Homeಕರ್ನಾಟಕವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷಬೀಜ ಬಿತ್ತಿ ಒಡೆದು ಆಳುತ್ತಿರುವ ಸರ್ಕಾರ: SFI ಆಕ್ರೋಶ

ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷಬೀಜ ಬಿತ್ತಿ ಒಡೆದು ಆಳುತ್ತಿರುವ ಸರ್ಕಾರ: SFI ಆಕ್ರೋಶ

ಹಾವೇರಿಯಲ್ಲಿ ರಾಷ್ಟ್ರಧ್ವಜ ಹಿಡಿದು ಎಸ್ಎಫ್ಐ ನೇತೃತ್ವದಲ್ಲಿ ವಿಧ್ಯಾರ್ಥಿಗಳ ಪ್ರತಿಭಟನೆ

- Advertisement -
- Advertisement -

ರಾಜ್ಯ ಹಾಗೂ ದೇಶದ ಅಭಿವೃದ್ಧಿಗಾಗಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವ ಶಿಕ್ಷಣ ಸಂಸ್ಥೆಗಳಂತಹ  ಜಾಗದಲ್ಲಿ ವಿವಾದಗಳನ್ನು ಸೃಷ್ಟಿಸಿ ಶೈಕ್ಷಣಿಕ ವಾತಾವರಣ ಹದಗೆಡಿಸಲಾಗುತ್ತಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಕೋಮು ಪ್ರಚೋದನೆಗೆ ಒಳಗಾಗಿ, ತಮ್ಮತನವನ್ನು ಕಳೆದುಕೊಂಡು, ಶೈಕ್ಷಣಿಕ ವಾತಾವರಣ ಹದಗೆಡಲು ಬಿಡಬಾರದು ಎಂದು ಭಾರತ ವಿದ್ಯಾರ್ಥಿ ಫೆಡರೇಷನ್ (SFI) ಹೇಳಿದೆ.

SFI ಹಾವೇರಿ ಜಿಲ್ಲಾ ಸಮಿತಿಯು ಸೋಮವಾರದಂದು ಹಾವೇರಿ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಧ್ವಜ ಹಿಡಿದು ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದೆ.

ಇದನ್ನೂ ಓದಿ: ಹಿಜಾಬ್‌ ಬೆಂಬಲಿಸಿ ‘ನೀಲಿ ಶಾಲು’ ಧರಿಸಿದ ವಿದ್ಯಾರ್ಥಿಗಳು; ಮೊಳಗಿದ ‘ಜೈ ಭೀಮ್‌’ ಘೋಷಣೆ

ಈ ಸಂದರ್ಭದಲ್ಲಿ, “ನಮ್ಮಲ್ಲಿಲ್ಲ ಹಿಂದೂ ರಕ್ತ, ನಮ್ಮಲ್ಲಿಲ್ಲ ಮುಸ್ಲಿಂ ರಕ್ತ, ನಲ್ಲಿಲ್ಲ ಕ್ರೈಸ್ತ ರಕ್ತ, ನಮ್ಮಲಿರುವುದು ಒಂದೇ ರಕ್ತ, ಅದುವೇ ಮಾನವ ಕೆಂಪು ರಕ್ತ” ಎಂದು ಘೋಷಣೆ ಕೂಗಿರುವ ವಿದ್ಯಾರ್ಥಿಗಳು, ಶಿಕ್ಷಣಕ್ಕೆ ಮೊದಲ ಆದ್ಯತೆ ಕೊಡೋಣ. ಶಾಂತಿ, ಸೌಹಾರ್ದತೆ, ಸಂವಿಧಾನದ ಜಾತ್ಯಾತೀತತೆ, ವಿದ್ಯಾರ್ಥಿಗಳ ಐಕ್ಯತೆ ಚಿರಾಯುವಾಗಲಿ. ನಮ್ಮ ದೇಹ ಛಿದ್ರವಾದರೂ, ದೇಶ ಛಿಧ್ರವಾಗಲು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ.

“ವಿದ್ಯಾರ್ಥಿಗಳು ಕೋಮ ಶಕ್ತಿಗಳ ಪ್ರಚೋದನೆಗೆ ಒಳಗಾಗದೆ, ನಮ್ಮ ದೇಶದ ಹೆಮ್ಮೆಯ ಸಂಕೇತ ತ್ರಿವರ್ಣ ಧ್ವಜವನ್ನು ಹಿಡಿದು ನಾವೆಲ್ಲರೂ ಐಕ್ಯತೆಯಿಂದ ಇರುವುದರ ಮೂಲಕ ಹಿಂದೂ-ಮುಸ್ಲಿಂಮರು ಒಂದೇ ಎಂಬ ಸಂದೇಶವನ್ನು ಸಾರಬೇಕು. ಈ ದೇಶ ಎಲ್ಲರೂ ಸೇರಿ ಕಟ್ಟಿದ್ದಾಗಿದೆ” ಎಂದು SFI ಕಾರ್ಯಕರ್ತರೊಬ್ಬರು ಹೇಳಿದ್ದಾರೆ.

“ರಾಜ್ಯದಲ್ಲಿ ಹೆಣ್ಣು ಮಕ್ಕಳು ಹಿಜಾಬ್ ಧರಿಸಿಕೊಂಡು ಬರುತ್ತಿರುವುದು ಇದು ಮೊದಲೇನಲ್ಲ. ಈಗಾಗಲೇ ಸುಮಾರು ವರ್ಷಗಳಿಂದ ಅವರು ಹಿಜಾಬ್ ಹಾಕಿಕೊಂಡು ಬರುತ್ತಿದ್ದಾರೆ. ಕೋಮುವಾದಿ ಶಕ್ತಿಗಳು ತಮ್ಮ ಹಿಡನ್ ಅಜೆಂಡಾವನ್ನು ರಾಜಕೀಯಕ್ಕೆ ಬಳಕೆ ಮಾಡುತ್ತಿದೆ. ಶಿಕ್ಷಣ ಕಲಿಯುವ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳಲ್ಲಿ ಕೋಮುವಾದದ ವಿಷಬೀಜ ಬಿತ್ತುವ ಮೂಲಕ ರಾಜ್ಯವನ್ನು ಒಡೆದು ಆಳುವ ಕೆಲಸ ಸರಕಾರವೇ ಮಾಡುತ್ತಿರುವುದು ದುರಂತ” ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಕುಂದಾಪುರ: ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಕೊಠಡಿ, ಪಾಠವಿಲ್ಲ

“ರಾಜ್ಯದ ಬಹುತೇಕ ಸರಕಾರಿ ಶಾಲಾ-ಕಾಲೇಜುಗಳಲ್ಲಿ ಮೂಲಭೂತ ಸೌಲಭ್ಯಗಳಾದ ಶಿಕ್ಷಕರು-ಉಪನ್ಯಾಸಕರು ಇಲ್ಲ. ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲ, ಶೌಚಾಲಯಗಳಿಲ್ಲ, ಕುಡಿಯಲು ಶುದ್ಧವಾದ ನೀರು ಇಲ್ಲ, ಗ್ರಂಥಾಲಯಗಳಿಲ್ಲ. ಇವು ಯಾವುದು ಕೂಡ ಇವರಿಗೆ ವಿಷಯವೇ ಅಲ್ಲ. ಮೂಲಭೂತ ಸೌಲಭ್ಯಗಳ ಕೊರತೆಯಿಂದ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಸಮುದಾಯಕ್ಕೆ ಸಮರ್ಪಕವಾಗಿ ಗುಣಮಟ್ಟದ ಶಿಕ್ಷಣ ಸಿಗದಿದ್ದರೂ ಪರವಾಗಿಲ್ಲ. ಆದರೆ ಮುಸ್ಲಿಂ ಹೆಣ್ಣು ಮಕ್ಕಳು ಹಿಜಬ್ ಹಾಕಿಕೊಂಡರೆ ಅದು ಇವರಿಗೆ ದೊಡ್ಡ ವಿಷಯ ಅಲ್ಲವೇ?” ಎಂದು ಅವರು ಪ್ರಶ್ನಿಸಿದ್ದಾರೆ.

“ಇಂತಹ ಮನಸ್ಥಿತಿಯ ವ್ಯಕ್ತಿಗಳಿಂದ ಇಂದು ಶೈಕ್ಷಣಿಕ ವಾತಾವರಣ ಹದಗೆಡಲು ಕಾರಣವಾಗಿದೆ. ಅಂತಹ ಯಾವುದೇ ಶಕ್ತಿಗಳಿಗೆ ವಿದ್ಯಾರ್ಥಿಗಳು ಕಿವಿ ಕೊಡಬಾರದು ಹಾಗೂ ಯಾವುದೇ ರೀತಿಯಿಂದ ಪ್ರಚೋದನೆಗೆ ಒಳಗಾಗದೆ ಅವರನ್ನು ಹಿಮ್ಮೆಟ್ಟಿಸಬೇಕು. ಅದಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್‌ ಸಂಘಟನೆಯು ರಾಷ್ಟ್ರ ಧ್ವಜವನ್ನು ಹಿಡಿದು ಪ್ರತಿಭಟನೆ ಮಾಡುವುದರ ಮೂಲಕ ಕೋಮು ಶಕ್ತಿಗಳಿಗೆ ಎಚ್ಚರಿಕೆ ನೀಡಿದೆ” ಎಂದು ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿಗಳು ಐಕ್ಯತೆಯಿಂದ ಹೋರಾಡಬೇಕೆಂದು SFI ರಾಜ್ಯದ ವಿದ್ಯಾರ್ಥಿ ಸಮುದಾಯಕ್ಕೆ ಕರೆ ನೀಡಿದೆ.

ಇದನ್ನೂ ಓದಿ: ಪಿಯು ನಿರ್ದೇಶಕಿ ಸ್ನೇಹಲ್‌ ವರ್ಗಾವಣೆ; ಸಮವಸ್ತ್ರ ಸುತ್ತೋಲೆಯೇ ಕಾರಣ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಪ್ರಾರಂಭ ಗುಲಾಮರು ಮಾಡಿದ್ದಾರೆ ,ಅಂತ್ಯ ಭಕ್ತರು ಮಾಡ್ತಾರೇ ಹಿಜಾಬ್ ವಿಚಾರದಲ್ಲಿ

LEAVE A REPLY

Please enter your comment!
Please enter your name here

- Advertisment -

Must Read

‘ದೆಹಲಿ ಜನರು ನಮಗೆ 56% ಮತ ನೀಡಿದ್ದಾರೆ, ಅವರು ಪಾಕಿಸ್ತಾನಿಗಳೇ..?’; ಅಮಿತ್‌ ಶಾ ವಿರುದ್ಧ...

0
'ಅಮಿತ್ ಶಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಉತ್ತರಾಧಿಕಾರಿಯಾಗಿ ಆಯ್ಕೆಯಾದ ಕಾರಣ ಅವರು ಅಹಂಕಾರಿಯಾಗಿದ್ದಾರೆ' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್...