| ಸೋಮಶೇಖರ್ ಚಲ್ಯ |
ಭಾರತದ ಸ್ವಾತಂತ್ರ್ಯ ಚಳುವಳಿಯ ಹಾದಿಯಲ್ಲಿ ಶಾಂತಿ ಮತ್ತು ಅಹಿಂಸೆಗಳೇ ಧ್ಯೇಯವಾಗಿ ಬೆಳೆದುಬಂದಿದ್ದವು. ಹಿಂಸೆಯಿಂದ ಯಾವುದನ್ನೂ ಗೆಲ್ಲಲಾಗುವುದಿಲ್ಲ, ಶಾಂತಿಯಿಂದ ಹೋರಾಡೋಣ ಸ್ವಾತಂತ್ರ್ಯ ಪಡೆಯೋಣ ಎಂಬುದು ಗಾಂಧಿಯವರ ಉದ್ದೇಶವಾಗಿತ್ತು. ಇದು ಇಡೀ ಜಗತ್ತಿಗೆ ಭಾರತವೊಂದು ಶಾಂತಿಪ್ರಿಯ ರಾಷ್ಟ್ರವೆಂಬುದನ್ನು ತೋರಿಸಿತ್ತು.
ಅಂತೆಯೇ ನಮ್ಮ ಸಂವಿಧಾನದ ಪ್ರಸ್ತಾವನೆಯಲ್ಲೂ ಎಲ್ಲರನ್ನು ಸಮಭಾವದಿಂದ ಕಾಣುವ, ಅಭಿವ್ಯಕ್ತಿ ಮತು ವ್ಯಕ್ತಿ ಗೌರವದೊಂದಿಗೆ ಭಾತೃಭಾವನೆಯನ್ನು ಬೆಳೆಸುವುದು ನಮ್ಮ ಆಧ್ಯತೆಯೆಂದು ¨ರೆದುಕೊಂಡಿದ್ದೇವೆ. ಆದರೆ ಗಾಂಧಿ ಹೇಳಿದ ಶಾಂತಿ ಮಂತ್ರವನ್ನು ಇತಿಹಾಸದ ಪುಟದಲ್ಲಿಯೂ, ಸಂವಿಧಾನದ ಆಶಯವನ್ನು ಅದರ ಪ್ರಸ್ತಾವನೆಯಲ್ಲೂ ಮಾತ್ರ ಓದಿಕೊಳ್ಳುವಂತಹ ಅಧೋಗತಿಗೆ ಭಾರತವನ್ನು ಕೊಂಡೊಯ್ಯಲಾಗುತ್ತಿದೆ.
ಜೂನ್ 12ರ ಬುಧವಾರ ಪ್ರಕಟಗೊಂಡ ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯಲ್ಲಿ ಭಾರತ ಸ್ಥಾನ ಕುಸಿಯುತ್ತಾ ಸಾಗಿದೆ. 163 ರಾಷ್ಟ್ರಗಳ ಪೈಕಿ ಭಾರತ 141ನೇ ಸ್ಥಾನವನ್ನು ಪಡೆದುಕೊಂಡಿರುವುದು ಆಘಾತಕಾರಿ ಸಂದೇಶವನ್ನು ರವಾನಿಸಿದೆ. ಬಹಶಃ ಶಾಂತಿ ರಾಷ್ಟ್ರಗಳ ಪಟ್ಟಿಯೆಂದು ಕರೆಯುದಕ್ಕಿಂತ ಅಶಾಂತಿ ರಾಷ್ಟ್ರಗಳ ಪಟ್ಟಿ ಎಂದು ನೋಡಿದರೆ ಭಾರತ ಮೊದಲ 22ನೇ ಸ್ಥಾನದಲ್ಲಿದೆ. ಕಳೆದ ವರ್ಷ 136ನೇ ಸ್ಥಾನ ಪಡೆದುಕೊಂಡಿದ್ದ ಭಾರತ ಈ ಭಾರಿ 141ನೇ ಸ್ಥಾನ್ಕಕೆ ಕುಸಿದಿದೆ. ಇದು ದೇಶ ಎಂತಹ ಅಸಹನೆ, ಹಿಂಸಾಚಾರದೆಡೆಗೆ ಸಾಗಿದೆ ಎಂಬುದನ್ನು ತೋರಿಸುತ್ತಿದೆ. ಇದಕ್ಕೆ ಇತ್ತೀಚಿನ ಹಲವು ವಿದ್ಯಾಮಾನಗಳು ಸಾಕ್ಷಿಯಾಗಿವೆ.
ಗಿರೀಶ್ ಕಾರ್ನಾಡರು ನಿಧನರಾದ ಸಂದರ್ಭದಲ್ಲಿ ಅವರ ಸಾವನ್ನು ಸಂಭ್ರಮಿಸುವ ವಿಕೃತಿಯನ್ನು ಮೆರೆಯುವ ಮಟ್ಟಿಗೆ ಜನರ ಆಲೋಚನೆಗಳು ವಿಷಕಾರಿಯಾಗುತ್ತಿವೆ. ಗೌರಿ ಲಂಕೇಶ್ ಹತ್ಯೆಗೆ ಅಂತಾರಾಷ್ಟ್ರೀಯ ಮಟ್ಟಿದಲ್ಲಿ ಮನಸ್ಸುಗಳು ಮರುಗಿದ್ದವು. ಆದರೆ ನಮ್ಮದೇ ದೇಶದ/ರಾಜ್ಯದ ಕೆಲವು ಹೀನ ಮನಸ್ಸುಗಳು ಗೌರಿಯವರ ಸಾವನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದ್ದವು.
ಭಾರತದ ಸಂಸ್ಕøತಿಯೆಂದರೆ ಸಾವಿಗೆ ಮರುಗುವ, ನೋವಿಗೆ ಸ್ಪಂದಿಸುವುದಾಗಿತ್ತು. ಸರ್ವಜನಾಂಗದ ಶಾಂತಿಯ ತೋಟವಾಗಬೇಕಿದ್ದ ನಮ್ಮ ರಾಷ್ಟ್ರ ಇಂದು ಕೋಮು ಭಾವನೆಯಿಂದ ಕ್ರೌರ್ಯವನ್ನು ತುಂಬಿಕೊಳ್ಳುತ್ತಿದೆ. ಬಿಜೆಪಿ ಮತ್ತು ಸಂಘಪರಿವಾರಗಳು ಯಾರೊಬ್ಬರೂ ಮೃತಪಟ್ಟರೂ, ಹಿಂದೂಗಳ ಹತ್ಯೆಯೆಂದು ಬೊಬ್ಬೆ ಹೊಡೆಯುತ್ತಾ ಮುಸ್ಲಿಮರನ್ನು ಭಯೋತ್ಪಾದಕರೆಂದು ಬಿಂಬಿಸಿ ಕೋಮು ವಿಷವನ್ನು ಭಿತ್ತುತ್ತುದ್ದಾರೆ. ಇದೇ ಸಂದರ್ಭದಲ್ಲಿ ಯಾವುದೇ ಮುಸ್ಲಿಮನಾಗಲೀ/ಪ್ರಗತಿಪರರಾಗಲಿ ಅಥವಾ ಕೋಮು ವಿರೋಧಿಯಾಗಲೀ ಸಂಘಪರಿವಾರದ ಅಥವಾ ಬಿಜೆಪಿಯ ಕಾರ್ಯಕರ್ತರು ಮರಣ ಹೊಂದಿದ ಸಂದರ್ಭದಲ್ಲಿ ಅಬ್ಬಾ ಸತ್ತನೆಂದು ಅವರ ಸಾವನ್ನು ಸಂಭ್ರಮಿಸಿದ ಉದಾಹಣೆಗಳಿಲ್ಲ. ಆದರೆ ತಮ್ಮ ವಿರೋಧಿಗಳ ಸಾವನ್ನು ಸಂಭ್ರಮಿಸುವ ಅನಾಗರಿಕ ಸಂಸ್ಕøತಿ ಸಂಘಪರಿವಾರದಲ್ಲಿ ಬೆಳೆದು ಇಂದು ರಾಷ್ಟ್ರವನ್ನೇ ವ್ಯಾಪಿಸಿದೆ.
ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ನಡುವೆ ಶುರುವಾದ ರಾಜಕೀಯ ಹಿಂಸಾಚಾರ ಇಂದಿಗೂ ನಿಂತಿಲ್ಲ. ಚುನಾವಣಾ ಫಲಿತಾಂಶದ ನಂತರ ಒಟ್ಟು 13 ಜನ ಈ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಈ ರಾಜಕೀಯ ಜಗಳವನ್ನು ಕೋಮುಗಲಭೆಯಾಗಿ ತಿರುಚುವ ಹುನ್ನಾರನ್ನು ಬಿಜೆಪಿ ನಾಯಕರು ಎಣೆಯುತ್ತಿದ್ದಾರೆ. ಸದಾ ಕೋಮುವಾದ, ಗಲಭೆ, ಹತ್ಯೆಗಳನ್ನೇ ರಾಜಕೀಯ ದಾಳವಾಗಿಸಿಕೊಂಡಿರುವ ಬಿಜೆಪಿ ಮತ್ತು ಸಂಘಪರಿವಾರ ಗಾಂಧಿ ಹತ್ಯೆ ಮಾಡಿದ ಗೂಡ್ಸೆಯನ್ನು ಪೂಜಿಸುವ,
ಗೋದ್ರಾ ಹತ್ಯೆ, ಬಾಬರಿ ಮಸೀದಿ, ಬಾಬಾಬುಡನ್‍ಗಿರಿ, ಶಬರಿಮಲೆಗಳಂತ ಇಶ್ಯೂಗಳನ್ನು ಗಲಭೆ, ಹಿಂಸಾಚಾರಗಳಿಗೆ ತಿರುಗಿಸಿ ರಾಜಕೀಯ ಲಾಭ ಪಡೆಯುತ್ತಾ ದೇಶದಲ್ಲಿ ಅಶಾಂತಿ ಮತ್ತು ಅಪಾಯಕಾರಿ ವಾತಾವರಣವನ್ನು ಸೃಷ್ಟಿಮಾಡುತ್ತಿವೆ.
ಪ್ರಪಂಚಕ್ಕೇ ಪ್ರೀತಿ, ಶಾಂತಿಯಯ ಸಂದೇಶವನ್ನು ಸಾರಿದ ಬುದ್ದ ಮತ್ತು ಗಾಂಧಿ ಹುಟ್ಟಿದ ದೇಶವಿಂದು ದ್ವೇಷ, ಅಸಹಿಷ್ಣುತೆ, ಹಿಂಸಾಚಾರದ ದಳ್ಳುರಿಯಲ್ಲಿ ಸಿಕ್ಕು ನಲುಗುತ್ತಿದೆ. “ಬಿತ್ತಿದನ್ನೇ ಫಸಲಾಗಿ ಪಡೆಯುತ್ತೇವೆ. ಹಾಗಾಗಿ ಬಿತ್ತುವುದಾದರೆ ಮಾನವೀಯತೆ ಮತ್ತು ಸೌಹಾರ್ದತೆಯನ್ನು ಬಿತ್ತೋಣ.” ಎಂಬ ಮಾಜಿ ಸಿಎಂ ಸಿದ್ಧರಾಮಯ್ಯವನರ ಟ್ವೀಟ್ ಸಾವನ್ನು ಸಂಭ್ರನಿಸುವ, ದ್ವೇಷವನ್ನೇ ದಾಳ ಮಾಡಿಕೊಂಡಿರುವವರ ಮನಮುಟ್ಟುವಂತದ್ದು. ಆದರೆ ಅದಕ್ಕೆ ಅವರು ಸತ್ತಾಗ ದೀಪಾವಳಿ ಆಚರಿಸುತ್ತೇವೆ ಎಂದು ಪ್ರತ್ಯುತ್ತರ ಕೊಟ್ಟವರ ಮನಸ್ಥಿತಿಯನ್ನು ತಿದ್ದುವುದಾದರೂ ಹೇಗೆ?
ಮತ್ತೊಂದು ವಿಚಾರವೆಂದರೆ 2008ರಿಂದ ಇಲ್ಲಿಯವರೆಗೆ ಐಸ್‍ಲ್ಯಾಂಡ್ ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಹಾಗೆಯೇ ಭಯೋತ್ಪಾದಕ ರಾಷ್ಟ್ರವೆಂದು ಬಿಂಬಿತವಾಗಿರುವ ಪಾಕಿಸ್ಥಾನ 153ನೇ ಸ್ಥಾನದಲ್ಲಿದೆ. ಭಾರತದ 141ನೇ ಸ್ಥಾನಕ್ಕೂ ಪಾಕಿಸ್ತಾನದ ಸ್ಥಾನಕ್ಕೂ ಅಂತಹ ಅಂತರವೇನು ಇಲ್ಲ. ಭಾರತವನ್ನು ಪಾಕಿಸ್ತಾನದೆಡೆಗೆ ಸಾಗಲು ಬಿಡದೆ, ಅದನ್ನು ಐಸ್‍ಲ್ಯಾಂಡಿನೆಡೆಗೆ ಸ್ನೇಹ, ಪ್ರೀತಿ, ಸಹಭಾಳ್ವೆ, ಸೌಹಾದರ್ತೆಯ ಮೂಲಕ ಕೊಂಡೊಯ್ಯುವ ಹೊಣೆ ಪ್ರತಿಯೊಬ್ಬ ಭಾರತೀಯರದು.


