Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಇಸ್ಕಾನ್‌‌ನ ಈ ಚಿತ್ರ ಉಕ್ರೇನಿದ್ದಲ್ಲ; ದಾರಿ ತಪ್ಪಿಸಿದ ಬಿಟಿವಿ ವರದಿ!

ಫ್ಯಾಕ್ಟ್‌ಚೆಕ್: ಇಸ್ಕಾನ್‌‌ನ ಈ ಚಿತ್ರ ಉಕ್ರೇನಿದ್ದಲ್ಲ; ದಾರಿ ತಪ್ಪಿಸಿದ ಬಿಟಿವಿ ವರದಿ!

- Advertisement -
- Advertisement -

ಯುದ್ಧ ಪೀಡಿತ ಉಕ್ರೇನ್‌ನಲ್ಲಿ ‘ಇಸ್ಕಾನ್‌’ ವತಿಯಿಂದ ಜನರಿಗೆ ಆಹಾರ ಒದಗಿಸಲಾಗುತ್ತಿದೆ ಎಂದು ಪ್ರತಿಪಾದಿಸಿ ಚಿತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಚಿತ್ರದೊಂದಿಗೆ ವೈರಲ್ ಆಗಿರುವ ಬರಹವು ಕೋಮುದ್ವೇಷ ಬಿತ್ತುತ್ತಿದ್ದು, ಹಿಂದೂ ಮತವನ್ನು ಬಿಟ್ಟು ಉಳಿದ ಧರ್ಮಗಳು ಸಹಾಯ ಮಾಡುವ ನೆಪದಲ್ಲಿ ಆಮಿಷ ಒಡ್ಡುತ್ತದೆ ಎಂಬ ಅರ್ಥದಲ್ಲಿ ಈ ಬರಹವನ್ನು ಬರೆಯಲಾಗಿದೆ.

ವೈರಲ್‌ ಚಿತ್ರದ ಜೊತೆಗೆ, “ಉಕ್ರೇನ್‌ನಲ್ಲಿ ಸುಮಾರು 54 ಇಸ್ಕಾನ್ ದೇವಾಲಯಗಳಿಂದ ಹಸಿದವರಿಗೆ ಅನ್ನ ನೀಡಲಾಗುತ್ತಿದ್ದು, ಅಲ್ಲಿ ಅನ್ನ ನೀಡುವ ಮೊದಲು ಅನ್ಯ ಧರ್ಮಿಯರಿಗೆ ನೀವು ನಮ್ಮ ಮತಕ್ಕೆ ಬನ್ನಿ ಎಂದು ಯಾರೂ ಒತ್ತಾಯ ಮಾಡುತ್ತಿಲ್ಲ. ಇದುವೆ ನನ್ನ ಹೆಮ್ಮೆಯ ಸನಾತನ ಮತ” ಎಂಬ ಇತರ ಧರ್ಮಗಳನ್ನು ಕೀಳಾಗಿ ಬಿಂಬಿಸುವ ಬರಹಗಳನ್ನೂ ವೈರಲ್‌ ಮಾಡಲಾಗುತ್ತಿದೆ.

ಡಮರುಗ ಎಂಬ ಬಿಜೆಪಿ ಬೆಂಬಲಿಗ ಪೇಜ್‌ ಒಂದು ಈ ರೀತಿಯ ಪೋಸ್ಟ್‌ ಅನ್ನು ರಚಿಸಿ ಹಂಚಿಕೊಂಡಿದೆ. ಇದೇ ಪ್ರತಿಪಾದನೆಯಿಂದಿಗೆ ಸಾಮಾಜಿಕ ಮಾಧ್ಯಮಗಳು ಹಲವಾರು ಬಳಕೆದಾರರು ಚಿತ್ರವನ್ನು ಹಂಚಿಕೊಂಡಿದ್ದಾರೆ. ಇದನ್ನು ನೀವು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ‘ಮಸೀದಿ ಕಟ್ಟಿಸು’ ಎಂದು ಅಖಿಲೇಶ್‌ಗೆ ವೃದ್ಧ ಛೀಮಾರಿ ಹಾಕಿಲ್ಲ; ಅವರು ಹೇಳಿದ್ದು EVM ಬದಲಾಯಿಸು ಎಂದು

ಕನ್ನಡದ ಸುದ್ದಿ ಮಾಧ್ಯಮ ಬಿಟಿವಿ ಕೂಡಾ ಇದೇ ಚಿತ್ರವನ್ನು ಬಳಸಿ ಸುದ್ದಿಯೊಂದನ್ನು ವರದಿಯೊಂದನ್ನು ಮಾಡಿದೆ. ಈ ಸುದ್ದಿಯಲ್ಲಿ ಬಿಟಿವಿ, “ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದ್ದು, ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿರುವ ಉಕ್ರೇನ್​ ಜನರಿಗೆ ಇಸ್ಕಾನ್ ಸೇವೆ ಸಲ್ಲಿಸುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಉಕ್ರೇನ್​ ಜನರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ. ಸದ್ಯ ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಮೆಚ್ಚುಗೆಯ ಮಹಾಪೂರವೇ ಹರಿಸುತ್ತಿದ್ದಾರೆ” ಎಂದು ಎರಡು ಚಿತ್ರಗಳನ್ನು ಬಳಸಿಕೊಂಡಿದೆ.

ಆರ್ಕೈವ್ ಲಿಂಕ್‌ ಇಲ್ಲಿ ಕ್ಲಿಕ್‌ ಮಾಡಿ

ಫ್ಯಾಕ್ಟ್‌ಚೆಕ್:

ವೈರಲ್ ಫೋಟೊವನ್ನು ನಾನುಗೌರಿ.ಕಾಂ ರಿವರ್ಸ್ ಇಮೇಜ್ ಸರ್ಚ್‌ ಮೂಲಕ ಹುಡುಕಾಡಿದಾಗ ಇಸ್ಕಾನ್ ಸಂಸ್ಥೆಯು ಉಕ್ರೇನ್‌ನಲ್ಲಿ ಆಹಾರ ನೀಡುತ್ತಿದೆ ಎಂದು ವೈರಲ್ ಆದ ಈ ಚಿತ್ರಗಳನ್ನು ಹೋಲುವ ಹಲವು ಫೋಟೊಗಳು ನಮಗೆ ಲಭ್ಯವಾಗಿವೆ.

ಇದರ ಜಾಡನ್ನು ಹಿಡಿದು ನಾನುಗೌರಿ.ಕಾಂ ಮತ್ತಷ್ಟು ಹುಡುಕಾಟ ನಡೆಸಿದಾಗ ಅದು ಇಸ್ಕಾನ್ ಸಂಸ್ಥೆ ತನ್ನ ವೆಬ್ ಸೈಟ್‌ಗಾಗಿ ರೂಪಿಸಿರುವ ಹಳೆಯ ಫೋಟೋ ಎಂದು ಖಚಿತವಾಗಿದೆ.

 

ಸೋಶಿಲ್‌ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತಿರುವ ಫೋಟೊವನ್ನು ಇಸ್ಕಾನ್ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಈ ಫೋಟೊವನ್ನು ಬಳಸಿ ಡೊನೇಟ್ ಮಾಡಿ ಎಂದು ಹಣದ ಮೊತ್ತವನ್ನು ನಮೂದಿಸಿದೆ. ಅದನ್ನು ಇಲ್ಲಿ ನೋಡಬಹುದು.

ಇಸ್ಕಾನ್ ಸಂಸ್ಥೆಯು 2015ರಲ್ಲಿ ಅಪ್‌ಲೋಡ್ ಮಾಡಿದ ಫೋಟೋವನ್ನು ಬಲಪಂಥೀಯ ಪ್ರತಿಪಾದಕ ಡಮರುಗ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ವೈರಲ್ ಪೋಸ್ಟ್‌ನೊಂದಿಗೆ ಹಂಚಿಕೊಳ್ಳಲಾಗಿದೆ.

ಕೂಡಾ ಕೊಲ್ಕತ್ತಾದ ಇಸ್ಕಾನ್‌ ಉಪಾಧ್ಯಕ್ಷ ರಾಧಾರಮಣ್‌ ದಾಸ್ ಎಂಬವರು, “ಇಸ್ಕಾನ್‌ನಲ್ಲಿ 54 ದೇವಾಲಯಗಳು ಇವೆ. ಎಲ್ಲಾ ದೇವಾಲಯಗಳು ಸೇವೆಗೆ ಸನ್ನದ್ಧವಾಗಿದೆ” ಎಂದು ಬರೆದಿದ್ದರು.

ಅವರ ಈ ಮಾತನ್ನು ತಪ್ಪಾಗಿ ತಿಳಿದಿರುವ ಬಿಟಿವಿ, “ಉಕ್ರೇನ್‍ನಲ್ಲಿ ಇಸ್ಕಾನ್ 54 ಕ್ಕೂ ಅಧಿಕ ದೇವಾಲಯಗಳನ್ನು ಹೊಂದಿದ್ದು,  ರಷ್ಯಾ ದಾಳಿಯಿಂದ ಉಕ್ರೇನ್ ತತ್ತರಿಸುತ್ತಿರುವ ಉಕ್ರೇನ್​ ಜನರಿಗೆ  ಇಸ್ಕಾನ್ ಸೇವೆ ಸಲ್ಲಿಸುತ್ತಿದೆ. ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿರುವ ಉಕ್ರೇನ್​ ಜನರಿಗೆ ಆಹಾರ ಪೂರೈಕೆ ಮಾಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗುತ್ತಿದೆ” ಎಂದು ಎಲ್ಲಾ ದೇವಾಲಯಗಳು ಸೇವೆ ಮಾಡುತ್ತಿವೆ ಎಂಬ ಅರ್ಥದಲ್ಲಿ ಬರೆದಿದೆ. ಜೊತೆಗೆ ಹಳೆಯ ಚಿತ್ರವನ್ನು ಕೂಡಾ ಇದು ಪೋಸ್ಟ್‌ ಮಾಡಿದೆ.

ಇದನ್ನೂ ಓದಿ: BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’

ಇಸ್ಕಾನ್ ಸೇವೆ ಸಲ್ಲಿಸುತ್ತಿವುದು ನಿಜವೇ?

ಈ ಸುದ್ದಿ ಬರೆಯುವ 22 ಗಂಟೆಗಳ ಮುಂಚೆ ಇಸ್ಕಾನ್ ನ್ಯೂಸ್‌, “ಘರ್ಷಣೆಯಿಂದ ನಿರಾಶ್ರಿತರಾದವರಿಗೆ ಭಕ್ತರು ಅನ್ನದಾನ ಮಾಡಲು ಆರಂಭಿಸಿದ್ದೇವೆ. ಉಕ್ರೇನಿಯನ್-ರಷ್ಯನ್ ಸಂಘರ್ಷದಿಂದ ಸ್ಥಳಾಂತರಗೊಂಡವರಿಗೆ ಸಹಾಯ ಮಾಡುವಲ್ಲಿ ‘ಇಸ್ಕಾನ್ ಹಂಗೇರಿ’ ಸಕ್ರಿಯವಾಗಿ ಭಾಗವಹಿಸುತ್ತಿದೆ. ಇಸ್ಕಾನ್ ಹಂಗೇರಿ ಪ್ರಸ್ತುತ ವಾರದ ದಿನಗಳಲ್ಲಿ 600 ಪ್ಲೇಟ್ ಪ್ರಸಾದವನ್ನು ಮತ್ತು ವಾರಾಂತ್ಯದಲ್ಲಿ 1200 ಪ್ಲೇಟ್‌ಗಳನ್ನು ವಿತರಿಸುವ ಸಾಮರ್ಥ್ಯವನ್ನು ಹೊಂದಿದೆ” ಎಂದು ಬರೆದಿದೆ.

ಈ ಮಧ್ಯೆ, ತಪ್ಪಾದ ಚಿತ್ರಗಳು ಮತ್ತು ಉಕ್ರೇನ್‌ನಲ್ಲಿರುವ ಇಸ್ಕಾನ್‌ ಎಲ್ಲಾ ದೇವಸ್ಥಾನಗಳಲ್ಲಿ ಆಶ್ರಯ ನೀಡಲಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ, ಸ್ವತಃ ಇಸ್ಕಾನ್‌‌‌ ನ್ಯೂಸ್‌ ಈ ಬಗ್ಗೆ ಸ್ಪಷ್ಟೀಕರಣ ನೀಡಿದೆ.

ಇಸ್ಕಾನ್‌ ನ್ಯೂಸ್‌ ಹೇಳುವಂತೆ, “ಉಕ್ರೇನ್‌ನಲ್ಲಿರುವ ಐವತ್ತಕ್ಕೂ ಹೆಚ್ಚು ಇಸ್ಕಾನ್ ದೇವಾಲಯಗಳು ಮತ್ತು ಕೇಂದ್ರಗಳು ಸಾರ್ವಜನಿಕರಿಗೆ ಆಹಾರ ಪರಿಹಾರ ಮತ್ತು ಆಶ್ರಯವನ್ನು ಒದಗಿಸುತ್ತಿವೆ ಎಂದು ಸಾಮಾಜಿಕ ಮಾಧ್ಯಮ ಮತ್ತು ಇತರ ಮಾಧ್ಯಮಗಳಲ್ಲಿ ತಪ್ಪು ಮಾಹಿತಿ ಹರಡುತ್ತಿದೆ. ಈ ಮಾಹಿತಿ ಸುಳ್ಳು” ಎಂದು ಸ್ಪಷ್ಟೀಕರಣ ನೀಡಿದೆ.

ಲಿಂ‌ಕ್‌ಗೆ ಇಲ್ಲಿ ಕ್ಲಿಕ್ ಮಾಡಿ 

ಇಸ್ಕಾನ್‌ ನ್ಯೂಸ್‌‌ ಖಚಿತವಾಗಿ ಹೇಳುವಂತೆ, “ಈ ಸಮಯದಲ್ಲಿ ಉಕ್ರೇನ್‌ನಲ್ಲಿರುವ ನಮ್ಮ ದೇವಾಲಯಗಳಲ್ಲಿ ಆಶ್ರಯ ಅಥವಾ ಆಹಾರ ವಿತರಣೆಯನ್ನು ಒದಗಿಸಲು ISKCON ಗೆ ಸಾಧ್ಯವಾಗುತ್ತಿಲ್ಲ. ಉಕ್ರೇನ್ ಮತ್ತು ಇಡೀ ಪ್ರದೇಶದ ಎಲ್ಲಾ ಜನರಿಗೆ ಶಾಂತಿಗಾಗಿ ನಾವು ಪ್ರಾರ್ಥಿಸುತ್ತೇವೆ” ಎಂದು ಬರೆದಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗುತ್ತಿರುವ ಚಿತ್ರವೂ ತಪ್ಪಾದ ನಿರೂಪಣೆಯೊಂದಿಗೆ ಹರಿದಾಡುತ್ತಿದೆ. ಈ ಪೋಸ್ಟ್‌ ಇತರ ಧರ್ಮವರನ್ನು ಕೀಳಾಗಿ ಕಾಣಲು ಮಾಡಿರುವ ದ್ವೇಷಪೂರಿತ ಚಿತ್ರವಾಗಿದೆ. ಇಸ್ಕಾನ್ ಸಂಸ್ಥೆಯು 2015ರಲ್ಲಿ ಈ ಚಿತ್ರವನ್ನು ಹಂಚಿಕೊಂಡಿದೆ. ಜೊತೆಗೆ ಬಿಟಿವಿ ವರದಿಯಲ್ಲಿ ತಪ್ಪುಗಳಿದ್ದು, ಅದು ಹಳೆಯ ಚಿತ್ರವನ್ನು ಬಳಸಿದೆ. ಅದರ ವರದಿ ಹೇಳುವಂತೆ ಉಕ್ರೇನ್‌ನಲ್ಲಿರುವ ಎಲ್ಲಾ 54 ದೇವಾಲಯಗಳಲ್ಲಿ ನಿರಾಶ್ರಿತರಿಗೆ ಆಹಾರ ಮತ್ತು ಆಶ್ರಯವನ್ನು ನೀಡಲಾಗುತ್ತಿಲ್ಲ.

ಹಂಗೇರಿಯ ಇಸ್ಕಾನ್‌‌ನ ಕೇವಲ ಒಂದು ದೇವಸ್ಥಾನದ ವತಿಯಿಂದ ಮಾತ್ರ ಆಹಾರ ವಿತರಣೆಯನ್ನು ಹಂಗೇರಿಯ ಏರ್‌ಪೋರ್ಟ್‌ನಲ್ಲಿ ಮಾಡಲಾಗುತ್ತಿದೆ ಎಂದು ಸ್ವತಃ ಇಸ್ಕಾನ್‌ ಹೇಳಿಕೊಂಡಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಇಸ್ಲಾಂ ವಿರುದ್ಧ ದ್ವೇಷ ಹರಡುವ ಈ ಲೇಖನ ತೋಂಟದಾರ್ಯ ಮಠದ ನಿಜಗುಣಾನಂದ ಸ್ವಾಮಿ ಬರೆದಿಲ್ಲ


ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. BTV ಈಗಾಗಲೇ ಹಲವು ಸಲ ಮರ್ಯಾದೆ ಕಳೆದುಕೊಂಡಿದೆ. ಇತ್ತೀಚೆಗಂತೂ ಈ ದಿವ್ಯ ವಸಂತ ಟ್ರೋಲ್ನಿಂದ TRP ಕಳೆದುಕೊಂಡು ಸುಸ್ತಾಗಿದೆ. ಇಷ್ಟಾದರೂ ಬುದ್ಧಿ ಬಂದಿಲ್ಲ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....