Homeಎಕಾನಮಿಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ...

ಸ್ವಾತಂತ್ರ್ಯ ನಂತರ ಇದೇ ಮೊದಲ ಬಾರಿಗೆ 6 ವರ್ಷದಲ್ಲಿ 90 ಲಕ್ಷ ಉದ್ಯೋಗ ಕುಸಿತ…

- Advertisement -
- Advertisement -

ಕೃಪೆ: ದಿ ಇಂಡಿಯನ್‌ ಎಕ್ಸ್‌ಪ್ರೆಸ್‌

ಅನುವಾದ: ವೆಂಕಟೇಶ್‌ ಮಾನು

2011-12 ಹಾಗೂ 2017-18 ರ ಅವಧಿಯಲ್ಲಿ ಭಾರತದಲ್ಲಿ ಒಟ್ಟು ಉದ್ಯೋಗದ ಪ್ರಮಾಣ ಕುಗ್ಗಿರುವ ಬಗ್ಗೆ ಇತ್ತೀಚೆಗೆ ದೆಹಲಿಯ ಅಜೀಂ ಪ್ರೇಮಜಿ ವಿಶ್ವವಿದ್ಯಾಲಯದಲ್ಲಿ ‘ಸೆಂಟರ್ ಆಫ್ ಸಸ್ಟೆನೇಬಲ್ ಎಂಪ್ಲಾಯಿಮೆಂಟ್’ ಪ್ರಕಟಿಸಿರುವ ಹಾಗೂ ಸಂತೋಷ ಮೆಹ್ರೋತ್ರಾ ಮತ್ತು ಜಜಾತಿ ಕೆ. ಪರಿದಾ ಬರೆದಿರುವ ಪ್ರಬಂಧದಲ್ಲಿ ಅಭಿಪ್ರಾಯಪಡಲಾಗಿದೆ.

ಸ್ವಾತಂತ್ರ್ಯಾ ನಂತರದ ಭಾರತೀಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಉದ್ಯೋಗ ವಲಯ ಇಷ್ಟೊಂದು ಕುಸಿತ ಕಂಡಿದೆ. ಜವಾಹರ ಲಾಲ್ ನೆಹರು ವಿಶ್ವವಿದ್ಯಾಲಯದ ಹಿಮಾಂಶು ಸೇರಿದಂತೆ ಈ ಪ್ರಬಂಧದ ಲೇಖಕರು ಹಾಗೂ ಇತರೆ ಪರಿಣಿತರು ಸಹ ಈ ರೀತಿಯ ಉದ್ಯೋಗ ಕುಸಿತದ ಪ್ರಮಾಣವನ್ನು ಕಂಡುಕೊಂಡಿದ್ದಾರೆ.

ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, “2011-12 ಹಾಗೂ 2017-18ರ ಅವಧಿಯಲ್ಲಿ 9 ದಶಲಕ್ಷ ಗಳಷ್ಟು (90 ಲಕ್ಷ) ಉದ್ಯೋಗದ ಪ್ರಮಾಣ ಕುಗ್ಗಿದೆ. ಇದು ಸ್ವಾತಂತ್ರ್ಯಾ ನಂತರದ ಭಾರತದ ಇತಿಹಾಸದಲ್ಲೇ ಮೊದಲ ಬಾರಿಯಾಗಿದೆ’ ಎಂದಿದ್ದಾರೆ.

ಮೆಹ್ರೋತ್ರಾ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಪರಿದಾ ಅವರು ಪಂಜಾಬ್‍ನ ಕೆಂದ್ರೀಯ ವಿದ್ಯಾಲಯದ ಪ್ರಾಧ್ಯಾಪಕರು.

ಈ ಅಧ್ಯಯನದ ಫಲಿತಾಂಶವು, ಪ್ರಧಾನಿ ಅವರ ಅರ್ಥಶಾಸ್ತ್ರ ಸಲಹಾ ಸಮಿತಿಯಿಂದ ಲಾವೀಸ್ ಭಂಡಾರಿ ಹಾಗೂ ಅಮರೇಶ ದುಬೈ ನಡೆಸಿದ ಅಧ್ಯಯನಕ್ಕಿಂತ ಭಿನ್ನವಾಗಿದೆ. ಅವರ ಅಧ್ಯಯನದಂತೆ 2011-12 ಅವಧಿಯಲ್ಲಿ 43.3 ಕೋಟಿ ಇದ್ದ ಉದ್ಯೋಗಗಳು 2017-18ರ ಅವಧಿಯಲ್ಲಿ ಅದು 45.7 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಆದರೆ ಮೆಹ್ರೋತ್ರಾ ಹಾಗೂ ಪರಿದಾ ಪ್ರಕಾರ, 2011-12ರ ಅವಧಿಯಲ್ಲಿ 47.4 ಕೋಟಿ ಉದ್ಯೋಗಗಳಿದ್ದು  2017-18ರ ಅವಧಿಯಲ್ಲಿ ಅದು 46.5 ಕೋಟಿಗಿಳಿದಿವೆ. ಅಂದರೆ ಜನಸಂಖ್ಯೆ ಏರುತ್ತಲೇ ಇದ್ದರೆ ಮೊದಲ ಬಾರಿಗೆ ಉದ್ಯೋಗಗಳಲ್ಲಿ ಇಳಿಕೆ ಕಂಡುಬಂದಿದೆ.

ಆಗಸ್ಟ್ 1ರ  ಮಿಂಟ್ ಪತ್ರಿಕೆಯಲ್ಲಿ ಹಿಮಾಂಶು ಅಭಿಪ್ರಾಯಪಟ್ಟಿರುವಂತೆ “2011-12ರ ಅವಧಿಯಲ್ಲಿ 472.5 ದಶಲಕ್ಷ ದಷ್ಟು ಉದ್ಯೋಗ ಕುಸಿತ ಕಂಡು ಬಂದಿದೆ. ನಂತರದ 6 ವರ್ಷಗಳ ಅವಧಿಯಲ್ಲಿ 15 ದಶಲಕ್ಷ ಉದ್ಯೋಗಗಳು ಕುಂಠಿತಗೊಂಡಿವೆ. ಅಂದರೆ, 2011-12 ಹಾಗೂ 2017-18ರ ಅವಧಿಯ ಪ್ರತಿ ವರ್ಷದಲ್ಲೂ 26 ಲಕ್ಷದಷ್ಟು ಉದ್ಯೋಗಗಳು ನಷ್ಟ ಹೊಂದುತ್ತಾ ಬಂದಿವೆ.

ಈ ಎರಡೂ ಅಧ್ಯಯನಗಳ ಮಧ್ಯೆ ಸಾಕಷ್ಟು ವ್ಯತ್ಯಾಸಗಳಿವೆ. 2004-05, 2011-12 ಹಾಗೂ ಪಿ.ಎಲ್.ಎಫ್.ಎಸ್-2017-18ರ ಅನ್ವಯ ಉದ್ಯೋಗ ಹಾಗೂ ನಿರುದ್ಯೋಗ ಸಮೀಕ್ಷೆಗಾಗಿ “ನ್ಯಾಷನಲ್ ಸ್ಯಾಂಪಲ್ ಸರ್ವೆ ಆರ್ಗಾನೈಸೆಷನ್’ ನೀಡಿದ ಅಂಕಿ-ಅಂಶಗಳು ಈ ಎರಡೂ ಅಧ್ಯಯನಗಳಿಗೆ ಆಧಾರವಾಗಿವೆ. ಭಂಡಾರಿ ಹಾಗೂ ದುಬೈ ಪ್ರಕಾರ 40 ದಶಲಕ್ಷ ಉದ್ಯೋಗಗಳ ವ್ಯತ್ಯಾಸವಿದೆ. ಆದರೆ, ಮೆಹ್ರೋತ್ರಾ ಹಾಗೂ ಪರಿದಾ ಮತ್ತು ಹಿಮಾಂಶು ನಡೆಸಿದ ಅಧ್ಯಯನಗಳ ಫಲಿತಾಂಶಗಳು ಭಿನ್ನವಾಗಿವೆ.  ಏಕೆ ಹೀಗೆ ಎಂಬುದಕ್ಕೆ ಬಹುಶಃ ಎರಡು ಕಾರಣಗಳಿರಬಹುದು.

ಇಡೀ ದೇಶದ ಒಟ್ಟು ಜನಸಂಖ್ಯೆಯನ್ನು ಪರಿಗಣಿಸಿ ಒಟ್ಟು ಉದ್ಯೋಗಗಳ ಸಂಖ್ಯೆಯನ್ನು ಅಂದಾಜಿಸಿರಬಹುದು. ಅತಿ ಹೆಚ್ಚಿನ ಜನಸಂಖ್ಯೆಯು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಗಳ ಸಂಖ್ಯೆಯನ್ನು ನೀಡುತ್ತದೆ. ಭಂಡಾರಿ ಹಾಗೂ ದುಬೈ ಆವರು 2017-18ರಲ್ಲಿ ಭಾರತದ ಜನಸಂಖ್ಯೆಯನ್ನು 1.36 ಶತಕೋಟಿ ಎಂದು ಪರಿಗಣಿಸಿದ್ದಾರೆ. ಮೆಹ್ರೋತ್ರಾ ಹಾಗೂ ಪರಿದಾ ಅವರು 1.35 ಶತಕೋಟಿ ಎಂದು ಪರಿಗಣಿಸಿದ್ದಾರೆ. 2017-18ರಲ್ಲಿ ವಿಶ್ವಬ್ಯಾಂಕ್ 1.33 ಶತಕೋಟಿ ಎಂದಿದ್ದರೆ, ಹಿಮಾಂಶು-ಸರಕಾರಿ ಅಧಿಕಾರಿಗಳ ಜಿಡಿಪಿ ಅನ್ವಯ-1.31 ಶತಕೋಟಿ ಜನಸಂಖ್ಯೆ ಇದೆ ಎಂದು ಪರಿಗಣಿಸಿದೆ.

ಭಾರತದ ಜನಸಂಖ್ಯೆ ಬಗ್ಗೆ ಇಷ್ಟೊಂದು ಗೊಂದಲಗಳಿವೆ. ಏಕೆಂದರೆ, 2011ರ ಜನಗಣತಿ ಅನ್ವಯ ಇಂದಿಗೂ ಜನಸಂಖ್ಯೆ ಕುರಿತು ನಿಖರ ಮಾಹಿತಿ ನೀಡಿಲ್ಲ. ನಿಯಮದಂತೆ, ಸರ್ಕಾರವು 2016ರಲ್ಲಿಯೇ ಬಿಡುಗಡೆ ಮಾಡಬೇಕಿತ್ತು.

ಭಂಡಾರಿ ಹಾಗೂ ದುಬೈ ಅಧ್ಯಯನದಲ್ಲಿ, ಉದ್ಯೋಗಗಳ ಸಾಧ್ಯತೆಯ ಪ್ರಧಾನ ಮೂಲಾಂಶಗಳನ್ನು ಪರಿಗಣಿಸಿ, ನಂತರದ ಪೂರಕ ಸಾಧ್ಯತೆಗಳ ಮೂಲಗಳನ್ನು ಕಡೆಗಣಿಸಿರುವುದು ಈ ವ್ಯತ್ಯಾಸಗಳಿಗೆ ಕಾರಣ ಇರಬಹುದು. ಅದಲ್ಲದೇ ಅವರಿಬ್ಬರೂ ಪ್ರಧಾನಿ ಕಾರ್ಯಾಲಯದಲ್ಲಿ ಕೆಲಸ ಮಾಡುವುದರಿಂದ ಅಲ್ಲಿನ ಅಂಕಿ ಸಂಖ್ಯೆಗಳು ಉತ್ರೇಕ್ಷೆಯೂ ಇರಬಹುದೆಂಬ ಆರೋಪ ಸಹ ಕೇಳಿಬಂದಿದೆ.

ಈ ಸರ್ವೇಗಳಲ್ಲಿ ಒಬ್ಬ ವ್ಯಕ್ತಿಯು ವರ್ಷದ 365 ದಿನಗಳಲ್ಲಿ 182 ದಿನ ಕೆಲಸ ಮಾಡಿದರೆ ಆತನನ್ನು ಉದ್ಯೋಗಿ ಎಂದು ಪರಿಗಣಿಸುತ್ತದೆ. ಅಂದರೆ ಆರು ತಿಂಗಳು ಕೆಲಸ ಮಾಡಿ ಇನ್ನು ಆರು ತಿಂಗಳು ಕೆಲಸವಿಲ್ಲದಿದ್ದರೂ ಸಹ ಅವರು ಉದ್ಯೋಗಿಗಳ ಪಟ್ಟಿಗೆ ಸೇರುತ್ತಾರೆ. ಹಾಗಾಗಿ ಮೇಲಿನ ಅರ್ಥಶಾಸ್ತ್ರಜ್ಞರು ಊಹೆ ಮಾಡಿದ್ದಕ್ಕಿಂತಲೂ ಹೆಚ್ಚಿನ ಉದ್ಯೋಗ ಕಡಿತವಾಗಿದೆ ಎಂದು ಹಲವಾರು ಜನ ಅಭಿಪ್ರಾಯಪಡುತ್ತಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...