Homeಅಂಕಣಗಳುಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

ಒಂದು ರಾಷ್ಟ್ರ ಒಂದು ಚುನಾವಣೆ ಎಂಬುದು ಸಂವಿಧಾನ ಮತ್ತು ಪ್ರಜಾತಂತ್ರ ವಿರೋಧಿಯಾದುದು

- Advertisement -
- Advertisement -

| ಯೋಗೇಂದ್ರ ಯಾದವ್ |

ಅನುವಾದ: ರಾಜಶೇಖರ್ ಅಕ್ಕಿ

ಒಂದು ರಾಷ್ಟ್ರ ಒಂದು ಚುನಾವಣೆ! ಇದನ್ನು ಕೇಳಲು ಎಷ್ಟು ಸುಂದರವಾಗಿದೆ. ಆದರೆ ಇದರ ಹಿಂದಿರುವ ಪ್ರಸ್ತಾಪವೂ ಅಷ್ಟೇ ಸುಂದರವಾಗಿದೆಯೇ ಎನ್ನುವುದು ನಮ್ಮ ಮುಂದಿನ ಪ್ರಶ್ನೆ. ದೇಶಾದ್ಯಂತ ಲೋಕಸಭೆ ಮತ್ತು ವಿಧಾನಸಭೆಯ ಚುನಾವಣೆಗಳನ್ನು 5 ವರ್ಷಗಳಲ್ಲಿ ಒಂದೇ ಬಾರಿ ಜೊತೆಗೇ ನಡೆಸುವ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವಕ್ಕೆ ಒಳ್ಳೆಯ ಹೆಜ್ಜೆಯಾಗಬಲ್ಲದೇ?

ಮೊದಲ ನೋಟದಲ್ಲಿ ಇದೊಂದು ತುಂಬಾ ಸರಳ ಪ್ರಸ್ತಾಪ ಎನಿಸುತ್ತದೆ. ದೇಶಾದ್ಯಂತ ಪ್ರತಿ ಐದು ವರ್ಷಗಳಲ್ಲಿ ಚುನಾವಣೆ ಆಗುವುದು ನಿಶ್ಚಿತ. ಆದರೆ ವಿಧಾನಸಭೆಯ ಚುನಾವಣೆಗಳ ದಿನಾಂಕಗಳು ಲೋಕಸಭೆಯ ದಿನಾಂಕಗಳೊಂದಿಗೆ ಜೋಡಿಸಿಲ್ಲ. ಹಾಗಾಗಿ ಕೇಂದ್ರ ಸರಕಾರದ 5 ವರ್ಷಗಳ ಕಾರ್ಯಕಾಲದಲ್ಲಿ ಪ್ರತಿ ವರ್ಷ ಒಂದು ಅಥವಾ ಎರಡು ಬಾರಿ ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯುತ್ತವೆ. ಚುನಾವಣೆಯ ನೀತಿ ಸಂಹಿತೆ ಜಾರಿ ಬಂದ ಕೂಡಲೇ ಆ ರಾಜ್ಯಗಳ ಇದೇ ಕೇಂದ್ರ ಸರಕಾರಗಳ ಕಡತಗಳೂ ನಿಂತುಬಿಡುತ್ತವೆ. ಕೇಂದ್ರ ಸರಕಾರದ ಕಾರ್ಯವೈಖರಿಯಲ್ಲಿ ಅಡ್ಡಿ ಬರುತ್ತವೆ. ಸರಕಾರ ಚುನಾವಣೆಯ ಒತ್ತಡದಲ್ಲಿ ಕೆಲಸ ಮಾಡುತ್ತವೆ, ಹಾಗಾಗಿ ಯಾವುದೇ ದೀರ್ಘಕಾಲೀನ ನೀತಿಗಳನ್ನು ರೂಪಿಸಲು ಆಗುವುದಿಲ್ಲ. ಹಾಗೂ ರಾಜ್ಯ ಮತ್ತು ಕೇಂದ್ರದ ಚುನಾವಣೆಗಳನ್ನು ಬೇರೆ ಬೇರೆಯಾಗಿ ನಡೆಸುವುದರಿಂದ ವೆಚ್ಚವೂ ದುಪ್ಪಟಾಗುತ್ತದೆ.

ಹಾಗಾಗಿಯೇ 5 ವರ್ಷಗಳಲ್ಲಿ ಒಂದೇ ಸಲ ಒಟ್ಟಾಗಿ ಎಲ್ಲಾ ರಾಜ್ಯಗಳ ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳನ್ನು ನಡೆಸಿ, ಮುಂದಿನ 5 ವರ್ಷಗಳ ತನಕ ಎಲ್ಲರೂ ಯಾವುದೇ ಅಡತಡೆಗಳಿಲ್ಲದೆ ತಮ್ಮ ಸರಕಾರಗಳನ್ನು ನಡೆಸುವುದಕ್ಕೆ ಈ ಪ್ರಸ್ತಾಪ.

5 ವರ್ಷಗಳ ನಂತರ ಒಂದೇ ಬಾರಿ ಎಲ್ಲರ ಕೆಲಸಗಳ ಮೌಲ್ಯಮಾಪನವಾಗಬೇಕು ಹಾಗೂ ಹೊಸ ಲೋಕಸಭೆ ಮತ್ತು ವಿಧಾನಸಭೆಗಳನ್ನು ಚುನಾಯಿಸಬೇಕು. ಮೊದಲ ಬಾರಿ ಇದನ್ನು ಕೇಳಿದಾಗ ಈ ಮಾತುಗಳು ಸರಳ ಮತ್ತು ನೇರ ಅನಿಸುತ್ತವೆ.
ಆದರೆ ವಾಸ್ತವದಲ್ಲಿ ಈ ಪ್ರಸ್ತಾಪ ಅಷ್ಟು ನೇರವೂ ಇಲ್ಲ, ಸರಳವೂ ಇಲ್ಲ. ಈ ಪ್ರಸ್ತಾಪ ಬರೀ ಚುನಾವಣೆಗಳ ದಿನಾಂಕ ಬದಲಿಸುವ ಪ್ರಸ್ತಾಪ ಅಲ್ಲ. ಇದನ್ನು ಕೇವಲ ಆಡಳಿತಾತ್ಮಕ ಬದಲಾವಣೆಯಿಂದ ಜಾರಿಗೊಳಿಸಲಾಗುವುದಿಲ್ಲ.

ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅರ್ಥವೆಂದರೆ, ನಮ್ಮ ಸಂವಿಧನ ಮತ್ತು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಅಡಿಪಾಯದಲ್ಲೇ ಬದಲಾವಣೆ ಮಾಡುವುದಕ್ಕೆ ಒಪ್ಪಿಕೊಂಡಂತೆ. ನಮ್ಮ ಸಂವಿಧಾನವನ್ನು ರಚಿಸಿದವರು ನಮ್ಮ ದೇಶದ ಪರಿಸ್ಥಿತಿಗಳನ್ನು ಗಮನದಲ್ಲಿಟ್ಟುಕೊಂಡು ಅಮೇರಿಕದ ರಾಷ್ಟ್ರಪತಿಯ ಪದ್ಧತಿಯನ್ನು ಒಪ್ಪಿಕೊಳ್ಳದೇ ಬ್ರಿಟನ್ನಿನ ಸಂಸದೀಯ ಪ್ರಜಾಪ್ರಭುತ್ವದ ಅಡಿಪಾಯದ ಚೌಕಟ್ಟನ್ನು ನಮ್ಮದಾಗಿಸಿಕೊಂಡರು. ನಮ್ಮ ಸಂಸದೀಯ ಚೌಕಟ್ಟಿನಲ್ಲಿ ಪ್ರಧಾನಮಂತ್ರಿಗೆ ಸಂಸತ್ತಿನಲ್ಲಿ ಬಹುಮತ ಪಡೆಯುವುದು ಅನಿವಾರ್ಯವಾಗಿದೆ. ಯಾವುದೇ ಪ್ರಧಾನಮಂತ್ರಿ ಅಥವಾ ಲೋಕಸಭೆಯಲ್ಲಿ ವಿಶ್ವಾಸ ಮಂಡನೆಯಲ್ಲಿ ಸೋತಕೂಡಲೇ ಆ ಸರಕಾರವು ತಕ್ಷಣ ರಾಜೀನಾಮೆ ನೀಡಬೇಕಾಗುತ್ತದೆ.

ಯೋಚಿಸಿ, ಒಂದು ವೇಳೆ ‘ಒಂದು ರಾಷ್ಟ್ರ ಒಂದು ಚುನಾವಣೆ’ ಯ ಪ್ರಸ್ತಾಪವನ್ನು ಸ್ವೀಕಾರ ಮಾಡಲಾಗಿ ಹಾಗೂ ಒಂದು ವೇಳೆ ಯಾವುದೇ ಒಂದು ರಾಜ್ಯದಲ್ಲಿ ಅಥವಾ ಕೇಂದ್ರದಲ್ಲಿ ಯಾವುದೇ ಸರಕಾರ 2 ವರ್ಷಗಳ ನಂತರ ಅಥವಾ 4 ವರ್ಷಗಳ ನಂತರ ಬಹುಮತ ಕಳೆದುಕೊಂಡರೆ ಆ ಪರಿಸ್ಥಿತಿಯಲ್ಲಿ ಏನಾಗಬಹುದು? ಆ ಸರಕಾರಕ್ಕೆ 5 ವರ್ಷಗಳ ತನಕ ಬಹುಮತ ಇರಲಿ ಬಿಡಲಿ ಮುಂದುವರೆಸಲು ಅವಕಾಶ ನೀಡಲಾಗುವುದೇ? ಒಂದು ವೇಳೆ ಇಂಥ ನಿಯಮ ಮಾಡಿದಲ್ಲಿ ಸದನದಲ್ಲಿ ತನ್ನ ಬಜೆಟ್ ಅನ್ನೆ ಪಾಸ್ ಮಾಡಲು ಆಗದ ಆ ಸರಕಾರ ತನ್ನ ಆಳ್ವಿಕೆಯನ್ನು ಹೇಗೆ ಮಾಡಬಲ್ಲದು? ಅಥವಾ ಕೇವಲ ಬಾಕಿ ಉಳಿದ ಅವಧಿಗಾಗಿಯೇ ಮತ್ತೊಮ್ಮೆ ಚುನಾವಣೆ ನಡೆಸಲಾಗುವುದೇ? ಇದರರ್ಥ ಒಂದು ವೇಳೆ ಯಾವುದೊಂದು ಸರಕಾರ ನಾಲ್ಕು ವರ್ಷಗಳ ನಂತರ ಕುಸಿದುಬಿದ್ದರೆ ರಾಜ್ಯ ಅಥವಾ ದೇಶದಲ್ಲಿ ಕೇವಲ ಒಂದು ವರ್ಷ ಸರಕಾರವನ್ನು ಚುನಾಯಿಸುವುದಕ್ಕಾಗಿ ಹೊಸ ಚುನಾವಣೆಗಳು ಆಗಬೇಕಾಗುತ್ತದೆ. ಹಾಗಾಗಿ ನಮ್ಮ ಮುಂದಿನ ಪ್ರಶ್ನೆ, ಇಂತಹ ಪರಿಸ್ಥಿತಿಯಲ್ಲಿ ಈ ಪ್ರಸ್ತಾಪ ನಮ್ಮ ಪ್ರಜಾಪ್ರಭುತ್ವದ ಸಮಸ್ಯೆಗಳನ್ನು ಕಡಿಮೆ ಮಾಡುವುದೇ ಅಥವಾ ಹೆಚ್ಚಿಸುವುದೇ ಎನ್ನುವುದಾಗಿದೆ.

ಇಲ್ಲಿ ಇನ್ನೊಂದು ಗಂಭಿರ ಮತ್ತು ಆಳವಾದ ಸಮಸ್ಯೆಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ. ಪ್ರತಿ ಸ್ತರದಲ್ಲೂ ಚುನಾವಣೆಗಳು ಬೇರೆ ಬೇರೆಯಾಗಿ ನಡೆದಾಗ ಮತದಾರ ಪ್ರತಿ ಹಂತಕ್ಕೂ ತನ್ನ ವಿಭಿನ್ನ ಅಭಿಪ್ರಾಯದೊಂದಿಗೆ ಮತಚಲಾಯಿಸಬಹುದಾಗಿದೆ. ಆದರೆ ಬೇರೆ ಬೇರೆ ಸ್ತರದ ಚುನಾವಣೆಗಳು ಒಂದೇ ಬಾರಿ ಆದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಎರಡೂ ಮತಗಳು ಒಂದಕ್ಕೊಂದು ಜೋಡಿಸಲಾಗುತ್ತವೆ. ನಿಸ್ಸಂಶಯವಾಗಿಯೂ ಇಂದು ನಮ್ಮ ಮತದಾರರು ಮುಂಚೆಗಿಂತಲೂ ಹೆಚ್ಚು ಜಾಗರೂಕಾಗುತ್ತಿದ್ದಾರೆ. ಓರಿಸ್ಸಾದ ಚುನಾವಣೆ ನಮಗೆ ಹೇಳುವುದೇನೆಂದರೆ, ಒಂದೇ ಸಮಯದಲ್ಲಿ ಮತ ಚಲಾಯಿಸಿದರೂ ಮತದಾರರು ಲೋಕಸಭೆಗಾಗಿ ಬಿಜೆಪಿಗೆ ಹೆಚ್ಚು ಮತ ನೀಡಿ ವಿಧಾನಸಭೆಗಾಗಿ ಬಿಜೆಡಿಯನ್ನು ಆಯ್ಕೆ ಮಾಡಬಹುದಾಗಿದೆ. ಆದರೆ ಎರಡು ಬೇರೆ ಬೇರೆ ಸ್ತರದ ಚುನಾವಣೆಗಳ ಪ್ರಚಾರ ಹಾಗೂ ಮತದಾನ ಒಂದೇ ಸಮಯದಲ್ಲಿ ನಡೆದಾಗ ಎರಡೂ ಚುನಾವಣೆಗಳಲ್ಲಿ ಸಂಯೋಜನೆಯ ಸ್ಥಿತಿ ಬರುವುದು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಒಂದೇ ಸಮಯದಲ್ಲಿ ಚುನಾವಣೆ ನಡೆಸುವ ಪ್ರಸ್ತಾಪದಿಂದ ನಮ್ಮ ರಾಜಕೀಯದ ಸ್ಥಾನೀಯ ಮತ್ತು ವಲಯಾವಾರು ಇತಿಹಾಸವನ್ನು ಘಾಸಿಗೊಳಿಸುತ್ತದೆ.

ಇನ್ನೊಂದು ಪ್ರಶ್ನೆ, ಚುನಾವಣೆಯ ಕ್ಯಾಲೆಂಡರ್‍ನ ಸಮಸ್ಯೆಗಳನ್ನು ಪರಿಹರಿಸುವುದಕ್ಕಾಗಿ ದೇಶದ ಸಂವಿಧಾನಾತ್ಮಕ ವ್ಯವಸ್ಥೆಯಲ್ಲಿ ಇಂತಹ ದೊಡ್ಡ ಬದಲಾವಣೆ ಮಾಡುವ ಅವಶ್ಯಕತೆ ಇದೆಯೇ? ನನ್ನ ಪ್ರಕಾರ, ಚುನಾವಣೆಯ ಕ್ಯಾಲೆಂಡರ್‍ನಲ್ಲಿ ಮೂರು ಸುಧಾರಣೆಗಳನ್ನು ತಂದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯಂತಹ ಬೃಹತ್ ಸಂವಿಧಾನಾತ್ಮಕ ಬದಲಾವಣೆಯ ಯಾವುದೇ ಅವಶ್ಯಕತೆ ಇರುವುದಿಲ್ಲ.

ಮೊದಲನೆಯದು, ಚುನಾವಣೆಯ ಮಾದರಿ ನೀತೆ ಸಂಹಿತೆಯಲ್ಲಿ ಬದಲಾವಣೆ ಮಾಡಬೇಕಿದೆ, ಯಾವುದೇ ರಾಜ್ಯದ ವಿಧಾನಸಭೆ ಚುನಾವಣೆಯ ಸಮಯದಲ್ಲಿ ಕೇಂದ್ರ ಸರಕಾರದ ಸಾಮಾನ್ಯ ಕಾರ್ಯಕೆಲಸಗಳಲ್ಲಿ ಅಡೆತಡೆಗಳು ಬರದಂತೆ ನೀತಿ ಸಂಹಿತೆಯಲ್ಲಿ ಬದಲಾವಣೆ. ಎರಡನೇಯದ್ದು, ಚುನಾವಣಾ ಆಯೋಗ ಮತದಾನದ ಅವಧಿಯನ್ನು ಕಡಿತಗೊಳಿಸಬಹುದು. ಉತ್ತರಪ್ರದೇಶದಂತಹ ರಾಜ್ಯದ ವಿಧಾನಸಭೆ ಚುನಾವಣೆಯನ್ನು ತಿಂಗಳುಪೂರ್ತಿ 7 ಹಂತಗಳಲ್ಲಿ ನಡೆಸುವುದು ಸರಿಯಲ್ಲ. ಚುನಾವಣೆ ಮತದಾನದ ಪ್ರಕ್ರಿಯೆ ಒಂದು ವಾರದಲ್ಲಿ ಸಂಪೂರ್ಣವಾದರೆ ಸರಕಾರದ ಕೆಲಸಗಳಲ್ಲಿ ಅಡ್ಡಿ ಕಡಿಮೆ ಆಗುವವು. ಮೂರನೇಯದ್ದು, ಚುನಾವಣಾ ಆಯೋಗ ಬಯಸಿದಲ್ಲಿ ಹಲವು ರಾಜ್ಯಗಳ ಚುನಾವಣೆಗಳನ್ನು ಜೊತೆಗೂಡಿಸಿ ಒಂದೇ ಸಮಯದಲ್ಲಿ ಮಾಡಬಹುದು. ಯಾವುದೇ ಲೋಕಸಭೆ ಅಥವಾ ರಾಜ್ಯಸಭೆಯ ಅವಧಿ ಪೂರ್ಣವಾಗುವ 6 ತಿಂಗಳ ಮುಂಚೆಯ ತನಕ ಯಾವ ಸಮಯದಲ್ಲೂ ಚುನಾವಣೆ ನಡೆಸುವ ಅವಕಾಶ ಚುನಾವಣಾ ಆಯೋಗಕ್ಕೆ ನಮ್ಮ ಸಂವಿಧಾನ ಅವಕಾಶ ಕಲ್ಪಿಸಿದೆ. ಈ ಅವಕಾಶವನ್ನು ಬಳಸಿ ಚುನಾವಣಾ ಆಯೋಗವು ಕೆಲವು ರಾಜ್ಯಗಳ ಚುನಾವಣೆಗಳನ್ನು ಸ್ವಲ್ಪ ಸಮಯ ಮುಂಚೆ ಮಾಡಿ ಇತರ ರಾಜ್ಯಗಳ ಚುನಾವಣೆಗಳನ್ನು ಒಂದೆ ಸಮಯದಲ್ಲಿ ಮಾಡಬಹುದು ಹಾಗೂ ಇದರಿಂದ ಕೇಂದ್ರ ಸರಕರಾದ 5 ವರ್ಷದ ಕಾರ್ಯಾವಧಿಯಲ್ಲಿ 8ರಿಂದ 10 ದೊಡ್ಡ ರಾಜ್ಯ ಚುನಾವಣೆಗಳು ಆಗುವ ಬದಲಿಗೆ ಕೇವಲ ನಾಲ್ಕು ಅಥವಾ ಐದು ದೊಡ್ಡ ರಾಜ್ಯ ಚುನಾವಣೆಗಳು ಆಗಬಹುದಾಗಿದೆ.

ಚುನಾವಣೆಗಳಲ್ಲಿ ಆಗುವ ವೆಚ್ಚವನ್ನು ಕಡಿಮೆ ಮಾಡುವುದಕ್ಕೆ ಚುನಾವಣೆಯ ಕ್ಯಾಲೆಂಡರ್ ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ. ಚುನಾವಣೆಗಳಲ್ಲಿ ಹುಚ್ಚುಚ್ಚಾಗಿ ಅತ್ಯಂತ ದೊಡ್ಡ ಮೊತ್ತವನ್ನು ಖರ್ಚು ಮಾಡುವುದಕ್ಕೆ ನಿಜವಾದ ಕಾರಣ ಇರುವುದು ಚುನಾವಣೆಗಳಲ್ಲಿ ಕಾನೂನಿನ ಎಲ್ಲೆಯನ್ನು ಮೀರಿ ಮಾಡುವ ಖರ್ಚು. ಹಾಗಾಗಿ ಚುನಾವಣಾ ಆಯೋಗ ಚುನಾವಣೆಯ ವೆಚ್ಚದ ಎಲ್ಲೆಯನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಬೇಕು.

ಇವೆಲ್ಲದರ ನಿಷ್ಕರ್ಷ ಸ್ಪಷ್ಟವಾಗಿದೆ: ಚುನಾವಣೆಯ ಕ್ಯಾಲೆಂಡರ್‍ನಿಂದ ಆಗುವ ಅಡೆತಡೆಗಳು ಹಾಗೂ ಆಳ್ವಿಕೆಯ ತೊಂದರೆಗಳನ್ನು ಬಗೆಹರಿಸಬೇಕಾದರೆ ‘ಒಂದು ರಾಷ್ಟ್ರ ಒಂದು ಚುನಾವಣೆ’ಯೇ ಪರಿಹಾರವಲ್ಲ, ಇದರ ಹೊರತಾಗಿಯೂ ನಿಸ್ಸಂಶಯವಾಗಿ ಆ ತೊಂದರೆಗಳನ್ನು ನಿವಾರಿಸಬಹುದು. ಪ್ರಶ್ನೆ ಇರುವುದು, ಇವೆಲ್ಲವುಗಳ ಹೊರತಾಗಿಯೂ ಸರಕಾರ ಈ ಪ್ರಸ್ತಾಪವನ್ನು ಏಕೆ ತರಲು ಪ್ರಯತ್ನಿಸುತ್ತಿದೆ ಹಾಗೂ ಅದರಲ್ಲೂ ತನ್ನ ಹೊಸ ಆಳ್ವಿಕೆಯ ಮೊಟ್ಟ ಮೊದಲ ಹೆಜ್ಜೆಯಾಗಿ? ಈ ಸರಕಾರದ ನಿಯತ್ತಾದರೂ ಏನಿದೆ ಇದರ ಹಿಂದೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...