ಮಂಗಳವಾರದಂದು ಮೋದಿ ನೇತೃತ್ವದ ಒಕ್ಕೂಟ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಕೆ ಮಾಡಿದೆ. ಇದರಿಂದಾಗಿ ಇಂಧನ ದರಗಳು ಲೀಟರ್‌ಗೆ 80 ಪೈಸೆಗಳಷ್ಟು ಏರಿಕೆಯಾಗಿದೆ. ಕಳೆದ ಎರಡು ವಾರಗಳಲ್ಲಿ ಮಾಡಲಾಗಿರುವ ನಿರಂತರವಾದ ಬೆಲೆ ಏರಿಕೆಯಿಂದಾಗಿ, ಈ ಹಿಂದಿನ ದರಕ್ಕಿಂತ ಹೆಚ್ಚುವರಿಯಾಗಿ ಪ್ರತಿ ಲೀಟರ್‌ಗೆ 9.20 ರೂ. ಏರಿಕೆಯಾಗಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಈ ಹಿಂದೆ ಇದ್ದ 103.81 ರೂ. ನಿಂದ 104.61 ರೂ.ಗೆ ತಲುಪಿದೆ. ನಿನ್ನೆ ಡೀಸೆಲ್ ದರಗಳು ಪ್ರತಿ ಲೀಟರ್‌ಗೆ 95.07 ರೂ. ಇದ್ದು, 95.87 ರೂ.ಗೆ ಏರಿಕೆಯಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಈ ಬೆಲೆ ಏರಿಕೆಯೊಂದಿಗೆ ರಾಜ್ಯದಲ್ಲಿ ಸರಾಸರಿಯಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 1 ರೂ. ಮತ್ತು 93 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದಲ್ಲಿ ಸರಾಸರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 110.80 ಮತ್ತು 94.53 ರೂ. ತಲುಪಿದೆ.
ಇದನ್ನೂ ಓದಿ: ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಭಟ್ಕಳ-ಹೊನ್ನಾವರ: ಧರ್ಮಕಾರಣ ಮತ್ತು ಜಾತಿಕಾರಣದ ಜುಗಲ್‌ಬಂದಿಯ ಆಖಾಡ!
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 84 ಪೈಸೆ ಮತ್ತು 78 ಪೈಸೆ ಏರಿಕೆಯಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ 110.25 ರೂ. ಮತ್ತು 94.01 ರೂ. ತಲುಪಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 1.81 ರೂ. ಪೆಟ್ರೋಲ್‌ಗೆ ಏರಿಕೆಯಾಗಿದ್ದು ಅಲ್ಲಿ ಪ್ರತಿ ಲೀಟರ್‌ಗೆ 111.26 ರೂ. ತಲುಪಿದೆ. ದಾವಣಗೆರೆಯಲ್ಲಿ ಪೆಟ್ರೋಲ್ ಬೆಲೆ 1.16 ರೂ. ಏರಿಕೆಯಾಗಿದ್ದು 112.05 ರೂ. ಪ್ರತಿ ಲೀಟರ್‌ಗೆ ಏರಿಕೆಯಾಗಿದೆ. ಇದು ರಾಜ್ಯದಲ್ಲೇ ಅತೀ ಹೆಚ್ಚು ಪೆಟ್ರೋಲ್ ದರವಿರುವ ಜಿಲ್ಲೆಯಾಗಿ ಹೊರಹೊಮ್ಮಿದೆ.
ಚಿತ್ರದುರ್ಗದಲ್ಲೂ ಪೆಟ್ರೋಲ್‌ಗೆ 112.04 ರೂ.ಗೆ ತಲುಪಿದ್ದು, ಬಳ್ಳಾರಿಯಲ್ಲಿ 112.02 ರೂ.ಗೆ ತಲುಪಿದೆ. ಉಳಿದಂತೆ ಇತರ ಜಿಲ್ಲೆಗಳ ಪೆಟ್ರೋಲ್ ಏರಿಕೆ ಪಟ್ಟಿ ಈ ಕೆಳಗಿನಂತಿದೆ.
ಐದು ರಾಜ್ಯಗಳಲ್ಲಿ ಚುನಾವಣೆ ಇದ್ದುದರಿಂದ ಕಚ್ಚಾ ತೈಲ ಬೆಲೆ ಏರಿಕೆಯ ಹೊರತಾಗಿಯೂ ನಾಲ್ಕು ತಿಂಗಳ ಕಾಲ ಇಂಧನ ದರಗಳನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏರಿಸಿರಲಿಲ್ಲ. ಇದರ ಬಂತರ ದರ ಪರಿಷ್ಕರಣೆ ಮಾರ್ಚ್ 22 ರ ನಂತರ ಮತ್ತೆ ಪ್ರಾರಂಭವಾಗಿತ್ತು.
ಬಿಜೆಪಿ ಸರ್ಕಾರ ಇತ್ತೀಚೆಗಷ್ಟೆ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ಏರಿಕೆ ಮಾಡಿರುವುದರಿಂದ ಬೆಂಗಳೂರಿನ ಹೋಟೆಲ್‌ಗಳು ಊಟ-ಉಪಹಾರಗಳ ಬೆಲೆಯನ್ನು ಏರಿಕೆ ಮಾಡಿವೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಕತ್ತಲೆ ದಾರಿಗೆ ಬೆಳಕು ಹಿಡಿಯುವವರ್‍ಯಾರು?