Homeಕರ್ನಾಟಕಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

- Advertisement -
- Advertisement -

ರಾಜ್ಯದ ಸಾಹಿತಿಗಳು, ಪ್ರಾಧ್ಯಾಪಕರು ಮತ್ತು ಶಿಕ್ಷಣ ತಜ್ಞರನ್ನು ಬಿಟ್ಟು ಶಿಕ್ಷಣ ಸಚಿವರು ಅವನು ಯಾವಾನೋ ಚರಂಡಿಯಲ್ಲಿ ಇರಬೇಕಾದವನನ್ನು ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ‌ ಹರಿಪ್ರಸಾದ್ ಮಂಗಳವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವನು ಪ್ರೊಫೆಸರ್ ಎಂದು ಹೇಳಿ ಜವಾಬ್ದಾರಿ ಕೊಟ್ಟಿದ್ದಾರೆ ಅವರು ಹೇಳಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಕೆ ಹರಿಪ್ರಸಾದ್‌, “ನಾನು ಫ್ರೋಫೆಸರ್ ಅಲ್ಲ ಎಂದು ಅವನೇ ಹೇಳಿಕೆ ನೀಡಿದ್ದಾನೆ. ಶಿಕ್ಷಣ ಸಚಿವರು ಸಿಇಟಿ ಫ್ರೋಫೆಸರ್ ಅಂತಾ ಹೇಳ್ತಿದಾರೆ. ಏನೂ ಅರ್ಹತೆ ಇಲ್ಲದವರನ್ನ ಕರೆ ತಂದು ನಾಗಪುರದ ಹಿಡನ್ ಕಾರ್ಯಸೂಚಿಗಳನ್ನ ಜಾರಿಗೊಳಿಸಲು ಹುನ್ನಾರ ನಡೆಸುತ್ತಿದ್ದಾರೆ. ನಾವು ಅಷ್ಟು ಸುಲಭವಾಗಿ ಬಿಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಒಂದೇ ಮತ, ಒಂದೇ ಜಾತಿ, ಒಂದೇ ದೇವರು ಎಂದು ದೇಶದ ಏಕತೆಯ ಸಂದೇಶ ಸಾರಿದ ಮಹನೀಯರ ವಿಚಾರಧಾರೆಗಳನ್ನ ಪಠ್ಯದಿಂದ ಕೈ ಬಿಡಲಾಗಿದೆ. ರಾಣಿ ಅಬ್ಬಕ್ಕ, ನಾರಾಯಣ ಗುರುಗಳ ಪಾಠ ಕೈ ಬಿಟ್ಟಿರುವುದರ ಬಗ್ಗೆ ಜನರಿಗೆ ಮನದಟ್ಟಾಗಿದ್ದು, ಸರ್ಕಾರಕ್ಕೆ ಬಿಸಿ‌ಮುಟ್ಟಿಸಲು ಸನ್ನದ್ಧರಾಗಿದ್ದಾರೆ. ಆರೆಸ್ಸೆಸ್‌‌ ಕಾರ್ಯಸೂಚಿಯನ್ನು ಹಿಂಬಾಗಿಲಿನಿಂದ ಅನುಷ್ಠಾನಕ್ಕೆ ತರುವ ಪ್ರಯತ್ನಗಳ ಬಗ್ಗೆ ಮನದಟ್ಟಾಗಿದೆ. ಸ್ವಾರ್ಥಕ್ಕಾಗಿ ಯಾರನ್ನ ಬೇಕಾದರೂ ಬಲಿ ಕೊಡುತ್ತಾರೆ ಎಂಬುದು ಅರ್ಥವಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ‘ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜವನ್ನಲ್ಲ’ – ಡಿಕೆ ಶಿವಕುಮಾರ್‌

“ರೋಹಿತ್ ಚಕ್ರತೀರ್ಥನೋ, ವಕ್ರತೀರ್ಥನೋ ಎಂಬುದು ಗೊತ್ತಿಲ್ಲ. ನಾಗಪುರ ವಿಶ್ವವಿದ್ಯಾಲಯದಿಂದ ಬಂದ ಇವರುಗಳಿಗೆ ಜವಾಬ್ದಾರಿ ಇಲ್ಲ. ಪಠ್ಯ ಪುಸ್ತಕದಲ್ಲಿ ನಾಳೆ ಆರೆಸ್ಸೆಸ್ ಸೇರಿಸುವ ಅಂಶಗಳಿಗೆ ಪುರಾವೆ ಇರುವುದಿಲ್ಲ. ಆರೆಸ್ಸೆಸ್‌‌ಗೆ ಪುರಾವೆ ಇಲ್ಲ, ಅದು ನೊಂದಾಯಿತ ಸಂಸ್ಥೆಯೇ ಅಲ್ಲ, ಅದಕ್ಕೆ ಅಸ್ಥಿತ್ವವೇ ಇಲ್ಲ. ಖಾಕಿ ಚೆಡ್ಡಿ, ಕರಿ ಟೋಪಿಯನ್ನ ಸುಡುವ ಮೂಲಕ ಅವರ ಅಸ್ತಿತ್ವ ನಾಶಪಡಿಸುವುದನ್ನೇ ಸಿದ್ದರಾಮಯ್ಯನವರು ‘ಚಡ್ಡಿ ಸುಡುವ ಅಭಿಯಾನ’ ಎಂದು ಹೇಳಿದ್ದಾರೆ” ಎಂದು ಅವರು ಸಿದ್ದರಾಮಯ್ಯ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

‘ಖಾಕಿ ಚೆಡ್ಡಿ, ಕರಿ ಟೋಪಿ, ದೊಣ್ಣೆ ಹಿಡಿದುಕೊಂಡವರು ಈ ದೇಶವನ್ನ ಕಾಪಾಡುತ್ತಿದ್ದಾರೆ ಎನ್ನುವ ಮೂಲಕ ಈ ದೇಶದ ಮಿಲಿಟರಿ, ಅರೆಸೇನೆ, ಪೊಲೀಸ್ ವ್ಯವಸ್ಥೆಯನ್ನ ಬಿಜೆಪಿ ಅವಮಾನಿಸುತ್ತಿದೆ. 100 ವರ್ಷಗಳ ಈಚೆಗೆ ಬಂದ ಇವರು ನಾವು ಮಾತ್ರ ಹಿಂದೂ ಧರ್ಮವನ್ನ ಕಾಪಾಡುತ್ತೇವೆ ಎಂದು ಜನರ ಕಣ್ಣಿಗೆ ಮಣ್ಣರೆಚುವ ತಂತ್ರ ಮಾಡುತ್ತಿದ್ದಾರೆ. ವೇದ ಉಪನಿಷತ್ತು, ಭಗವದ್ಗೀತೆ ಸೇರಿದಂತೆ ಎಲ್ಲೂ ಕೂಡಾ ಖಾಕಿ ಚೆಡ್ಡಿ, ಕರಿ ಟೋಪಿಯ ಉಲ್ಲೇಖವಿಲ್ಲ. ಪ್ರಪಂಚದಲ್ಲಿ ಇದು ಕಾಣ ಸಿಗುವುದು ಜರ್ಮನಿಯ ಹಿಟ್ಲರ್ ಸೇನೆಯಲ್ಲಿ ಮಾತ್ರ. ಸುಳ್ಳು ಹೇಳುವುದೇ ಅವರ ಕಾಯಕ, ದೇಶವನ್ನ ಧರ್ಮಾಂಧತೆಯ ಅಫೀಮಿನಿಂದ ರಕ್ಷಿಸಬೇಕಿದೆ” ಎಂದು ಅವರು ಹೇಳಿದ್ದಾರೆ.

“ಈಗ ಖಾಕಿ ಚೆಡ್ಡಿ ಬದಲು ಪ್ಯಾಂಟ್ ಬಂದಿದೆ. ಇದು ಅವರ ಅಸ್ಮಿತೆಯನ್ನೇ ಅವರು ಕಳೆದು ಕೊಂಡಿರುವುದರ ಸಂಕೇತ. ಸರಳತೆ, ತ್ಯಾಗ ಎಂದು ಹೇಳುತ್ತಿದ್ದವರು ಈಗ ಯಾಕೆ ಪ್ಯಾಂಟ್ ಗೆ ಬದಲಾಯಿಸಿದ್ದಾರೆ? ಅದಕ್ಕೆ ಕಾರಣ 40% ಕಮಿಷನ್. ಕಮಿಷನ್ ಹಣದಿಂದಲೇ ಪ್ಯಾಂಟ್ ಹಾಗೂ ಹತ್ತು ಲಕ್ಷದ ಕೋಟ್ ಬಂದಿದೆ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಪಿಯುಸಿ ಪರಿಷ್ಕರಣೆಯ ‘ಚಕ್ರತೀರ್ಥ ವರದಿ’ ಪಡೆಯಲ್ಲ ಎಂದ ಸಚಿವ ಬಿಸಿ ನಾಗೇಶ್‌; ಜನಾಕ್ರೋಶಕ್ಕೆ ಮಣಿದ ಸರ್ಕಾರ

“ಸ್ವಾತಂತ್ರ್ಯ ಹೋರಾಟಕ್ಕೆ ವಿರುದ್ದವಾಗಿದ್ದವರು ಆರೆಸ್ಸೆಸ್‌. ಹಿಂದಿ ಭಾಷಿಕ ರಾಜ್ಯಗಳು ಬಿಟ್ಟು ಬೇರೆ ಕಡೆ ಅವರ ಪ್ರಭಾವ ಬೀರಿದೆಯಾ? ದೇಶ ಅಂದ್ರೆ ಕೇವಲ ಹಿಂದಿ ರಾಜ್ಯಗಳಲ್ಲ. ಎಲ್ಲರನ್ನೂ ಒಳಗೊಳ್ಳಬೇಕೆಂದು ನೆಹರೂ ಅವರು ತಮ್ಮ ಸಂಪುಟದಲ್ಲಿ ಸೈದ್ದಾಂತಿಕ ಭಿನ್ನಾಭಿಪ್ರಾಯ ಇದ್ದ ಶ್ಯಾಂ ಪ್ರಸಾದ್ ಮುಖರ್ಜಿಯನ್ನು ಸಚಿವರನ್ನಾಗಿ ಮಾಡಿದ್ದರು. ಅಂಬೇಡ್ಕರ್ ಅವರಿಗೂ ಅವಕಾಶ ನೀಡಿದ್ದರು‌. ಕೆಲವು ಮುಸ್ಲಿಂ ಲೀಗ್‌ನವರಿಗೂ ಸಚಿವ ಸ್ಥಾನ ನೀಡಲಾಗಿತ್ತು. ನರೇಂದ್ರ ಮೋದಿ ಬಂದ ಮೇಲೆ ಅವರ ವಿರುದ್ಧ ಮಾತಾಡುವವರು ದೇಶದ್ರೋಹಿಗಳೆಂದು ಪಟ್ಟ ಕಟ್ಟಲಾಗ್ತಿದೆ. ಎಂಟು ವರ್ಷಗಳಲ್ಲಿ ದೇಶಕ್ಕೆ ಒಂದೇ ಒಂದು ಕೆಲಸ ಮಾಡಲಿಲ್ಲ” ಎಂದು ಅವರು ಕಿಡಿ ಕಾರಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...

ಸಿಎಂ ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ‘ಸ್ಕ್ಯಾಮ್ ಲಾರ್ಡ್’ ಪೋಸ್ಟ್: ಕರ್ನಾಟಕ ಬಿಜೆಪಿ ಎಕ್ಸ್ ಹ್ಯಾಂಡಲ್ ವಿರುದ್ಧ ಪ್ರಕರಣ ದಾಖಲು

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಇತರ ಸಚಿವರನ್ನು ಗುರಿಯಾಗಿಸಿಕೊಂಡು "ಮಾನಹಾನಿಕರ" ಪೋಸ್ಟ್ ಪೋಸ್ಟ್ ಮಾಡಿದ್ದಕ್ಕಾಗಿ ಮತ್ತು ರಾಜ್ಯವನ್ನು "ಲೂಟಿ" ಮಾಡುವಲ್ಲಿ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿಯ 'ಎಕ್ಸ್'...

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...