Homeಮುಖಪುಟಹೈದರಾಬಾದ್‌‌ ದಿಶಾ ಪ್ರಕರಣ; ಆರೋಪಿಗಳ ಕೊಲೆ ಮಾಡಲೆಂದೇ ಪೊಲೀಸರಿಂದ ‘ನಕಲಿ ಎನ್‌ಕೌಂಟರ್‌‌’: ತನಿಖಾ ಆಯೋಗ ವರದಿ

ಹೈದರಾಬಾದ್‌‌ ದಿಶಾ ಪ್ರಕರಣ; ಆರೋಪಿಗಳ ಕೊಲೆ ಮಾಡಲೆಂದೇ ಪೊಲೀಸರಿಂದ ‘ನಕಲಿ ಎನ್‌ಕೌಂಟರ್‌‌’: ತನಿಖಾ ಆಯೋಗ ವರದಿ

ಆರೋಪಿಗಳು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಆರೋಪಗಳು ಸುಳ್ಳಾಗಿದ್ದು, 10 ಕ್ಕೂ ಹೆಚ್ಚು ಪೊಲೀಸರ ವಿರುದ್ಧ ಕೊಲೆ ಪ್ರಕರಣ ಹೊರಿಸಲು ಆಯೋಗ ಶಿಫಾರಸು ಮಾಡಿದೆ

- Advertisement -
- Advertisement -

ತೆಲಂಗಾಣದ ಹೈದರಾಬಾದ್‌ ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಆರೋಪಿಗಳ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸುತ್ತಿರುವ ಸುಪ್ರೀಂಕೋರ್ಟ್ ನೇಮಿಸಿದ ತನಿಖಾ ಆಯೋಗ, ತನ್ನ ವರದಿಯಲ್ಲಿ ಎನ್‌ಕೌಂಟರ್ ಅನ್ನು ‘ನಕಲಿ’ ಎಂದು ಎಂದು ಶುಕ್ರವಾರ ಹೇಳಿದೆ. ಆರೋಪಿಗಳನ್ನು “ಉದ್ದೇಶಪೂರ್ವಕವಾಗಿ ಅವರ ಸಾವಿಗೆ ಕಾರಣವಾಗುವ ಉದ್ದೇಶದಿಂದ ಗುಂಡು ಹಾರಿಸಲಾಗಿದೆ” ಎಂದು ಸಮಿತಿ ವರದಿಯಲ್ಲಿ ಉಲ್ಲೇಖಿಸಿದೆ.

ಎನ್‌ಕೌಂಟರ್‌ ಬಗ್ಗೆ ತನಿಖೆಗೆ ರಚಿಸಲಾಗಿರುವ ಸಿರ್ಪುರ್ಕರ್ ಆಯೋಗದ ವರದಿಯು, “ನಾವು ಪರಿಗಣಿಸಿದ ಅಭಿಪ್ರಾಯದಲ್ಲಿ, ಆರೋಪಿಗಳ ಮೇಲೆ ಉದ್ದೇಶಪೂರ್ವಕವಾಗಿ ಅವರ ಸಾವಿಗೆ ಕಾರಣವಾಗುವ ಉದ್ದೇಶದಿಂದ ಗುಂಡು ಹಾರಿಸಿದ್ದಾರೆ. ಜೊತೆಗೆ ಗುಂಡಿನ ದಾಳಿಯಿಂದ ಅವರು ಸಾವಿಗೀಡಾಗುತ್ತಾರೆ ಎಂದು ತಿಳಿದೆ ಇದು ನಡೆದಿದೆ” ಎಂದು ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವರದಿ ಸಲ್ಲಿಕೆಯಾದ ನಂತರ, ಆಯೋಗದ ವರದಿಯ ಮೇಲೆ ಕ್ರಮ ಕೈಗೊಳ್ಳುವಂತೆ ತೆಲಂಗಾಣ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಹೇಳಿದೆ.

ಇದನ್ನೂ ಓದಿ: ತಪ್ಪು ಮಾಡಿದವರನ್ನು ಎನ್‌ಕೌಂಟರ್‌ ಮಾಡುತ್ತೇವೆ: ತೆಲಂಗಾಣ ಸಚಿವರ ಎಚ್ಚರಿಕೆ

26 ವರ್ಷದ ಪಶುವೈದ್ಯೆಯೊಬ್ಬರು ಕ್ಲಿನಿಕ್‌ಗೆ ಭೇಟಿ ನೀಡಿ ಮನೆಗೆ ತೆರಳುತ್ತಿದ್ದಾಗ ಶಾದ್‌ನಗರದಲ್ಲಿ ಅತ್ಯಾಚಾರ ನಡೆಸಿ ಅವರನ್ನು ಸಜೀವ ದಹನ ಮಾಡಲಾಗಿದೆ ಎಂದು ವರದಿಯಾಗಿತ್ತು. ವೈದ್ಯೆಯ ಶವ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ಪತ್ತೆಯಾಗಿತ್ತು.

ಇದರ ನಂತರ ಬಂಧನಕ್ಕೆ ಒಳಗಾಗಿದ್ದ ನಾಲ್ವರು ಆರೋಪಿಗಳಾದ ಜೊಲ್ಲು ಶಿವ, ಮೊಹಮ್ಮದ್ ಆರಿಫ್, ಜೊಲ್ಲು ನವೀನ್ ಮತ್ತು ಚೆನ್ನಕೇಶವುಲು ಅವರು 2019 ರಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟಿದ್ದರು. ಆಪಾದಿತ ಎನ್‌ಕೌಂಟರ್ ಬಗ್ಗೆ ತನಿಖೆ ನಡೆಸಲು ಸುಪ್ರೀಂ ಕೋರ್ಟ್ ಮೂರು ಸದಸ್ಯರ ಆಯೋಗವನ್ನು ನೇಮಿಸಿತ್ತು. ಆಯೋಗವು ತನ್ನ ವರದಿಯಲ್ಲಿ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿದೆ.

ಆರೋಪಿಗಳು ಪೊಲೀಸರ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂಬ ಆರೋಪಗಳು ಸುಳ್ಳು ಎಂದು ಆಯೋಗವು ಹೇಳಿದ್ದು, 10 ಕ್ಕೂ ಹೆಚ್ಚು ಪೊಲೀಸರ ವಿರುದ್ಧ ಕೊಲೆ ಆರೋಪಗಳನ್ನು ಹೊರಿಸಲು ಶಿಫಾರಸು ಮಾಡಿದೆ.

ಇದನ್ನೂ ಓದಿ: ತೆಲಂಗಾಣ ಎನ್‌ಕೌಂಟರ್‌: ಶವಗಳನ್ನು ರಕ್ಷಿಸಲು ಶೀತಲ ಪೆಟ್ಟಿಗೆಗಳ ಕೊರತೆ – ವೈದ್ಯರ ಪರದಾಟ

“ದಾಖಲೆಯಲ್ಲಿರುವ ಸಂಪೂರ್ಣ ವಿಷಯವನ್ನು ಪರಿಗಣಿಸಿದ ನಂತರ, ಮೃತರು 06.12.2019 ರ ಘಟನೆಗೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರಗಳನ್ನು ಕಸಿದುಕೊಳ್ಳುವುದು, ಬಂಧನದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವುದು, ಪೊಲೀಸರ ಮೇಲೆ ಹಲ್ಲೆ ಮತ್ತು ಗುಂಡು ಹಾರಿಸುವುದು ಮುಂತಾದ ಯಾವುದೇ ಅಪರಾಧವನ್ನು ಮಾಡಿಲ್ಲ ಎಂದು ನಾವು ತೀರ್ಮಾನಿಸುತ್ತೇವೆ” ಎಂದು ತನಿಖಾ ಆಯೋಗದ ವರದಿ ಹೇಳಿದೆ.

ನ್ಯಾಯಮೂರ್ತಿ ಸಿರ್ಪುರ್ಕರ್ ನೇತೃತ್ವದ ಆಯೋಗವು ಕ್ರಿಮಿನಲ್ ನ್ಯಾಯ ವ್ಯವಸ್ಥೆಯನ್ನು ‘ಸುಗಮಗೊಳಿಸಲು’ ಕೂಡಾ ಶಿಫಾರಸುಗಳನ್ನು ಮಾಡಿದೆ. ಎಫ್‌ಐಆರ್ ನೋಂದಣಿ, ಬಂಧನ ಪ್ರಕ್ರಿಯೆಗಳಿಗೆ ಸಂಬಂಧಿಸಿದ ಕಾನೂನುಗಳ ಕಡ್ಡಾಯ ಅನುಸರಣೆ, ಬಾಡಿ ಕ್ಯಾಮೆರಾಗಳ ಬಳಕೆ ಮತ್ತು ಎಲ್ಲಾ ತನಿಖಾ ಪ್ರಕ್ರಿಯೆಗಳ ಕಡ್ಡಾಯ ವೀಡಿಯೊಗ್ರಫಿಗೆ ಸಂಬಂಧಿಸಿದಂತೆ ಶಿಫಾರಸುಗಳನ್ನು ಮಾಡಲಾಗಿದೆ.

ತನಿಖೆ ಪೂರ್ಣಗೊಂಡು ಅಂತಿಮ ವರದಿಯನ್ನು ಸಂಬಂಧಪಟ್ಟ ನ್ಯಾಯಾಲಯಕ್ಕೆ ಸಲ್ಲಿಸುವವರೆಗೆ ಯಾವುದೇ ಪೊಲೀಸ್ ಅಧಿಕಾರಿಯು ತನಿಖೆಯಲ್ಲಿರುವ ಅಪರಾಧಕ್ಕೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಬಾರದು ಎಂದು ಅದು ಸೂಚಿಸಿದೆ.

ಇದನ್ನೂ ಓದಿ: ತೆಲಂಗಾಣ ಎನ್‌ಕೌಂಟರ್‌ನಲ್ಲಿ ಭಾಗಿಯಾದ ಪೊಲೀಸರ ವಿರುದ್ಧ ಸುಪ್ರೀಂನಲ್ಲಿ ದೂರು ದಾಖಲು

ಪೊಲೀಸ್ ಠಾಣೆಯು ತನಿಖೆಯ ಕುರಿತು ಅಪ್‌ಡೇಟ್‌ಗಳನ್ನು ಪತ್ರಿಕಾ ಟಿಪ್ಪಣಿಯನ್ನು ನೀಡಬಹುದು, ಆದರೆ ತನಿಖೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಬಹಿರಂಗಪಡಿಸಬಾರದು ಎಂದು ಅದು ಹೇಳಿದೆ. ಜೊತೆಗೆ ಸುಳ್ಳು ಸಾಕ್ಷಿ – ಸುಳ್ಳು ಸಾಕ್ಷ್ಯ ನೀಡಿದವರಿಗೆ ಶಿಕ್ಷಿಸಲು ಪರಿಣಾಮಕಾರಿ ಕ್ರಮವನ್ನು ರಚಿಸಲು ಆಯೋಗವು ಶಿಫಾರಸು ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ರನ್ನು ಗುಂಡಿಕ್ಕಿ ಕೊಲ್ಲಿ: ಪಬ್ಲಿಕ್‌ ಟಿವಿಯಲ್ಲಿ ಮಾಡಲಾದ ಪ್ರಚೋದನೆಗೆ ಖಂಡನೆ

“ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಕೊಲ್ಲಿ”- ಹೀಗೆ ಪ್ರಚೋದನಾತ್ಮಕವಾಗಿ ವ್ಯಕ್ತಿಯೊಬ್ಬರು ಪಬ್ಲಿಕ್‌ ಟಿ.ವಿ. ಜೊತೆ ಮಾತನಾಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಇಬ್ಬರು ಧಾರ್ಮಿಕ...