Homeಕರ್ನಾಟಕ'ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು': ನೂತನ ಪಠ್ಯದಲ್ಲಿ ಹೆಣ್ಣನ್ನು ಕೀಳಾಗಿ ಬಿಂಬಿಸಿರುವ ಬನ್ನಂಜೆ ಗೋವಿಂದಾಚಾರ್ಯ

‘ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು’: ನೂತನ ಪಠ್ಯದಲ್ಲಿ ಹೆಣ್ಣನ್ನು ಕೀಳಾಗಿ ಬಿಂಬಿಸಿರುವ ಬನ್ನಂಜೆ ಗೋವಿಂದಾಚಾರ್ಯ

ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು ಎಂದೂ ಬರೆದು ಅವಮಾನಿಸಲಾಗಿದೆ.

- Advertisement -
- Advertisement -

ಬಲಪಂಥೀಯ ಬರಹಗಾರ ರೋಹಿತ್‌ ಚಕ್ರತೀರ್ಥರ ನೇತೃತ್ವದಲ್ಲಿ ಪಠ್ಯಪುಸ್ತಕಗಳ ಪರಿಶೀಲನೆ ನಡೆದು ಈಗ ವಿವಾದವೂ ಉಂಟಾಗಿದೆ. 2022-23ನೇ ಸಾಲಿನ ಹತ್ತನೇ ತರಗತಿ ಪ್ರಥಮ ಭಾಷೆ ಕನ್ನಡ ಪಠ್ಯಪುಸ್ತಕದಲ್ಲಿ ತರಲಾಗಿರುವ ಬದಲಾವಣೆಗಳು, ಪ್ರತಿಪಾದಿಸುತ್ತಿರುವ ವಿಷಯಗಳು ಚರ್ಚೆಯ ಕೇಂದ್ರಬಿಂದುಗಳಾಗಿವೆ.

ಪಠ್ಯಪುಸ್ತಕದ ಪಿಡಿಎಫ್‌ ಪ್ರತಿ ಹರಿದಾಡಿದ್ದು, ಬದಲಾವಣೆ ತರಲಾಗುತ್ತಿರುವ ಸಂಗತಿಗಳು ಆಕ್ರೋಶ ತರಿಸಿವೆ. ಈ ಹಿಂದೆ ಇದ್ದ ‘ಭಗತ್‌ಸಿಂಗ್‌’ ಕುರಿತ ಪಠ್ಯವನ್ನು ಕೈಬಿಟ್ಟಿರುವುದು ಇಲ್ಲಿ ಸ್ಪಷ್ಟವಾಗಿದ್ದರೂ ಅಧಿಕೃತ ಪಠ್ಯ ಇದಲ್ಲ ಎಂದು ಸರ್ಕಾರ ಹೇಳಿಕೊಂಡಿದೆ. ಆದರೆ ಇತರ ಬದಲಾವಣೆಗಳ ಕುರಿತು ಪಠ್ಯಪರಿಶೀಲನಾ ಸಮಿತಿಯಾಗಲೀ, ಸರ್ಕಾರವಾಗಲೀ ಅಲ್ಲಗಳೆಯುತ್ತಿಲ್ಲ.

ಆರ್‌ಎಸ್‌ಎಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೇವಾರ್‌ ಭಾಷಣ ಆಧರಿಸಿ ರೂಪಿಸಲಾದ, “ನಿಜವಾದ ಆದರ್ಶ ಪುರುಷ ಯಾರಾಗಬೇಕು?” ಎಂಬ ಪಠ್ಯದ ಜೊತೆಗೆ, ಬನ್ನಂಜೆ ಗೋವಿಂದಾಚಾರ್ಯರ ‘ಶುಕನಾಸನ ಉಪದೇಶ’, ಶತಾವಧಾನಿ ಡಾ.ಆರ್‌.ಗಣೇಶ್‌ ಅವರ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಾಠವನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಹೆಡಗೇವಾರ್‌ ಅವರ ಪಾಠದ ಚರ್ಚೆಯ ಜೊತೆಗೆ, ಬನ್ನಂಜೆಯವರು ಹಾಗೂ ಡಾ.ಆರ್‌.ಗಣೇಶ್ ಅವರ ಪಠ್ಯದ ಕುರಿತೂ ಗಂಭೀರವಾಗಿ ಆಲೋಚಿಸುವ ಅಗತ್ಯವಿದೆ. ಯಾಕೆಂದರೆ ಇವರ ಪಾಠಗಳಲ್ಲಿನ ಲಿಂಗ ಅಸೂಕ್ಷ್ಮತೆ, ವೈದಿಕತೆಯ ವೈಭವೀಕರಣಗಳು ಹತ್ತನೇ ತರಗತಿಯ ಮಕ್ಕಳ ಮನೋಸಾಮರ್ಥ್ಯ, ವಯೋಮಾನದ ಮೇಲೆ ಬೀರಬಹುದಾದ ಪರಿಣಾಮಗಳ ಕುರಿತು ಯೋಚಿಸಬೇಕಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಬನ್ನಂಜೆ ಅವರ ಪಠ್ಯದಲ್ಲಿನ ತೊಡಕೇನು?

“ಹಣ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಹಲವು ಮಹಾತ್ಮರು ಹೇಳಿದ್ದಾರೆ. ಹಣವು ತಾನೇ ತಾನಾಗಿ ಅನರ್ಥಗಳನ್ನು ಮಾಡುತ್ತದೆಯೇ? ಇಲ್ಲ. ಅದು ಯಾರ ಬಳಿಯಾದರೂ ಸಂಚಯವಾದಾಗ ಅವರಿಗೊಂದು ಹುಸಿ ಹಮ್ಮು ಆವರಿಸಿಕೊಳ್ಳುತ್ತದೆ. ದುಡ್ಡಿನಿಂದ ಏನನ್ನು ಬೇಕಾದರೂ ಕೊಳ್ಳಬಲ್ಲೆ, ಯಾರನ್ನಾದರೂ ತನ್ನ ಅಡಿಯಾಳಾಗಿಸಬಲ್ಲೆ, ಹೇಗೆ ಬೇಕಾದರೂ ಬದುಕಬಲ್ಲೆ ಎಂಬ ಅಹಂಕಾರದ ಹುಟ್ಟುತ್ತದಲ್ಲ; ಅದು ಅನರ್ಥಗಳನ್ನು ಸೃಷ್ಟಿಸುತ್ತದೆ…” ಹೀಗೆ ಪಾಠದ ಪ್ರವೇಶಿಕೆ ಆರಂಭವಾಗುತ್ತದೆ.

ಇದನ್ನೂ ಓದಿರಿ: ಕೋಮುಭಾವನೆ ಬರಬಾರದೆಂದು ‘ಭಗವಾಧ್ವಜ’ ಎಂಬುದನ್ನು ‘ಧ್ವಜ’ ಎಂದು ತಿದ್ದಿದ್ದೇವೆ: ಚಕ್ರತೀರ್ಥ

ಹಣದ ಕುರಿತು ನಕರಾತ್ಮಕವಾಗಿ ಮಾತನಾಡುವ ಈ ಪಾಠವು ಅಷ್ಟಕ್ಕೆ ಸುಮ್ಮನಾಗುವುದಿಲ್ಲ. ಸಂಪತ್ತನ್ನು ಅಂದರೆ ಹಣವನ್ನು ಹೆಣ್ಣಿಗೆ ಹೋಲಿಸುತ್ತದೆ. ಇಲ್ಲಿನ ದೃಷ್ಟಿಕೋನವೇ ಪುರುಷಪ್ರಧಾನವಾಗಿದೆ. ಯಾವ ಪಾಠಗಳು ಲಿಂಗ ಸಮಾನತೆಯನ್ನು ಕಲಿಸಬೇಕೋ, ಅದೇ ಪಾಠಗಳು ಈಗ ಲಿಂಗ ಅಸಮಾನತೆಯನ್ನು ಉಸಿರಾಡುತ್ತಿವೆಯೇ? ಎಂದು ಕೇಳಲೇಬೇಕಾಗಿದೆ.

ಬನ್ನಂಜೆಯವರು ಬರೆಯುತ್ತಾರೆ, “ಈ ಸಿರಿಯೆಂಬ ಹೊಸ ಹೆಣ್ಣನ್ನು ಕಂಡು ಮರುಳಾಗದವರನ್ನು ನಾನು ಕಂಡಿಲ್ಲ. ಎಲ್ಲರೂ ಆಕೆಯತ್ತ ಆಕರ್ಷಿತರಾದವರೆ. ಎಲ್ಲರೂ ಆಕೆಯಿಂದ ಮೋಸಹೋಗುವವರೇ. ಯಾವುದೇ ಒಬ್ಬನನ್ನು ನಿರ್ವಂಚನೆಯಿಂದ ಪ್ರೇಮಿಸುವುದು ಆಕೆಯ ಜಾಯಮಾನಕ್ಕೆ ಸಲ್ಲದು.”

ಮುಂದುವರಿದು, “ಕೆಟ್ಟ ನಡತೆಯ ಇಂಥ ಸಿರಿಯೆಂಬ ಹೆಣ್ಣು ಹೇಗೋ ದೈವಯೋಗದಿಂದ ಕೆಲ ಮಂದಿ ರಾಜರಿಗೆ ಒಲಿಯುತ್ತಾಳೆ. ಅಲ್ಲಿಗೆ ಮುಗಿಯಿತು ಅವರ ಕಥೆ. ಏನು ಸಂಭ್ರಮ, ಏನು ಕೋಲಾಹಲ! ಜಗತ್ತಿನ ಎಲ್ಲ ದೌರ್ಜನ್ಯಗಳಿಗೆ ಅವರು ಆಸರೆ..”

-ಮೇಲಿನ ಈ ಸಾಲುಗಳನ್ನು ಶಿಕ್ಷಕಿಯರು ತಮ್ಮ ಮಕ್ಕಳಿಗೆ ಹೇಗೆ ಬೋಧಿಸಬಹುದು? ಲಿಂಗ ಸೂಕ್ಷ್ಮಗಳ ಕುರಿತು ಪಠ್ಯ ಪುಸ್ತಕ ಪರಿಶೀಲನಾ ಸಮಿತಿ ಎಷ್ಟೊಂದು ಅಸೂಕ್ಷ್ಮವಾಗಿದೆಯಲ್ಲ?

“ಹೆಣ್ಣು ಮಾಯೆಯೆಂಬರು ಹೆಣ್ಣು ಮಾಯೆಯಲ್ಲ. ಹೊನ್ನು ಮಾಯೆ ಎಂಬರು ಹೊನ್ನು ಮಾಯೆಯಲ್ಲ. ಮನದ ಮುಂದಣ ಆಸೆಯೇ ಮಾಯೆ ಕಾಣ- ಗುಹೇಶ್ವರ” ಎಂಬ ವಚನ ಪರಂಪರೆಯ ಈ ನಾಡಿನಲ್ಲಿ ಹೆಣ್ಣಿನ ಕುರಿತು ನಕಾರಾತ್ಮಕ ದೃಷ್ಟಿಕೋನವನ್ನು ಬೆಳೆಸಲಾಗುತ್ತಿದೆಯೇ?

ಮೈಸೂರು ವಿವಿಯ ಹಿರಿಯ ಪ್ರಾಧ್ಯಾಪಕರೊಬ್ಬರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿವರ್ತನೆಯ ಕಡೆಗೆ ಹೋಗುತ್ತಿರುವಾಗ ಹೆಣ್ಣಿನ ಕುರಿತ ಈ ಸಂಚುಚಿತ ದೃಷ್ಟಿಕೋನವನ್ನು ಮಕ್ಕಳಲ್ಲಿ ಬೆಳೆಸುವುದು ಅಪಾಯಕಾರಿ. ಹೆಣ್ಣು ಮಕ್ಕಳು ಅತ್ಯಂತ ವೇಗವಾಗಿ ಬೆಳೆಯುತ್ತಿದ್ದಾರೆ. ಸಂಪತ್ತಿನೊಂದಿಗೆ ಹೆಣ್ಣನ್ನು ಹೋಲಿಸಿ, ಆಕೆ ಚಂಚಲೆ ಎಂದು ಬಿಂಬಿಸುವುದು ವ್ಯತರಿಕ್ತ ಪರಿಣಾಮಗಳನ್ನು ಬೀರುತ್ತವೆ” ಎಂದು ಅಭಿಪ್ರಾಯಪಟ್ಟರು.

ಮಕ್ಕಳ ವಯೋಮಾನದ ಕುರಿತು ವಿಶ್ಲೇಷಿಸಿದ ಅವರು, “ಹೆಣ್ಣು ಕೇವಲವಷ್ಟೇ ಎಂಬ ಭಾವನೆ ಈ ರೀತಿಯ ಸಾಲುಗಳಿಂದ ಎಳೆಯ ಮನಸ್ಸುಗಳಲ್ಲಿ ಹುಟ್ಟುತ್ತದೆ. ಎಸ್‌ಎಸ್‌ಎಲ್‌ಸಿ ಮಕ್ಕಳ ವಯಸ್ಸನ್ನು ಗಮನಿಸಬೇಕು. ದೇಹದಲ್ಲಿ ಹಲವಾರು ಬದಲಾವಣೆಗಳು ಆಗುವ ವಯಸ್ಸದು. ಹಾರ್ಮೋನುಗಳು ಬದಲಾಗುತ್ತಿರುತ್ತವೆ. ಹೆಣ್ಣು ಒಬ್ಬರ ಹತ್ತಿರ ಶಾಶ್ವತವಾಗಿ ನಿಲ್ಲುವುದಿಲ್ಲ, ಆಕೆ ಚಂಚಲೆ ಎಂದು ಈ ವಯಸ್ಸಿನ ಮಕ್ಕಳ ಮುಂದೆ ಬೋಧಿಸಿದರೆ ತನ್ನ ಸಹಪಾಠಿಯನ್ನು ಒಬ್ಬ ಹುಡುಗ ಹೇಗೆ ನೋಡಬಹುದು? ಹಸಿ ಮಣ್ಣಿನಂತಹ ಅವರ ಮನಸ್ಸಿನಲ್ಲಿ ಯಾವ ವಿಗ್ರಹ ರೂಪ ತಾಳಬಹುದು?” ಎಂದು ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿರಿ: ತ್ರಿವರ್ಣ ಧ್ವಜ v/s ಭಗವಾಧ್ವಜ: ಹೆಡಗೇವಾರ್‌ ಮೂಲಪಠ್ಯವನ್ನೇ ತಿರುಚಿದ ಚಕ್ರತೀರ್ಥ ಸಮಿತಿ; ಇಲ್ಲಿದೆ ನೋಡಿ ಸಾಕ್ಷಿ!

“ಈ ಪಠ್ಯದಲ್ಲಿ ಯಾವ ಸಂದೇಶ ಇದೆ? ಹಣ ಒಂದು ಸಾಧನವಷ್ಟೇ. ಅದು ಗಂಡಿಗೂ ಬೇಕು, ಹೆಣ್ಣಿಗೂ ಬೇಕು. ಹೀಗಿರುವಾಗ ಪುರುಷಪ್ರಧಾನ ವ್ಯವಸ್ಥೆಯ ದೃಷ್ಟಿಯಲ್ಲಿ ನೋಡಿ ಹಣವನ್ನು ವಿಶ್ಲೇಷಿಸಿರುವುದೇ ತಪ್ಪು” ಎಂದು ತಿಳಿಸಿದರು.

ಆಧ್ಮಾತ್ಮಿಕ ವಿಚಾರಗಳ ಬರಹಗಾರರು ಹಾಗೂ ಪ್ರಾಧ್ಯಾಪಕರೂ ಆದ ಡಾ.ಟಿ.ಎನ್.ವಾಸುದೇವಮೂರ್ತಿ ಅವರು ‘ನಾನುಗೌರಿ.ಕಾಂ’ ಜೊತೆ ಮಾತನಾಡಿ, “ಹಣದ ಕುರಿತ ಬನ್ನಂಜೆಯವರ ಬೋಧಪ್ರದ (didactic) ಲೇಖನ ಹೊಸದಾಗಿ ಸೇರ್ಪಡೆಯಾಗಿದೆ. ಆ ಲೇಖನದಲ್ಲಿ ಬನ್ನಂಜೆಯವರು ಹಣ ಕೆಟ್ಟದ್ದು, ವರ್ಜ್ಯ ಎಂದು ಉಪದೇಶಿಸುತ್ತಾರೆ. ತನ್ನ ತಾಯಿ-ತಂದೆಯರನ್ನು ಒಳಗೊಂಡಂತೆ ಲೋಕದಲ್ಲಿ ಪ್ರತಿಯೊಬ್ಬರು ಹಣ ಸಂಪಾದನೆಗಾಗಿ ಶ್ರಮಿಸುತ್ತಿರುವ ವಾಸ್ತವದ ಮಧ್ಯೆ ಬದುಕುತ್ತಿರುವ ಮಗುವನ್ನು ಇಂತಹ ವಾಸ್ತವ ದೂರವಾದ ಲೇಖನಗಳು ಸಂಶಯಾತ್ಮ ನನ್ನಾಗಿಸುತ್ತವೆ, ಗೊಂದಲಕ್ಕೀಡು ಮಾಡುತ್ತವೆ. ಪಠ್ಯವೆನಿಸಿಕೊಳ್ಳುವ ಒಂದು ‘ಪಠ್ಯ’ವು ವಿದ್ಯಾರ್ಥಿಗೆ ಒಂದು ವಸ್ತು ವಿಷಯವನ್ನು ಅದರ ಸಮಗ್ರ ಸ್ವರೂಪದಲ್ಲಿ ಪರಿಚಯಿಸಿಕೊಡಬೇಕಲ್ಲದೆ ಅದು ಏಕಮುಖಿಯಾದ, ಉಪದೇಶಾತ್ಮಕವಾದ ಪಠ್ಯ ಆಗಬಾರದು. ಈ ಮಾತು ಶತಾವಧಾನಿ ಗಣೇಶರ ಲೇಖನಕ್ಕೂ ಅನ್ವಯವಾಗುತ್ತದೆ. ಬನ್ನಂಜೆ ಉಪದೇಶದಂತೆ ಹಣ ನಿಜಕ್ಕೂ ಕೇಡಿನ ಮೂಲವೇ ಆಗಿದ್ದಲ್ಲಿ ಪುರಂದರದಾಸರು ಲಕ್ಷ್ಮಿಯನ್ನು ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಎಂದು ಕರೆಯುತ್ತಿರಲಿಲ್ಲ” ಎಂದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others


ಶತಾವಧಾನಿ ಅವರ ಪಾಠವು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಸೂಕ್ತವೇ?

ಡಾ.ಆರ್‌.ಗಣೇಶ್‌ ಅವರು ಬರೆದಿರುವ ‘ಶ್ರೇಷ್ಠ ಭಾರತೀಯ ಚಿಂತನೆಗಳು’ ಪಾಠವು “ಹತ್ತನೇ ತರಗತಿಯ ಮಕ್ಕಳ ವಯೋಮಾನಕ್ಕೆ ಸೂಕ್ತವಲ್ಲ” ಎನ್ನುತ್ತಾರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್.ಜಿ.ಸಿದ್ದರಾಮಯ್ಯ.

“ಗಣೇಶ್ ಅವರ ಲೇಖನವು ಎಸ್‌ಎಸ್‌ಎಲ್‌ಸಿ ಮಕ್ಕಳಿಗೆ ಬೋಧಿಸುವ ಲೇಖನವೇ? ಮಕ್ಕಳ ಮನೋಸ್ಥಿತಿ, ಗ್ರಹಿಕೆಯ ಸ್ಥಿತಿ ಮತ್ತು ಭಾಷೆಯ ಮೂಲಕ ಮಕ್ಕಳಿಗೆ ಕಲಿಸಲು ಹೊರಟಿರುವ ವಿಷಯವು ಎಷ್ಟು ವೈಜ್ಞಾನಿಕವಾಗಿದೆ? ಎಂಬುದನ್ನೆಲ್ಲ ಯೋಚಿಸಬೇಕಿದೆ. ಇವರು ಆರ್‌ಎಸ್‌ಎಸ್ ವಿಚಾರಗಳನ್ನು ಕಲಿಸಲು ಹೊರಟಿದ್ದಾರೆ. ಆರ್‌ಎಸ್‌ಎಸ್‌ ಎಂದರೆ ಬ್ರಾಹ್ಮಣೀಕರಣ, ವೈದೀಕರಣ ಎಂದರ್ಥ” ಎಂದು ಎಚ್ಚರಿಸಿದರು.

ಪಾಠದಲ್ಲಿ ಏನಿದೆ?

“ಭಾರತದ ಸಂಸ್ಕೃತಿಯು ಜಗತ್ತಿನ ಶ್ರೇಷ್ಠ ಸಂಸ್ಕೃತಿಗಳಲ್ಲಿ ಒಂದು. ಇದು ಪ್ರಾಚೀನವೂ ಹೌದು, ನಿತ್ಯನೂತನವೂ ಹೌದು. ಅದಕ್ಕೆಂದೇ ಹಿರಿಯರು ಇದನ್ನು “ಸನಾತನ” ಎಂದು ಕರೆದರು. ಭಾರತದ ಸಂಸ್ಕೃತಿಯಲ್ಲಿ ಬರೆಯಲ್ಪಟ್ಟ ಗ್ರಂಥಗಳ ಪ್ರಮಾಣವು ಬೇರಾವುದೇ ನಾಗರಿಕತೆಯಲ್ಲಿ ಕಂಡು ಬರುವ ಸಾಹಿತ್ಯಕ್ಕಿಂತ ಹೆಚ್ಚನವು. ಹೀಗಿದ್ದರೂ ನಮ್ಮ ಸಾಹಿತ್ಯ ಕುರಿತು ನಮಗೆ ಇರುವ ಪರಿಚಯ ಅಷ್ಟಕ್ಕಷ್ಟೇ. ಎಲ್ಲವೂ “ಇವೆ” ಎಂಬುದು ಗೊತ್ತೇ ಹೊರತು ಅದರಲ್ಲಿ “ಏನಿದೆ?” ಎಂಬುದರ ಕಡೆ ಬಹಳಷ್ಟು ಮಂದಿ ಉದಾಸೀನರು. ಹೀಗಾಗಿ ಭಾರತದ ಬಹಳಷ್ಟು ಅಂಶಗಳನ್ನು ಕುರಿತು ಪಾಶ್ಚಾತ್ಯರು ಕಟ್ಟಿಕೊಟ್ಟ ತಪ್ಪುಕಲ್ಪನೆಗಳನ್ನೇ ನಾವು ಸತ್ಯವೆಂದು ನಂಬುವಂತಾಯಿತು. ಭಾರತವು ಕೊಟ್ಟಿರುವ ಋಣ, ಧರ್ಮ, ಸತ್ಯ, ಋತ ಮುಂತಾದ ಪರಿಕಲ್ಪನೆಗಳ ಬಗ್ಗೆ ನಾವು ಅಜ್ಞರು”- ಹೀಗೆ ಪ್ರವೇಶಿಕೆಯನ್ನು ನೀಡಲಾಗಿದೆ.

ಪಠ್ಯದಲ್ಲಿ, “ಋತ, ಸತ್ಯ, ಋಣ, ಧರ್ಮ, ಯಜ್ಞ, ದಾನ, ತಪಸ್ಸು, ಪುರುಷಾರ್ಥಗಳು, ಸ್ವಧರ್ಮ” ಎಂಬ ವಿಷಯಗಳನ್ನು ವಿವರಿಸಲಾಗುತ್ತಿದೆ. ಶಿಕ್ಷಕರು ಈ ಪಾಠವನ್ನು ಮಕ್ಕಳಿಗೆ ಹೇಗೆ ಅರ್ಥ ಮಾಡಿಸಬಹುದೋ ತಿಳಿಯದು. ಹತ್ತನೇ ತರಗತಿಯ ಮಕ್ಕಳು ಈ ಪಾಠವನ್ನು ಅರಿಗಿಸಿಕೊಳ್ಳಬಲ್ಲರೇ ಎಂದು ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷ ರೋಹಿತ್‌ ಚಕ್ರತೀರ್ಥರಲ್ಲಿ ಕೇಳಿದರೆ, “ಮಕ್ಕಳ ಸಾಮರ್ಥ್ಯವನ್ನು ಅಲ್ಲಗಳೆಯಬೇಡಿ. ಶಿಕ್ಷಕರಿಗೂ ತರಬೇತಿ ನೀಡಲಾಗುತ್ತದೆ” ಎನ್ನುತ್ತಾರೆ.

ಇದನ್ನೂ ಓದಿರಿ: ಭಾಷಾಪಠ್ಯದಲ್ಲಿ ಸಾಮಾಜಿಕ ನ್ಯಾಯ, ಲಿಂಗಸಮಾನತೆ ತುರುಕಬಾರದು: ರೋಹಿತ್‌ ಚಕ್ರತೀರ್ಥ ಸಮಿತಿ

ವೈದಿಕ ವಿಧಿವಿಧಾನಗಳಿಗೆ ವಿಶಾಲಾರ್ಥವನ್ನು ಕಲ್ಪಿಸುವ ಪ್ರಯತ್ನವನ್ನು ಗಣೇಶ್ ಮಾಡುತ್ತಿರುವುದು ಇಲ್ಲಿ ಸ್ಪಷ್ಟವಾಗುತ್ತದೆ. ಯಜ್ಞದ ಕುರಿತು ಹೇಳುತ್ತಾ ಅದನ್ನು ಹೀಗೆ ಸಮರ್ಥಿಸುತ್ತಾರೆ- ಧರ್ಮದ ಆಚರಣೆಗಿರುವ ಪ್ರಧಾನ ಮಾರ್ಗವೇ ‘ಯಜ್ಞ’. ಯಜ್ಞ ಎಂದರೆ ಬೆಂಕಿಯಲ್ಲಿ ತುಪ್ಪ ಸುರಿಯುವ, ಆಹಾರವನ್ನು ಪೋಲು ಮಾಡುವ ಕಂದಾಚಾರ ಎಂದು ಹಲವರ ಆಕ್ಷೇಪ. ಅಗ್ನಿಮುಖದಲ್ಲಿ ಆಹುತಿ ನೀಡುವುದು  ಒಂದು ಸಂಕೇತ ಮಾತ್ರ. ಇದು ಬಟ್ಟೆಯಿಂದಾದ ಬಾವುಟಕ್ಕೆ ರಾಷ್ಟ್ರಧ್ವಜವೆಂದು ಎಲ್ಲರೂ ಗೌರವ ಸಲ್ಲಿಸುವಂತೆಯೇ ಸರಿ” ಎನ್ನುತ್ತಾ, “ಯಜ್ಞ ಸಂಸ್ಕೃತಿಯ ಒಂದು ಅನುಷ್ಠಾನ. ಅಗ್ನಿಯಲ್ಲಿ ಯಾವುದಾದರೂ ಆಹಾರ ಪದಾರ್ಥವನ್ನು ಹಾಕಿದರೆ ಅದನ್ನು ಮತ್ತೆ ಪಡೆದುಕೊಳ್ಳಲು ಸಾಧ್ಯವಿಲ್ಲವೆಂಬುದು ಎಲ್ಲರಿಗೂ ತಿಳಿದ ತಥ್ಯ. ವಸ್ತುಸ್ಥಿತಿ ಹೀಗಿದ್ದರೂ ಅದನ್ನು ಮಾಡುವುದೆಂದರೆ- ತನಗೆ ಮರಳಿ ಬರುವುದೆಂಬ ಯಾವುದೇ ನಿಶ್ಚಯ ಇಲ್ಲದಿದ್ದರೂ ಕೊಡಬೇಕೆಂಬ ಜೀವನಪಾಠ ಕಲಿಕೆ ತಾನೆ!”ಎಂದು ಬೋಧನೆ ಮಾಡುತ್ತಾರೆ. ಇಷ್ಟೆ ಅಲ್ಲದೇ ಮಕ್ಕಳ ಮನೋಮಿತಿಯನ್ನು ಮೀರಿದ ಪಠ್ಯವನ್ನು ಇಲ್ಲಿ ಕಾಣಹುದು. (ಪೂರ್ಣ ಪಾಠವನ್ನು ಗ್ಯಾಲರಿಯಲ್ಲಿ ನೋಡಿರಿ)

ಡಾ.ಟಿ.ಎನ್‌.ವಾಸುದೇವ ಮೂರ್ತಿಯವರು ಗಣೇಶ್ ಅವರ ಪಠ್ಯದ ಕುರಿತು ಮಾತನಾಡುತ್ತಾ, “ಪಠ್ಯಕ್ರಮದಲ್ಲಿ ಅಳವಡಿಸಿರುವ ಶತಾವಧಾನಿಯವರ ಲೇಖನದ ಕುರಿತು ಚರ್ಚಿಸದಿರುವುದೇ ಒಳಿತು. ಆ ಲೇಖನ ಯಜ್ಞ ಯಾಗ, ಕರ್ಮ, ಋತ, ಸ್ವಧರ್ಮ ಮುಂತಾದ ಜಟಿಲ ವೈದಿಕ ಪರಿಭಾಷೆಗಳಿಂದಲೇ ತುಂಬಿದೆ. ಈ ಒಂದೊಂದು ಪರಿಭಾಷೆಗೆ ತಮ್ಮ ದರ್ಶನ ಶಾಸ್ತ್ರಗಳು ಒಂದೊಂದು ಅರ್ಥವನ್ನು ಹಚ್ಚುತ್ತವೆ. ಉದಾಹರಣೆಗೆ, ಜೈನ ದರ್ಶನಗಳು ಕರ್ಮವನ್ನು ಬಂಧನವೆಂದು ಕರೆದರೆ, ವೇದಾಂತಿಗಳು ಕರ್ಮವನ್ನು ಬ್ರಹ್ಮವೆನ್ನುತ್ತಾರೆ (ಕರ್ಮ ಬ್ರಹ್ಮೋದ್ಭವಂ ವಿದ್ಧಿ ಬ್ರಹ್ಮಾಕ್ಷರ ಸಮುದ್ಭವಂ). ಇಂತಹ ಗಹನವಾದ ಚರ್ಚೆ ಗಳೆಲ್ಲ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಅವಶ್ಯಕವೇ, ಈ ಚರ್ಚೆಗಳೆಲ್ಲ ಕನ್ನಡ ಸಾಹಿತ್ಯ ವಿಷಯದ ವ್ಯಾಪ್ತಿಯ ಒಳಗೆ ಬರುತ್ತವೆಯೇ? ಅದಕ್ಕಿಂತಲೂ ಮಿಗಿಲಾಗಿ ಪಠ್ಯವನ್ನು ಪೂರ್ತಿ ಓದಿ ಮುಗಿಸಿದ ಮೇಲೆ ಸದರಿ ಪಠ್ಯ ರಚನಕಾರರು ವರ್ಣಾಶ್ರಮ ಧರ್ಮವನ್ನು ಸುಧಾರಿತ ನೆಲೆಯಲ್ಲಿ ಮತ್ತೆ ಮರುಸ್ಥಾಪಿಸಲು ಪ್ರಯತ್ನಿಸುತ್ತಿರುವರು ಎಂಬ ಅನುಮಾನ ಕಾಡದಿರದು” ಎಂದಿದ್ದಾರೆ.

ಹೀಗೆ ಪರಿಷ್ಕೃತ ಪಠ್ಯದಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ಏನನ್ನು ಕಲಿಸಲು ಹೊರಟಿದ್ದಾರೆ? ಪಠ್ಯ ಪುನರ್‌ ಪರಿಶೀಲನೆಯ ಕುರಿತು ಟಿಪ್ಪಣಿ ಬರೆದಿರುವ ಸಮಿತಿಯ ಮಾತುಗಳು, ಪಠ್ಯದಲ್ಲೂ ಅನುರಣಿಸಿದಂತಿದೆಯೇ?- ಸಮಿತಿ ಹೇಳುತ್ತದೆ- “ಭಾಷಾ ಪಠ್ಯವಿರುವುದು ಸಾಮಾಜಿಕ ನ್ಯಾಯ ಹಾಗೂ ಲಿಂಗ ಸಮಾನತೆಯನ್ನು ತುರುಕುವುದಕ್ಕಾಗಿ ಅಲ್ಲ” ಎಂದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. I think these people should be removed from the committee, sanathan dharma should not be imposed on children, it’s purely Brahmanism, why non Brahmins should know sanathan dharma, every one should learn social justice and gender justice, it is against constitution. Protest should be intensified, otherwise these buggers will create 100 years ago situation

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...