Homeಮುಖಪುಟಜಾಮಿಯಾ ಮಿಲ್ಲಿಯಾ ಸೇರಿದಂತೆ ವಿದೇಶಿ ಫಂಡಿಂಗ್ ಪರವಾನಗಿ ಕಳೆದುಕೊಂಡ 12,000 ಎನ್‌ಜಿಒಗಳು!

ಜಾಮಿಯಾ ಮಿಲ್ಲಿಯಾ ಸೇರಿದಂತೆ ವಿದೇಶಿ ಫಂಡಿಂಗ್ ಪರವಾನಗಿ ಕಳೆದುಕೊಂಡ 12,000 ಎನ್‌ಜಿಒಗಳು!

- Advertisement -
- Advertisement -

ಸಂತ ಮದರ್ ತೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಗೆ ಪರವಾನಗಿಯನ್ನು ನವೀಕರಿಸಲು ನಿರಾಕರಿಸಿದ ಕೆಲವೇ ದಿನಗಳ ನಂತರ 6,000 ಕ್ಕೂ ಹೆಚ್ಚು ಎನ್‌ಜಿಒಗಳು ಮತ್ತು ಇತರ ಸಂಸ್ಥೆಗಳಿಗೆ ವಿದೇಶದಿಂದ ನಿಧಿಯನ್ನು ಪಡೆಯಲು ಅಗತ್ಯವಿದ್ದ ಪರವಾನಗಿ (ಎಫ್‌ಸಿಆರ್‌ಎ) ರಾತ್ರೋರಾತ್ರಿ ಮುಗಿದಿದೆ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯ ಶನಿವಾರ ಹೇಳಿದೆ.

6,000 ಕ್ಕೂ ಹೆಚ್ಚು ಎನ್‌ಜಿಒಗಳು ಅಥವಾ ಸಂಸ್ಥೆಗಳು ತಮ್ಮ ಪರವಾನಗಿಗಳನ್ನು ನವೀಕರಿಸಲು ಅರ್ಜಿ ಸಲ್ಲಿಸಿಲ್ಲ ಎಂದು ಒಕ್ಕೂಟ ಸರ್ಕಾರದ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಮದರ್‌ ತೆರೇಸಾರ ಮಿಷನರೀಸ್‌ ಬ್ಯಾಂಕ್‌ ಖಾತೆಗಳ ಸ್ಥಗಿತ 

“ಗಡುವಿನ ಮೊದಲು ಅರ್ಜಿ ಸಲ್ಲಿಸಲು ಜ್ಞಾಪನೆಗಳನ್ನು ಕಳುಹಿಸಲಾಗಿದೆ. ಆದರೆ ಅನೇಕ ಎನ್‌ಜಿಒಗಳು ಹಾಗೆ ಅರ್ಜಿ ಸಲ್ಲಿಸಿಲ್ಲ. ಹೀಗಾದರೆ ಅನುಮತಿ ನೀಡುವುದು ಹೇಗೆ…ಎಂದು ಅಧಿಕಾರಿಯೊಬ್ಬರು ಪ್ರಶ್ನಿಸಿದ್ದಾರೆ” ಎಂದು ಸಚಿವಾಲಯದ ಅಧಿಕಾರಿಗಳನ್ನು ಉಲ್ಲೇಖಿಸಿ ಎನ್‌ಡಿಟಿವಿ ವರದಿ ಮಾಡಿದೆ.

ಆಕ್ಸ್‌ಫ್ಯಾಮ್ ಇಂಡಿಯಾ ಟ್ರಸ್ಟ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ಭಾರತೀಯ ವೈದ್ಯಕೀಯ ಸಂಘ ಮತ್ತು ಕುಷ್ಠರೋಗ ಮಿಷನ್ ಸೇರಿದಂತೆ, ಕಳೆದ ಕೆಲವು ತಿಂಗಳುಗಳಲ್ಲಿ ಪರವಾನಗಿ ಅವಧಿ ಮುಗಿದಿರುವ ಒಟ್ಟು 12,000 ಕ್ಕೂ ಹೆಚ್ಚು NGO ಗಳು ತಮ್ಮ FCRA ಪರವಾನಗಿಗಳನ್ನು ಕಳೆದುಕೊಂಡಿವೆ.

ಈ ಪಟ್ಟಿಯಲ್ಲಿ ಕ್ಷಯರೋಗ ಅಸೋಸಿಯೇಷನ್ ​​ಆಫ್ ಇಂಡಿಯಾ, ಇಂದಿರಾ ಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ ಮತ್ತು ಇಂಡಿಯಾ ಇಸ್ಲಾಮಿಕ್ ಕಲ್ಚರಲ್ ಸೆಂಟರ್ ಸೇರಿವೆ.

ಇದನ್ನೂ ಓದಿ:ಚಂಡೀಗಢ ಚುನಾವಣೆ: ವಿವಾದಿತ ಕೃಷಿ ಕಾಯ್ದೆಗಳ ರದ್ದುಗೊಳಿಸಿದ ಬಳಿಕ ಬಿಜೆಪಿಗೆ ಮೊದಲ ಮುಖಭಂಗ

ಆಕ್ಸ್‌ಫ್ಯಾಮ್ ಇಂಡಿಯಾವು ಎಫ್‌ಸಿಆರ್‌ಎ ಪ್ರಮಾಣಪತ್ರಗಳ ಅವಧಿ ಮುಗಿದಿರುವ ಎನ್‌ಜಿಒಗಳ ಪಟ್ಟಿಯಲ್ಲಿದೆ ಮತ್ತು ನೋಂದಣಿ ರದ್ದುಗೊಂಡವರ ಪಟ್ಟಿಯಲ್ಲಿಲ್ಲ.

ಭಾರತದಲ್ಲಿ ಈಗ ಕೇವಲ 16,829 ಎನ್‌ಜಿಒಗಳು ಎಫ್‌ಸಿಆರ್‌ಎ ಪರವಾನಗಿಯನ್ನು ಹೊಂದಿವೆ. ಅದನ್ನು ನಿನ್ನೆ ಮಾರ್ಚ್ 31, 2022 ರವರೆಗೆ ನವೀಕರಿಸಲಾಗಿದೆ. ಶುಕ್ರವಾರ ಎನ್‌ಜಿಒಗಳ ಎಫ್‌ಸಿಆರ್‌ಎ ನೋಂದಣಿಯ ಸಿಂಧುತ್ವವನ್ನು ಮಾರ್ಚ್ 31 ರವರೆಗೆ ಮೂರು ತಿಂಗಳವರೆಗೆ ವಿಸ್ತರಿಸಿದೆ.

ಅದಾಗ್ಯೂ ಮದರ್‌ ಥೆರೇಸಾ ಅವರ ಮಿಷನರೀಸ್ ಆಫ್ ಚಾರಿಟಿಯ ಎಫ್‌ಸಿಆರ್‌ಎ ನವೀಕರಣ ಅರ್ಜಿಗಳನ್ನು ಒಕ್ಕೂಟ ಸರ್ಕಾರವು ತಿರಸ್ಕರಿಸಿದೆ. ಅವರ ಪರವಾನಗಿಯನ್ನು ನವೀಕರಿಸದಿರಲು ಗೃಹ ಸಚಿವಾಲಯವು “ಪ್ರತಿಕೂಲ ವಿಷಯಗಳನ್ನು” ಉಲ್ಲೇಖಿಸಿದೆ.

ಮಿಷನರೀಸ್‌‌ ಆಫ್‌ ಚಾರಿಟಿ ಯುವತಿಯರನ್ನು ಮತಾಂತರಿಸಲು ಯತ್ನಿಸಿಸುತ್ತಿದೆ ಎಂದು ಗುಜರಾತ್‌ನಲ್ಲಿ ದೂರು ದಾಖಲಾದ ವಾರಗಳ ನಂತರ ಒಕ್ಕೂಟ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಜೊತೆಗೆ ನಿರ್ಧಾರವನ್ನು ಪರಿಶೀಲಿಸುವ ಮನವಿಯನ್ನು ಗೃಹ ಸಚಿವಾಲಯ ಸ್ವೀಕರಿಸಿಲ್ಲ ಎಂದು ಹೇಳಿದೆ.

ಇದನ್ನೂ ಓದಿ:ವೆಬ್‌ಸೀರೀಸ್‌: ಕರ್ನಾಟಕ ಪೊಲೀಸರಿಂದ ಖಾಸಗಿತನದ ಉಲ್ಲಂಘನೆ; ಮೊದಲ ಸಂಚಿಕೆಗೆ ಹೈಕೋರ್ಟ್‌ ತಡೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ.ಬಂಗಾಳ: ಲೈಂಗಿಕ ದೌರ್ಜ್ಯನ್ಯದ ಆರೋಪದ ಬೆನ್ನಲ್ಲಿ ರಾಜಭವನಕ್ಕೆ ಪೊಲೀಸರಿಗೆ ಪ್ರವೇಶ ನಿಷೇಧಿಸಿದ ಗವರ್ನರ್‌

0
ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ವಿರುದ್ಧ ನಿನ್ನೆ ರಾಜಭವನದ ಮಹಿಳಾ ಉದ್ಯೋಗಿಯೋರ್ವರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿದ್ದರು. ಇದರ ಬೆನ್ನಲ್ಲಿ ರಾಜ್ಯಪಾಲರು ತನಿಖೆಯ ನೆಪದಲ್ಲಿ ಪೊಲೀಸರು ರಾಜಭವನಕ್ಕೆ ಪ್ರವೇಶಿಸದಂತೆ ನಿಷೇಧಿಸಿದ್ದಾರೆ, ಇದಲ್ಲದೆ...