ಉತ್ತರ ಗಾಜಾ ಪಟ್ಟಣವಾದ ಬೀಟ್ ಲಾಹಿಯಾದಲ್ಲಿನ ವಸತಿ ಕಟ್ಟಡದ ಮೇಲೆ ಮಂಗಳವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ 55 ಪ್ಯಾಲೆಸ್ಟೀನಿಯಾ ನಿವಾಸಿಗಳು ಸಾವನ್ನಪ್ಪಿದ್ದು, ಡಜನ್‌ಗಟ್ಟಲೆ ಜನರು ಗಾಯಗೊಂಡಿದ್ದಾರೆ ಎಂದು ಪ್ಯಾಲೇಸ್ತೀನಿಯನ್ ನಾಗರಿಕ ತುರ್ತು ಸೇವೆಗೆ ಮಾಹಿತಿ ನೀಡಿದ್ದಾರೆ.
ಅನೇಕ ಬಲಿಪಶುಗಳು ಇನ್ನೂ ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ಅಧಿಕೃತ ಪ್ಯಾಲೇಸ್ಟಿನಿಯನ್ ಸುದ್ದಿ ಸಂಸ್ಥೆ ವಾಫಾ (WAFA) ಮತ್ತು ಹಮಾಸ್ ಮಾಧ್ಯಮಗಳು ಈ ಹಿಂದೆ ಇದೇ ಅಂಕಿಅಂಶವನ್ನು ವರದಿ ಮಾಡಿದ್ದವು.
ಇಸ್ರೇಲ್ ದಾಳಿಯಲ್ಲಿ ಸಾವನ್ನಪ್ಪಿದವರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ವೈದ್ಯರ ಮಾಹಿತಿ ಉಲ್ಲೇಖಿಸಿ ವಾಫಾ ವರದಿ ಮಾಡಿದೆ.
ಪ್ಯಾಲೇಸ್ಟಿನಿಯನ್ ನಾಗರಿಕ ತುರ್ತು ಸೇವೆಯು ಸುಮಾರು 100,000 ಜನರು ವೈದ್ಯಕೀಯ ಅಥವಾ ಆಹಾರ ಸರಬರಾಜು ಇಲ್ಲದೆ ಜಬಾಲಿಯಾ, ಬೀಟ್ ಲಾಹಿಯಾ ಮತ್ತು ಬೀಟ್ ಹನೌನ್‌ನಲ್ಲಿ ದಿನಕಳೆಯುತ್ತಿದ್ದಾರೆ ಎಂದು ಹೇಳಿದರು.
ಉತ್ತರ ಗಾಜಾದಲ್ಲಿ ಮೂರು ವಾರಗಳ ಇಸ್ರೇಲಿ ದಾಳಿಯಿಂದಾಗಿ ಅದರ ಕಾರ್ಯಾಚರಣೆಗಳು ಸ್ಥಗಿತಗೊಂಡಿವೆ ಎಂದು ತುರ್ತು ಸೇವೆ ಹೇಳಿದೆ. ಅಲ್ಲಿ ವರ್ಷಪೂರ್ತಿ ಯುದ್ಧದಲ್ಲಿ ಹಮಾಸ್ ಯುದ್ಧ ಪಡೆಗಳನ್ನು ನಾಶಪಡಿಸಿದೆ ಎಂದು ಇಸ್ರೇಲ್ ಹೇಳಿದೆ. ಹಮಾಸ್ ಮತ್ತೆ ಗುಂಪುಗೂಡುವುದನ್ನು ತಡೆಯುವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ದಾಳಿಯನ್ನು ಸಮರ್ಥಿಸಿಕೊಂಡಿದೆ.
ಇದನ್ನೂ ಓದಿ; ಪ್ಯಾಲೆಸ್ತೀನ್‌ಗೆ ನೆರವಾಗುವ UNRWA ನಿಷೇಧಕ್ಕೆ ಕಾನೂನು ಅಂಗೀಕರಿಸಿದ ಇಸ್ರೇಲ್


