Homeಫ್ಯಾಕ್ಟ್‌ಚೆಕ್BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’

BJP ಸದಸ್ಯರನ್ನೆ ‘ಬಿಜೆಪಿ ಬೆಂಬಲಿಸುವ ಸಾಮಾನ್ಯ ಮುಸ್ಲಿಮರು’ ಎಂದು ಚಿತ್ರಿಸಿದ ‘ಟಿವಿ9 ಭಾರತವರ್ಷ’

- Advertisement -
- Advertisement -

ಜನವರಿ 29 ರಂದು, ಟಿವಿ9 ಭಾರತವರ್ಷವು ‘ದಿ ಎಂ ಫ್ಯಾಕ್ಟರ್’ ಎಂಬ ವಿಶೇಷ ವರದಿಯನ್ನು ಪ್ರಸಾರ ಮಾಡಿತು. ಈ ವರದಿಯ ಆರಂಭಿಕ ಹೇಳಿಕೆಗಳಲ್ಲಿ ಆಂಕರ್ ಸಮೀರ್ ಅಬ್ಬಾಸ್ ಅವರು, ‘ಈ ವರದಿಯು ಪಶ್ಚಿಮ ಯುಪಿಯ ಬಿಜ್ನೋರ್ ಜಿಲ್ಲೆಯಲ್ಲಿ ಯಾವ ಪಕ್ಷವು ಮುಸ್ಲಿಂ ಮತಗಳನ್ನು ಸೆಳೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಗ್ರೌಂಡ್‌ ಟೆಸ್ಟ್‌ ನಡೆಸುತ್ತಿದೆ’ ಎಂದು ಹೇಳುತ್ತಾರೆ. ಈ ವರದಿಗೂ ಒಂದು ದಿನ ಮೊದಲು ಮುಖ್ಯಮಂತ್ರಿ ಆದಿತ್ಯನಾಥ್ ಅವರು ಬಿಜ್ನೋರ್‌ನಲ್ಲಿ ಮನೆ-ಮನೆ ಪ್ರಚಾರ ನಡೆಸಿದ್ದರು.

ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರು ಈ ಪ್ರಸಾರದ 47 ಸೆಕೆಂಡುಗಳ ಕ್ಲಿಪ್ ಅನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಮಹಿಳೆಯೊಬ್ಬರು ಬಿಜೆಪಿ ಮತ್ತು ಸಿಎಂ ಆದಿತ್ಯನಾಥ್ ಅವರನ್ನು ಅನುಮೋದಿಸುವುದನ್ನು ತೋರಿಸುತ್ತದೆ. ಇದೇ ವಿಡಿಯೊವನ್ನು ಬಿಜೆಪಿ ಉತ್ತರ ಪ್ರದೇಶ ಟ್ವಿಟರ್‌ ಹ್ಯಾಂಡಲ್‌ ಕೂಡಾ ಹಂಚಿಕೊಂಡಿದೆ. ಎರಡೂ ಖಾತೆಗಳಲ್ಲಿ ಲಕ್ಷಾಂತರ ಜನರು ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಸಂಸ್ಕೃತ ಭಾಷೆಯ ಆಧಾರದ ಮೇಲೆ ಸೂಪರ್ ಕಂಪ್ಯೂಟರ್ ರಚನೆ ಮಾಡುವ ಬಗ್ಗೆ NASA ವಿಜ್ಞಾನಿಗಳು ಹೇಳಿದ್ದಾರೆಯೆ?

ವಿಡಿಯೋದಲ್ಲಿರುವ ಮಹಿಳೆಯನ್ನು “ನೂರ್‌ಪುರದ ಮುಸ್ಲಿಂ ಮತದಾರ” ಎಂದು ಗುರುತಿಸಲಾಗಿದೆ. ನೂರ್‌ಪುರ ಬಿಜ್ನೋರ್‌ನಲ್ಲಿರುವ ಒಂದು ನಗರವಾಗಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಈ ಯೋಗಿ ಹಿಮಾಲಯದವರೂ ಅಲ್ಲ, ಅವರ ಮೈಮೇಲೆ ಇರುವುದು ಹಿಮವೂ ಅಲ್ಲ!

ಟಿವಿ9 ಈ ವರದಿಯಲ್ಲಿ ಜನಾಭಿಪ್ರಾಯ ಎಂದು 11 ಮುಸ್ಲಿಂ ವ್ಯಕ್ತಿಗಳನ್ನು ಸಂದರ್ಶಿಸಿದ್ದು, ಅವರಲ್ಲಿ 10 ಮಂದಿ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಟಿವಿ9 ನ ವ್ಯವಸ್ಥಾಪಕ ಸಂಪಾದಕ ಸಂತ ಪ್ರಸಾದ್ ರೈ ಅವರು ಸಂಬಿತ್‌ ಪತ್ರಾ ಅವರ ಟ್ವೀಟ್ ಅನ್ನು ಉಲ್ಲೇಖಿಸಿ ಖುಷಿಯಿಂದ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್‌ನಲ್ಲಿ ಅವರು, ಟಿವಿ9ಭಾರತವರ್ಷ ಮಾಡಿರುವ ಕಾರ್ಯಕ್ರಮ ‘ಭಾರಿ ವೈರಲ್’ ಆಗಿದೆ ಎಂದು ಬರೆದಿದ್ದು, ‘ವಾಸ್ತವ ವರದಿಯನ್ನು’ ಪ್ರಸ್ತುತಪಡಿಸಿದ್ದಕ್ಕಾಗಿ ವರದಿಗಾರ ಶ್ರೀನಿವಾಸ್ ಅವರನ್ನು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಹೈದ್ರಾಬಾದ್‌ನಲ್ಲಿ ಉದ್ಘಾಟನೆಯಾಗಲಿರುವ ರಾಮಾನುಜಾಚಾರ್ಯರ ಪ್ರತಿಮೆ ಪ್ರಧಾನಿ ಮೋದಿ ನಿರ್ಮಿಸಿದ್ದಲ್ಲ!

ಪ್ರೊಪಗಾಂಡವನ್ನು ಸುದ್ದಿಯಾಗಿ ಪ್ರಸಾರ ಮಾಡಲಾಗಿದೆಯೆ?

ಜನಾಭಿಪ್ರಾಯವು ಪತ್ರಿಕೋದ್ಯಮದ ಒಂದು ರೂಪವಾಗಿದ್ದು, ಜನರ ಅಭಿಪ್ರಾಯವನ್ನು ಪ್ರಸ್ತುತಪಡಿಸಲು ವರದಿಗಾರ ಸಾರ್ವಜನಿಕರೊಂದಿಗೆ ಕಿರು ಸಂದರ್ಶನಗಳನ್ನು ನಡೆಸುತ್ತಾನೆ. ಜನಾಭಿಪ್ರಾಯದ ಪ್ರಮುಖ ವೈಶಿಷ್ಟ್ಯವೆಂದರೆ, ಮಾಧ್ಯಮಗಳು ಸಾಮಾನ್ಯ ಜನರನ್ನು ಸಂದರ್ಶಿಸುವುದಾಗಿದೆ. ಇದಕ್ಕೆ ಯಾವುದೆ ಪೂರ್ವಾಭ್ಯಾಸ ಇರುದಿಲ್ಲ. ಜನರು ಯಾರ ಪರವಾಗಿ ಇದ್ದಾರೆ ಎಂದು ತಿಳಿದುಕೊಳ್ಳಲು ಯಾದೃಚ್ಛಿಕವಾಗಿ ಜನರನ್ನು ಸಂದರ್ಶನ ನಡೆಸಲಾಗುತ್ತದೆ.

ಆದಾಗ್ಯೂ, TV9ನ ಈ ಜನಾಭಿಪ್ರಾಯದ ಕಾರ್ಯಕ್ರಮದಲ್ಲಿ ಹೆಚ್ಚಿನ ಜನರು ಬಿಜೆಪಿ ಬೆಂಬಲಿಸುವವರಿದ್ದರು. ಯಾಕೆಂದರೆ ಅವರು ಸಂದರ್ಶಿಸಿದ ಹೆಚ್ಚಿನ ಜನರು ಬಿಜೆಪಿಯ ಸದಸ್ಯರು, ಕಾರ್ಯಕರ್ತರು ಮತ್ತು ಬೆಂಬಲಿಗರಾಗಿದ್ದರು!.

ಟಿವಿ9 ಕಾರ್ಯಕ್ರಮವನ್ನು ದೇಶದ ಖ್ಯಾತ ಫ್ಯಾಕ್ಟ್‌ಚೆಕ್‌ ವೈಬ್‌ಸೈಟ್‌ ಆಲ್ಟ್ ನ್ಯೂಸ್‌‌ ಪರಿಶೀಲಿಸಿದ್ದು, ಚಾನೆಲ್‌ ಸಂದರ್ಶಿಸಿದ ಹಲವು ಜನರು ಬಿಜೆಪಿಯದ್ದೇ ಜನರು ಎಂದು ಅದು ಕಂಡುಕೊಂಡಿದೆ.

ಟಿವಿ9 ಕಾರ್ಯಕ್ರಮದ 8:45 ನಿಮಿಷದಲ್ಲಿ, ಅಲಿಶಾ ಸಿದ್ದಿಕಿ ಎಂಬವರನ್ನು ಸಂದರ್ಶಿಸಿದ್ದು, ಅವರು ಯುಪಿಯಲ್ಲಿ ಮುಂಬರುವ ಚುನಾವಣೆಗಳ ಕುರಿತು ಮಾತನಾಡುತ್ತಾ, “ಈ ಬಾರಿ ಯೋಗಿ ಜಿ ಆಯ್ಕೆಯಾಗುತ್ತಾರೆ ಎಂದು ನಾನು ಭಾವಿಸುತ್ತೇನೆ…” ಎಂದು ಹೇಳುತ್ತಾರೆ. TV9 ಅವರನ್ನು “ನೂರ್‌‌ಪುರದ ಮುಸ್ಲಿಂ ಮತದಾರ” ಎಂದು ಗುರುತಿಸಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನಾಟಕೀಯ ವಿಡಿಯೋಗಳ ಬಗ್ಗೆ ಗಮನವಿರಲಿ.. ಹಂಚುವ ಮುನ್ನ ಪರಿಶೀಲಿಸಿ

ಆದರೆ, ಫೇಸ್‌ಬುಕ್‌ನಲ್ಲಿ ಅವರ ಹೆಸರನ್ನು ಹುಡುಕಿದಾಗ, ಅವರು ಬಿಜೆಪಿ ಸದಸ್ಯೆ ಎಂದು ತಿಳಿದು ಬಂದಿದೆ. ಪರಾಕ್ರಮ್ ದಿವಸ್ (ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ) ಸಂದರ್ಭದಲ್ಲಿ ಅಲಿಶಾ ಸಿದ್ದೀಕಿ ಅವರು ಬಿಜೆಪಿಯ ಪೋಸ್ಟರ್‌‌ ಅನ್ನು ತನ್ನ ಭಾವಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ. ಅವರ ಪ್ರೊಫೈಲ್‌ನಲ್ಲಿ ಅವರು ಬಿಜೆಪಿ ಸದಸ್ಯೆ ಎಂದು ತಿಳಿಯಲು ಹಲವು ಚಿತ್ರಗಳಿವೆ. (1 ಮತ್ತು 2)

ವಿಡಿಯೊದ 7:05 ನಿಮಿಷದಲ್ಲಿ, ಹೆಸರಿಲ್ಲದ ವ್ಯಕ್ತಿಯನ್ನು “ನೂರ್‌ಪುರದ ಮುಸ್ಲಿಂ ಮತದಾರ” ಎಂದು ಪರಿಚಯಿಸಲಾಗಿದೆ. “ದ್ವೇಷವನ್ನು ಪ್ರೀತಿಯಾಗಿ ಪರಿವರ್ತಿಸುವವರು ಯಾರು?” ಎಂದು ವರದಿಗಾರರು ಕೇಳಿದಾಗ ಅವರು ಬಿಜೆಪಿಯ ಬಿಜ್ನೋರ್ ಮೂಲದ ನಾಯಕ ಸಿಪಿ ಸಿಂಗ್ ಎಂದು ಹೆಸರಿಸಿದರು. ಇದಕ್ಕೆ ವರದಿಗಾ “ಸಿಪಿ ಸಿಂಗ್ ಯಾರು?” ಎಂದು ಕೇಳುತ್ತಾರೆ. ಆಗ ಆ ಮುಸ್ಲಿಂ ವ್ಯಕ್ತಿ, “ಅವರು ನಮ್ಮ ಶಾಸಕರು… ಬಿಜೆಪಿ ಅಭ್ಯರ್ಥಿ” ಎಂದು ಹೇಳುತ್ತಾರೆ. ಈ ಹೊತ್ತಲ್ಲಿ ವರದಿಗಾರ ಆ ವ್ಯಕ್ತಿಯನ್ನು ಹಲವು ಬಾರಿ ಕೇಳುತ್ತಾರೆ, “ನೀವು ಬಿಜೆಪಿಯವರೇ?” ಅದಕ್ಕೆ ಆ ವ್ಯಕ್ತಿ ‘ಹೌದು’ ಎಂದು ಉತ್ತರಿಸುತ್ತಾರೆ.

ಆಲ್ಟ್‌‌‌ ನ್ಯೂಸ್‌‌‌ ಅಲ್ಲಿನ ಸ್ಥಳೀಯ ಪತ್ರಕರ್ತ ನರೇಂದ್ರ ಪ್ರತಾಪ್ ಅವರನ್ನು ಸಂಪರ್ಕಿಸಿದ್ದು, ಅವರು TV9 ಕಾರ್ಯಕ್ರಮದಲ್ಲಿನ ಹಲವು ಜನರನ್ನು ಗುರುತಿಸಿದ್ದಾರೆ.

14:36 ನಿಮಿಷದಲ್ಲಿ, ಅಮ್ಜದ್ ಅಲಿ ಅನ್ಸಾರಿ ಎಂಬವರನ್ನು ಸಂದರ್ಶಿಸಲಾಗಿದೆ. ಅನ್ಸಾರಿ ಅವರು ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ನಾಯಕ ಎಂದು ನರೇಂದ್ರ ಪ್ರತಾಪ್‌ ತಿಳಿಸಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಾಕಿಸ್ತಾನದ ಸಂಸತ್‌ನಲ್ಲಿ ಮೋದಿ ಮೋದಿ ಎಂಬ ಘೋಷಣೆ ಕೂಗಿದ್ದು ನಿಜವೇ?

ಅಮ್ಜದ್ ಅಲಿ ಅನ್ಸಾರಿ ಅವರ ಚಿತ್ರವಿರುವ ಬಿಜೆಪಿಯ ರಾಜಕೀಯ ಪೋಸ್ಟರ್ ಅನ್ನು ಸಹ ಪ್ರತಾಪ್ ಹಂಚಿಕೊಂಡಿದ್ದಾರೆ.

16:12 ನಿಮಿಷಕ್ಕೆ, ಧರ್ಮಪುರದ “ಮುಸ್ಲಿಂ ಮತದಾರ” ಎಂದು ಸಂದರ್ಶಿಸಲಾಗಿದೆ. ಆದರೆ TV9 ಈ ವ್ಯಕ್ತಿಯ ಹೆಸರನ್ನು ಉಲ್ಲೇಖಿಸಲಿಲ್ಲ.

ಈ ವ್ಯಕ್ತಿಯ ಹೆಸರು ಜಾವೇದ್ ಮುಲ್ತಾನಿ ಎಂದು ಪತ್ರಕರ್ತ ನರೇಂದ್ರ ಪ್ರತಾಪ್ ಬಹಿರಂಗಪಡಿಸಿದ್ದಾರೆ. ಅವರ ಚಿತ್ರವಿರುವ ಬಿಜೆಪಿಯ ಪೋಸ್ಟರ್‌‌ ಅನ್ನು ಪ್ರತಾಪ್ ಅವರು ಹಂಚಿಕೊಂಡಿದ್ದಾರೆ. ಕೆಳಗಿನ ಪೋಸ್ಟರ್‌ನಲ್ಲಿ, ಮುಲ್ತಾನಿ ಬಲಭಾಗದಲ್ಲಿದ್ದರೆ, ಬಿಜೆಪಿಯ ಧಂಪುರ್ ಶಾಸಕ ಅಶೋಕ್ ರಾಣಾ ಎಡಭಾಗದಲ್ಲಿದ್ದಾರೆ.

ಮುಲ್ತಾನಿಯ ಫೇಸ್‌ಬುಕ್ ಪ್ರೊಫೈಲ್ ಅಲ್ಲಿ ಕೂಡಾ ಈ ಪೋಸ್ಟರ್‌ ಇರುವುದು ಕಾಣುತ್ತದೆ.

ಇದರ ಜೊತೆಗೆ ಸಿಎಂ ಆದಿತ್ಯನಾಥ್ ಜೊತೆ ಮುಲ್ತಾನಿ ಕ್ಲಿಕ್ಕಿಸಿಕೊಂಡ ಸೆಲ್ಫಿಯನ್ನೂ ಪ್ರತಾಪ್ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ನೀರು ಕುಡಿಯುತ್ತಾ ಚಾರ್ಜಿಂಗ್‌ನಲ್ಲಿರುವ ಫೋನ್‌ ಬಳಸಿದರೇ ಫೋನ್ ಸ್ಟೋಟಗೊಳ್ಳುತ್ತದೆಯೇ?

17:18 ನಿಮಿಷದಲ್ಲಿ, ದಾವುದ್‌ ಅಲಿ ಎಂಬವರನ್ನು ಸಂದರ್ಶಿಸಲಾಗಿದೆ. ಈ ವ್ಯಕ್ತಿ ಬಿಜೆಪಿ ಶಾಸಕ ಅಶೋಕ್ ರಾಣಾ ಅವರ ವೈಯಕ್ತಿಕ ಅಂಗರಕ್ಷಕ ಎಂದು ಪ್ರತಾಪ್ ಗುರುತಿಸಿಸಿದ್ದಾರೆ.

ಆದರೆ ಬಿಜೆಪಿ ಶಾಸಕ ಅಶೋಕ್‌ ರಾಣಾ ಈ ಹೇಳಿಕೆಯನ್ನು ನಿರಾಕರಿಸಿದ್ದು, “ದಾವುದ್ ಅಲಿ ಮತ್ತು ನಾನು ಬಹಳ ಸಮಯದಿಂದ ಸಹವರ್ತಿಯಾಗಿದ್ದೇವೆ. ಬಿಜೆಪಿಗೆ ಸಂಬಂಧಿಸಿದ ಎಲ್ಲಾ ಸಭೆಗಳಲ್ಲಿ ಅವರು ಹಾಜರಿರುತ್ತಾರೆ” ಎಂದು ಹೇಳಿದ್ದಾರೆ.

“ಸಂದರ್ಶನದಲ್ಲಿ ಹೆಚ್ಚಿನ ಜನರು ಬಿಜೆಪಿ ಜೊತೆಗೆ ಸಂಬಂಧ ಹೊಂದಿದ್ದಾರೆ” ಎಂದು ದಾವುದ್‌ ಅಲಿ ತಿಳಿಸಿದ್ದಾರೆ ಎಂದು ಆಲ್ಟ್‌ ನ್ಯೂಸ್‌ ವರದಿ ಮಾಡಿದೆ.

13:56 ನಿಮಿಷದಲ್ಲಿ, ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ನಾಯಕ ಅಮ್ಜದ್ ಅಲಿ ಅನ್ಸಾರಿ ಸಂದರ್ಶನ ಮಾಡುವ ಮೊದಲು, ಟಿವಿ9 ನಜಾಕತ್ ಹುಸಿಯಾನ್ ಅವರ ಬೈಟ್ ಅನ್ನು ಪ್ರಸಾರ ಮಾಡಿದೆ. ಹುಸೇನ್ ಬಿಜೆಪಿ ಕಾರ್ಯಕರ್ತ ಆಗಿದ್ದು, ಪಕ್ಷದಲ್ಲಿ ಅಧಿಕೃತ ಹುದ್ದೆಯನ್ನು ಹೊಂದಿಲ್ಲ ಎಂದು ಅನ್ಸಾರಿ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.

15:17 ನಿಮಿಷದಲ್ಲಿ, ಮೊಹಮ್ಮದ್ ಮುಬಿನ್ ಅವರನ್ನು ಸಂದರ್ಶಿಸಲಾಗಿದೆ. ಮುಬಿನ್ ಸಹ ಬಿಜೆಪಿಯೊಂದಿಗೆ ಸಂಬಂಧ ಹೊಂದಿದ್ದು, ಆದರೆ ಪಕ್ಷದ ಅಧಿಕೃತ ಹುದ್ದೆಯನ್ನು ಹೊಂದಿಲ್ಲ ಎಂದು ಅನ್ಸಾರಿ ಆಲ್ಟ್ ನ್ಯೂಸ್‌ಗೆ ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಟಿವಿ9 ಇನ್ನೂ ಮೂವರು ಮುಸ್ಲಿಂ ವ್ಯಕ್ತಿಗಳನ್ನು ಮಾಡಿದೆ. ಆದರೆ ಅವರನ್ನು ಗುರುತಿಸಲು ಆಲ್ಟ್‌‌ನ್ಯೂಸ್‌ಗೆ ಸಾಧ್ಯವಾಗಿಲ್ಲ.

ಆದಾಗ್ಯೂ, ಟಿವಿ9 ಸಂದರ್ಶಿಸಿದ 11 “ಮುಸ್ಲಿಂ ಮತದಾರರಲ್ಲಿ” ಕನಿಷ್ಠ ಏಳು ಮಂದಿ ಬಿಜೆಪಿಯ ಸದಸ್ಯರು ಅಥವಾ ಕಾರ್ಯಕರ್ತರಾಗಿದ್ದಾರೆ. ಟಿವಿ ಭರತವರ್ಷ್, ಈ ವ್ಯಕ್ತಿಗಳನ್ನು ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಸಾಮಾನ್ಯ “ಮುಸ್ಲಿಂ ಧ್ವನಿಗಳು” ಎಂದು ಪ್ರಸ್ತುತಪಡಿಸಿದೆ.

ಕೃಪೆ: Alt News

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ತಿರುಪತಿ ದೇವಸ್ಥಾನದ ಪುರೋಹಿತರ ಮನೆಯಲ್ಲಿ 128Kg ಚಿನ್ನ ಸಿಕ್ಕಿದ್ದು ನಿಜವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...