Homeಕರೋನಾ ತಲ್ಲಣ‘3ನೇ ಅಲೆ’ಯಲ್ಲಿ 80 ಲಕ್ಷ ಪ್ರಕರಣಗಳು, 80 ಸಾವಿರ ಸಾವುಗಳು!’

‘3ನೇ ಅಲೆ’ಯಲ್ಲಿ 80 ಲಕ್ಷ ಪ್ರಕರಣಗಳು, 80 ಸಾವಿರ ಸಾವುಗಳು!’

ಭಾರಿ ಕೋವಿಡ್ ಉಲ್ಬಣ, ಸಾವುನೋವುಗಳ ಬಗ್ಗೆ ಮಹಾರಾಷ್ಟ್ರ ಎಚ್ಚರಿಕೆ

- Advertisement -
- Advertisement -

ಹೊಸ ವರ್ಷದ ಆರಂಭದಲ್ಲೇ ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ 80 ಲಕ್ಷ ಕೊರೊನಾ ಪ್ರಕರಣಗಳು ಮತ್ತು 80,000 ಸಾವುಗಳು ಸಂಭವಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. “ಮೂರನೇ ಅಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ತುಂಬಾ ದೊಡ್ಡದಾಗಿರುತ್ತದೆ” ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಆರೋಗ್ಯ) ಡಾ. ಪ್ರದೀಪ್ ವ್ಯಾಸ್ ಅವರು ಶುಕ್ರವಾರ ತಡರಾತ್ರಿ ಎಲ್ಲಾ ಉನ್ನತ ಸರ್ಕಾರಿ ಮತ್ತು ಆರೋಗ್ಯ ಅಧಿಕಾರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

“ಮೂರನೇ ಅಲೆಯಲ್ಲಿ 80 ಲಕ್ಷ ಕೊರೊನಾ ಪ್ರಕರಣಗಳಿದ್ದು… ಅದರಲ್ಲಿ 1% ದಷ್ಟು ಸಾವು ಸಂಭವಿಸಿದರೂ 80,000 ಸಾವುಗಳು ಉಂಟಾಗುತ್ತದೆ” ಎಂದು ಡಾ. ಪ್ರದೀಪ್‌ ಹೇಳಿದ್ದಾರೆ.

 ಇದನ್ನೂ ಓದಿ:  ಒಮೈಕ್ರಾನ್ ವಿರುದ್ಧದ ಹೋರಾಟದಲ್ಲಿ ‘ಲಾಕ್‌ಡೌನ್’ ಕೊನೆಯ ಅಸ್ತ್ರವಾಗಿಬೇಕು: WHO

ಮೂರನೇ ಕೋವಿಡ್/ಒಮೈಕ್ರಾನ್ ಅಲೆಯು ಸೌಮ್ಯವಾಗಿದೆ ಮತ್ತು ಮಾರಣಾಂತಿಕವಲ್ಲ ಎಂಬ ನಿರೂಪಣೆಗಳಿಂದ ಸುಮ್ಮನೆ ಇರಬೇಡಿ ಎಂದು ಅವರು ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.

“ಲಸಿಕೆ ಹಾಕದವರಿಗೆ ಮತ್ತು ಇತರ ಕಾಯಿಲೆ ಹೊಂದಿರುವವರಿಗೆ ಇದು ಮಾರಕವಾಗಿದೆ. ಆದ್ದರಿಂದ ದಯವಿಟ್ಟು ಲಸಿಕೆ ವ್ಯಾಪ್ತಿಯನ್ನು ಸುಧಾರಿಸಿ ಮತ್ತು ಜೀವಗಳನ್ನು ಉಳಿಸಿ” ಎಂದು ಡಾ ಪ್ರದೀಪ್‌ ಮನವಿ ಮಾಡಿದ್ದಾರೆ.

ಒಮೈಕ್ರಾನ್ ರೂಪಾಂತರವು ಸೌಮ್ಯವಾಗಿದೆ ಎಂದು ಸೂಚಿಸುವ ಮಾಧ್ಯಮ ವರದಿಗಳ ಆಧಾರದ ಮೇಲೆ ‘ಸಂತೃಪ್ತರಾಗಬೇಡಿ’ ಎಂದು ಅಧಿಕಾರಿಗಳನ್ನು ಕೇಳಿದ ಅವರು, ‘ನಾವು ತರ್ಕಬದ್ಧವಾಗಿ ಮತ್ತು ವೈಜ್ಞಾನಿಕವಾಗಿ ಯೋಚಿಸಬೇಕಾಗಿದೆ’ ಎಂದು ತಿಳಿಸಿದ್ದರೆ.

ಡಾ. ಪ್ರದೀಪ್‌ ಬರೆದ ಪತ್ರ ಸಂದೇಶವನ್ನು ಎಲ್ಲ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು, ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾ ಪರಿಷತ್‌ನ ಸಿಇಒಗಳಿಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಒಮೈಕ್ರಾನ್ ಆತಂಕ; ಲಭ್ಯವಿರುವ ಸಾಕ್ಷ್ಯಗಳಿಂದ ಸಾರ್ವಜನಿಕ ಆರೋಗ್ಯದ ಕಣ್ಣೋಟ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...