸೆಪ್ಟೆಂಬರ್‌ 10 ರ ವೇಳೆಗೆ ಭಾರತದ ಕೊರೊನಾ ಪ್ರಕರಣಗಳು 32.8 ಕೋಟಿ ಮತ್ತು ಸಾವುಗಳು 4.40 ಲಕ್ಷ ಮುಟ್ಟುವ ನಿರೀಕ್ಷೆಯಿದೆ ಎಂದು ಜೀವನ್ ರಕ್ಷಾ ಸಮೀಕ್ಷೆ ವಿಶ್ಲೇಷಿಸಿದೆ. ಈ ವಿಶ್ಲೇಷಣೆಯಂತೆ ಈ ಸಮಯದಲ್ಲಿ ಕರ್ನಾಟಕದ ಕೊರೊನಾ ಪ್ರಕರಣಗಳು 29.50 ಲಕ್ಷ ಮತ್ತು ಸಾವುಗಳ ಸಂಖ್ಯೆ 37,470 ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ಸಮೀಕ್ಷೆ ಹೇಳಿದೆ.

ಎರಡನೇ ಅಲೆಯ ನಂತರ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಪ್ರದೇಶದಗಳಲ್ಲಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿದೆ. ಕಳೆದ ನಾಲ್ಕು ವಾರಗಳಲ್ಲಿ ಇಲ್ಲಿ ಹೊಸ ಪ್ರಕರಣಗಳು 24% ಏರಿಕೆಯಾಗಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿದ್ದು, ಇಲ್ಲಿ 18.4% ಪ್ರಕರಣಗಳು ಏರಿಕೆಯಾಗಿದೆ ಎಂದು ವರದಿಯಾಗಿದೆ. ನಂತರದ ಸ್ಥಾನದಲ್ಲಿ, ಮೈಸೂರು, ಉಡುಪಿ ಮತ್ತು ಹಾಸನ ಜಿಲ್ಲೆಗಳಿವೆ.

ಇದನ್ನೂ ಓದಿ: ಕಾಳಿ ನದಿ ಮೇಲೆ ಸಚಿವ ನಿರಾಣಿ ಸಹೋದರರ ಕಣ್ಣು!

“ಕರ್ನಾಟಕವು ಅತ್ಯಂತ ಜಾಗರೂಕತೆ ವಹಿಸಬೇಕು. ಹೊರಗಿನಿಂದ ಬರುವವರಿಗೆ ಕಡಿವಾಣ ಹಾಕಬೇಕು. ಇಂದು ಕರ್ನಾಟಕವು 22,000 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಮಾರ್ಚ್ ಮಧ್ಯದಲ್ಲಿ ಅಬ್ಬರಿಸಿದ 2 ನೇ ಅಲೆ ಸಮಯದಲ್ಲಿ, ಕೇವಲ ಐದರಿಂದ ಆರು ವಾರಗಳಲ್ಲಿ, ರಾಜ್ಯದಲ್ಲಿ 6 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿತ್ತು. ರಾಜ್ಯ ಸರ್ಕಾರ ಬೆಂಗಳೂರು ನಗರಕ್ಕೆ ಪ್ರತ್ಯೇಕ ಕಾರ್ಯತಂತ್ರ ರೂಪಿಸಬೇಕು” ಎಂದು ಜೀವನ್ ರಕ್ಷಾದ ಸಂಚಾಲಕ ಮೈಸೂರು ಸಂಜೀವ್ ಹೇಳಿದ್ದಾರೆ.

ಜುಲೈ ತಿಂಗಳಲ್ಲಿ ಕರ್ನಾಟಕವು 61,314 ಹೊಸ ಕೊರೊನಾ ಪ್ರಕರಣಗಳು ಮತ್ತು 1,522 ಸಾವುಗಳನ್ನು ವರದಿ ಮಾಡಿದೆ. ಕರ್ನಾಟಕದಲ್ಲಿ ಕೊರೊನಾ ಚಿಕಿತ್ಸೆಗಾಗಿ 28,060 ಹೊಸ ವಿಮಾ ಕ್ಲೈಂಗಳನ್ನು ನೋಂದಾಯಿಸಲಾಗಿದೆ. ಅಂದರೆ ಸೋಂಕಿಗೊಳಗಾದವರಲ್ಲಿ 46% ಜನರು ಆರೋಗ್ಯ ವಿಮಾ ರಕ್ಷಣೆಯನ್ನು ಹೊಂದಿದ್ದಾರೆ.

ವಾಸ್ತವವಾಗಿ, “ಜುಲೈನಲ್ಲಿ ಕರ್ನಾಟಕದಲ್ಲಿ ನಿಜವಾದ ಪ್ರಕರಣಗಳ ಸಂಖ್ಯೆ ಸುಮಾರು 1.75 ಲಕ್ಷದಿಂದ 1.9 ಲಕ್ಷ ಮತ್ತು ಸುಮಾರು 3,000 ಸಾವುಗಳು ಸಂಭವಿಸಿವೆ” ಎಂದು ಸಂಜೀವ್ ತಿಳಿಸಿದ್ದಾರೆ.

ಇದನ್ನೂ ಓದಿ: ನಾಗರ ಪಂಚಮಿ: ಸಾವು ಸಂಭವಿಸಬಹುದಾದ ಆಚರಣೆ- ಹಾವುಗಳ ಕುರಿತು ಇರುವ ಮಿಥ್ಯೆಗಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ರಾಮ ಮಂದಿರ, ಸಿಖ್ಖರ ಉಲ್ಲೇಖ ನೀತಿ ಸಂಹಿತೆ ಉಲ್ಲಂಘನೆಯಾಗದು: ಪ್ರಧಾನಿ ಮೋದಿಗೆ ಕ್ಲೀನ್ ಚಿಟ್...

0
ರಾಮ ಮಂದಿರ ನಿರ್ಮಾಣ, ಸಿಖ್‌ ತೀರ್ಥಯಾತ್ರೆಯ ಹಾದಿಯಾದ ಕರ್ತಾರ್‌ಪುರ್‌ ಸಾಹಿಬ್‌ ಕಾರಿಡಾರ್‌ ಅಭಿವೃದ್ಧಿ, ಸಿಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್‌ ಪ್ರತಿಗಳನ್ನು ಅಫ್ಗಾನಿಸ್ತಾನದಿಂದ ವಾಪಸ್‌ ತರಲು ಸರ್ಕಾರದ ಕ್ರಮ ಕೈಗೊಂಡಿರುವುದನ್ನು ಉಲ್ಲೇಖಿಸಿ...