ಪೊಲೀಸರು ಯಾವುದೇ ನೆಪದಲ್ಲಿ ಯಾವುದೇ ನಾಗರಿಕರ ಮೊಬೈಲ್ ಫೋನ್‌ಗಳನ್ನು ಪರಿಶೀಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿಲಾಗಿದ್ದು, ಅಂತಹ ಯಾವುದೇ ಘಟನೆಗಳು ಕಂಡು ಬಂದರೆ ದೂರು ನೀಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಸೋಮವಾರ ಹೇಳಿದ್ದಾರೆ.
ಬೆಂಗಳೂರಿನ ಪೊಲೀಸರು ವಿಚಾರಣೆ ನಡೆಸುವ ನೆಪದಲ್ಲಿ ಜನರ ಮೊಬೈಲ್‌ಗಳನ್ನು ಪರಿಶೀಲಿಸಿ ಖಾಸಗಿತನಕ್ಕೆ ಧಕ್ಕೆ ತರುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನು ಖ್ಯಾತ ಸುದ್ದಿ ವೈಬ್‌ಸೈಟ್ ನ್ಯೂಸ್‌ಲಾಂಡ್ರಿ ಇತ್ತೀಚೆಗೆ ವರದಿ ಮಾಡಿತ್ತು. ಈ ವರದಿಯ ನಂತರ ಆಯುಕ್ತರು ತಮ್ಮ ಹೇಳಿಕೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ನೀಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ನ್ಯೂಸ್ ಲಾಂಡ್ರಿ ಬೆಂಗಳೂರಿನ ಹಲವಾರು ಪ್ರದೇಶಗಳಲ್ಲಿ ಜನರ ಮೊಬೈಲ್ ಕಿತ್ತುಕೊಂಡು ವಿಚಾರಣೆ ನೆಪದಲ್ಲಿ ಅವರ ಖಾಸಗಿತನಕ್ಕೆ ಧಕ್ಕೆ ಮಾಡುತ್ತಿರುವ ಹಲವಾರು ಘಟನೆಗಳ ಬಗ್ಗೆ ವರದಿ ಮಾಡಿತ್ತು. ಇದರಲ್ಲಿ ಹಲವಾರು ಸಂತ್ರಸ್ತ ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದರು.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!
ಈ ವರದಿಯ ನಂತರ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, “ಯಾವುದೇ ಪೊಲೀಸರು ಯಾವುದೇ ನೆಪದಲ್ಲಿ ಯಾವುದೇ ನಾಗರಿಕರ ಮೊಬೈಲ್ ಫೋನ್ ಅನ್ನು ಪರಿಶೀಲಿಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಂತಹ ಯಾವುದೇ ಘಟನೆ ಕಂಡುಬಂದಲ್ಲಿ, ದಯವಿಟ್ಟು 112 ಗೆ ಅಥವಾ 080-22942215 ಗೆ ಕರೆ ಮಾಡಿ ಪೊಲೀಸ್ ಆಯುಕ್ತರಿಗೆ ತಿಳಿಸಿ” ಎಂದು ಹೇಳಿದ್ದಾರೆ.
ದೂರು ನೀಡಿದ ವ್ಯಕ್ತಿಗಳ ಗುರುತನ್ನು ಗೌಪ್ಯವಾಗಿ ಇಡಲಾಗುತ್ತದೆ ಎಂದು ಹೇಳಿರುವ ಕಮಲ್ ಪಂತ್, ಕೃತ್ಯ ನಡೆಯುವ ಸ್ಥಳ ಮತ್ತು ಸಮಯವನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ಮೆಸೇಜ್ ಮಾಡಬಹುದು ಎಂದು ಹೇಳಿದ್ದಾರೆ.
Your identity will remain confidential.
You may also DM the time and location, we will do the further needful.(2/2)
— Kamal Pant, IPS. ಪೊಲೀಸ್ ಆಯುಕ್ತರು, ಬೆಂಗಳೂರು ನಗರ. (@CPBlr) April 4, 2022
ನ್ಯೂಸ್ ಲಾಂಡ್ರಿ ತನ್ನ ವರದಿಯಲ್ಲಿ, ಪೊಲೀಸರು ಡ್ರಗ್ಸ್ ಹೆಸರಿನಲ್ಲಿ ಬೆದರಿಸಿ ಲಂಚಕ್ಕಾಗಿ ಬೇಡಿಕೆ ಇಡುವುದು, ಜನರ ಮೊಬೈಲ್ ಕಿತ್ತುಕೊಂಡು ಅವರ ಫೋಟೊಗಳನ್ನು ಚೆಕ್ ಮಾಡುವುದು, ವಾಟ್ಸಪ್ ಅನ್ನು ಪರಿಶೀಲಿಸಿ ತನ್ನ ಗೆಳತಿಯೊಂದಿಗೆ ಜಾಸ್ತಿ ಹೊತ್ತು ಚಾಟ್ ಮಾಡದಿರು ಎಂದು ಪುಕ್ಕಟೆ ಸಲಹೆ ನೀಡುವುದು, ರಾತ್ರಿ ಹೊತ್ತು ಸುಖಾ ಸುಮ್ಮನೆ ಬೆದರಿಸಿ ಹಣ ಕಿತ್ತುಕೊಳ್ಳುವುದು ಸೇರಿದಂತೆ ಹಲವು ಕುಕೃತ್ಯಗಳನ್ನು ಮಾಡುತ್ತಿದ್ದಾರೆ ಎಂದು ಜನರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ ಎಂದು ಉಲ್ಲೇಖಿಸಿತ್ತು.
ಸಂತ್ರಸ್ತರೊಬ್ಬರು ಬೆಂಗಳೂರು ಪೊಲೀಸರನ್ನು ಉಲ್ಲೇಖಿಸಿ, “ನಾನು ಡಕಾಯಿತರ ಗುಂಪಿನಿಂದ ದರೋಡೆಗೆ ಒಳಗಾಗುತ್ತಿರುವಂತೆ ನನಗೆ ಅನಿಸಿತು” ಎಂದು ಆತಂಕ ವ್ಯಕ್ತಪಡಿಸಿದ್ದಾಗಿ ನ್ಯೂಸ್ ಲಾಂಡ್ರಿ ತನ್ನ ವರದಿಯಲ್ಲಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಮತ್ತೆ ಇಂಧನ ಬೆಲೆ ಏರಿಕೆ; ಎರಡು ವಾರಗಳಲ್ಲಿ ಪೆಟ್ರೋಲ್ ಬೆಲೆ 10 ರೂ. ಹೆಚ್ಚಳ


