Homeಅಂತರಾಷ್ಟ್ರೀಯಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಹೀಗಾದರೆ ಹೇಗೆ..? 

ಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಪಂದ್ಯದಲ್ಲಿ ಹೀಗಾದರೆ ಹೇಗೆ..? 

- Advertisement -
- Advertisement -

| ಅನಿಲ್ ಕುಮಾರ್ ಗುನ್ನಾಪುರ್ |

ಇಂದು ಭಾರತ ಪಾಕಿಸ್ತಾನ ನಡುವಿನ ವಿಶ್ವಕಪ್ ಕ್ರಿಕೆಟ್ ನ ಲೀಗ್ ಹಂತದ ಪಂದ್ಯವಿದೆ. ಕೋಟ್ಯಾಂತರ ಅಭಿಮಾನಿಗಳು ಈ ರಸದೌತಣವನ್ನು ಸವಿಯಲು ಕಾತುರರಾಗಿದ್ದಾರೆ. ಮಳೆ ಬರದಿದ್ದರೆ ಅತ್ಯುತ್ತಮ ಪಂದ್ಯವಾಗಲಿದೆ. ಆದರೆ ಇದೇ ಸಂದರ್ಭದಲ್ಲಿ ಕೆಲ ಮಾಧ್ಯಮಗಳು ಇದನ್ನು ಭಾರತ ಪಾಕ್ ನಡುವಿನ ಯುದ್ಧವೆಂಬಂತೆ ಬಿಂಬಿಸುತ್ತಿವೆ. ಪಾಕಿಸ್ತಾನ ಹಲವು ವಿಚಾರಗಳಲ್ಲಿ ತಪ್ಪು ಮಾಡಿದೆ. ಅದಕ್ಕಾಗಿ ಕಾನೂನು ಮತ್ತು ರಾಜತಾಂತ್ರಿಕ ರೀತಿಯ ಕ್ರಮಗಳಿಗೆ ಮುಂದಾಗಬೇಕೆ ಹೊರತು ಕ್ರೀಡಿಯಲ್ಲಿ ಯುದ್ದ ತರುವುದು ಸರಿಯಲ್ಲ. ಕ್ರೀಡೆ ಜಗತ್ತಿನ ಜನರ ಮನಸ್ಸುಗಳನ್ನು ಬೆಸೆಯುವ ಉದ್ದೇಶ ಹೊಂದಿದೆ. ಅದು ಸಾಧ್ಯವಾಗಲಿ ಎಂದು ಸರಿಯಾಗಿ ಎರಡು ವರ್ಷಗಳ ಹಿಂದೆ ಅನಿಲ್ ಕುಮಾರ್ ಗುನ್ನಾಪುರ್ ಬರೆದಿದ್ದ ಹೃದಯಸ್ಪರ್ಶಿ ಬರಹವನ್ನು ಇಲ್ಲಿ ಮತ್ತೆ ಪ್ರಕಟಿಸುತ್ತಿದ್ದೇವೆ.

ಇಂದಿನ ಭಾರತ -ಪಾಕಿಸ್ತಾನ ಕ್ರಿಕೆಟ್ ಫೈನಲ್  ಪಂದ್ಯದಲ್ಲಿ ಹೀಗಾದರೆ ಹೇಗೆ..? 

ಯಾವುದಾದರೂ ಒಂದು ತಂಡ ಗೆಲ್ಲಲು ಕೊನೆ ಎಸೆತಕ್ಕೆ ಎರಡು ರನ್ ಬೇಕಿದೆ… ಬ್ಯಾಟಿಂಗ್ ಮಾಡಲು ನಿಂತವನಿಗೆ “ಶತಕ” ಗಳಿಸಲು ನಾಲ್ಕು ರನ್ ಬೇಕಿದೆ. ಇನ್ನೇನು ಬೌಂಡರಿ ಹೋಯಿತು ಎನ್ನುವಷ್ಟರಲ್ಲಿ ಎರಡು ರನ್ ಓಡಿ ಗೆಲುವಿನ ನಗೆ ಬೀರಿದ ತಂಡದ ಖುಷಿ ಒಂದು ಕಡೆಯಾದರೆ “ಗೆಲುವಿಗೆ ಕಾರಣನಾದ ಬ್ಯಾಟ್ಸ್ ಮನ್” ಎರಡೇ ರನ್ ಗಳಿಂದ ಶತಕ ತಪ್ಪಿಸುಕೊಳ್ಳುತ್ತಾನೆಂದು ಅಭಿಮಾನಿಗಳು ಕೈಕೈ ಹಿಚಿಕೊಳ್ಳುತ್ತಿರುವ ಸಂದರ್ಭದಲ್ಲಿ…. ಒಂದು ಅಚ್ಚರಿ ನಡೆದೇ ಬಿಡುತ್ತದೆ.

ಆ ಫೀಲ್ಡರ್….  ಈಗಾಗಲೇ ಎರಡು ರನ್ ಓಡಿ ಗೆಲುವಿನ ಸಂಭ್ರಮದಲ್ಲಿ ತೇಲುತ್ತಿದ್ದವರಿಗೆ…. ಒಂದು ಟ್ವಿಸ್ಟ್ ಕೊಟ್ಟು ಇಡೀ ಅಭಿಮಾನಿಗಳ ಮನದಲ್ಲಿ ಮತ್ತೊಂದು ಕೋಲಾಹಲ ಎಬ್ಬಿಸಿ ಬಿಡುತ್ತಾನೆ. ಸಲೀಸಾಗಿ ತನ್ನ ಸೇರುತ್ತಿದ್ದ ಬಾಲ್ ನ್ನು ಬೇಕೆಂತಲೇ ಬೌಂಡರಿಗೆ ಬಿಟ್ಟು ಬಿಡುತ್ತಾನೆ.

ಮತ್ತೆರೆಡು ರನ್ ಪಡೆದ ಬ್ಯಾಟ್ಸ್ ಮನ್  “ಶತಕ” ಭಾರಿಸಿ ಕುಣಿದಾಡುತ್ತಾನೆ. ನಂತರ “ಮ್ಯಾನ್ ಆಪ್ ದಿ ಮ್ಯಾಚ್” ಪಡೆದು ಅಭಿಪ್ರಾಯ ಹಂಚಿಕೊಳ್ಳುವಾಗ ಹೇಳುತ್ತಾನೆ.  ನಮ್ಮ ಮನೆಯಲ್ಲಿ ನನ್ನ ತಂದೆ ತಿನ್ನಲು ಹಣ್ಣು ಹಂಪಲು ತಂದಾಗ ನನ್ನ ಸಹೋದರ  ತನ್ನ ಪಾಲನ್ನೂ ನನಗೆ ಕೊಟ್ಟು ಖುಷಿ ಗೊಳಿಸುತ್ತಿದ್ದ… ಆದರಿಂದು ನಮ್ಮಣ್ಣ ನಾನು ಕಾರಣಾಂತರಗಳಿಂದ  ದೂರಾಗಿದ್ದೇವೆ. ಹೌದು. ಇಂದಲ್ಲಾ ನಾಳೆ ನಾವು ಒಂದಾಗುತ್ತೇವೆ. ನಮ್ಮ ನಡುವೆ ಮತ್ತಷ್ಟೂ ಕಂದಕ ಸೃಷ್ಟಿಮಾಡಿ ಬೇಳೆ ಬೇಯಿಸಿಕೊಳ್ಳಲು ಬರುವವರಿಗೆ ನಾವು ಎಂದಿಗೂ ಅವಕಾಶ ಕೊಡುವುದಿಲ್ಲ. ನಮಗೆ ಶಾಂತಿ ಬೇಕಿದೆ. ನೆಮ್ಮದಿ ಬೇಕಿದೆ. ಇವತ್ತು ನನ್ನ ಸಹೋದರನನ್ನು ನೆನಪಿಸಿದ ನಿಮ್ಮ ತಂಡಕ್ಕೆ ನನ್ನ ಅನಂತ ಧನ್ಯವಾದಗಳು.

ನಂತರ.. ಬೌಂಡರಿಗೆ ಬಾಲ್ ಬಿಟ್ಟ ಆಟಗಾರ ತನ್ನ  ಅಭಿಪ್ರಾಯ  ಹೇಳುತ್ತಾನೆ.

ನಾನು ಕೈಯಿಂದ ಬಾಲ್ ಬಿಟ್ಟು ಆಟದ ದೃಷ್ಟಿಯಿಂದ ತಪ್ಪು ಮಾಡಿರಬಹುದು. ಆದರೆ, ನೀವು ಆಗಲೇ ಗೆದ್ದಿದ್ದೀರಿ ನಮಗೆ ಉಳಿದಿರುವುದು ನಿಮ್ಮ ಹೃದಯ ಗೆಲ್ಲುವುದೊಂದೇ ಮಾರ್ಗ… ಕೋಟ್ಯಾಂತರ ಮನಸ್ಸುಗಳನ್ನು ಬೆಸೆಯಬಹುದಾದ ಶಕ್ತಿ ನನ್ನ ಬಳಿ ಬರುತ್ತಿದ್ದ ಪುಟ್ಟ ಬಾಲ್ ಗೆ ಇದೆ ಎಂಬುದು ಆ ಕ್ಷಣ ಹೊಳೆಯಿತು.

ಹೀಗಾಗಿ ನಾವು ಆಡುತ್ತಿರುವುದು ಆಟವೇ ಹೊರತು, ಯುದ್ದವಲ್ಲ ಎಂಬುದು ನಾನು  ತೋರಿಸಬೇಕಿತ್ತು. ನಾನು ಮಾಡಿದ್ದು ತಪ್ಪೇನಿಸಿದರೆ ನಮ್ಮ ತಂಡದವರ ನನಗೆ ಯಾವ ಶಿಕ್ಷೆ ವಿಧಿಸಿದರು ನಾನು ಅಭಿಮಾನದಿಂದ ಸ್ವೀಕರಿಸುತ್ತೇನೆ. ಮತ್ತೂ  ಆ ಸಹೋದರರಿಬ್ಬರೂ ಆದಷ್ಟು ಬೇಗ ಒಂದಾಗಲಿ ಎಂದು ಹಾರೈಸುತ್ತೇನೆ.

ಅಲ್ಲಿಗೆ ಎರಡು ತಂಡದ ಅಭಿಮಾನಿಗಳ ಮನದಲ್ಲಿ ಪುಟ್ಟದೊಂದು ಸ್ನೇಹದ ಸೇತುವೆ ತೆರೆದು ಕೊಂಡಿತು. ಅಭಿಮಾನಿಗಳ ಕಣ್ಣುಗಳು ಒದ್ದೆಯಾಗಿದ್ದವು. ಒಂದು ಕೊನೆ ಎಸೆತ ಇಡೀ ಮನಸ್ಸನ್ನು ಗೆಲ್ಲುವ, ಎರಡು ದೇಶಗಳ ಸಂಬಂಧಗಳನ್ನು ಬೆಸೆಯುವ ಶಕ್ತಿ ಹೊಂದಿದೆ ಎಂಬುದು ಎಲ್ಲರಿಗೂ ತಿಳಿಯಿತು.

ಆಗ ಗೆಲುವಿನ ನಗೆ ಬೀರಿದ್ದು ಎರಡು ದೇಶದ ಅಭಿಮಾನಿಗಳು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...