ಸೌದಿ ಅರೇಬಿಯಾ ದೇಶವು ವಿಶ್ವದ 34 ದೇಶಗಳಲ್ಲಿ ಪವಿತ್ರ ರಂಜಾನ್ ತಿಂಗಳ ಇಫ್ತಾರ್ ಕಾರ್ಯಕ್ರಮವನ್ನು ಪ್ರಾರಂಭಿಸಲಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ವರದಿ ಮಾಡಿದೆ. ಏಪ್ರಿಲ್ 2 ರಂದು ಪ್ರಾರಂಭವಾಗುವ ರಂಜಾನ್ ಸಮಯದಲ್ಲಿ ಮುಸ್ಲಿಮರಿಗೆ ಇಫ್ತಾರ್ ಭೋಜನವನ್ನು ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದ್ದು, ಸುಮಾರು 1.2 ಮಿಲಿಯನ್ ಜನರು ಈ ಯೋಜನೆಯಿಂದ ಪ್ರಯೋಜನೆ ಪಡೆಯಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಸೌದಿ ಅರೇಬಿಯಾದ ಇಸ್ಲಾಮಿಕ್ ವ್ಯವಹಾರಗಳು, ದಾವಾ ಮತ್ತು ಮಾರ್ಗದರ್ಶನ ಸಚಿವಾಲಯವು ವಿಶ್ವದ ಎಲ್ಲಾ ಖಂಡಗಳನ್ನು ಯೋಜನೆ ತಲುಪಲು ಬೇಕಾಗಿ ಕಾರ್ಯಕ್ರಮಕ್ಕೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿದ್ದು, ಅಗತ್ಯ ಮತ್ತು ವಿನಂತಿಗಳನ್ನು ಅವಲಂಬಿಸಿ ಸೌದಿ ರಾಯಭಾರ ಕಚೇರಿಗಳು ಮತ್ತು ಸಚಿವಾಲಯದ ಇಸ್ಲಾಮಿಕ್ ಕೇಂದ್ರಗಳು ಯೋಜನೆಯನ್ನು ಸಮನ್ವಗೊಳಿಸಲಿದೆ.
ಇದನ್ನೂ ಓದಿ: ಪತ್ರಿಕೋದ್ಯಮ ಜಾಗದಲ್ಲಿ ಪ್ರತ್ಯಕ್ಷವಾದ ದ್ವೇಷ; ಸುದ್ದಿರಹಿತ ಸುದ್ದಿ ಮಾಧ್ಯಮಗಳಾದ ಕನ್ನಡ ಟಿವಿಗಳ ಪ್ರಕರಣ
ಇಸ್ಲಾಮಿಕ್ ವ್ಯವಹಾರಗಳು, ದಾವಾ ಮತ್ತು ಮಾರ್ಗದರ್ಶನದ ಸಚಿವ ಶೇಖ್ ಅಬ್ದುಲ್ಲತೀಫ್ ಅಲ್-ಅಶೇಖ್, ಪವಿತ್ರ ತಿಂಗಳಲ್ಲಿ ಇಸ್ಲಾಂ ಮತ್ತು ಮುಸ್ಲಿಮರಿಗೆ ಸೇವೆ ಸಲ್ಲಿಸುವ ಇಂತಹ ದತ್ತಿ ಯೋಜನೆಗಳನ್ನು ಪ್ರಾರಂಭಿಸಿದ ನಾಯಕತ್ವದ ಬೆಂಬಲವನ್ನು ಎತ್ತಿ ತೋರಿಸಿದ್ದಾರೆ. ಫಲಾನುಭವಿ ದೇಶಗಳಲ್ಲಿ ನಿಯಮಾವಳಿಗಳ ಪ್ರಕಾರ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಕೊರೊನಾಗೆ ಸಂಬಂಧಿಸಿದಂತೆ ನಿರ್ಬಂಧ ಮತ್ತು ಆರೋಗ್ಯ ಪ್ರೋಟೋಕಾಲ್‌ಗಳು ಜಾರಿಯಲ್ಲಿದ್ದ ಕಾರಣ, ದೇಶದ ಇಫ್ತಾರ್ ಕಾರ್ಯಕ್ರಮಗಳನ್ನು ವಿಶ್ವದ 16 ದೇಶಗಳಿಗೆ ಮಾತ್ರ ನೀಡಲಾಗಿತ್ತು. ಸೌದಿ ಅರೇಬಿಯಾ ಈ ವರ್ಷ ಕೂಡಾ ಫಲಾನುಭವಿ ದೇಶಗಳಲ್ಲಿ ಸಾಂಕ್ರಮಿಕ ರೋಗ ತಡೆಗಟ್ಟುವ ಕ್ರಮಗಳನ್ನು ಅಳವಡಿಸಿಕೊಂಡೆ ಈ ಯೋಜನೆಯನ್ನು ರೂಪಿಸಿದೆ.
2022 ರ ರಂಜಾನ್‌ನಲ್ಲಿ ಉಮ್ರಾವನ್ನು ಯಾತ್ರೆಗೆ ಹೊರಡುವ ಮುಸ್ಲಿಮರಿಗೆ, ವಿಶೇಷವಾಗಿ ವಿದೇಶಿಯರಿಗೆ ಉತ್ತೇಜನ ನೀಡಲು, ಕಡ್ಡಾಯ ವ್ಯಾಕ್ಸಿನೇಷನ್ ಸೇರಿದಂತೆ ವಿದೇಶಿ ಪ್ರಯಾಣಿಕರ ಮೇಲಿನ ಎಲ್ಲಾ ಕೋವಿಡ್ ಸಂಬಂಧಿತ ನಿರ್ಬಂಧಗಳನ್ನು ಸೌದಿ ಅರೇಬಿಯಾ ತೆಗೆದುಹಾಕಿದೆ.
ಇದನ್ನೂ ಓದಿ: ಹಿಜಾಬಿಗೆ ಡಿಯರ್ ಮೀಡಿಯಾದ 5W -1H ಜವಾಬ್
“2 ವರ್ಷಗಳ ನಂತರ, ಸಾಂಕ್ರಾಮಿಕ ರೋಗದ ಕಾರಣಕ್ಕಾಗಿ ಜಾರಿಗೆ ತರಲಾಗಿದ್ದ ಉಮ್ರಾ / ಝಿಯಾರಾ ಮೇಲಿನ ಎಲ್ಲಾ ಪ್ರಯಾಣ ಸಂಬಂಧಿತ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ” ಎಂದು ಮಕ್ಕಾ ಮದೀನಾದ ಮಸೀದಿಯ ಅಧಿಕೃತ ಟ್ವಿಟರ್ ಹ್ಯಾಂಡಲ್ ಆಗಿರುವ ಹರಮೈನ್ ಷರೀಫೈನ್ ಸೌದಿ ಟೂರಿಸಂನ ಟ್ವೀಟ್ ಅನ್ನು ಮರುಟ್ವೀಟ್ ಮಾಡಿದೆ.
#مشتاقون_لضيوف_الرحمن 🕋
رفعنا القيود وسهلنا الإجراءات لأداء العمرة وزيارة الحرمين الشريفيناحصل على تأشيرة الدخول إلى #السعودية:https://t.co/8KzA9bmweM pic.twitter.com/oPFQn15l0k
— الهيئة السعودية للسياحة (@SaudiTourism) March 27, 2022
ಇದನ್ನೂ ಓದಿ: ಸಾಮಾಜಿಕ ನೈತಿಕ ಮೌಲ್ಯಗಳ ದೃಷ್ಟಿಯಿಂದ ಪವಿತ್ರ ರಂಜಾನ್ ಮಾಸ


