Homeಮುಖಪುಟನಟಿ ರಮ್ಯಾ, ನಟ ಕಿರಣ್ ಶ್ರೀನಿವಾಸ್ ಸೇರಿ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು: ನಟ ಚೇತನ್

ನಟಿ ರಮ್ಯಾ, ನಟ ಕಿರಣ್ ಶ್ರೀನಿವಾಸ್ ಸೇರಿ ಜೊತೆ ನಿಂತ ಎಲ್ಲರಿಗೂ ಧನ್ಯವಾದಗಳು: ನಟ ಚೇತನ್

ಪೊಲಿಸರು ನನ್ನ ಫೋನ್ ತೆಗೆದುಕೊಂಡ 12 ದಿನ ಆದರೂ ಫೋನ್ ವಾಪಸ್ ಕೊಟ್ಟಿಲ್ಲ. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗುತ್ತಿಲ್ಲ.

- Advertisement -
- Advertisement -

ಸಿನಿಮಾ ರಂಗದ ಯಾರೂ ಮಾತನಾಡದಿದ್ದಾಗ ಅನ್ಯಾಯದ ವಿರುದ್ಧ ದನಿಯೆತ್ತಿದ ನಟಿ ರಮ್ಯಾ, ವಿಡಿಯೊ ಮಾಡಿದ ನಟ ಕಿರಣ್ ಶ್ರೀನಿವಾಸ್ ಸೇರಿ ನನ್ನ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದಗಳು ಎಂದು ನಟ ಚೇತನ್ ತಿಳಿಸಿದ್ದಾರೆ.

ಜೈಲಿನಿಂದ ಜಾಮೀನನ ಮೇಲೆ ಬಿಡುಗಡೆಯಾದ ಬಳಿಕ ಮೊದಲ ಬಾರಿಗೆ ಫೇಸ್‌ಬುಕ್‌ ಲೈವ್‌ನಲ್ಲಿ ಮಾತನಾಡಿದ ಅವರು, “ಒಂದು ಟ್ವೀಟ್ ಕಾರಣಕ್ಕೆ ನನ್ನನ್ನು ಸುಮಾರು ಒಂದು ವಾರಗಳ ಕಾಲ ಜೈಲಿನಲ್ಲಿಟ್ಟಿದ್ದರು. ಆ ಟ್ವೀಟ್‌ನಲ್ಲಿ ಯಾರನ್ನೂ ಅವಹೇಳನ ಮಾಡಿರಲಿಲ್ಲ, ಅದರಲ್ಲಿ ಅವಾಚ್ಯ ಶಬ್ದ ಇರಲಿಲ್ಲ, ಯಾರನ್ನೂ ಪ್ರಚೋದಿಸಿರಲಿಲ್ಲ. ಆದರೂ ಆ ಒಂದು ಟ್ವೀಟ್‌ ಇಟ್ಟುಕೊಂಡು ಕೋಮು ಪ್ರಚೋದನೆ ಮಾಡಿದ್ದೇನೆ ಎಂದು ಆರೋಪ ಹೊರಿಸಿ 504,  505(2) ಸೆಕ್ಷನ್‌ಗಳ ಅಡಿಯಲ್ಲಿ ಬಂಧಿಸಿದ್ದರು” ಎಂದಿದ್ದಾರೆ.

ಕಾಣದ ಕೈಗಳು ಬಂಧನದ ಹಿಂದಿವೆ. ಅಕ್ರಮವಾಗಿ ನನ್ನನ್ನು ಬಂಧಿಸಿ 8-10 ಗಂಟೆಗಳ ಕಾಲ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಇಟ್ಟಿದ್ದರು. ಯಾವ ಕೇಸ್, ಯಾರು ದೂರುದಾರರು ಎಂದು ಸಾಕಷ್ಟು ಕೇಳಿದರೂ ನನಗೆ ಮಾಹಿತಿ ಕೊಟ್ಟಿರಲಿಲ್ಲ. ದೂರು ಕೊಟ್ಟವರು ರವಿ ಎಂಬ ವ್ಯಕ್ತಿ ಮಾತ್ರವಿಲ್ಲ ಹಲವರಿದ್ದಾರೆ ಎಂಬುದು ಗೊತ್ತಾಯಿತು. ಈ ಪ್ರಕರಣದಲ್ಲಿ ಇನ್ಸ್ ಪೆಕ್ಟರ್ ರವಿ ಕೂಡ ಬಲಿಪಶು ಎಂದು ಅವರು ತಿಳಿಸಿದ್ದಾರೆ.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾರೂ ಕೂಡ ಪ್ರಶ್ನಾತೀತರಲ್ಲ. ಪ್ರಶ್ನೆ ಮಾಡುವುದು ನಮ್ಮ ಹಕ್ಕು ಮಾತ್ರವಲ್ಲ ಕರ್ತವ್ಯ ಕೂಡ. ಈ ಬಂಧನದಿಂದ ನನಗೆ ಬೇಸರವಾಗಿಲ್ಲ, ಬದಲಿಗೆ ಹೋರಾಟ ಮಾರ್ಗದಲ್ಲಿ ಮತ್ತಷ್ಟು ವಿಶ್ವಾಸ ಬಂದಿದೆ. ನಮ್ಮ ವಿಚಾರದಲ್ಲಿ ಸ್ಪಷ್ಟತೆ, ಅಪಾರ ಶಕ್ತಿ ಮತ್ತು ಗಟ್ಟಿತನ ಇದೆ. ಹಾಗಾಗಿ ನಮ್ಮ ಸತ್ಯ ಕಂಡರೆ ಅವರಿಗೆ ಭಯ. ಅದಕ್ಕೆ ನನ್ನನ್ನು ಬಂಧಿಸಿದ್ದು ಎಂದು ಚೇತನ್ ಹೇಳಿದರು.

ಪುರು‍ಷಪ್ರಧಾನ ವ್ಯವಸ್ಥೆಯಿಂದ ಮಹಿಳೆಯರಿಗೆ ಆಗಿರುವ ಅನ್ಯಾಯ, ಶೂದ್ರರಿಗೆ ಆಗಿರುವ ಅನ್ಯಾಯ, ಬಂಡವಾಳಶಾಹಿಯಿಂದ ಬಡಜನರಿಗೆ ಆಗಿರುವ ಅನ್ಯಾಯ ಮತ್ತು ಕೋಮುವಾದ, ಅತಿ ಬ್ರಾಹ್ಮಣ್ಯ ಬಂದಿರುವುದರಿಂದ ಅಲ್ಪಸಂಖ್ಯಾತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮುಂದುವರೆಸೋಣ. ಯಾವುದೇ ಕಾರಣಕ್ಕೆ ಕುಗ್ಗುವುದು ಬೇಡ ಎಂದರು.

ಜೈಲಿನಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಅಲ್ಪಸಂಖ್ಯಾತರರೆ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸ್ಥಾಪಿತ ಶಕ್ತಿಗಳು ಅವರನ್ನು ಗುರಿ ಮಾಡಿದ್ದಾರೆ. ಅವರಿಗೆ ವಕೀಲರು ಸಿಗುತ್ತಿಲ್ಲ. ನಾನು ಶ್ರೀಮಂತ ಕುಟುಂಬದಿಂದ, ಪ್ರಭಾವಿ ಜಾತಿಯಿಂದ ಮತ್ತು ಚಿತ್ರರಂಗದಿಂದ ಬಂದಿದ್ದೇನೆ. ನನ್ನ ಮೇಲೆಯೇ ಸುಳ್ಳು ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದರೆ ಇನ್ನು ಜನಸಾಮಾನ್ಯರನ್ನು ಈ ವ್ಯವಸ್ಥೆ ಎಷ್ಟು ಕೆಟ್ಟದಾಗಿ ನಡೆಸಿಕೊಳ್ಳಬಹುದು ಯೋಚಿಸಿ ಎಂದು ಚೇತನ್ ಹೇಳಿದರು.

ನಾನು ಜೈಲಿನಲ್ಲಿ ಅಂಬೇಡ್ಕರ್‌ರವರ ಅನಿಲೇಶನ್ ಆಫ್ ಕಾಸ್ಟ್ ಮತ್ತು ಹು ಆರ್ ಶೂದ್ರಾಶ್ ಎಂಬ ಕೃತಿಗಳನ್ನು ಓದಿದೆ. ವಕೀಲ ಜಗದೀಶ್‌ರವರನ್ನು ಭೇಟಿ ಮಾಡಿದೆ. ಜಗದೀಶ್ ರವರು ಕುಗ್ಗಿಲ್ಲ.. ಅವರ ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ.

ಪೆರಿಯಾರ್‌ರವರನ್ನು 80 ಬಾರಿ ಜೈಲಿಗೆ ಹಾಕಲಾಗಿತ್ತು. ಜೈಲು ಎಂದರೆ ನನಗೆ ಭಯವಿಲ್ಲ. ನಾನು ಸತ್ಯಕ್ಕಾಗಿ ಮತ್ತೆ ಜೈಲಿಗೆ ಹೋಗಲು ಸಿದ್ದನಿದ್ದೇನೆ. ನಾವು ಯಾವುದೇ ಜಾತಿ, ಮತ, ಭಾಷೆಯ ವಿರುದ್ಧ ಇಲ್ಲ. ನಾವು ಅಸಮಾನತೆಯ ವಿರುದ್ಧ ಇದ್ದೇವೆ. ಬ್ರಾಹ್ಮಣ್ಯ ಎನ್ನುವುದು ಒಂದು ಮನಸ್ಥಿತಿ. ಎಲ್ಲಾ ಬ್ರಾಹ್ಮಣ್ಯರು ಸವಲತ್ತು ಪಡೆದಿರಬಹುದು. ಆದರೆ ಎಲ್ಲರೂ ಬ್ರಾಹ್ಮಣ್ಯ ಅನುಸರಿಸುವುದಿಲ್ಲ. ಅವರು ಹುಟ್ಟಿನಿಂದಲೇ ಸವಲತ್ತು ಪಡೆದಿರುವುದು ನಿಜ. ಆದರೆ ಮುಂದಕ್ಕೆ ನಾನು ಸಮಾಜಕ್ಕೆ ಜಾಸ್ತಿ ಕೊಡಬೇಕು, ಇಷ್ಟು ವಂಚಿತರಾದವರು ಜಾಸ್ತಿ ಪಡೆಯಬೇಕು. ಹಾಗಾಗಿ ನಮ್ಮ ಹೋರಾಟ ಬ್ರಾಹ್ಮಣ್ಯದ ವಿರುದ್ಧವಿರುತ್ತದೆ ಎಂದರು.

ಒಂದು ಟ್ವೀಟ್ ಗಾಗಿ ನನ್ನನ್ನು ಉದ್ದೇಶಪೂರ್ವಕವಾಗಿ ಬಂಧಿಸಿದ್ದೀರಿ. ಆದರೆ ಕೋಟ್ಯಾಂತರ ಜನ ಟ್ವೀಟ್ ಮಾಡಿದರೆ ಅವರನ್ನು ಜೈಲಿಗೆ ಹಾಕುತ್ತೀರಾ? ಭ್ರಷ್ಟಾಚಾರಿಗಳು, ಕ್ರಿಮಿನಲ್‌ಗಳು ವಿಧಾನಸೌಧದಲ್ಲಿದ್ದಾರೆ. ಅವರನ್ನು ಮುಟ್ಟುವ ಧೈರ್ಯ ಇಲ್ಲ. ನಮ್ಮನ್ನು ಮಾತ್ರ ಬಂಧಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಫೆಬ್ರವರಿ 19 ರಂದು ನಾವು ಬೆಂಗಳೂರಿನಲ್ಲಿ ನೀಲಿ ಸಾಗರ ನಿರ್ಮಿಸಿದ್ದೇವೆ. ಹಾಗಾಗಿ ಪ್ರಭುತ್ವ ಹೆದರಿದೆ. ಆ ಹೋರಾಟವನ್ನು ಮುಖ್ಯವಾಹಿನಿ ಮಾಧ್ಯಮಗಳು ಪ್ರಸಾರ ಮಾಡಲಿಲ್ಲ. ಹಾಗಾಗಿ ನಾವು ಸೋಷಿಯಲ್ ಮೀಡಿಯಾ ಮಾತ್ರವಲ್ಲದೆ ಪರ್ಯಾಯ ಮಾಧ್ಯಮ ಕಟ್ಟೋಣ ಎಂದರು.

ಪೊಲಿಸರು ನನ್ನ ಫೋನ್ ತೆಗೆದುಕೊಂಡ 12 ದಿನ ಆದರೂ ಫೋನ್ ವಾಪಸ್ ಕೊಟ್ಟಿಲ್ಲ. ನಾನು ಸಾಮಾಜಿಕ ಜಾಲತಾಣಗಳನ್ನು ಬಳಸಲು ಆಗುತ್ತಿಲ್ಲ. ಬೇರೆಯವರ ಫೋನ್‌ನಲ್ಲಿ ಲಾಗಿನ್ ಆಗಿದ್ದೇನೆ ಎಂದರು.

ಶಾಂತಪ್ಪ ಎಂಬ ಗಾಯಕರು ಡಯಾಲಿಸಿಸ್ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ಸುಳ್ಳು ಪ್ರಕರಣದಲ್ಲಿ ಅವರನ್ನು ಸಿಕ್ಕಿಸಲಾಗಿದೆ. 10 ವರ್ಷದಿಂದ ಅವರು ಜೈಲಿನಲ್ಲಿದ್ದಾರೆ. ಒಳ್ಳೆಯ ಗಾಯಕರಾದ ಅವರನ್ನು ಹೊರಗೆ ತರಲು ಪ್ರಯತ್ನ ಮಾಡುತ್ತೇನೆ. ಈ ಕುರಿತು ಹಂಸಲೇಖ ಸರ್ ಜೊತೆ ಮಾತಾಡುತ್ತೇನೆ ಎಂದರು.

ಅವರ ಫೇಸ್‌ಬುಲ್ ಲೈವ್ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: ನಾಗರಾಜ್‌ ಮಂಜುಳೆಯ ‘ಝುಂಡ್‌’: ಕ್ರೀಡಾ ಜಗತ್ತಿನ ‘ಅಸ್ಪೃಶ್ಯ ಭಾರತ ದರ್ಶನ’

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....