Homeಮುಖಪುಟ"ಬುದ್ಧಂ, ಧಮ್ಮಂ, ಸಂಘಂ...": ಒಂದು ಚಿಂತನೆ

“ಬುದ್ಧಂ, ಧಮ್ಮಂ, ಸಂಘಂ…”: ಒಂದು ಚಿಂತನೆ

- Advertisement -
- Advertisement -

| ರಘೋತ್ತಮ ಹೊ.ಬ, ಮೈಸೂರು | 

ಬೌದ್ಧ ಧರ್ಮದಲ್ಲಿ ಬಹುಮುಖ್ಯವಾದದ್ದು ತಿಸರಣ. ಅಂದರೆ ಮೂರು ಅಂಶಗಳಿಗೆ ಶರಣು ಹೋಗುವುದು, ನಮಿಸುವುದು, ಗೌರವ ಕೊಡುವುದು ಎಂದರ್ಥ. ಮೂರು ಅಂಶ ಇಲ್ಲಿ ಮೂರು ಹಂತವಾಗಿಯೂ ಕಂಡುಬರುತ್ತದೆ. ಅಂದರೆ ಮೊದಲ ಹಂತ ಬುದ್ಧ , ಎರಡನೆಯ ಹಂತ ಆತ ಬೋಧಿಸಿದ ಧಮ್ಮ, ಮೂರನೆಯ ಹಂತ ಆತನ‌ ಭಿಕ್ಕು ಪರಿವಾರ ಅಥವಾ ಭಿಕ್ಕು ಸಂಘ.

ಇದರರ್ಥ ಬುದ್ಧನ ಅನುಯಾಯಿಗಳು ಮೊದಲು ಬುದ್ಧನಿಗೆ ಶರಣು ಹೋಗಬೇಕು ನಂತರ ಆತನ ಧಮ್ಮಕ್ಕೆ ನಂತರ ಸಂಘಕ್ಕೆ. ಈ ಹಿನ್ನೆಲೆಯಲ್ಲಿ ಮೊದಲು ಬುದ್ಧ ಎಂದರೆ ಬೌದ್ಧ ಧರ್ಮಕ್ಕೆ ಬರುವ ಪ್ರತಿಯೊಬ್ಬರೂ ಬುದ್ಧನ ಜೀವನ ಆತನ ತ್ಯಾಗ, ಬದುಕು, ಆತ ಭೇಟಿ ಮಾಡಿದ ಜನರು, ಆತ ಭೇಟಿ ಮಾಡಿದ ಸ್ಥಳಗಳು, ಆತನಿಗೆ ನೆರವಾದ ರಾಜರುಗಳು… ಹೀಗೆ, ಒಟ್ಟಾರೆ ಆತನ ಸಂಪೂರ್ಣ ಜೀವನ. In other sense ಬುದ್ಧನನ್ನು ಆರಾಧಿಸುವುದನ್ನು ಕಲಿಯಬೇಕು. ಭಕ್ತಿ ಎಂಬುದನ್ನು ಈ ಸಂದರ್ಭದಲ್ಲಿ ಬಳಸುವುದನ್ನು ಕೆಲವರು ಆಕ್ಷೇಪಿಸಬಹುದು. ಆದರೆ ಬುದ್ಧನ ಕುರಿತು ಭಕ್ತಿ ಇರಲೇಬೇಕು. ಆ ಭಕ್ತಿಯ ಮತ್ತೊಂದು ಹೆಸರು ಬುದ್ಧನ ಕುರಿತ ಅಚಲ ನಂಬಿಕೆ. ಹೀಗೆ ಬುದ್ಧನನ್ನು ನಂಬಲು , ಗೌರವಿಸಲು ಪ್ರಾರಂಭಿಸಿದ ಬುದ್ಧ ಧರ್ಮದ ಹೊರಗೆ ಇರುವ ವ್ಯಕ್ತಿ ಖಂಡಿತ ಆತನ ಅನುಯಾಯಿ ಆಗುತ್ತಾನೆ.

ಅಂದಹಾಗೆ ಹೀಗೆ ಅನುಯಾಯಿ ಆದ ಆತನಿಗೆ ಪರಿಚಯವಾಗಬೇಕಾದ ಎರಡನೇ ಹಂತ ಧಮ್ಮ ಅಂದರೆ ಬುದ್ಧನ‌ ಬೋಧನೆ. ನಿಜ, ಬುದ್ಧನ ಬದುಕು ತಿಳಿಯುತ್ತಲೇ ಆತನಿಗೆ ಧಮ್ಮ‌ಅರಿವಿಗೆ ಬಂದಿರುತ್ತದೆ. ಆದರೆ ಧಮ್ಮವನ್ನು ಒತ್ತಡ ಪೂರ್ವಕವಾಗಿ ಬುದ್ಧನ ಜೀವನದ ಜೊತೆಯೇ ಹೇಳಬಾರದು ಅಥವಾ ಕಲಿಯಲು ತಿಳಿಸಬಾರದು. ಬದಲು ಮೊದಲು ಬುದ್ಧನನ್ನು ಅರಿ ನಂತರ ಧಮ್ಮ ತಿಳಿ ಎನ್ನಬೇಕು. ಬುದ್ಧನನ್ನು ಅರಿಯಲು ಪ್ರಾರಂಭಿಸಿದ ಯಾರಿಗೇ ಆಗಲಿ ಮೊದಲು ಆತನ ಬಗ್ಗೆ ನಂಬಿಕೆ ಭಕ್ತಿ ಬಂದಿರುತ್ತದೆ ನಂತರ ಆತನ ಧಮ್ಮದ ಬಗ್ಗೆ ಕೂಡ ಒಲವು ಆರಂಭವಾಗುತ್ತದೆ. ಈ ನಿಟ್ಟಿನಲ್ಲಿ ಮೊದಲಿಗೆ ಪರಿಚಯ ಆಗಬೇಕಾದ್ದೆ ಬುದ್ಧ ನಂತರ ಆತನ ಧಮ್ಮ.

ಯಾಕೆ ಈ ಮಾತನ್ನು ಹೇಳುತ್ತಿದ್ದೇನೆಂದರೆ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಚರ್ಚೆಯಂತೆ ಕೆಲವರು  ಹೇಳುವ ಪ್ರಕಾರ ಅವರು ಮೊದಲು ಧಮ್ಮಕ್ಕೆ ಆದ್ಯತೆ ಕೊಡುವಂತೆ ಮಾತನಾಡುತ್ತಿದ್ದಾರೆ. ಉದಾಹರಣೆಗೆ ವ್ಯಕ್ತಿಯೊಬ್ಬ ಕಳ್ಳತನ ಮಾಡುತ್ತಿದ್ದರೆ ಆತ ಧಮ್ಮದ  ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ವ್ಯಭಿಚಾರಿಯಾಗಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಪದೇ ಪದೇ ಸುಳ್ಳು ಹೇಳುವ ಚಾಳಿ ಬೆಳೆಸಿಕೊಂಡಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಕೊಲೆಗಾರನಾಗಿದ್ದಾರೆ ಅಥವಾ ಆಕಸ್ಮಿಕವಾಗಿ ಆ ಕೃತ್ಯ ಮಾಡಿದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ವ್ಯಕ್ತಿಯೊಬ್ಬ ಮದ್ಯ ವ್ಯಸನಿಯಾಗಿದ್ದರೆ ಅಥವಾ ಆಧುನಿಕ ಪಾರ್ಟಿ ಕಲ್ಚರ್ ನಂತೆ ಆಗಾಗ ಆದರೂ ಆತ ಕುಡಿಯುತ್ತಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ಹಾಗೆಯೇ ವ್ಯಕ್ತಿಯೊಬ್ಬ ಇನ್ನೊಬ್ಬರಿಗೆ ವಂಚಿಸುವ, ಇನ್ನೊಬ್ಬರನ್ನು ಹೀಯ್ಯಾಳಿಸುವ, ನೋವುಂಟುಮಾಡುವ ಗುಣ ಹೊಂದಿದ್ದರೆ ಆತ ಧಮ್ಮದ ವಿರುದ್ಧ ಇರುವುದರಿಂದ ಬುದ್ಧ ಆತನಿಗೆ ಸಲ್ಲ ಎಂಬುದು. ಹೀಗೆಯೇ ಹೇಳುತ್ತಾ ಹೋಗುತ್ತಿದ್ದರೆ ಬುದ್ಧಕ್ಕೂ ಬದಲಿಗೆ ಧಮ್ಮಕ್ಕೆ ಆದ್ಯತೆ ಕೊಡುತ್ತಿದ್ದರೆ ಅಥವಾ ಬುದ್ಧನನ್ನು ತಲುಪಿಸುವ ಮುನ್ನ ವ್ಯಕ್ತಿಯೋರ್ವನಲ್ಲಿ ಧಮ್ಮವನ್ನು ಹುಡುಕುತ್ತಿದ್ದರೆ ಬೌದ್ಧ ಧರ್ಮ ಬೆಳೆಯುವುದಾದರೂ ಹೇಗೆ?

ಅಂದಹಾಗೆ ಮೂರನೆಯ ಹಂತವನ್ನೂ ಹೇಳುವುದಾದರೆ ಮೂರನೆಯ ಹಂತ ಅದು ಸಂಘ. ಹದಿನೈದು ವರ್ಷಗಳ ಹಿಂದಿನ ವಯಕ್ತಿಕ ಘಟನೆಯೊಂದನ್ನು ಹೇಳುವುದಾದರೆ ಹದಿನೈದು ವರ್ಷಗಳ ಹಿಂದೆ ನಾನು ಬೌದ್ಧ ಧರ್ಮಕ್ಕೆ ಮತಾಂತರ ಹೊಂದಿದವನಾಗಿದ್ದರೂ ಭಿಕ್ಕು ಒಬ್ಬರಿಗೆ ಗೌರವ ಕೊಟ್ಟಿರಲಿಲ್ಲ. ಯಾಕೆಂದರೆ ಮತಾಂತರ ಹೊಂದಿದ್ದರೂ ನನ್ನಲ್ಲಿ ಬುದ್ಧ ನೆಲೆಸಿರಲಿಲ್ಲ ಧಮ್ಮವಂತು ಇರಲೇ ಇಲ್ಲ.

ಆ ಕಾರಣದಿಂದ ಬುದ್ಧ, ಧಮ್ಮ , ಸಂಘ … ಇದು ವ್ಯಕ್ತಿ ಗಳಲ್ಲಿ ಹಂತ ಹಂತವಾಗಿ ನೆಲೆಗೊಳ್ಳಬೇಕು. ಕೆಲವರಲ್ಲಿ ತಕ್ಷಣ ನೆಲೆಗೊಳ್ಳಬಹುದು. ಕೆಲವರಲ್ಲಿ ನಿಧಾನಕ್ಕೆ ನೆಲೆಗೊಳ್ಳಬಹುದು. ಆದರೆ ಆಗಬೇಕಾದ ಕೆಲಸವೆಂದರೆ ಎಲ್ಲರನ್ನೂ ಬುದ್ಧಯಾನದಲ್ಲಿ ಜೊತೆಯಾಗಿ ತೆಗೆದುಕೊಳ್ಳುವ ಕೆಲಸ. ಎಲ್ಲರನ್ನೂ ಅಂದರೆ ಕೂಲಿ ಮಾಡುವ ಶೋಷಿತ ಸಮುದಾಯದ ಪೌರಕಾರ್ಮಿಕ, ಕಟ್ಟಡ ಕಾರ್ಮಿಕನಿಂದ ಹಿಡಿದು ಐಎಎಸ್ ಆಫೀಸರ್ ವರೆಗೆ. ಯಾರೋ ಒಂದಿಬ್ಬರು ಸರ್ಕಾರಿ ನೌಕರರ, ಅವರ ಕುಟುಂಬಸ್ಥರ ಧಮ್ಮ ಇದಾದರೆ ಅಂದರೆ ಬೌದ್ಧ ಧರ್ಮವಾದರೆ ಅದಕ್ಕೆ ವ್ಯಾಪಕತೆಯಾದರೂ ವಿಸ್ತಾರವಾದರೂ ಎಲ್ಲಿ ದೊರಕುತ್ತದೆ? ಆದ್ದರಿಂದ ಆಗಬೇಕಾದ್ದು ಮೊದಲು ವ್ಯಕ್ತಿಗಳಲ್ಲಿ ಬುದ್ಧ ನೆಲೆಸುವ ಕಾರ್ಯ. ನಂತರ ಆತನಿಗೆ ಧಮ್ಮ ಬೋಧಿಸುವ ಕೆಲಸ.

ಧಮ್ಮ ಅರಿತ ಮನುಷ್ಯ ಸಹಜವಾಗಿ ಸಂಘಕ್ಕೆ ಗೌರವ ಕೊಡುತ್ತಾನೆ. ಆದರೆ ಯಾವುದೇ ಕಾರಣಕ್ಕೂ ವ್ಯಕ್ತಿಗಳಲ್ಲಿ ಮೊದಲು ಧಮ್ಮ ಹುಡುಕಬಾರದು. ಅದು ಅಪಾಯಕಾರಿ ಮತ್ತು ಬುದ್ಧ ಧರ್ಮಕ್ಕೆ ಅದು ವ್ಯತಿರಿಕ್ತ ಪರಿಣಾಮ(reverse effect) ಉಂಟುಮಾಡುವಂತದ್ದು. ವಿಶೇಷವಾಗಿ ಇಂತಹ ತಪ್ಪು ಮಾಡುವಂತಹವರು ಈಗಾಗಲೇ ಬುದ್ಧನನ್ನು ಸ್ವೀಕರಿಸಿ ಧಮ್ಮವನ್ನು ಕಲಿಯುತ್ತಿರುವವರು ಮಾಡುವಂತಹದ್ದು. ಅಂದರೆ ತಮ್ಮಲ್ಲಿ ಇರುವ ಧಮ್ಮವನ್ನು ಇತರರಲ್ಲಿ ಅಂದರೆ ಬುದ್ಧನನ್ನೇ ಹೊಂದದವರಲ್ಲಿ ಹುಡುಕುವುದು. ಆ ಮಾದರಿಯಲ್ಲಿಯೇ ಬುದ್ಧನನ್ನು ಪ್ರಚಾರ ಮಾಡುವುದು ಅಥವಾ ಬುದ್ಧ ಧರ್ಮ ಹೀಗೆಯೇ ಎಂದು ಪ್ರತಿಪಾದಿಸುವುದು. ಖಂಡಿತ, ಇದು ಅಪಾಯಕಾರಿ ವಿಧಾನ.

ಬದಲಿಗೆ ಬುದ್ಧನನ್ನು, ಬುದ್ಧ ಸಂಪ್ರದಾಯವನ್ನು ಮೊದಲು ಜನಸಾಮಾನ್ಯರಿಗೆ ಆಚರಿಸುವುದ ಕಲಿಸಬೇಕು ಅದೂ ನಿರಂತರವಾಗಿ ನಿಯಮಿತವಾಗಿ. ಹೇಗೆಂದರೆ ಅವರ ಬುಡಕಟ್ಟು ಆಚರಣೆ, ಹಳ್ಳಿ ಸಂಪ್ರದಾಯವೆಲ್ಲ ಅಂತಹ ಬುದ್ಧಾಚರಣೆಯಲ್ಲಿ ಮರೆಯಾಗುವ ಮಟ್ಟಿಗೆ. ನಂತರ ಆತನಿಗೆ ಆತ ಶಿಕ್ಷಣ ಪಡೆದ, ಅರ್ಥಾತ್ ಅಕ್ಷರ ಅರ್ಥ ಮಾಡಿಕೊಳ್ಳಬಲ್ಲನಾದರೆ ವಿಪಸ್ಸನ ಧ್ಯಾನ ಇದನ್ನೆಲ್ಲ ಕಲಿಸಬೇಕು. ಅಕಸ್ಮಾತ್ ಆತನ ಶಿಕ್ಷಣ ಮಟ್ಟ ಅಥವಾ ಅರಿವಿನ ಮಟ್ಟ ಧಮ್ಮವನ್ನು ಅರಿಯುವ ಮಟ್ಟಕ್ಕೆ ಬರಲಿಲ್ಲ ಎಂದರೆ ಆತನನ್ನು ಬುದ್ಧನ ಆಚರಣೆಗಳಿಗಷ್ಟೆ ಸೀಮಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಆತನಿಗೆ ನೀನು ಧಮ್ಮ ಕಲಿತಿಲ್ಲ ಧಮ್ಮದಲ್ಲಿ ಇರಲು ನೀನು ಯೋಗ್ಯನಲ್ಲ ಎಂದು ಆರೋಪ ಮಾಡುವಂತಾಗಬಾರದು. ಯಾಕೆಂದರೆ ಧಮ್ಮದಲ್ಲಿ ಕೆಲವರು ಪಿಹೆಚ್‌ಡಿ ಮಾಡಬಹುದು ಕೆಲವರು ಎಲ್ ಕೆ ಜಿ ಮಟ್ಟದಲ್ಲಿಯೇ ಉಳಿದುಬಿಡಬಹುದು ಇದು ಅವರವರ ಜ್ಞಾನದ ಮಟ್ಟಕ್ಕೆ ಪರಿಸ್ಥಿತಿಗೆ ಸಂಬಂಧಿಸಿದ ಅಂಶ.

ಹಾಗೆಯೇ ಸಂಘವೂ ಅಷ್ಟೇ, ಬುದ್ಧ ಮತ್ತು ಧಮ್ಮ ಅರಿತ ಮನುಷ್ಯ ಸಂಘಕ್ಕೆ ಗೌರವ ಕೊಟ್ಟೇ ಕೊಡುತ್ತಾನೆ. ಅದು ಬಿಟ್ಟು, ಈಗಾಗಲೇ ಬುಡಕಟ್ಟು ಸಂಪ್ರದಾಯಗಳನ್ನು ಸಾವಿರಾರು ವರ್ಷಗಳಿಂದ ಆಚರಿಸುತ್ತಿರುವವರನ್ನು ಬೌದ್ಧ ಧರ್ಮಕ್ಕೆ ಸೇರಿಸಿಕೊಂಡು ನೀನು ‌ಭಿಕ್ಕುಗಳಿಗೆ ಗೌರವ ಕೊಡುತ್ತಿಲ್ಲ ನೀನು ಬುದ್ಧ ವಿರೋಧಿ ಎನ್ನುವುದು ಕೂಡ ತಪ್ಪಾಗುತ್ತದೆ.

ಬುದ್ಧ ಧಮ್ಮ ಎಂದರೆ ಅದು ಪರಿವರ್ತನೆ. ಅದು ದಿಢೀರನೆ ಆಗುವಂತಹದ್ದಲ್ಲ ಹಂತ ಹಂತವಾಗಿ ಆಗುವಂತಹದ್ದು. ಹಾಗೆಯೇ ನಾವು ಬುದ್ಧ ಧರ್ಮವನ್ನು ಈಗ ವಿಶೇಷವಾಗಿ ಶೋಷಿತ ಸಮುದಾಯಗಳ ನಡುವೆ ಬೆಳೆಸುತ್ತಿರುವುದು ಧರ್ಮರಹಿತ ಸ್ಥಿತಿಯಿಂದ. ಹೀಗಿರುವಾಗ ಅಂತಹವರಿಂದ ದಿಢೀರ್ ಬದಲಾವಣೆ, ಶಿಸ್ತು, ಫಲಿತಾಂಶ ಬಯಸುವುದು? ಖಂಡಿತ, ಅದು ತಪ್ಪು ಪರಿಕಲ್ಪನೆ ಆಗುತ್ತದೆ. ಶೋಷಿತ ಸಮುದಾಯಗಳ ಸಾಮಾಜಿಕ ವಾತಾವರಣದಲ್ಲಿ ಬೌದ್ಧ ಧರ್ಮ ಹರಡುವ ತಪ್ಪು ವಿಧಾನ ಅದಾಗುತ್ತದೆ. ಈ ನಿಟ್ಟಿನಲ್ಲಿ ಮೊದಲು ಬುದ್ಧ, ನಂತರ ಹಂತಹಂತವಾಗಿ ಧಮ್ಮ, ನಂತರ ಸಂಘ ಎಂದುಕೊಂಡರೆ ಖಂಡಿತ ಬೌದ್ಧಧರ್ಮ ಯಶಸ್ವಿಯಾಗಿ ಮುನ್ನಡೆಯುತ್ತದೆ. ಬದಲಿಗೆ ಇಂತಹ ಸರಳ ವಾಸ್ತವ ಅರ್ಥ ಮಾಡಿಕೊಳ್ಳದೆ ಕೆಲವು ಸಿದ್ಧ ಮಾದರಿಯಲ್ಲಿ ಧಮ್ಮ ಹರಡುವ ಕ್ರಿಯೆ ಕೈಗೊಂಡರೆ ಅಥವಾ ಬೌದ್ಧಧರ್ಮ ವಿಶ್ಲೇಷಿಸಿದರೆ ಖಂಡಿತ ಅಲ್ಲಿ ಅಪಾಯಕಾರಿ ವಾತಾವರಣ ಸೃಷ್ಟಿಯಾಗುತ್ತದೆ. ಬೌದ್ಧ ಧರ್ಮದ ಬೆಳವಣಿಗೆಗೆ ಅದು ನಿಸ್ಸಂಶಯವಾಗಿ ತಡೆಯಾಗುತ್ತದೆ ಎಂದು ನಿರ್ಭೀತಿಯಿಂದ ಹೇಳಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...