ಎಸ್‌ಸಿ, ಎಸ್‌ಟಿ ಕಲ್ಯಾಣಕ್ಕಾಗಿ ಮೀಸಲಾಗಿದ್ದ ಹಣದಲ್ಲಿ 7,885.32 ಕೋಟಿ ರೂ.ಗಳನ್ನು ಕುಡಿಯುವ ನೀರಿನ ಯೋಜನೆಗಳು, ಒಳಚರಂಡಿ ದುರಸ್ತಿ, ನೀರಾವರಿ ಮತ್ತು ಇತರ ಸಿವಿಲ್ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಬಳಸಿರುವುದನ್ನು ಅಧಿಕೃತ ಅಂಕಿ-ಅಂಶಗಳು ತೆರೆದಿಟ್ಟಿವೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (SCSP-TSP) ಅಡಿಯಲ್ಲಿ ನಿಗದಿಯಾದ ಹಣ ಇದಾಗಿದೆ. ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಕಡ್ಡಾಯವಾಗಿ ಖರ್ಚು ಮಾಡಬೇಕಾದ ಹಣ, ಇತರ ಕಾಮಗಾರಿಗಳಿಗೆ ಬಿಜೆಪಿ ಸರ್ಕಾರ ಬಳಸಿದೆ. 2018 ಮತ್ತು 2021ರ ನಡುವೆ, ನೀರಾವರಿ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಗಳು ತಮ್ಮ ಯೋಜನೆಗಳಿಗೆ SCSP-TSP ನಿಧಿಯನ್ನು ಬಳಸಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕರ್ನಾಟಕ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಬುಡಕಟ್ಟು ಉಪ ಯೋಜನೆ (ಹಣಕಾಸಿನ ಸಂಪನ್ಮೂಲಗಳ ಯೋಜನೆ, ಹಂಚಿಕೆ ಮತ್ತು ಬಳಕೆ) ಕಾಯಿದೆಯಡಿಯಲ್ಲಿ ಶೇ. 14.84 ಹಣವನ್ನು ಬಜೆಟ್‌ನಲ್ಲಿ ಮೀಸಲಿಡಬೇಕು. ಕಾನೂನಿನ ಸಮಸ್ಯಾತ್ಮಕ ಭಾಗವೆಂದರೆ ಸೆಕ್ಷನ್ 7 (ಡಿ). ಇದರ ಅಡಿಯಲ್ಲಿ ಬೇರೆ ಬೇರೆ ಕಾಮಗಾರಿಗಳಿಗೆ ಹಣ ಹೋಗುತ್ತಿದೆ.
“ಕಾಯ್ದೆಯ ಸೆಕ್ಷನ್ 7ಡಿ ಕಾಲಂ ತೆಗೆದು ಹಾಕಬೇಕಿದೆ ಎಂಬ ಆಗ್ರಹ ಮೊದಲಿನಿಂದಲೂ ಇದೆ. ನೀರಾವರಿ ಯೋಜನೆಗಳಿಗೆ ಪರಿಶಿಷ್ಟರ ಹಣ ವಿನಿಯೋಗಿಸುವಾಗ ಏನು ಹೇಳುತ್ತಾರೆ? ಈ ನೀರು ಎಸ್‌ಟಿ, ಎಸ್‌ಟಿಗಳ ಹೊಲಗಳಿಗೂ ಹೋಗುತ್ತದೆ ಎಂದಲ್ಲವೇ? ಎಸ್‌ಸಿ, ಎಸ್‌ಟಿಗಳ ಹೊಲಗಳನ್ನು ಸುಲಭವಾಗಿ ಗುರುತಿಸಬಹುದಲ್ಲ? ಸಾವಿರ ಎಕರೆಯಲ್ಲಿ ಎಸ್‌ಸಿ, ಎಸ್‌ಟಿ ಸಮುದಾಯದವರ ಜಮೀನು ಸುಮಾರು 40 ಎಕರೆ ಇದ್ದರೆ, ಅಷ್ಟು ಜಾಗಕ್ಕೆ ಎಷ್ಟು ಹಣ ಬೇಕಾಗುತ್ತದೆಯೋ ಅಷ್ಟನ್ನು ಮಾತ್ರ ತೆಗೆದುಕೊಳ್ಳಬೇಕಲ್ಲವೇ?” ಎಂಬುದು ದಲಿತ ನಾಯಕರ ಆಗ್ರಹ.
ಇದನ್ನೂ ಓದಿರಿ: ವಿಶೇಷ ವರದಿ: ವರ್ಷ ವರ್ಷವೂ ಎಸ್‌ಸಿ, ಎಸ್‌ಟಿಗಳ ಅನುದಾನ ಗೋತಾ; ಸರ್ಕಾರಕ್ಕಿಲ್ಲ ದಲಿತರ ಮೇಲೆ ಕಾಳಜಿ
ಸೆಕ್ಷನ್ 7 (ಡಿ) ಅಡಿಯಲ್ಲಿ ಎಷ್ಟು ಹಣ ಹೋಗುತ್ತಿದೆ ಎಂಬ ಸ್ಪಷ್ಟತೆ ಇಲ್ಲ. ಉಪಯೋಜನೆಯ ಹಣದಲ್ಲಿ ನಾವು ಕುಡಿಯುವ ನೀರು ಅಥವಾ ರಸ್ತೆಗಳನ್ನು ಒದಗಿಸಿದರೆ, ಅದು ಎಲ್ಲರಿಗೂ ಉಪಯೋಗವಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಡೆಕ್ಕನ್ ಹೆರಾಲ್ಡ್‌ಗೆ ತಿಳಿಸಿದ್ದಾರೆ.
ಸೆಕ್ಷನ್ 7(ಡಿ) ನಿಬಂಧನೆಯು ಸಮಸ್ಯಾತ್ಮಕವಾಗಿದೆ. ಬಿಜೆಪಿಯ ಸ್ವಂತ ಎಸ್‌ಸಿ, ಎಸ್‌ಟಿ ಶಾಸಕರಾದ ಪಿ ರಾಜೀವ್, ಎನ್‌ವೈ ಗೋಪಾಲಕೃಷ್ಣ, ಎಂಪಿ ಕುಮಾರಸ್ವಾಮಿ ಮತ್ತು ಇತರರು ವಿರೋಧಿಸಿದ್ದಾರೆ ಎಂದು ಕಾರಜೋಳ ತಿಳಿದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಆರ್ಥಿಕ ವರ್ಷದಲ್ಲಿ ಉಪಯೋಜನೆಯಡಿ 28,234 ಕೋಟಿ ರೂ.ಗಳನ್ನು ನೀಡಿದ್ದಾರೆ.
“ಉಪಯೋಜನೆ ಹಣದಲ್ಲಿ ಸಂಪೂರ್ಣ ಮೇಲ್ಸೇತುವೆ ನಿರ್ಮಿಸಿ ನಂತರ ಎಸ್‌ಸಿ/ಎಸ್‌ಟಿಗಳು ಸಹ ಅದನ್ನು ಬಳಸುತ್ತಾರೆ ಎಂದು ಹೇಳುವುದು ಸರಿಯೇ?” ಎಂದು ಪ್ರಶ್ನಿಸಿದ್ದಾರೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ.



ಎಸಿ ಎಸ್ಟಿ ಅನುದಾನ ಎಲ್ಲರಿಗೂ ಬಳಕೆ ಯಾಗುತ್ತದೆ ಎಂದಾಗ ಕೇವಲ ನಾಮಕಾವಸ್ಥೆಗಾಗಿ ಯಾಕೆ ಎಸಿ, ಎಸ್ಟಿ ಹೆಸರಲ್ಲಿ ಅನುದಾನವನ್ನು ಮೀಸಲು ಇಡ್ತೀರಿ…. ಈ ರೀತಿ ಮಾಡಿದಾಗ ಅಷ್ಪ್ರಶ್ಯರು ಬಡತನ ರೇಖೆಯಿಂದ ಮೇಲೆ ಬರೋದು ಯಾವಾಗ…? ಕಾನೂನಿನ ದುರ್ಬಳಕೆಯಾಗಿಲ್ಲವೇ…ವಿರೋಧ ಪಕ್ಷಗಳು ಸಹ ಹೊಣೆಯಲ್ಲವೇ…?