Homeಮುಖಪುಟಹಳೆಯ ಟ್ವೀಟ್‌ಗಳು ವೈರಲ್: ನಾನು ಟ್ವಿಟರ್‌ನಲ್ಲಿ ಇರಲಿಲ್ಲ ಎಂದ ಜೆಎನ್‌ಯು ನೂತನ ಉಪಕುಲಪತಿ

ಹಳೆಯ ಟ್ವೀಟ್‌ಗಳು ವೈರಲ್: ನಾನು ಟ್ವಿಟರ್‌ನಲ್ಲಿ ಇರಲಿಲ್ಲ ಎಂದ ಜೆಎನ್‌ಯು ನೂತನ ಉಪಕುಲಪತಿ

- Advertisement -
- Advertisement -

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ನೂತನ ಉಪಕುಲಪತಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರ ಹೆಸರಿನಲ್ಲಿದ್ದ, ಈಗ ಡಿಲೀಟ್ ಮಾಡಲಾಗಿರುವ ಟ್ವಿಟರ್‌ ಅಕೌಂಟ್‌ನಿಂದ ಮಾಡಲಾಗಿದ್ದ ದ್ವೇಷಪೂರಿತ ಟ್ವೀಟ್‌ಗಳು ಬಾರಿ ವಿವಾದಕ್ಕಿಡಾಗಿ ವೈರಲ್‌ ಆದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದಾರೆ.

“ನಾನು ಎಂದಿಗೂ ಟ್ವಿಟರ್‌ನಲ್ಲಿರಲಿಲ್ಲ, ನನ್ನ ಬಳಿ ಟ್ವಿಟರ್ ಖಾತೆ ಇಲ್ಲ” ಎಂದು ಶಾಂತಿಶ್ರೀ ಧೂಳಿಪಡಿ ಪಂಡಿತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೆಎನ್‌ಯು ನೂತನ ಉಪಕುಲಪತಿಯಾಗಿ ಪ್ರೊಫೆಸರ್ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ನೇಮಕ ಮಾಡಿ ಕೇಂದ್ರ ಶಿಕ್ಷಣ ಸಚಿವಾಲಯ ಘೋಷಿಸಿತ್ತು. ಈ ಬೆನ್ನಲ್ಲೇ, ಅವರ ಹೆಸರಿನಲ್ಲಿದ್ದ ಟ್ವಿಟರ್‌ ಖಾತೆಯಿಂದ ಜೆಎನ್‌ಯು ವಿದ್ಯಾರ್ಥಿಗಳನ್ನು ಟೀಕಿಸುವ, ರೈತರನ್ನು ದಲ್ಲಾಳಿಗಳು ಎಂದಿದ್ದ ಮತ್ತು ಬಿಜೆಪಿ ಸರ್ಕಾರವನ್ನು, ಗೋಡ್ಸೆಯನ್ನು ಬೆಂಬಲಿಸುವ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಸೇಂಟ್ ಸ್ಟೀಫನ್ಸ್ ಕಾಲೇಜ್ ಅನ್ನು “ಕೋಮು ಕ್ಯಾಂಪಸ್” ಎಂದು ಕರೆಯುವ, ಮಾಜಿಕ ಕಾರ್ಯಕರ್ತರನ್ನು “ಮಾನಸಿಕ-ಅಸ್ವಸ್ಥ ಜಿಹಾದಿಗಳು” ಎಂದಿದ್ದ ಹಳೆಯ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಈ ಟ್ವೀಟ್‌ಗಳು ವೈರಲ್‌ ಆಗುತ್ತಿದ್ದ ಹಾಗೆಯೇ ಈ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಈ ಖಾತೆಯು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರದ್ದೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿರಲಿಲ್ಲ. ಈ ಟ್ವೀಟ್‌ಗಳು @SantishreeD ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಈ ಅಕೌಂಟ್ ಪ್ರೊಫೆಸರ್ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಎಂದು ಅವರ ಪೂರ್ಣ ಹೆಸರಿನಿಂದ ಇತ್ತು. ಪ್ರೋಫೈಲ್ ಫೋಟೋ ಮಾತ್ರ ದೇವರ ಚಿತ್ರವಾಗಿತ್ತು. ಜೊತೆಗೆ ಮೇ 2021 ರಿಂದ ಈ ಖಾತೆಯಿಂದ ಯಾವುದೇ ಟ್ವೀಟ್‌ಗಳನ್ನು ಮಾಡಿಲ್ಲ.

ಇದನ್ನೂ ಓದಿ: ಜೆಎನ್‌ಯುಗೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಮೊದಲ ಮಹಿಳಾ ಉಪಕುಲಪತಿ, ಪರ ವಿರೋಧ ಚರ್ಚೆ

ಇದಕ್ಕೆ ಪ್ರತಿಕ್ರಿಯೇ ನೀಡಿರುವ ಅವರು, “ನನಗೆ ಟ್ವಿಟರ್ ಖಾತೆ ಇರಲಿಲ್ಲ. ಆ ಟ್ವಿಟರ್‌ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಜೆಎನ್‌ಯುನ ಆಂತರಿಕವಾಗಿ ಯಾರೋ ಇದನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ. ಮುಖ್ಯ ವಿಷಯವೆಂದರೆ, ನಾನು ಮೊದಲ ಮಹಿಳಾ ವಿಸಿ ಎಂದು ಅನೇಕ ಜನರು ಅತೃಪ್ತರಾಗಿದ್ದಾರೆ. ಜೆಎನ್‌ಯುನ ಕೆಲವರು ಇದರಲ್ಲಿ ಭಾಗಿಯಾಗಿರುವ ಬಗ್ಗೆ ವಿಶ್ವಾಸಾರ್ಹ ಮೂಲಗಳಿಂದ ನನಗೆ ಮಾಹಿತಿಯಿದೆ” ಎಂದಿದ್ದಾರೆ.

“ನನ್ನ ಮಗಳು ಸೈಬರ್ ಸೆಕ್ಯುರಿಟಿ ಇಂಜಿನಿಯರ್. ಆರು ವರ್ಷಗಳ ಹಿಂದೆ, ಆಕೆ ಯುಎಸ್‌ನಲ್ಲಿ ಕೆಲವು ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಿದ್ದಾಗ ನನ್ನ ಅಕೌಂಟ್‌ಗಳನ್ನು ಕ್ಲೋಸ್ ಮಾಡಿದ್ದರು. ನಾನು ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯವಾಗಿಲ್ಲ. ಈ ಟ್ವಿಟ್ಟರ್ ಅನ್ನು ಯಾರು ಪ್ರಾರಂಭಿಸಿದರು ಎಂದು ನನಗೆ ತಿಳಿದಿಲ್ಲ,” ಎಂದಿದ್ದಾರೆ.  ಜೊತೆಗೆ ಇದೆಲ್ಲಾ ಯೋಜಿತ ಕೆಲಸಗಳು. ನನ್ನನ್ನು ನೇಮಕ ಮಾಡಿದ ತಕ್ಷಣ ಟ್ವೀಟ್‌ಗಳು ಹೇಗೆ ಹೊರಬರುತ್ತವೆ..? ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, “ನಾನು ಈ ವಿಶ್ವವಿದ್ಯಾಲಯದ ವಿದ್ಯಾರ್ಥಿ, ಇದು ನನ್ನ ತಾಯಿಯಂತೆ. ನಾನು ಇಂದು ಏನಾಗಿದ್ದೇನೆ ಎಂದರೆ ಅದಕ್ಕೆ ಜೆಎನ್‌ಯು ಕಾರಣ. ವಿಭಿನ್ನ ಸಿದ್ಧಾಂತಗಳು ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲವೇ? ಎಂದಿದ್ದಾರೆ.

ಅವರ ಹೆಸರಿನ ಖಾತೆಯ ಹಳೆಯ ಟ್ವೀಟ್‌ಗಳು ವೈರಲ್ ಆದ ಕೆಲವೇ ಗಂಟೆಗಳ ನಂತರ ಟ್ವಿಟರ್‌ ಖಾತೆಯನ್ನು ಅಳಿಸಲಾಗಿದೆ. ಆದರೆ ಈ ಮೊದಲೇ ತೆಗೆದುಕೊಳ್ಳಲಾಗಿದ್ದ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.


ಇದನ್ನೂ ಓದಿ: ಗೋಡ್ಸೆ- ಬಿಜೆಪಿ ಪರ, ಜೆಎನ್‌ಯು- ರೈತ ವಿರೋಧಿ ಟ್ವೀಟ್‌ಗಳು ವೈರಲ್‌: ಜೆಎನ್‌ಯು ನೂತನ ಉಪಕುಲಪತಿ ಹೆಸರಿನಲ್ಲಿದ್ದ ಖಾತೆ ಡಿಲೀಟ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...