Homeಮುಖಪುಟವಕ್ಫ್ ಮಸೂದೆಗೆ 572 ತಿದ್ದುಪಡಿ ಸೂಚಿಸಿದ ಸಂಸದೀಯ ಸಮಿತಿ

ವಕ್ಫ್ ಮಸೂದೆಗೆ 572 ತಿದ್ದುಪಡಿ ಸೂಚಿಸಿದ ಸಂಸದೀಯ ಸಮಿತಿ

- Advertisement -
- Advertisement -

ವಕ್ಫ್ ತಿದ್ದುಪಡಿ ಮಸೂದೆಯ ಸಂಸದೀಯ ಸಮಿತಿಯ ಸದಸ್ಯರು ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ಭಿನ್ನಾಭಿಪ್ರಾಯ ಮೂಡಿಸಿರುವ ಕರಡು ಶಾಸನಕ್ಕೆ 572 ತಿದ್ದುಪಡಿಗಳನ್ನು ಸೂಚಿಸಿದ್ದಾರೆ ಎಂದು TNIE ವರದಿ ಮಾಡಿದೆ. ಸಮಿತಿಯು ಸೋಮವಾರ ನಡೆಯುವ ತನ್ನ ಸಭೆಯಲ್ಲಿ ಷರತ್ತು ವಾರು ತಿದ್ದುಪಡಿಗಳನ್ನು ಚರ್ಚಿಸಲಿದ್ದು, ಬಿಜೆಪಿ ಮತ್ತು ವಿರೋಧ ಪಕ್ಷದ ಸದಸ್ಯರು ಮಸೂದೆಗೆ ತಿದ್ದುಪಡಿಗಳನ್ನು ಸಲ್ಲಿಸಲಿದ್ದಾರೆ. ವಕ್ಫ್ ಮಸೂದೆಗೆ

ಸಮಿತಿಯ ವಿಚಾರಣೆಯು ಕೊನೆಯ ಹಂತಕ್ಕೆ ತಲುಪುತ್ತಿದ್ದಂತೆ ಬಿಜೆಪಿ ನಾಯಕ ಜಗದಾಂಬಿಕಾ ಪಾಲ್ ಅಧ್ಯಕ್ಷತೆಯ ವಕ್ಫ್ ತಿದ್ದುಪಡಿ ಮಸೂದೆಯ ಜಂಟಿ ಸಮಿತಿಯು ಭಾನುವಾರ ತಡರಾತ್ರಿ ತಿದ್ದುಪಡಿಗಳ ಸಮಗ್ರ ಪಟ್ಟಿಯನ್ನು ವಿತರಿಸಿತು. ಆದಾಗ್ಯೂ, ತಿದ್ದುಪಡಿಗಳನ್ನು ಸಲ್ಲಿಸಿದ ಸದಸ್ಯರ ಪಟ್ಟಿಯಲ್ಲಿ ಬಿಜೆಪಿಯ ಯಾವುದೇ ಮಿತ್ರಪಕ್ಷಗಳಿಲ್ಲ ಎಂದು ವರದಿ ಸೂಚಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ

ವಕ್ಫ್ (ತಿದ್ದುಪಡಿ) ಮಸೂದೆ, 2024 ಅನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಲೋಕಸಭೆಯಲ್ಲಿ ಪರಿಚಯಿಸಿದ ನಂತರ ಆಗಸ್ಟ್ 8 ರಂದು ಸಂಸತ್ತಿನ ಜಂಟಿ ಸಮಿತಿಗೆ ಉಲ್ಲೇಖಿಸಲಾಗಿತ್ತು. ವಕ್ಫ್ ಆಸ್ತಿಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವಲ್ಲಿನ ಸಮಸ್ಯೆಗಳು ಮತ್ತು ಸವಾಲುಗಳನ್ನು ಪರಿಹರಿಸಲು 1995 ರ ವಕ್ಫ್ ಕಾಯ್ದೆಯನ್ನು ತಿದ್ದುಪಡಿ ಮಾಡುವ ಗುರಿಯನ್ನು ಈ ಮಸೂದೆ ಹೊಂದಿದೆ.

ವಕ್ಫ್‌ ಎಂದರೆ ಏನು? 

’ವಕ್ಫ್’ ಎಂದರೆ, ಒಬ್ಬ ಮುಸ್ಲಿಂ ಅಥವಾ ಒಂದು ಮುಸ್ಲಿಂ ಗುಂಪು ತಮ್ಮ ಸ್ವಂತ ಆಸ್ತಿಯನ್ನು ಅಥವಾ ತಮಗೆ ಉಡುಗೊರೆಯಾಗಿ ಸಿಕ್ಕ ಆಸ್ತಿಯನ್ನು ಅಥವಾ ಪಿತ್ರಾರ್ಜಿತ ಆಸ್ತಿಯನ್ನು (ಅದು ಚರಾಸ್ತಿ ಅಥವಾ ಸ್ಥಿರಾಸ್ತಿಯಾದರೂ) ಮನಸಾರೆ ’ದೇವರ ಹೆಸರಿನಲ್ಲಿ ಅರ್ಪಿಸುವ’ ಒಂದು ಆಚರಣೆಯಾಗಿದೆ. ಈ ಆಚರಣೆಯು ಅರ್ಪಿಸುವ ವ್ಯಕ್ತಿ ಮತ್ತು ಆತ ನಂಬುವ ದೇವರ ನಡುವಿನ ಒಂದು ಒಪ್ಪಂದ. ಹಾಗಾಗಿಯೆ ಇದೊಂದು ಸರಳ ಧಾರ್ಮಿಕ ಆಚರಣೆ. ಭಾರತ ಸಂವಿಧಾನ ಹೇಳುವ ’ಆತ್ಮಸಾಕ್ಷಿಯ ಸ್ವಾತಂತ್ರ್ಯ’ದ ಅಡಿಯಲ್ಲಿ ಬರುವ ಆಚರಣೆಯ ಹಕ್ಕು.

ಉದಾಹರಣೆಗೆ ಒಂದು ಮುಸ್ಲಿಂ ಗುಂಪು ದುಡ್ಡು ಸಂಗ್ರಹಿಸಿ ಅದರಲ್ಲಿ ಒಂದಿಷ್ಟು ಜಾಗ ಖರೀದಿಸಿ ಮಸೀದಿ ಕಟ್ಟಿ ಅದನ್ನು ದೇವರಿಗೆ ಅರ್ಪಿಸುತ್ತಾರೆ. ಅಂದಿನಿಂದ ಆ ಮಸೀದಿ ಯಾವುದೇ ವ್ಯಕ್ತಿಯ ಆಸ್ತಿಯಾಗಿ ಇರುವುದಿಲ್ಲ, ಬದಲಾಗಿ ಅದು ಮುಸ್ಲಿಮರ ಸಾಮುದಾಯಿಕ ಸೊತ್ತಾಗಿರುತ್ತದೆ. ಇನ್ನೂ ಮುಂದುವರಿದು ಹೇಳುವುದಾದರೆ ತಮ್ಮ ಆಸ್ತಿಯನ್ನು ದೇವರಿಗಾಗಿ ಅರ್ಪಿಸಿದ್ದೇನೆ ಎಂದು ಸಂಕಲ್ಪಿಸುವುದಾಗಿದೆ ’ವಕ್ಫ್’. ನಂತರ ಅದನ್ನು ಸಮುದಾಯದ ಸೇವೆಗೆ, ಸಬಲೀಕರಣದ ಬಳಕೆಗೆ ಮೀಸಲು ಇಡಬೇಕಾಗುತ್ತದೆ.

ಇಸ್ಲಾಮಿಕ್ ನಿಯಮಗಳ ಪ್ರಕಾರ, ಒಮ್ಮೆ ಯಾರಾದರೂ ತಮ್ಮ ಆಸ್ತಿಯನ್ನು ’ವಕ್ಫ್’ ಅಂದರೆ ’ದೇವರಿಗಾಗಿ ಅರ್ಪಿಸಿದರೆ’ ಅದರ ಮಾಲೀಕ ಅವರಾಗಿರುವುದಿಲ್ಲ, ಬದಲಾಗಿ ’ದೇವರು’ ಅದರ ಮಾಲೀಕನಾಗುತ್ತಾನೆ. ಹಾಗಾಗಿ ಒಮ್ಮೆ ತಮ್ಮ ಆಸ್ತಿಯನ್ನು ’ವಕ್ಫ್’ ಎಂದು ಸಂಕಲ್ಪಿಸಿದರೆ, ಅದರ ಮೇಲೆ ಅವರಿಗೆ ಯಾವುದೇ ರೀತಿಯ ಹಕ್ಕು ಇರುವುದಿಲ್ಲ. ಸ್ವತಃ ಆಸ್ತಿಯನ್ನು ’ವಕ್ಫ್’ ಮಾಡಿದ ವ್ಯಕ್ತಿಯೇ ಈ ಸಂಕಲ್ಪವನ್ನು ವಾಪಸ್ಸು ಪಡೆಯುವಂತೆ ಇಲ್ಲ. ಅಷ್ಟೇ ಅಲ್ಲದೆ, ಈ ಆಸ್ತಿಗಳನ್ನು ಆತ ಯಾರಿಗೂ ಮಾರಾಟ ಮಾಡುವಂತೆ, ಉಡುಗೊರೆ ನೀಡುವಂತೆ ಹಾಗೂ ಯಾವುದಕ್ಕೋ ಬದಲಿಯಾಗಿ ನೀಡುವಂತೆಯು ಇಲ್ಲ ಎಂದು ಇಸ್ಲಾಮಿಕ್ ನಿಯಮಗಳು ಹೇಳುತ್ತದೆ.

ವಿವಾದ ಏನು?

ಕೇಂದ್ರ ಸರ್ಕಾರ ಜಾರಿಗೆ ತರಬೇಕು ಎಂದು ಉದ್ದೇಶಿಸಿರುವ ಹೊಸ ತಿದ್ದುಪಡಿ ಮಸೂದೆಯಲ್ಲಿ ಬರುವ 3ಸಿ, 3ಆರ್, 14 ಮತ್ತು 40 ಸೆಕ್ಷನ್‌ಗಳು ಮುಸ್ಲಿಂ ವಿರೋಧಿ ಮತ್ತು ವಕ್ಫ್ ವಿರೋಧಿಯಾಗಿದೆ ಎಂಬ ಆರೋಪಗಳನ್ನು ಮಾಡಲಾಗುತ್ತಿದೆ.

ಬಹಳ ಮುಖ್ಯವಾಗಿ, ತಿದ್ದುಪಡಿ ಮಸೂದೆಯ 3ಆರ್ ಸೆಕ್ಷನ್, ಯಾವುದಾದರೂ ವಕ್ಫ್ ಆಸ್ತಿಯ ಬಗ್ಗೆ ವಕ್ಫ್ ಬೋರ್ಡ್ ಮತ್ತು ರಾಜ್ಯ ಸರ್ಕಾರದ ನಡುವೆ ತಕರಾರು ಇದ್ದರೆ ಆ ವ್ಯಾಜ್ಯವನ್ನು ಜಿಲ್ಲಾಧಿಕಾರಿಯ ಬಳಿಗೆ ತೆಗೆದುಕೊಂಡುಹೋಗಬೇಕು ಎಂದು ಹೇಳುತ್ತದೆ. ಇದರ ಬಗ್ಗೆ ಜಿಲ್ಲಾಧಿಕಾರಿ ವಿಚಾರಣೆ ನಡೆಸಬೇಕು ಎಂದು ಹೇಳುವ ಸೆಕ್ಷನ್, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರದ ಜಾಗವಾಗಿರಲಿದೆ ಎಂದು ಹೇಳುತ್ತದೆ.

ಒಂದುವೇಳೆ ಇದೇ ರೀತಿ ಮಸೀದಿಯೊಂದರ ತಕರಾರು ಜಿಲ್ಲಾಧಿಕಾರಿ ಬಳಿಗೆ ತೆಗೆದುಕೊಂಡು ಹೋದರೆ, ಅದರ ತೀರ್ಮಾನ ಬರುವವರೆಗೆ ಅದು ಸರ್ಕಾರಿ ಜಾಗವಾಗಿ ಇರುತ್ತದೆ. ಇಂತಹ ಸರ್ಕಾರದ ಜಾಗದಲ್ಲಿ ಯಾರು ಬೇಕಾದರೂ ಕಾರ್ಯಕ್ರಮ ಮಾಡಲು ಅನುಮತಿ ನೀಡುವ ಅಪಾಯವಿರುತ್ತದೆ ಎಂದು ಟೀಕಾಕಾರರು ಹೇಳಿದ್ದಾರೆ.

ಅಲ್ಲದೆ, ಪ್ರಸ್ತುತ ಜಾರಿಯಲ್ಲಿರುವ ವಕ್ಫ್ ಕಾಯ್ದೆಯ ಪ್ರಕಾರ, ತಕರಾರುಗಳು ಟ್ರಿಬ್ಯುನಲ್‌ಗೆ ಹೋಗಬೇಕು, ಅಲ್ಲಿಯೂ ಬಗೆಹರಿಯದಿದ್ದರೆ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್‌ಗೆ ಹೋಗಬಹುದು. ಆದರೆ ತಿದ್ದುಪಡಿ ಮಸೂದೆಯ ಪ್ರಕಾರ ಜಿಲ್ಲಾಧಿಕಾರಿಯೇ ಕೊನೆಯ ಆಯ್ಕೆಯಾಗಿರುತ್ತದೆ. ಅದರ ನಂತರ ಮೇಲ್ಮನವಿಯ ಬಗ್ಗೆ ಈ ತಿದ್ದುಪಡಿ ಮಸೂದೆ ಮಾತನಾಡುವುದೇ ಇಲ್ಲ. ಜಿಲ್ಲಾಧಿಕಾರಿಯ ತೀರ್ಪಿನ ವಿರುದ್ಧ ಮೇಲ್ಮನವಿಯ ಬಗ್ಗೆ ತಿದ್ದುಪಡಿ ಮಸೂದೆಯು ಮೌನವಾಗಿದೆ. ಈ ಮಸೂದೆಯು ನ್ಯಾಯಾಲಯದ ಬಗ್ಗೆ ಹೇಳುವುದೇ ಇಲ್ಲ. ಇದು ಪ್ರಜಾಪ್ರಭುತ್ವ ವಿರೋಧಿಯಾಗಿದ್ದು, ಜಿಲ್ಲಾಧಿಕಾರಿಗಳ ಮತ್ತು ಆಡಳಿತರೂಢ ಪಕ್ಷಗಳ ಸರ್ವಾಧಿಕಾರ ಇಲ್ಲಿ ಕೆಲಸ ಮಾಡಲಿದೆ ಎಂಬ ಆರೋಪ ವ್ಯಕ್ತವಾಗಿದೆ.

ಇದನ್ನೂಓದಿ:  ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ

ಶ್ರೀಲಂಕಾ ನೌಕಾಪಡೆಯಿಂದ 34 ಭಾರತೀಯ ಮೀನುಗಾರರ ಬಂಧನ; ತಕ್ಷಣ ಬಿಡುಗಡೆಗೆ ಸಿಎಂ ಸ್ಟಾಲಿನ್ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತ್ರಿಪುರಾದಲ್ಲಿ ಕೋಮು ಹಿಂಸಾಚಾರ : ಮಸೀದಿ, ಮನೆಗಳಿಗೆ ಹಾನಿ ; ನಿಷೇಧಾಜ್ಞೆ ಜಾರಿ

ಸ್ಥಳೀಯ ದೇವಾಲಯೊಂದಕ್ಕೆ ಚಂದಾ ಸಂಗ್ರಹಿಸುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಕನಿಷ್ಠ ಐದರಿಂದ ಆರು ಜನರು ಗಾಯಗೊಂಡು ಮನೆಗಳು, ಮರದ ಅಂಗಡಿ ಮತ್ತು ಮಸೀದಿಗೆ ಹಾನಿಯಾದ ನಂತರ, ಜನವರಿ 10ರ...

ಭದ್ರತಾ ಕಾರಣ ನೀಡಿ ಸ್ಮಾರ್ಟ್‌ಫೋನ್ ತಯಾರಕರು ಮೂಲ ಕೋಡ್ ನೀಡುವಂತೆ ಒತ್ತಾಯಿಸಲು ಕೇಂದ್ರದ ಪ್ರಸ್ತಾಪ

ನವದೆಹಲಿ: ಸ್ಮಾರ್ಟ್‌ಫೋನ್ ತಯಾರಕರು ಸರ್ಕಾರದೊಂದಿಗೆ ಮೂಲ ಕೋಡ್ ಹಂಚಿಕೊಳ್ಳುವುದು ಮತ್ತು ಭದ್ರತಾ ಕ್ರಮಗಳ ಭಾಗವಾಗಿ ಹಲವಾರು ಸಾಫ್ಟ್‌ವೇರ್ ಬದಲಾವಣೆಗಳನ್ನು ಮಾಡುವುದು ಕಡ್ಡಾಯಗೊಳಿಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ, ಇದು ಆಪಲ್ ಮತ್ತು...

ದಾಳಿ ನಡೆಸಿದರೆ ನಮ್ಮ ನೇರ ಗುರಿಯಾಗುತ್ತೀರಿ : ಅಮೆರಿಕ, ಇಸ್ರೇಲ್‌ಗೆ ಎಚ್ಚರಿಕೆ ನೀಡಿದ ಇರಾನ್

ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್‌ ತಿರುಗೇಟು ನೀಡಿದೆ. ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ "ಅಮೆರಿಕ ಇರಾನ್ ಮೇಲೆ...

ಕೇಂದ್ರ ಸರ್ಕಾರದ ಎಚ್ಜರಿಕೆ ನಂತರ 3,500 ಪೋಸ್ಟ್‌ಗಳ ನಿರ್ಬಂಧ, 600 ಖಾತೆಗಳನ್ನು ಅಳಿಸಿದ ಎಕ್ಸ್ ಪ್ಲಾಟ್ ಫಾರ್ಮ್

ಮಹಿಳೆಯರನ್ನು ಗುರಿಯಾಗಿಸಿಕೊಂಡು AI- ರಚಿತವಾದ ಅಶ್ಲೀಲ ವಿಡಿಯೋಗಳ ವಿಷಯವನ್ನು ಕೇಂದ್ರವು ಗಮನಕ್ಕೆ ತಂದ ಕಠಿಣ ಕಾನೂನು ಜಾರಿಗೊಳಿಸುವಿಕೆಗೆ ಪ್ರತಿಜ್ಞೆ ಮಾಡಿದ ನಂತರ X 3,500 ಪೋಸ್ಟ್‌ಗಳು ಮತ್ತು 600 ಖಾತೆಗಳನ್ನು ಅಳಿಸಿಹಾಕಿದೆ.   ಅಶ್ಲೀಲ ವಿಷಯಗಳ...

ಮಾನವ ತಲೆಬುರುಡೆ, ಹುಲಿಚರ್ಮದಂತಹ ಕಸ್ಟಮೈಸ್ ಚರ್ಮ ಸೇರಿದಂತೆ ಹಲವು ಅನುಮಾನಾಸ್ಪದ ವಸ್ತುಗಳ ಮಾರಾಟ: ಮಾಂತ್ರಿಕನ ಬಂಧನ

ಬೆಂಗಳೂರು ವಲಯ ಘಟಕದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಉತ್ತರ ಬೆಂಗಳೂರಿನ ಭೂಪ್ಸಂದ್ರದ 39 ವರ್ಷದ ವ್ಯಕ್ತಿಯನ್ನು ವನ್ಯಜೀವಿ (ರಕ್ಷಣಾ) ಕಾಯ್ದೆ, 1972 ರ ಅಡಿಯಲ್ಲಿ ಬಂಧಿಸಿದೆ. "ಜನವರಿ 9 ರಂದು ನಡೆದ ಕಾರ್ಯಾಚರಣೆಯಲ್ಲಿ...

ದಲಿತ ಮಹಿಳೆಯನ್ನು ಕೊಂದು ಮಗಳ ಅಪಹರಣ : ಆರೋಪಿಯ ಬಂಧನ

ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ. ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ...

‘ಮುಂಬೈ ಮಹಾರಾಷ್ಟ್ರ ನಗರವಲ್ಲ’: ಅಣ್ಣಾಮಲೈ ಹೇಳಿಕೆಗೆ ಶಿವಸೇನೆಯಿಂದ ತೀವ್ರ ಆಕ್ರೋಶ

ಮುಂಬೈ: ಐಪಿಎಸ್ ಅಧಿಕಾರಿಯಿಂದ ರಾಜಕಾರಣಿಯಾಗಿ ಬದಲಾದ ಕೆ.ಅಣ್ಣಾಮಲೈ ಅವರು "ಬಾಂಬೆ ಮಹಾರಾಷ್ಟ್ರ ನಗರವಲ್ಲ, ಅಂತರರಾಷ್ಟ್ರೀಯ ನಗರ" ಎಂದು ಹೇಳಿದ್ದು, ಇದು ಮುಂಬೈನಲ್ಲಿ ವಿವಾದ ಸೃಷ್ಟಿಸಿದೆ.  ಇದಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)...

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...