Homeಮುಖಪುಟಗೋಡ್ಸೆ- ಬಿಜೆಪಿ ಪರ, ಜೆಎನ್‌ಯು- ರೈತ ವಿರೋಧಿ ಟ್ವೀಟ್‌ಗಳು ವೈರಲ್‌: ಜೆಎನ್‌ಯು ನೂತನ ಉಪಕುಲಪತಿ ಹೆಸರಿನಲ್ಲಿದ್ದ...

ಗೋಡ್ಸೆ- ಬಿಜೆಪಿ ಪರ, ಜೆಎನ್‌ಯು- ರೈತ ವಿರೋಧಿ ಟ್ವೀಟ್‌ಗಳು ವೈರಲ್‌: ಜೆಎನ್‌ಯು ನೂತನ ಉಪಕುಲಪತಿ ಹೆಸರಿನಲ್ಲಿದ್ದ ಖಾತೆ ಡಿಲೀಟ್

ಸೋಮವಾರ ಅವರ ಹಳೆಯ ಟ್ವೀಟ್‌ಗಳು ವೈರಲ್ ಆದ ಕೆಲವೇ ಗಂಟೆಗಳ ನಂತರ ಈ ಖಾತೆಯನ್ನು ಅಳಿಸಲಾಗಿದೆ

- Advertisement -
- Advertisement -

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ (ಜೆಎನ್‌ಯು) ನೂತನ ಉಪಕುಲಪತಿಯಾಗಿ ಪ್ರೊಫೆಸರ್ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ನೇಮಕ ಮಾಡಿ ಕೇಂದ್ರ ಶಿಕ್ಷಣ ಸಚಿವಾಲಯ ಘೋಷಿಸಿತ್ತು. ಈ ಬೆನ್ನಲ್ಲೇ, ಅವರ ಹೆಸರಿನಲ್ಲಿದ್ದ ಟ್ವಿಟರ್‌ ಖಾತೆಯಿಂದ ಜೆಎನ್‌ಯು ವಿದ್ಯಾರ್ಥಿಗಳನ್ನು ಟೀಕಿಸುವ, ರೈತರನ್ನು ದಲ್ಲಾಳಿಗಳು ಎಂದಿದ್ದ ಮತ್ತು ಬಿಜೆಪಿ ಸರ್ಕಾರವನ್ನು, ಗೋಡ್ಸೆಯನ್ನು ಬೆಂಬಲಿಸುವ  ಹಳೆಯ ಟ್ವೀಟ್‌ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

ಈ ಟ್ವೀಟ್‌ಗಳು ವೈರಲ್‌ ಆಗುತ್ತಿದ್ದ ಹಾಗೆಯೇ ಈ ಖಾತೆಯನ್ನು ಡಿಲೀಟ್ ಮಾಡಲಾಗಿದೆ. ಈ ಖಾತೆಯು ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರದ್ದೇ ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಈ ಟ್ವೀಟ್‌ಗಳು @SantishreeD ಹ್ಯಾಂಡಲ್‌ನಿಂದ ಪೋಸ್ಟ್ ಮಾಡಲಾಗಿದೆ. ಈ ಅಕೌಂಟ್ ಪ್ರೊಫೆಸರ್ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಎಂದು ಅವರ ಪೂರ್ಣ ಹೆಸರಿನಿಂದ ಇತ್ತು. ಪ್ರೋಫೈಲ್ ಫೋಟೋ ಮಾತ್ರ ದೇವರ ಚಿತ್ರವಾಗಿತ್ತು. ಜೊತೆಗೆ ಮೇ 2021 ರಿಂದ ಈ ಖಾತೆಯಿಂದ ಯಾವುದೇ ಟ್ವೀಟ್‌ಗಳನ್ನು ಮಾಡಲಾಗಿಲ್ಲ.

ಸೋಮವಾರ ಅವರ ಹಳೆಯ ಟ್ವೀಟ್‌ಗಳು ವೈರಲ್ ಆದ ಕೆಲವೇ ಗಂಟೆಗಳ ನಂತರ ಈ ಖಾತೆಯನ್ನು ಅಳಿಸಲಾಗಿದೆ. ಆದರೆ ಈ ಮೊದಲೇ ತೆಗೆದುಕೊಳ್ಳಲಾಗಿದ್ದ ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿವೆ.

ಇದನ್ನೂ ಓದಿ: ಜೆಎನ್‌ಯುಗೆ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಮೊದಲ ಮಹಿಳಾ ಉಪಕುಲಪತಿ, ಪರ ವಿರೋಧ ಚರ್ಚೆ

ಈ ಟ್ವಿಟರ್‌ ಖಾತೆಯಿಂದ ದೇಶದ್ರೋಹದ ಪ್ರಕರಣದಲ್ಲಿ ಪ್ರಸ್ತುತ ಜೈಲಿನಲ್ಲಿರುವ ಜೆಎನ್‌ಯುನ ಪಿಎಚ್‌ಡಿ ಸಂಶೋಧನಾರ್ಥಿ ಶರ್ಜೀಲ್ ಇಮಾಮ್ ಅವರನ್ನು “ಐಐಟಿ-ಬಿ ಮತ್ತು ಜೆಎನ್‌ಯು ನಿರ್ಮಿಸಿದ ಜಿಹಾದಿ” ಎಂದು ಟ್ವೀಟ್‌ ಒಂದರಲ್ಲಿ ಉಲ್ಲೇಖಿಸಲಾಗಿತ್ತು. 2020 ರಲ್ಲಿ ಪೋಸ್ಟ್ ಮಾಡಲಾದ ಟ್ವೀಟ್‌ಗಳಲ್ಲಿ JNU ವಿದ್ಯಾರ್ಥಿಗಳನ್ನು “ಸೋತವರು” ಎಂದು ಹೇಳಿದ್ದರು. ಮತ್ತೊಂದು ಟ್ವೀಟ್‌ನಲ್ಲಿ “ಜಾಮಿಯಾ ಮತ್ತು ಸೇಂಟ್ ಸ್ಟೀಫನ್ಸ್” ನಂತಹ ಸಂಸ್ಥೆಗಳಿಗೆ ಧನಸಹಾಯವನ್ನು ನೀಡದಂತೆ ಕರೆ ನೀಡಲಾಗಿದೆ.

ಈ ಖಾತೆಯ ಬಹುತೇಕ ಟ್ವೀಟ್‌ಗLಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್, ಎಡಪಂಥೀಯರು ಮತ್ತು  ಬುದ್ಧಿಜೀವಿಗಳ ಬಗೆಗಿನ ಟೀಕೆಗಳೆ ಆಗಿವೆ.

ಇನ್ನು ರೈತ ಹೋರಾಟವನ್ನು ವಿರೋಧಿಸಿ ಹಲವು ಟ್ವೀಟ್‌ಗಳನ್ನು ಮಾಡಲಾಗಿದೆ. 2021 ರಲ್ಲಿ ಲೇಖಕಿ ಶೆಫಾಲಿ ವೈದ್ಯ, ರೈತ ನಾಯಕ ರಾಕೇಶ್ ಟಿಕೈತ್ ಅವರ ಹೇಳಿಕೆಯನ್ನು ಹಂಚಿಕೊಂಡು, “ಕೃಷಿ ಕಾನೂನುಗಳನ್ನು ರದ್ದುಗೊಳಿಸದಿದ್ದರೆ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ” ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರ ಹೆಸರಿನ ಟ್ವಿಟರ್ ಹ್ಯಾಂಡಲ್‌ನಿಂದ “ಅವರಿಗೆ ನೇಣು ಹಾಕಿಕೊಳ್ಳಲು ನಾನು ಹಗ್ಗ ಕೊಡುತ್ತೇನೆ” ಎಂದು ಟ್ವೀಟ್‌ ಮಾಡಲಾಗಿತ್ತು.

ಇದನ್ನೂ ಓದಿ: ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷಬೀಜ ಬಿತ್ತಿ ಒಡೆದು ಆಳುತ್ತಿರುವ ಸರ್ಕಾರ: SFI ಆಕ್ರೋಶ

ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೈರ್ ಈ ಖಾತೆಯ ಹಳೆಯ ಹಲವು ಟ್ವೀಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.

ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮೊದಲ ಮಹಿಳಾ ಉಪಕುಲಪತಿಯಾಗಿ ಶಿಕ್ಷಣ ಸಚಿವಾಲಯ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರನ್ನು ನೇಮಿಸಿ ಸೋಮವಾರ ಆದೇಶಿಸಿದೆ. ಪ್ರಸ್ತುತ ಮಹಾರಾಷ್ಟ್ರದ ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯದ ಉಪಕುಲಪತಿಯಾಗಿರುವ 59 ವರ್ಷ ವಯಸ್ಸಿನ ಶಾಂತಿಶ್ರೀ ಧೂಳಿಪುಡಿ ಪಂಡಿತ್ ಅವರು ಜೆಎನ್‌ಯುನ ಹಳೆಯ ವಿದ್ಯಾರ್ಥಿಯಾಗಿದ್ದಾರೆ. ಇಲ್ಲಿಯೇ ಅವರು ತಮ್ಮ ಎಂಫಿಲ್ ಮತ್ತು ಪಿಎಚ್‌ಡಿ ಮುಗಿಸಿದ್ದಾರೆ.


ಇದನ್ನೂ ಓದಿ: ಹಿಜಾಬ್‌ ಬೆಂಬಲಿಸಿ ‘ನೀಲಿ ಶಾಲು’ ಧರಿಸಿದ ವಿದ್ಯಾರ್ಥಿಗಳು; ಮೊಳಗಿದ ‘ಜೈ ಭೀಮ್‌’ ಘೋಷಣೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭೆ ಚುನಾವಣೆ 2024: ರಾಹುಲ್ ಗಾಂಧಿ ಸ್ಪರ್ಧೆಗೆ ಒತ್ತಾಯಿಸಿ ಅಮೇಠಿ ಕಾಂಗ್ರೆಸ್ ಕಾರ್ಯಕರ್ತರಿಂದ ಧರಣಿ

0
ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆಯಲ್ಲಿ ಅನಗತ್ಯ ವಿಳಂಬ ಮಾಡುತ್ತಿರುವುದನ್ನು ಪ್ರತಿಭಟಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಇಲ್ಲಿನ ಪಕ್ಷದ ಜಿಲ್ಲಾ ಸಮಿತಿ ಕಚೇರಿ ಎದುರು ಧರಣಿ ನಡೆಸಿ, ರಾಹುಲ್ ಗಾಂಧಿ ಅವರನ್ನು ಕಣಕ್ಕಿಳಿಸಬೇಕು...