‘ಭಾರತ ಮಾತೆಯ ರಕ್ಷಣೆಗಾಗಿ ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ. ತ್ರಿಶೂಲವೆಂಬುದು ನನ್ನ ಹಕ್ಕು, ನನ್ನ ಹೆಮ್ಮೆ’ ಎಂದು ಬಜರಂಗದಳದ ಕಾರ್ಯಕರ್ತರು ಪೊಲೀಸ್ ಅಧಿಕಾರಿಗಳ ಎದುರೆ ಘೋಷಣೆ ಕೂಗಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜರುಗಿದೆ.
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಕಾರ್ಯಕರ್ತರಿಗೆ ಕೊಡಗಿನ ಪೊನ್ನಂಪೇಟೆಯಲ್ಲಿ ತ್ರಿಶೂಲ ದೀಕ್ಷೆ ಹಾಗೂ ಏರ್‌ಗನ್ ತರಬೇತಿ ನೀಡಿದರ ಕುರಿತು ವಿವಾದ, ಟೀಕೆಗಳ ಕೇಳಿಬಂದಿರುವುದನ್ನು ವಿರೋಧಿಸಿ ಗುರುವಾರ ಬಜರಂಗದಳದಿಂದ ನಡೆದ ಪ್ರತಿಭಟನೆಯಲ್ಲಿ ಈ ಘೋಷಣೆ ಕೂಗಲಾಗಿದ್ದು, ಅದರ ವಿಡಿಯೋವೊಂದು ವೈರಲ್ ಆಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಕಳೆದ ವಾರ ಕೊಡಗಿನ ಪೊನ್ನಂಪೇಟೆಯ ಸಾಯಿ ಶಂಕರ ವಿದ್ಯಾಸಂಸ್ಥೆಯಲ್ಲಿ ನಡೆದ ‘ಶೌರ್ಯ ಪ್ರಶಿಕ್ಷಣ ವರ್ಗ’ದಲ್ಲಿ ಬಜರಂಗದಳದ ಕಾರ್ಯಕರ್ತರಿಗೆ ಶಸ್ತ್ರಾಸ್ತ್ರ ತರಬೇತಿ, ತ್ರಿಶೂಲ ದೀಕ್ಷೆ ನೀಡಲಾಗಿತ್ತು. ಸುಮಾರು ಹತ್ತು ದಿನಗಳ ಕಾಲ ನಡೆದ ತರಬೇತಿಯಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ವಿರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ, ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರೂ ಪಾಲ್ಗೊಂಡಿದ್ದರೆಂದು ಮೂಲಗಳು ತಿಳಿಸಿರುವುದಾಗಿ ‘ಪ್ರಜಾವಾಣಿ’ ವರದಿ ಮಾಡಿದೆ. ವಿವಿಧ ಜಿಲ್ಲೆಯಿಂದ ಆಗಮಿಸಿದ ಬಜರಂಗದಳ, ವಿಶ್ವ ಹಿಂದೂ ಪರಿಷತ್‌ನ 119 ಶಿಕ್ಷಣಾರ್ಥಿಗಳು ಸೇರಿ 140 ಮಂದಿ ತರಬೇತಿಯಲ್ಲಿ ಹಾಜರಿದ್ದರೆಂದು ವರದಿಯಾಗಿದೆ.
ಪೊಲೀಸರ ಮುಂದೆಯೆ, ‘#ತ್ರಿಶೂಲ ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ’ ಎಂದ #ಬಿಜೆಪಿ ಬೆಂಬಲಿತ ಸಂಘಟನೆಯಾದ #ಬಜರಂಗದಳ ದ ದುಷ್ಕರ್ಮಿಗಳು
ಸಂಪೂರ್ಣ ಸುದ್ದಿ ಓದಿ➤➤ https://t.co/LPSUdxwyr4#NaanuGauri #Trishul #bajarangadala #Kodagu #Madikeri pic.twitter.com/DO9m2x2WtB
— Naanu Gauri (@naanugauri) May 20, 2022
ಶಾಲಾ ಆವರಣದಲ್ಲಿ ಬಂದೂಕು ಹಿಡಿದು ತರಬೇತಿ ಪಡೆಯುತ್ತಿರುವುದು, ಸಂಸ್ಥೆಯ ಸಭಾಂಗಣ ಮತ್ತು ಆವರಣದಲ್ಲಿ ತ್ರಿಶೂಲ ಹಿಡಿದು ದೀಕ್ಷೆ ಪಡೆಯುತ್ತಿರುವುದು, ತ್ರಿಶೂಲಕ್ಕೆ ಪೂಜೆ ಸಲ್ಲಿಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟೀಕೆಗಳು ವ್ಯಕ್ತವಾಗಿವೆ.
ಇದನ್ನೂ ಓದಿ: ನಿಮ್ಮ ಮಕ್ಕಳು ಏನಾಗಬೇಕು? ತ್ರಿಶೂಲಧಾರಿಗಳಾಬೇಕೆ ಅಥವಾ ತ್ರಿವರ್ಣ ಹಿಡಿದು ಸಾಮರಸ್ಯ ಹಾಡಬೇಕೆ?
ಶಂಕರ ವಿದ್ಯಾಸಂಸ್ಥೆಯ ಅಧ್ಯಕ್ಷ ಜರು ಗಣಪತಿ ಮಾತನಾಡಿದ್ದು, “ಬಂದೂಕು ತರಬೇತಿ ನೀಡಿರುವ ಕುರಿತು ಮಾಹಿತಿ ಇಲ್ಲ. ಆಯೋಜಕರೇ ಊಟ, ಮತ್ತಿತರ ವ್ಯವಸ್ಥೆ ಮಾಡಿಕೊಂಡಿದ್ದರು. ಇದಕ್ಕೂ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ರಜೆಯಿದ್ದ ಕಾರಣ ಶಿಕ್ಷಕರೂ ಇರಲಿಲ್ಲ. ಈ ಹಿಂದೆ ರಾಷ್ಟ್ರಮಟ್ಟದ ತರಬೇತಿಯೂ ನಡೆದಿತ್ತು. ಹೊರ ರಾಜ್ಯದಿಂದ ಶಿಕ್ಷಣಾರ್ಥಿಗಳುಬಂದಿದ್ದರು” ಎಂದು ಪ್ರತಿಕ್ರಿಯಿಸಿದ್ದರು.
“ಶೌರ್ಯ ಪ್ರಶಿಕ್ಷಣ ವರ್ಗದಲ್ಲಿ ಶಸ್ತ್ರಾಸ್ತ್ರ ತರಬೇತಿ ಕೊಡುವುದಿಲ್ಲ. ಯೋಗ ಕಲಿಸುವ, ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಲಿದೆ” ಎಂದು ವಿಶ್ವ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಪಿ.ಕೃಷ್ಣಮೂರ್ತಿ ಹೇಳಿದ್ದರು. ಆದರೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿಯವರ ಹೇಳಿಕೆ ಇದಕ್ಕೆ ತದ್ವಿರುದ್ಧವಾಗಿದ್ದು, ಶಸ್ತ್ರಾಸ್ತ್ರ ತರಬೇತಿಯನ್ನು ನೀಡಲಾಗಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.
“ಪ್ರತಿ ವರ್ಷ ರಾಜ್ಯ ಮತ್ತು ಜಿಲ್ಲೆಗಳಿಂದ ಸ್ವರಕ್ಷಣೆಗಾಗಿ ತರಬೇತಿ ನೀಡಲಾಗುತ್ತದೆ. ಪೊಲೀಸ್ ಇಲಾಖೆಯಿಂದಲೂ ಕೊಡುತ್ತಾರೆ. ಅದರಲ್ಲೇನಿದೆ? ಏರ್‌ಗನ್ ಟ್ರೈನಿಂಗ್ ಕೊಟ್ಟಿದ್ದಾರೆಯೇ ಹೊರತು ಎ.ಕೆ. 47 ಗನ್ ಟ್ರೈನಿಂಗ್ ಕೊಟ್ಟಿಲ್ಲ. ಬಾಂಬ್ ಹಾಕುವ ಟ್ರೈನಿಂಗ್ ಕೊಟ್ಟಿಲ್ಲ. ಆತ್ಮರಕ್ಷಣೆಯ ತರಬೇತಿಯನ್ನು ಪೊಲೀಸ್ ಇಲಾಖೆಯೂ ಆಯೋಜನೆ ಮಾಡುತ್ತದೆ, ಬಜರಂಗದಳವೂ ಮಾಡುತ್ತದೆ. ಅದರಲ್ಲೇನಿದೆ ವಿಶೇಷ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ಪೊನ್ನಂಪೇಟೆಯಲ್ಲಿ ಕೊಟ್ಟಿದ್ದು ಏರ್‌ಗನ್ ತರಬೇತಿ- ಸಿ.ಟಿ.ರವಿ; ನಡೆದದ್ದು ಯೋಗ ತರಬೇತಿ ಎಂದ ಹಿಂಜಾವೇ ಮುಖಂಡ
ಇದೀಗ ಏರ್‌ಗನ್ ತರಬೇತಿ ನೀಡಿದ್ದನ್ನು ಸಮರ್ಥಿಸಿಕೊಂಡು ವಿರಾಜಪೇಟೆಯಲ್ಲಿ ಪ್ರತಿಭಟನೆ ನಡೆದಿದೆ. ಅದರಲ್ಲಿ ‘ಭಾರತ ಮಾತೆಯ ರಕ್ಷಣೆಗಾಗಿ ತ್ರಿಶೂಲವನ್ನು ನೀಡುತ್ತೇವೆ, ಪಡೆಯುತ್ತೇವೆ, ಬಳಸುತ್ತೇವೆ. ತ್ರಿಶೂಲವೆಂಬುದು ನನ್ನ ಹಕ್ಕು, ನನ್ನ ಹೆಮ್ಮೆ’ ಎಂದು ಪೊಲೀಸರ್ ಅಧಿಕಾರಗಳ ಎದುರೆ ಘೋಷಣೆ ಕೂಗಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿದ್ದಾರೆ.



Everyone one has right to do so