Homeಚಳವಳಿಬಾಬರಿ ಮಸೀದಿ ಧ್ವಂಸದ ಕತೆ ಹೇಳುವ ‘ರಾಮ್‌ ಕೆ ನಾಮ್’ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಿರುವ...

ಬಾಬರಿ ಮಸೀದಿ ಧ್ವಂಸದ ಕತೆ ಹೇಳುವ ‘ರಾಮ್‌ ಕೆ ನಾಮ್’ ಸಾಕ್ಷ್ಯ ಚಿತ್ರ ಪ್ರದರ್ಶನ ಮಾಡಲಿರುವ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ

‘ಸೌಹಾರ್ದ ಹಾಳಾಗುತ್ತದೆ’ ಎಂಬ ಆಡಳಿತ ಮಂಡಳಿಯ ಆಕ್ಷೇಪಣೆಗೆ ಆರೆಸ್ಸಸ್ಸೆಸ್‌ ಮತ್ತು ಗೂಂಡಾಗಳು ಸೌಹಾರ್ದತೆಯ ಬಗ್ಗೆ ಮಾತನಾಡಬಾರದು, ನಾವು ಪ್ರದರ್ಶನ ಮಾಡಿಯೇ ತೀರುತ್ತೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ

- Advertisement -
- Advertisement -

ಆಡಳಿತ ಮಂಡಳಿಯ ಆಕ್ಷೇಪಣೆಯ ಹೊರತಾಗಿಯು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾನಿಯಯದ ವಿದ್ಯಾರ್ಥಿ ಒಕ್ಕೂಟ (ಜೆಎನ್‌ಯುಎಸ್‌ಯು)ವು ಬಾಬರಿ ಮಸೀದಿ ಧ್ವಂಸ ಘಟನೆಯ ಬಗ್ಗೆ ನಿರ್ಮಿಸಲಾಗಿರುವ ‘ರಾಮ್‌‌ ಕೆ ನಾಮ್‌’ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡಿಯೇ ತೀರುತ್ತೇವೆ ಎಂದು ಹೇಳಿದೆ. ಡಿಸೆಂಬರ್‌ 4 ರ ಶನಿವಾರ (ಇಂದು)ದಂದು ರಾತ್ರಿ 9:30 ಕ್ಕೆ ಸಾಕ್ಷ್ಯ ಚಿತ್ರವು ಜೆಎನ್‌ಯುವಿನಲ್ಲಿ ವಿದ್ಯಾರ್ಥಿ ಒಕ್ಕೂಟವು ಪ್ರದರ್ಶನ ಮಾಡಲಿದೆ.

ಆದರೆ, ಪ್ರದರ್ಶನಕ್ಕಾಗಿ ಕರಪತ್ರವನ್ನು ಬಿಡುಗಡೆ ಮಾಡಿದ ವಿದ್ಯಾರ್ಥಿ ಒಕ್ಕೂಟದ ಹೆಸರಿನಲ್ಲಿ, ವಿದ್ಯಾರ್ಥಿಗಳ ಗುಂಪು ಪೂರ್ವಾನುಮತಿ ಪಡೆದಿಲ್ಲ ಎಂದು ಜೆಎನ್‌ಯು ಆಡಳಿತವು ಹೇಳಿದೆ. ಈ ಬಗ್ಗೆ ಎಚ್ಚರಿಕೆ ನೀಡಿ ಸುತ್ತೋಲೆಯನ್ನು ಬಿಡುಗಡೆ ಮಾಡಿದೆ.

ಇದನ್ನೂ ಓದಿ:ಅಯೋಧ್ಯೆ: ಬಾಬರಿಗಿಂತ 4 ಪಟ್ಟು ದೊಡ್ಡ ಮಸೀದಿ – ಮಸೀದಿಗಿಂತ 6 ಪಟ್ಟು ದೊಡ್ಡ ಆಸ್ಪತ್ರೆ!

ವಿಶ್ವವಿದ್ಯಾಲಯ ತನ್ನ ಸುತ್ತೋಲೆಯಲ್ಲಿ, “ಇಂತಹ ಅನಧಿಕೃತ ಚಟುವಟಿಕೆಯು ಕೋಮು ಸೌಹಾರ್ದತೆ ಮತ್ತು ಕ್ಯಾಂಪಸ್‌ನ ಶಾಂತಿಯುತ ವಾತಾವರಣವನ್ನು ಕದಡಬಹುದು. ಘಟನೆಗೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗುವುದು. ವಿದ್ಯಾರ್ಥಿಗಳು ಪ್ರಚೋದನೆಗೆ ಒಳಗಾಗಬಾರದು. ಕರಪತ್ರವು ಅನಧಿಕೃತವಾಗಿದೆ” ಎಂದು ಹೇಳಿದೆ.

ಉದ್ದೇಶಿತ ಕಾರ್ಯಕ್ರಮವನ್ನು ತಕ್ಷಣವೇ ರದ್ದುಗೊಳಿಸುವಂತೆ ಸಂಬಂಧಪಟ್ಟ ವಿದ್ಯಾರ್ಥಿಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ ಎಂದು ಜೆಎನ್‌ಯು ತಿಳಿಸಿದೆ.

ವಿಶ್ವವಿದ್ಯಾಲಯದ ಸುತ್ತೋಲೆಗೆ ಪ್ರತಿಕ್ರಿಯಿಸಿರುವ ಜೆಎನ್‌ಯುಎಸ್‌ಯು ಅಧ್ಯಕ್ಷೆ ಐಶೆ ಘೋಷ್‌‌, ಚಿತ್ರ ಪ್ರದರ್ಶನವನ್ನು ಮಾಡಿಯೇ ತೀರುತ್ತೇವೆ, ಆರೆಸ್ಸೆಸ್‌ ಮತ್ತು ಅದರ ಗೂಂಡಾಗಳು ಕೋಮು ಸೌಹಾರ್ದದ ಬಗ್ಗೆ ಮಾತನಾಡಬಾರದು ಎಂದು ಆಕ್ರೊಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಡಿಸೆಂಬರ್‌ ಚಳಿಯ ಒಂದು ದಿನ ಬಾಬರಿ ಮಸೀದಿ ಸ್ವಯಂ ಸ್ಫೋಟಗೊಂಡಿತು: ತೀರ್ಪು ವಿರುದ್ದ ಟ್ವಿಟ್ಟರ್‌‌ನಲ್ಲಿ ಆಕ್ರೋಶ

ಈ ಬಗ್ಗೆ ಟ್ವೀಟ್ ಮಾಡಿರುವ ಐಶೆ ಘೋಷ್‌, “ಆರ್‌ಎಸ್‌ಎಸ್ ಮತ್ತು ಅದರ ಗೂಂಡಾಗಳು ಕೋಮು ಸೌಹಾರ್ದದ ಬಗ್ಗೆ ಮಾತನಾಡಬಾರದು. ಜೆಎನ್‌ಯುಎಸ್‌ಯು ‘ರಾಮ್ ಕೇ ನಾಮ್’ ಪ್ರದರ್ಶನ ಮಾಡೇ ಮಾಡುತ್ತದೆ. ಈ ದೇಶದಲ್ಲಿ ಕೋಮು ಸೌಹಾರ್ದತೆ ಕದಡುತ್ತಿರುವುದು ಬಲಪಂಥೀಯ ಮೂಲಭೂತವಾದಿಗಳು. ಅವರು ನಮ್ಮನ್ನು ಬೆದರಿಸಿದಾಗೆಲ್ಲಾ ಹೀಗೆ ಬೆತ್ತಲಾಗುತ್ತಾ ಹೋಗುತ್ತಾರೆ” ಎಂದು ಬರೆದಿದ್ದಾರೆ.

‘ರಾಮ್ ಕೆ ನಾಮ್’ 1992 ರ ಚಲನಚಿತ್ರ ನಿರ್ಮಾಪಕ ಆನಂದ್ ಪಟವರ್ಧನ್ ಅವರ ನಿರ್ಮಿಸಿದ ಸಾಕ್ಷ್ಯಚಿತ್ರವಾಗಿದೆ. ಅಯೋಧ್ಯೆಯಲ್ಲಿ ಬಾಬರಿ ಮಸೀದಿಯ ಸ್ಥಳದಲ್ಲಿ ರಾಮ ಮಂದಿರವನ್ನು ನಿರ್ಮಿಸಲು ಬಿಜೆಪಿ ಬೆಂಬಲಿತ ಬಲಪಂಥೀಯ ಸಂಘಟನೆ ವಿಎಚ್‌ಪಿ ನಡೆಸಿದ ಅಭಿಯಾನವನ್ನು ಈ ಚಿತ್ರವು ಪರಿಶೋಧಿಸುತ್ತದೆ. ಚಲನಚಿತ್ರವು ಅತ್ಯುತ್ತಮ ಸಾಕ್ಷ್ಯಚಿತ್ರಕ್ಕಾಗಿ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಇದನ್ನೂ ಓದಿ:ರಾಮ ಮಂದಿರದ ’ಭೂಮಿ ಪೂಜೆ’ಗೆ ಬಾಬರಿ ಮಸೀದಿ ಧ್ವಂಸಗೊಳಿಸಿದವರನ್ನು ಆಹ್ವಾನಿಸಿ: ದುಬೆ

ಬಾಬರಿ ಮಸೀದಿ ಧ್ವಂಸದ ಕತೆ ಹೇಳುವ ‘ರಾಮ್‌ ಕೆ ನಾಮ್’ ಸಾಕ್ಷ್ಯ ಚಿತ್ರವನ್ನು ಇಲ್ಲಿಯು ನೋಡಬಹುದು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

3 COMMENTS

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ 20,000 ನಾಗರಿಕರಿಂದ ಚುನಾವಣಾ ಆಯೋಗಕ್ಕೆ ಪತ್ರ

0
ರಾಜಸ್ಥಾನದ ಬನ್ಸ್ವಾರಾದಲ್ಲಿ ಮುಸ್ಲಿಮರ ವಿರುದ್ಧ ದ್ವೇಷ ಭಾಷಣಗೈದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಾಮಾಜಿಕ ಕಾರ್ಯಕರ್ತರು ಸೇರಿದಂತೆ ಸುಮಾರು 20,000 ಮಂದಿ ಚುನಾವಣಾ ಆಯೋಗಕ್ಕೆ ಎರಡು ಪ್ರತ್ಯೇಕ ಪತ್ರಗಳನ್ನು...