ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಕಾವೇರಿ ಹಾಸ್ಟೆಲ್‌ನಲ್ಲಿ ರಾಮ ನವಮಿ ದಿನ ಮಾಂಸಾಹಾರ ಮಾಡಬಾರದು ಎಂದು ಆಗ್ರಹಿಸಿ ‘ಎಬಿವಿಪಿ ದುಷ್ಕರ್ಮಿ’ಗಳು ಸೋಮವಾರ ದಾಳಿ ಮಾಡಿದ್ದು ಸುಮಾರು ಹದಿನೈದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ದುಷ್ಕರ್ಮಿಗಳು ಸಂಜೆ ಸುಮಾರು 05:30ರ ಹೊತ್ತಿಗೆ ಕಾವೇರಿ ಹಾಸ್ಟೆಲ್ ಪ್ರವೇಶಿಸಿ ಅಡುಗೆ ಮಾಡುವವರೊಂದಿಗೆ ರಾಮ ನವಮಿಯ ಕಾರಣಕ್ಕೆ ಮಾಂಸಾಹಾರ ಮಾಡಬಾರದು ಎಂದು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಅಲ್ಲಿನ ಮೆಸ್ ಕಾರ್ಯದರ್ಶಿ ಇದನ್ನು ವಿರೋಧಿಸಿದ್ದಾರೆ. ಮಾತಿಗೆ ಮಾತು ಬೆಳೆದು ವಿದ್ಯಾರ್ಥಿಗಳು ಸೇರಲು ಆರಂಭಿಸಿದಾಗ ದೊಣ್ಣೆಗಳೊಂದಿಗೆ ಬಂದಿದ್ದ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಜೆಎನ್‌ಯು ಹಾಸ್ಟೆಲ್‌ನಲ್ಲಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಹೀಗೆ ವಾರಕ್ಕೆ ಮೂರು ದಿನಗಳು ಮಾಂಸಾಹಾರವನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಮಾಂಸಾಹಾರಿಗಳು ಅಲ್ಲದ ವಿದ್ಯಾರ್ಥಿಗಳಿಗೆ ಆ ದಿನ ಪನೀರ್ ತರಹದ ಸಸ್ಯಾಹಾರವನ್ನೂ ನೀಡಲಾಗುತ್ತದೆ.
Watch this, see how ABVP goons are all about inflicting violence !
Arrest the culprits immediately. pic.twitter.com/4QgmXjSzTo
— Aishe (ঐশী) (@aishe_ghosh) April 11, 2022
ಇದನ್ನೂ ಓದಿ: ಬಾಬರಿ ಮಸೀದಿ ಧ್ವಂಸದ ಕತೆ ಹೇಳುವ ‘ರಾಮ್ ಕೆ ನಾಮ್’ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ
ದುಷ್ಕರ್ಮಿಗಳು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡುತ್ತಿದ್ದಾಗ ಅಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ಗಳು ಸುಮ್ಮನೆ ನಿಂತು ನೋಡುತ್ತಿದ್ದರು ಮತ್ತು ಪೊಲೀಸರಿಗೆ ಕರೆ ಮಾಡಿ ಅವರು ಬಂದ ನಂತರ ಕೂಡಾ ಅವರ ಮುಂದೆಯೆ ಎಬಿವಿಪಿ ಕಾರ್ಯಕರ್ತರು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದಾರೆ ಎಂದು ಜೆಎನ್‌ಯು ವಿದ್ಯಾರ್ಥಿಯೊಬ್ಬರು ನಾನುಗೌರಿ.ಕಾಂಗೆ ಹೇಳಿದ್ದಾರೆ.
ನಾನುಗೌರಿ.ಕಾಂ ಜೊತೆಗೆ ಮಾತನಾಡಿದ ಜೆಎನ್‌ಯು ವಿದ್ಯಾರ್ಥಿನಿ ಉದಿತಾ ಅವರು, “ನಿನ್ನೆ ರಾತ್ರಿ ನಾವು ಪೊಲೀಸರಿಗೆ ದೂರು ನೀಡಿ ಆಗ್ರಹಗಳನ್ನು ಸಲ್ಲಿಸಿ ಬಂದಿದ್ದೇವೆ. ಇಂದು ಎರಡು ಗಂಟೆಗೆ ದೆಹಲಿ ಪೊಲೀಸರ ವಿರುದ್ಧ ಪ್ರತಿಭಟನೆ ಆಯೋಜಿಸಿದ್ದೇವೆ” ಎಂದು ಹೇಳಿದ್ದಾರೆ. ಎಬಿವಿಪಿಯ ದುಷ್ಕರ್ಮಿಗಳ ದಾಳಿಯಲ್ಲಿ ಉದಿತಾ ಅವರು ಕೂಡಾ ಗಾಯಗೊಂಡಿದ್ದಾರೆ.
“ಹಾಸ್ಟೆಲ್‌ನಲ್ಲಿ ವಾರಕ್ಕೆ ಮೂರು ದಿನ ಮಾಂಸಾಹಾರ ನೀಡುತ್ತಾರೆ. ರಾಮನವಮಿ ದಿನ ಮಾಂಸಾಹಾರ ಮಾಡಬಾರದು ಎಂದು ದಾಳಿ ಮಾಡಲಾಗಿದೆ. ಮಾಂಸಾಹಾರದ ವಿಚಾರದಲ್ಲಿ ಒಂದು ದಿನ ನಾವು ಕೂಡಾ ರಾಜಿ ಆಗುತ್ತೇವೆ. ಆದರೆ ಇದು ಕೇವಲ ರಾಜಿಯ ವಿಚಾರವಲ್ಲ. ಇದು ನಮ್ಮ ಆಹಾರದ ಆಯ್ಕೆಯ ಹಕ್ಕಿನ ಪ್ರಶ್ನೆ. ಇಂತಹ ಸಮಯದಲ್ಲಿ ಇಂತಹ ಆಹಾರ ತಿನ್ನಬೇಕು ಎಂದು ಯಾರಿಗೂ ಹೇಳುವ ಅಧಿಕಾರ ಯಾರಿಗೂ ಇಲ್ಲ. ಯಾರಿಗೂ ಯಾವುದೇ ಸಮಯಲ್ಲಿ ಯಾವುದೆ ಆಹಾರ ತಿನ್ನುವ ಹಕ್ಕಿದೆ” ಎಂದು ಉದಿತಾ ಹೇಳಿದ್ದಾರೆ.
ABVP hooligans stopped residents inside JNU from having non Veg food
ABVP also assaulted the mess secretary of the Hostel.
Unite against the hooliganism unleashed by ABVP inside campus premises.https://t.co/3MpRE9zXn4 pic.twitter.com/Fy3HU7qg8J
— Aishe (ঐশী) (@aishe_ghosh) April 10, 2022
ಇದನ್ನೂ ಓದಿ: ಗೋಡ್ಸೆ- ಬಿಜೆಪಿ ಪರ, ಜೆಎನ್‌ಯು- ರೈತ ವಿರೋಧಿ ಟ್ವೀಟ್‌ಗಳು ವೈರಲ್: ಜೆಎನ್‌ಯು ನೂತನ ಉಪಕುಲಪತಿ ಹೆಸರಿನಲ್ಲಿದ್ದ ಖಾತೆ ಡಿಲೀಟ್
“ದಾಳಿಯ ಸಮಯದಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಕೆಲವು ವಿದ್ಯಾರ್ಥಿಗಳನ್ನು ನೆಲಕ್ಕೆ ಕೆಡವಿ ಹಲ್ಲೆ ನಡೆಸಿದ್ದಾರೆ. ನನಗೆ ಸೇರಿದಂತೆ ಇನ್ನೂ ಹದಿನೈದು ವಿದ್ಯಾರ್ಥಿಗಳಿಗೆ ಗಾಯಗಳಾಗಿವೆ. ಮೂವರಿಗೆ ಕೊಲೆ ಬೆದರಿಕೆಯನ್ನೂ ಒಡ್ಡಲಾಗಿದೆ. ಸರಣಿಯಾಗಿ ಅಪರಾಧ ಮಾಡುವ ಕೆಲವರ ಹೆಸರನ್ನು ನಾವು ದೂರಿನಲ್ಲಿ ನೀಡಿದ್ದೇವೆ. ಜೊತೆಗೆ ಕೆಲವು ಆಗ್ರಹಗಳನ್ನೂ ದೆಹಲಿ ಪೊಲೀಸರ ಮುಂದೆ ಇಟ್ಟಿದ್ದೇವೆ” ಎಂದು ಉದಿತಾ ಅವರು ತಿಳಿಸಿದ್ದಾರೆ.
ಎಬಿವಿಪಿ ದುಷ್ಕರ್ಮಿಗಳ ಈ ದಾಳಿಯನ್ನು ವಿರೋಧಿಸಿ ವಿದ್ಯಾರ್ಥಿಗಳು ಪೊಲೀಸ್ ಠಾಣೆಯಲ್ಲಿ ರಾತ್ರಿ ಮೂರು ಗಂಟೆಯವರೆಗೂ ಪ್ರತಿಭಟನೆ ನಡೆಸಿದ್ದಾಗಿ ಜೆಎನ್‌ಯು ವಿದ್ಯಾರ್ಥಿನಿ ಅಪರ್ಣ ಹೇಳಿದ್ದಾರೆ. “ಹತ್ತರಿಂದ ಹದಿನೈದು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಕೆಲವರಿಗೆ ಗಂಭೀರ ಗಾಯಗಳಾವೆ. ನನ್ನ ಬ್ಯಾಚ್‌ನ ವಿದ್ಯಾರ್ಥಿನಿಯೊಬ್ಬಳಿಗೆ ತಲೆ ಮತ್ತು ಕಣ್ಣಿನ ಭಾಗದಲ್ಲಿ ತೀವ್ರ ರೀತಿಯಲ್ಲಿ ಗಾಯವಾಗಿದೆ. ಮತ್ತೊಬ್ಬ ವಿದ್ಯಾರ್ಥಿನಿ ದಾಳಿಯಿಂದಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಈ ದಾಳಿಯನ್ನು ವಿರೋಧಿಸಿ ನಾವು ರಾತ್ರಿ ಸುಮಾರು ಮೂರು ಗಂಟೆಯವರೆಗೂ ಪ್ರತಿಭಟನೆ ನಡೆಸಿದ್ದೇವೆ. ಪೊಲೀಸರು ಪ್ರಕರಣ ದಾಖಲಿಸುವುದಾಗಿ ಹೇಳಿದ್ದಾರೆ. ದಾಳಿಗೊಳಗಾದ ವಿದ್ಯಾರ್ಥಿಗಳು ವೈದ್ಯಕೀಯ ಪ್ರಮಾಣ ಪತ್ರ (ಎಮ್‌ಎಲ್‌ಸಿ) ದಾಖಲಿಸಿದ್ದಾರೆ” ಎಂದು ಅವರು ನಾನುಗೌರಿ.ಕಾಂಗೆ ಹೇಳಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಅಪರಿಚಿತ ಎಬಿವಿಪಿ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸರು ಸೋಮವಾರ ತಿಳಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಜವಾಹರಲಾಲ್ ನೆಹರು ಸ್ಟೂಡೆಂಟ್ಸ್ ಯೂನಿಯನ್ (ಜೆಎನ್‌ಯುಎಸ್‌ಯು), ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್‌ಎಫ್‌ಐ), ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಫೆಡರೇಶನ್ ಮತ್ತು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್‌ನ ವಿದ್ಯಾರ್ಥಿ ಸಂಘಟನೆಗಳು ಸೋಮವಾರ ದೂರು ನೀಡಿವೆ ಎಂದು ಉಪ ಪೊಲೀಸ್ ಆಯುಕ್ತ (ನೈಋತ್ಯ) ಮನೋಜ್ ಸಿ ಹೇಳಿದ್ದಾರೆ. “ವಾಸ್ತವ, ವೈಜ್ಞಾನಿಕ ಪುರಾವೆಗಳನ್ನು ಸಂಗ್ರಹಿಸಲು ಮತ್ತು ಅಪರಾಧಿಗಳನ್ನು ಗುರುತಿಸಲು ಹೆಚ್ಚಿನ ತನಿಖೆ ನಡೆಯುತ್ತಿದೆ” ಎಂದು ಅವರು ಹೇಳಿದ್ದಾರೆ.
Sangh terror unleashed in JNU. ABVP criminals are brutally beating up and pelting stones against students in the presence of Delhi Police. The lumpens are terrorising the University because students resisted their attempts to impose a ban on non-vegetarian food. pic.twitter.com/ihrUdtiyrQ
— Nikhil Mathew (@NikhilMathew_) April 10, 2022
Students who went to resist, were beaten up for upholding rights of the students. pic.twitter.com/ZxGraxqAnK
— Aishe (ঐশী) (@aishe_ghosh) April 11, 2022
This is how ABVP goons are communalising our campuses. pic.twitter.com/2QR5bdTtuY
— Aishe (ঐশী) (@aishe_ghosh) April 10, 2022
See this 20 second clip. When students in the Hostel tried to intervene and diffuse the situation, how the goons attacked the residents.
If this is not enough evidence, what is ? The @DelhiPolice should name these culprits in FIR. pic.twitter.com/Bg5iBdKa6Q
— Aishe (ঐশী) (@aishe_ghosh) April 11, 2022
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ಓದಿ: ಹಳೆಯ ಟ್ವೀಟ್‌ಗಳು ವೈರಲ್: ನಾನು ಟ್ವಿಟರ್‌ನಲ್ಲಿ ಇರಲಿಲ್ಲ ಎಂದ ಜೆಎನ್‌ಯು ನೂತನ ಉಪಕುಲಪತಿ


