ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆನ್ನಿಗೆ ಚೂರಿ ಹಾಕಿದ ಅವಕಾಶವಾದಿಯಾಗಿದ್ದು, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ ಎಂದು ಮಂಡ್ಯ ಕ್ಷೇತ್ರದ ಮಾಜಿ ಸಂಸದೆ, ನಟಿ ರಮ್ಯಾ ಗುರುವಾರ ಆರೋಪಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಆದೇಶದಂತೆ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ತನ್ನ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಕಾಂಗ್ರೆಸ್ ಐಟಿ ಸೆಲ್ ಕಡೆಯಿಂದ ರಚಿತವಾಗಿದೆ ಎಂದು ಹೇಳಿ ಹಲವು ಸಂದೇಶಗಳನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಪಿಎಸ್‌ಐ ನೇಮಕಾತಿ ಹಗರಣದಿಂದ ರಕ್ಷಣೆ ಕೋರಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಅವರು ಕಾಂಗ್ರೆಸ್‌ನ ಪ್ರಚಾರ ಸಮಿತಿ ನಾಯಕ ಎಂ.ಬಿ. ಪಾಟೀಲ್ ಅವರನ್ನು ರಹಸ್ಯವಾಗಿ ಭೇಟಿ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ್ ಆರೋಪಿಸಿದ್ದರು. ಡಿ.ಕೆ. ಶಿವಕುಮಾರ್ ಅವರ ಆರೋಪವನ್ನು ನಿರಾಕರಿಸಿರುವ ಎಂ.ಬಿ. ಪಾಟೀಲ್, “ಅಶ್ವಥ್ ನಾರಾಯಣ ಅವರು ನನ್ನನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಅವರು ಭೇಟಿ ಮಾಡಿದ್ದರೂ ತಪ್ಪಿಲ್ಲ. ಅದು ನನ್ನ ಖಾಸಗಿ ವಿಚಾರ, ಅದರ ಬಗ್ಗೆ ಮಾತನಾಡಿರುವುದು ತಪ್ಪು, ಅದು ಅವರ ಸಣ್ಣತನ. ರಾಜಕೀಯ ವಿಚಾರ ಬಂದಾಗ ನಾನು ಪಕ್ಷದ ಜೊತೆಗೆ ಇರುತ್ತೇನೆ. ಶಿವಕುಮಾರ್ ಅವರ ಆರೋಪವನ್ನು ನಾನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಪಕ್ಷದ ವೇದಿಕೆಗೆ ವಿಚಾರವನ್ನು ಕೊಂಡೊಯ್ಯುತ್ತೇನೆ” ಎಂದು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ತಮ್ಮ ಪಕ್ಷದ ಹಿರಿಯ ಸಹೋದ್ಯೋಗಿಯ ಮೇಲೆಯೇ ಡಿಕೆಶಿ ಇಂತಹ ಹೇಳಿಕೆ ನೀಡಬಾರದಿತ್ತು ಎಂದು ಕೆಲವು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಪತ್ರಕರ್ತರು ಹೇಳಿದ್ದಾರೆ. ಅದರಂತೆಯೆ ಶಿವಕುಮಾರ್ ಅವರ ಹೇಳಿಕೆಯನ್ನು ಮಾಜಿ ಸಂಸದೆ ರಮ್ಯಾ ವಿರೋಧಿಸಿದ್ದರು.
ಇದನ್ನೂ ಓದಿ: ನಟ ಚೇತನ್ ಟ್ವೀಟ್‌ನಲ್ಲಿ ತಪ್ಪೇನಿದೆ? ದನಿಯೆತ್ತಿದ ನಟಿ ರಮ್ಯಾ ದಿವ್ಯಸ್ಪಂದನ
ರಮ್ಯಾ ಅವರು, “ಬೇರೆ ಬೇರೆ ಪಕ್ಷದಲ್ಲಿ ಇರುವವರು ಪರಸ್ಪರ ಭೇಟಿಯಾಗುತ್ತಾರೆ, ಸಮಾರಂಭಗಳಿಗೆ ಹೋಗುತ್ತಾರೆ. ಅಷ್ಟೆ ಅಲ್ಲದೆ ಬೇರೆ ಪಕ್ಷದಲ್ಲಿ ಇರುವ ಕುಟುಂಬಗಳ ನಡುವೆ ಮದುವೆಯೂ ಆಗುತ್ತಾರೆ. ಡಿಕೆ ಶಿವಕುಮಾರ್ ಅವರು ಕಟ್ಟಾ ಕಾಂಗ್ರೆಸ್ಸಿಗ ಎಂ.ಬಿ. ಪಾಟೀಲ್ ಬಗ್ಗೆ ಹೀಗೆ ಹೇಳಿದ್ದು ನನಗೆ ಆಶ್ಚರ್ಯವಾಗಿದೆ. ಒಂದೇ ಪಕ್ಷವಾಗಿ ಎಲ್ಲರೂ ಒಟ್ಟಿಗೆ ಚುನಾವಣೆ ಎದುರಿಸಬೇಕಲ್ಲವೇ?” ಎಂದು ಟ್ವೀಟ್ ಮಾಡಿ ಪ್ರಶ್ನಿಸಿದ್ದರು.
ರಮ್ಯಾ ಅವರ ಟ್ವೀಟ್‌ಗೆ ಪ್ರತಿಯಾಗಿ ಕಾಂಗ್ರೆಸ್‌ನ ಕೆಲವು ನಾಯಕರು ಮತ್ತು ಕಾರ್ಯಕರ್ತರು ಅವರ ಮೇಲೆ ದಾಳಿ ಮಾಡಿ, ಅವರನ್ನು ಟ್ರೋಲ್ ಮಾಡಿತ್ತು. ಈ ರೀತಿ ದಾಳಿ ಮಾಡಲು ಸ್ವತಃ ರಾಜ್ಯ ಕಾಂಗ್ರೆಸ್ ‘ಕಚೇರಿ’ಯೆ ಕೇಳಿಕೊಂಡಿದೆ ಎಂದು ರಮ್ಯ ಆರೋಪಿಸಿದ್ದಾರೆ. ಜೊತೆಗೆ ‘ಕಚೇರಿ’ ಎಂದರೆ, ‘ಡಿ.ಕೆ. ಶಿವಕುಮಾರ್ ನಾಯಕತ್ವದ ರಾಜ್ಯ ಕಾಂಗ್ರೆಸ್’ ಎಂದು ಅವರು ಹೇಳಿದ್ದಾರೆ.
Office = @INCKarnataka under the leadership of the honourable KPCC president @DKShivakumar
— Divya Spandana/Ramya (@divyaspandana) May 12, 2022
ತನ್ನ ವಿರುದ್ದ ಕಾಂಗ್ರೆಸ್ ಐಟಿ ಸೆಲ್ ರಚಿಸಿದೆ ಎನ್ನಲಾಗಿರುವ ಕೆಲವು ಸಂದೇಶಗಳನ್ನು ಸ್ಕ್ರೀನ್ ಶಾರ್ಟ್‌ಗಳನ್ನು ರಮ್ಯಾ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಡಿಕೆಶಿ ಆಫೀಸ್ ಇಂದ ಬಂದಿದೆ ಎನ್ನಲಾಗಿರುವ ರಮ್ಯಾ ಹಂಚಿಕೊಂಡಿರುವ ಸ್ಕ್ರೀನ್‌ಶಾರ್ಟ್
ಕಾಂಗ್ರೆಸ್ ಪಕ್ಷದಲ್ಲಿ ಮೇಲೇರಲು ಡಿ.ಕೆ. ಶಿವಕುಮಾರ್ ಅವರು ಅವಕಾಶ ನೀಡಿದ್ದಾರೆ ಎಂಬ, ಸಂದೇಶವನ್ನು ಉಲ್ಲೇಖಿಸಿ ಪ್ರತಿಕ್ರಿಯಿಸಿರುವ ರಮ್ಯಾ, “ನನಗೆ ಅವಕಾಶಗಳನ್ನು ನೀಡಿದವರು ಮತ್ತು ನನ್ನ ಬೆಂಬಲಕ್ಕೆ ನಿಂತವರು ಯಾರಾದರೂ ಇದ್ದರೆ ಅದು ರಾಹುಲ್‌ಗಾಂಧಿ ಮಾತ್ರ. ಉಳಿದಂತೆ ನನಗೆ ಅವಕಾಶಗಳನ್ನು ಕೊಟ್ಟಿದ್ದಾರೆ ಎಂದು ಹೇಳಿಕೊಳ್ಳುವವರು ಅವಕಾಶವಾದಿ ಆಗಿದ್ದಾರೆ. ಈ ಅವಕಾಶವಾದಿ ನನ್ನ ಬೆನ್ನಿಗೆ ಚೂರಿ ಹಾಕಿ, ನನ್ನನ್ನು ಹತ್ತಿಕ್ಕಲು ಪ್ರಯತ್ನಿಸಿದ್ದಾರೆ. ನೀವು ಟಿವಿಯಲ್ಲಿ ನೋಡುವ ಎಲ್ಲವೂ ಅವರ ಮೋಸಗೊಳಿಸುವ ಮನಸ್ಸನ್ನು ಮರೆಮಾಚುವ ಪ್ರಹಸನವಾಗಿದೆ” ಎಂದು ಅವರು ಡಿಕೆ ಶಿವಕುಮಾರ್ ಅವರ ವಿರುದ್ಧ ಆಕ್ರೊಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಹಿಂದೂ ಧರ್ಮ ಮತ್ತು ಹಿಂದುತ್ವ ಒಂದೇ ಅಲ್ಲ: ಹಿಂದುತ್ವ ಎಂದರೆ ರಾಜಕೀಯ – ನಟಿ ರಮ್ಯಾ
“ನಾನು ಪಕ್ಷವನ್ನು ತ್ಯಜಿಸಿದ ನಂತರ, ‘ಕಾಂಗ್ರೆಸ್‌ಗೆ 8 ಕೋಟಿ ಕಾಂಗ್ರೆಸ್‌ಗೆ ವಂಚಿಸಿ ಓಡಿಹೋದಳು’ ಎಂಬ ಸುದ್ದಿ ಮುಖ್ಯವಾಗಿ ಕನ್ನಡ ವಾಹಿನಿಗಳಲ್ಲಿ ನನ್ನ ವಿಶ್ವಾಸಾರ್ಹತೆಯನ್ನು ನಾಶಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ನಾನು ಓಡಿಹೋಗಲಿಲ್ಲ. ವೈಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದ್ದೇನೆ. ನಾನು ಪಕ್ಷಕ್ಕೆ 8 ಕೋಟಿ ವಂಚನೆ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ.
ಮತ್ತೊಂದು ಟ್ವೀಟ್‌ನಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಉಲ್ಲೇಖಿಸಿ “ನಾನು ಮೌನವಾಗಿರುವುದು ನನ್ನ ತಪ್ಪು. ದಯವಿಟ್ಟು ನೀವು ಮುಂದೆ ಕರ್ನಾಟಕಕ್ಕೆ ಬಂದಾಗ ಈ ಬಗ್ಗೆ ಮಾಧ್ಯಮಗಳೊಂದಿಗೆ ಸ್ಪಷ್ಟಪಡಿಸಿ. ಇದು ನೀವು ನನಗಾಗಿ ಮಾಡಬಹುದಾದ ಕನಿಷ್ಠ ಕೆಲಸ. ನನಗೆ ನನ್ನ ಜೀವನದುದ್ದಕ್ಕೂ ಈ ನಿಂದನೆ ಮತ್ತು ಟ್ರೋಲಿಂಗ್‌ನೊಂದಿಗೆ ಬದುಕಬೇಕಾಗಿಲ್ಲ” ಎಂದು ರಮ್ಯಾ ಹೇಳಿದ್ದಾರೆ.



ಅದಕ್ಕೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದರೆ ಒಳ್ಳೇಯದು