ಮೂರು ವರ್ಷಗಳಿಂದ ಪಕ್ಷದಿಂದ ಕಡೆಗಣಿಸಲಾಗುತ್ತಿದೆ ಎಂದು ದೂರುತ್ತಿರುವ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರು ಗುಜರಾತ್ ಚುನಾವಣೆಗೆ ಕೆಲವೇ ತಿಂಗಳುಗಳ ಮೊದಲು ಬಿಜೆಪಿಯನ್ನು ಹೊಗಳುವ ಮೂಲಕ ತನ್ನ ಪಕ್ಷದ ಕೇಂದ್ರದ ನಾಯಕತ್ವಕ್ಕೆ ಆತಂಕಕಾರಿ ಸಂಕೇತಗಳನ್ನು ರವಾನಿಸಿದ್ದಾರೆ.
ರಾಜ್ಯದ ಪ್ರಮುಖ ಸಮುದಾಯವಾದ ‘ಪಾಟಿದಾರ್’ನ ನಾಯಕರಾದ ಅವರು ಮತ್ತೊಮ್ಮೆ ತಮ್ಮ ಪಕ್ಷ ಮತ್ತು ರಾಜ್ಯ ಕಾಂಗ್ರೆಸ್ ನಾಯಕತ್ವದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದರೆ ಬಿಜೆಪಿಯೊಂದಿಗೆ ತಾನು ಮಾತುಕತೆ ನಡೆಸುತ್ತಿದ್ದೇನೆ ಎಂಬ ವರದಿಗಳನ್ನು ಅವರು ನಿರಾಕರಿಸಿದ್ದಾರೆ. ಜೊತೆಗೆ, “ಬಿಜೆಪಿಯ ಬಗ್ಗೆ ಕೆಲವು ಒಳ್ಳೆಯ ವಿಷಯಗಳನ್ನು ನಾವು ಒಪ್ಪಿಕೊಳ್ಳಬೇಕು” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ರಾಜಕೀಯವಾಗಿ ಬಿಜೆಪಿ ತೆಗೆದುಕೊಂಡ ಇತ್ತೀಚಿನ ನಿರ್ಧಾರಗಳು, ಇಂತಹ ಕ್ರಮಗಳನ್ನು ತೆಗೆದುಕೊಳ್ಳುವ ಶಕ್ತಿ ಅವರಿಗೆ ಇದೆ ಎಂದು ನಾವು ಒಪ್ಪಿಕೊಳ್ಳಬೇಕು. ಅವರ ಪರವಾಗಿ ನಿಲ್ಲದೆ ಅಥವಾ ಅವರನ್ನು ಹೊಗಳದೆ, ನಾವು ಕನಿಷ್ಠ ಸತ್ಯವನ್ನು ಒಪ್ಪಿಕೊಳ್ಳಬಹುದು ಎಂದು ನಾನು ನಂಬುತ್ತೇನೆ. ಗುಜರಾತಿನಲ್ಲಿ ಕಾಂಗ್ರೆಸ್ ಬಲಿಷ್ಠವಾಗಬೇಕಾದರೆ, ನಾವು ನಮ್ಮ ನಿರ್ಧಾರ ತೆಗೆದುಕೊಳ್ಳುವ ಕೌಶಲ್ಯ ಮತ್ತು ನಿರ್ಧಾರ ತೆಗೆದುಕೊಳ್ಳುವ ಶಕ್ತಿಯನ್ನು ಸುಧಾರಿಸಿಕೊಳ್ಳಬೇಕು” ಎಂದು ಹಾರ್ದಿಕ್ ಪಟೇಲ್ ಎನ್‌ಡಿಟಿವಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ಹಯ್ಯ, ಜಿಗ್ನೇಶ್ ಮತ್ತು ಹಾರ್ದಿಕ್ ಮೇಲೆ ‘ಬಿಹಾರ ಕಾಂಗ್ರೆಸ್’ಗೆ ನಂಬಿಕೆ – RJD ಜೊತೆ ಮೈತ್ರಿಗೆ ಬ್ರೇಕ್
2015 ರಲ್ಲಿ ಗುಜರಾತ್‌ನಲ್ಲಿ ಮೀಸಲಾತಿಗಾಗಿ ಪ್ರಬಲ “ಪಾಟಿದಾರ್” ಸಮುದಾಯದ ಆಂದೋಲನದ ನೇತೃತ್ವ ವಹಿಸಿದ್ದ ಹಾರ್ದಿಕ್ ಪಟೇಲ್, 2019 ರ ರಾಷ್ಟ್ರೀಯ ಚುನಾವಣೆಯ ಮೊದಲು ಕಾಂಗ್ರೆಸ್‌ಗೆ ಸೇರಿದ್ದರು. ಅವರ ರಾಜಕೀಯ ಪಾದಾರ್ಪಣೆಯ ನಂತರ ಅವರ ಜನಪ್ರಿಯತೆ ಕ್ಷೀಣಿಸಿತು ಎಂದು ಎನ್‌ಡಿಟವಿ ಉಲ್ಲೇಖಿಸಿದೆ.
2017 ರ ಗುಜರಾತ್ ಚುನಾವಣೆಯಲ್ಲಿ ಪಾಟಿದಾರ್ ಸಮುದಾಯದಿಂದ ಪಕ್ಷವು ಲಾಭ ಗಳಿಸಿದ್ದರೂ, ಸಮುದಾಯವು 2019 ರ ಚುನಾವಣೆ ಅಥವಾ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿಲ್ಲ.
ಹಾರ್ದಿಕ್ ಪಟೇಲ್ ತಮ್ಮ ಪಕ್ಷದ ನಾಯಕತ್ವವು ತನ್ನನ್ನು ಬದಿಗಿಟ್ಟಿದೆ ಎಂದು ಆರೋಪಿಸಿದ್ದು, ಸಮುದಾಯದ ಇನ್ನೊಬ್ಬ ಪ್ರಮುಖ ನಾಯಕ ನರೇಶ್ ಪಟೇಲ್ ಅವರನ್ನು ಕಣಕ್ಕಿಳಿಸುವ ಕಾಂಗ್ರೆಸ್ ಯೋಜನೆ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ.


