ಬಲಪಂಥೀಯ ಟ್ರೋಲರ್ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಮರು ಪರಿಷ್ಕರಣೆಯ ವಿರುದ್ಧದ ಪ್ರತಿಭಟನೆ ಮತ್ತಷ್ಟು ಬಲಗೊಳ್ಳುತ್ತಿದೆ. ನಾಡಿನ ಹಲವಾರು ಸಾಹಿತಿಗಳು ಕೋಮುವಾದ ಹರಡುವ ಪಠ್ಯ ಪುಸ್ತಕದಲ್ಲಿ ನಮ್ಮ ಬರಹಗಳು ಇರಬಾರದು ಎಂದು ಸರ್ಕಾರದಕ್ಕೆ ಪತ್ರ ಬರೆದಿದ್ದು, ಪಠ್ಯಕ್ಕೆ ನೀಡಿದ್ದ ಅನುಮತಿಯನ್ನು ವಾಪಾಸು ಪಡೆದಿದ್ದಾರೆ. ಇದೀಗ ಕನ್ನಡ ವರನಟ ಡಾ| ರಾಜ ಕುಮಾರ್ ಬಗ್ಗೆ ಬರೆದಿದ್ದ ಬರಹವನ್ನು ಪಠ್ಯದಿಂದ ಲೇಖಕ ದೊಡ್ಡಹುಲ್ಲೂರು ರೊಕ್ಕೋಜಿರಾವ್ ಅವರು ಬುಧವಾರದಂದು ವಾಪಾಸು ಪಡೆದಿದ್ದಾರೆ.
ಶಿಕ್ಷಣ ಸಚಿವ ಬಿಸಿ ನಾಗೇಶ್ ಅವರಿಗೆ ಬರೆದಿರುವ ಪತ್ರದಲ್ಲಿ ರುಕ್ಕೋಜಿರಾವ್, “ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರುಪರಿಷ್ಕರಣೆ ಪಠ್ಯದಲ್ಲಿ ಡಾ. ರಾಜಕುಮಾರ್ ಪಠ್ಯ ಸೇರಿಸಲು ಒಪ್ಪುವುದು ಡಾ. ರಾಜಕುಮಾರ್ ಅವರಿಗೆ ಅವಮಾನ ಮಾಡಿದಂತೆ” ಎಂದು ಹೇಳಿದ್ದು, ರಾಜಕುಮಾರ್ ಅವರ ಬಗ್ಗೆ ಬರೆದ ತಮ್ಮ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಬಳಸಬಾರದು ಎಂದು ವಿನಂತಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪತ್ರದಲ್ಲಿ ಅವರು, “ನಾನು ಡಾ. ರಾಜಕುಮಾರ್ ಅವರ ಬಗ್ಗೆ ಬರೆದ ಲೇಖನವನ್ನು ಪ್ರೋ. ಬರಗೂರು ರಾಮಚಂದ್ರಪ್ಪನವರ ನೇತೃತ್ವದ ಪಠ್ಯ ಪರಿಷ್ಕರಣೆ ಸಂದರ್ಭದಲ್ಲಿ 6 ನೇ ತರಗತಿಯ ಪ್ರಥಮ ಭಾಷೆ ಕನ್ನಡ ಪುಸ್ತಕಕ್ಕೆ ಸೇರಿಸಲು ಒಪ್ಪಿಗೆ ನೀಡಿದ್ದೆ. ಈಗ ರೋಹಿತ್ ಚಕ್ರತೀರ್ಥ ಎಂಬುವವರ ಅಧ್ಯಕ್ಷತೆಯಲ್ಲಿ ನಡೆದ ಮರುಪರಿಷ್ಕರಣೆ ಬಗ್ಗೆ ದೊಡ್ಡ ವಿವಾದ ಎದ್ದಿದೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪಠ್ಯಪರಿಷ್ಕರಣೆಯ ಬೇರಡಗಿರುವುದು ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರಲ್ಲಿ
“ರೋಹಿತ್ ಚಕ್ರತೀರ್ಥರು ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದಾರೆ. ಕುವೆಂಪು ಅವರನ್ನು ಕೀಳಾಗಿ ಕಂಡಿದ್ದಾರೆ. ಕನ್ನಡ ಭಾಷೆಯನ್ನು ತನ್ನ ಮೇಲೆ ಹೇರಲಾಗಿದೆ ಎಂದು ಕನ್ನಡ ವಿರೋಧಿ ಮಾತನಾಡಿದ್ದಾರೆ” ಎಂದು ರುಕ್ಕೋಜಿರಾವ್ ಅವರು ಪತ್ರದಲ್ಲಿ ತಿಳಿಸಿದ್ದಾರೆ.
“ಅಪೂರ್ವ ಕನ್ನಡ ಪ್ರೇಮಿಯಾದ, ನಾಡು ನುಡಿಗಾಗಿ ಹೋರಾಡಿದ ಡಾ. ರಾಜಕುಮಾರ್ ಅವರ ಬಗ್ಗೆ ಬರೆದ ತನ್ನ ಲೇಖನವನ್ನು, ಕನ್ನಡ ದ್ರೋಹದ ಮಾತನಾಡಿರುವ ವ್ಯಕ್ತಿಯ ಮರು ಪರಿಷ್ಕರಣೆ ಪಠ್ಯದಲ್ಲಿ ಬಳಸಲು ನಾನು ಒಪ್ಪುವುದಿಲ್ಲ. ಇಂಥವರ ನೇತೃತ್ವದ ಮರು ಪರಿಷ್ಕರಣೆ ಪಠ್ಯದಲ್ಲಿ ಡಾ. ರಾಜಕುಮಾರ್ ಸೇರಿಸಲು ಒಪ್ಪುವುದು ಡಾ. ರಾಜಕುಮಾರ್ ಅವರಿಗೆ ಅವಮಾನ ಮಾಡಿದಂತೆ ಎಂಬ ಕಾರಣವನ್ನು ತಿಳಿಸುತ್ತಾ ನನ್ನ ಲೇಖನವನ್ನು ಬಳಸಬಾರದು ಎಂದು ವಿನಂತಿಸುತ್ತೇನೆ” ಎಂದು ರುಕ್ಕೋಜಿರಾವ್ ಪತ್ರದಲ್ಲಿ ಹೇಳಿದ್ದಾರೆ.



Good decision by author.
Highly respected Dr Raj Kumar’s lesson should be properly placed. Controversy is not good.
ಸರಿಯಾದ ನಿರ್ಧಾರ ದೊಡ್ಡ ಹುಲ್ಲೂರು ರುಕ್ಕೋಜಿ ರಾವ್ ಸರ್. ಸರ್ ನಿಮ್ಮ ಡಾಕ್ಟರ್. ರಾಜಕುಮಾರ್ ಸಮಗ್ರ ಸಾಹಿತ್ಯ ಪುಸ್ತಕ ಅವಶ್ಯ ಬೇಕಾಗಿದೆ. ತಾವು ದಯವಿಟ್ಟು ನನಗೆ ಸಿಗುವಂತೆ ಮಾಡಿ. ಹಣವನ್ನು ಸಂದಾಯ ಮಾಡುವೆ. ತೊಂದರೆಗೆ ಕ್ಷಮೆ ಇರಲಿ. ನಿಮ್ಮ ರವೀಂದ್ರ. ಕುಲಕರ್ಣಿ.