Homeಕರ್ನಾಟಕಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

- Advertisement -
- Advertisement -

ಬಲಪಂಥೀಯ ಬರಹಗಾರ ರೋಹಿತ್‌ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪರಿಶೀಲಿಸಲಾಗಿರುವ ಪಠ್ಯದಲ್ಲಿರುವ ಹಲವು ತಪ್ಪಗಳು, ವಿವಾದಾತ್ಮಕ ಸಂಗತಿಗಳು ಮುನ್ನೆಲೆಗೆ ಬರುತ್ತಿವೆ. ಈ ವಿದ್ಯಮಾನಕ್ಕೆ ‘ಮನುಸ್ಮೃತಿ’ಯ ಕುರಿತು ಬರೆದಿರುವ ಸಾಲು ಸೇರಿಕೊಂಡಿದೆ.

ಸಮಾಜ ಧರ್ಮಮಾರ್ಗದಲ್ಲಿ ನಡೆಯಲು ತಿಳಿಸಿದ ಕೃತಿಗಳ ಪಟ್ಟಿಯಲ್ಲಿ ‘ಮನುಸ್ಮೃತಿ’ಯೂ ಸೇರಿಕೊಂಡಿದೆ.

ರೋಹಿತ್‌ ಚಕ್ರತೀರ್ಥ ಸಮಿತಿಯು ‘ಸನಾತನ ಧರ್ಮ’ ಎಂಬ ಪಾಠವನ್ನು ಎಂಟನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಸೇರಿಸಿದೆ. ವೇದ, ವೇದ ಸಾಹಿತ್ಯ, ವೇದ ಸ್ವರೂಪ, ಸಂಹಿತೆ, ಬ್ರಾಹ್ಮಣ, ಆರಣ್ಯಕ, ಉಪನಿಷತ್ತು, ಆಸ್ತಿಕ ಮತ್ತು ನಾಸ್ತಿಕ ಪಂಥಗಳು, ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು, ಮತಗಳು ಹಾಗೂ ಮತಾಚಾರ್ಯರು, ಜೈನ ಮತ್ತು ಬೌದ್ಧ ಮತಗಳು, ವಿಗ್ರಹಾರಾಧನೆ ಆರಂಭ, ಐಕ್ಯ ಇದ್ದರೂ ವೈವಿಧ್ಯಮಯ ಧರ್ಮ- ಇತ್ಯಾದಿ ಉಪಶೀರ್ಷಿಕೆಗಳಲ್ಲಿ ಪಾಠವನ್ನು ಸಮಿತಿ ರೂಪಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

‘ಸ್ಮೃತಿ ಸಾಹಿತ್ಯದ ಮೂರು ವಿಭಾಗಗಳು’ ಉಪಶೀರ್ಷಿಕೆಯಲ್ಲಿ ಬರೆಯುತ್ತಾ, “ಧರ್ಮಶಾಸ್ತ್ರವು ವ್ಯಕ್ತಿಯ ಧಾರ್ಮಿಕ ಬದುಕಿಗೆ ಮತ್ತು ಸುಸಂಸ್ಕೃತ ಸಮಾಜ ವ್ಯವಸ್ಥೆಗೆ ಅಗತ್ಯವಾದ ನಿಯಮಗಳನ್ನು ತಿಳಿಸುತ್ತದೆ. ಮನುಸ್ಮೃತಿ, ಯಾಜ್ಞವಲ್ಕ್ಯ ಸ್ಮೃತಿ, ಪರಾಶನ ಸ್ಮೃತಿ ಮುಂತಾದ ಹಲವು ಗ್ರಂಥಗಳಲ್ಲಿ ಸಮಾಜವು ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂಬ ಸೂಚನೆಗಳಿವೆ” ಎಂದು ಉಲ್ಲೇಖಿಸಲಾಗಿದೆ.

ರಾಮಾಯಣ ಮಹಾಭಾರತ ಐತಿಹಾಸಿಕ ಕೃತಿ

“ಸ್ಮೃತಿ ಸಾಹಿತ್ಯದ ಎರಡನೆ ಭಾಗ ಐತಿಹಾಸ ಗ್ರಂಥಗಳೆನಿಸುವ ರಾಮಾಯಣ, ಮಹಾಭಾರತ; ಹದಿನೆಂಟು ಪುರಾಣಗಳು ಹಾಗೂ ಅಷ್ಟೇ ಸಂಖ್ಯೆಯ ಉಪಪುರಾಣಗಳು. ಅಂತೆಯೇ ಪೌರಾಣಿಕ ಉಪನಿಷತ್ತುಗಳು ಹಾಗೂ ಪೌರಾಣಿಕ ಗೀತೆಗಳು ಈ ಭಾಗದಲ್ಲಿ ಬರುತ್ತವೆ” ಎಂಬ ವಿವರಣೆಯನ್ನು ಇದೇ ಪಾಠದಲ್ಲಿ ಬರೆಯಲಾಗಿದೆ. ರಾಮಾಯಣ ಮತ್ತು ಮಹಾಭಾರತಗಳನ್ನು ಇತಿಹಾಸ ಪಠ್ಯಗಳೆಂದು ಸಂಘಪರಿವಾರ ಮೊದಲಿನಿಂದಲೂ ಪ್ರತಿಪಾದಿಸುತ್ತಾ ಬಂದಿದ್ದು, ಈಗ ಆ ಪ್ರತಿಪಾದನೆ ಪಠ್ಯವನ್ನೂ ಸೇರಿದೆ.

ಮನುಸ್ಮೃತಿಯನ್ನು ಸುಟ್ಟು ಹಾಕಿದ್ದರು ಬಾಬಾ ಸಾಹೇಬರು

ಒಂದೆಡೆ “ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌” ಎಂಬ ಸಾಲನ್ನು ಕಿತ್ತು ಹಾಕಿರುವ ಸಮಿತಿ, ಅದೇ ಅಂಬೇಡ್ಕರ್‌ ಅವರು ಸುಟ್ಟು ಹಾಕಿದ ‘ಮನುಸ್ಮೃತಿ’ಯನ್ನು ಶ್ಲಾಘಿಸಿರುವುದು ಪಠ್ಯದಲ್ಲಿ ಕಂಡು ಬರುತ್ತಿದೆ.

ಶೂದ್ರರು, ಮಹಿಳೆಯರು ಮತ್ತು ಪಂಚಮರನ್ನು ಅಂತ್ಯಂತ ನಿಷ್ಕೃತವಾಗಿ ಕಾಣುವ ಮನುಸ್ಮೃತಿಯನ್ನು ಡಾ.ಬಿ.ಆರ್‌.ಅಂಬೇಡ್ಕರ್‌ ಸಾರ್ವಜನಿಕವಾಗಿ ಸುಟ್ಟು ಹಾಕಿ ಪ್ರತಿಭಟಿಸಿದ್ದು ಈಗ ಇತಿಹಾಸ.

ಭಾರತದ ಚರಿತ್ರೆಯಲ್ಲಿ ಡಿಸೆಂಬರ್ 25 ಬಹು ಮುಖ್ಯವಾದ ದಿನ. ಅಸ್ಪೃಶ್ಯತೆ, ಶ್ರೇಣೀಕೃತ ಜಾತಿ ಪದ್ಧತಿ, ತಾರತಮ್ಯಗಳ ಅಪಮೌಲ್ಯಗಳನ್ನೇ ಮೌಲ್ಯಗಳನ್ನಾಗಿಸಿ ಭಾರತೀಯ ಸುಪ್ತ ಮನಸ್ಸನ್ನು ಆಳುತ್ತಿರುವ ‘ಮನುಸ್ಮೃತಿ’ ಎಂಬ ‘ಭೂತಕಾಲದ ಸಂವಿಧಾನ’ವನ್ನು ಡಾ‌. ಬಿ.ಆರ್. ಅಂಬೇಡ್ಕರ್ ಸಾರ್ವಜನಿಕವಾಗಿ ಸುಟ್ಟು ಪ್ರತಿಭಟಿಸಿದ ದಿನವದು.

ಭಾರತದ ಹಿಂದೂ ಮನಸ್ಸು ಬದಲಾಗಬಹುದು, ಹಿಂದೂ ಧರ್ಮವನ್ನು ಒಳಗಿದ್ದುಕೊಂಡೇ ಸುಧಾರಿಸಬಹುದೇನೋ ಎನ್ನುವ ನಂಬಿಕೆಯಲ್ಲಿ ಮಹಾಡ್, ಚೌಡಾರ್ ಸತ್ಯಾಗ್ರಹಗಳನ್ನು ನಡೆಸಿದ ಅಂಬೇಡ್ಕರ್ ಅವರಿಗೆ ದೊಡ್ಡ ನಿರಾಶೆ ಕಾದಿತ್ತು. ಆಗಿನ ಸರ್ಕಾರ 1923 ರಲ್ಲೆ The Bole Resolution ಮೂಲಕ ಸಾರ್ವಜನಿಕ ಹಣದಲ್ಲಿ ನಿರ್ಮಾಣವಾಗಿರುವ ಕೆರೆಗೆಳು, ಬಾವಿಗಳು, ಧರ್ಮಶಾಲೆಗಳು ಸೇರಿದಂತೆ ಎಲ್ಲ ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು ಅನ್ನುವ ಕಾಯ್ದೆ ತಂದಿದ್ದರೂ ಅಸ್ಪೃಶ್ಯರಿಗೆ ಸಾರ್ವಜನಿಕ ಸ್ಥಳಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು.

ತಮಗೆ ಇದ್ದ ಹಕ್ಕನ್ನು ಪಡೆಯುವುದಕ್ಕಾಗಿಯೇ ಅಂಬೇಡ್ಕರ್ ಚೌಡಾರ್ ಕೆರೆ ನೀರನ್ನು ಸಾರ್ವಜನಿಕವಾಗಿ ಕುಡಿಯುವ ಚಳುವಳಿಯನ್ನು ಆಯೋಜಿಸಿದರು. ಆದರೆ ಅಸ್ಪೃಶ್ಯರು ಮುಟ್ಟಿದ್ದಕ್ಕಾಗಿ ಕೆರೆಯೆ ಮಲಿನವಾಯಿತೆಂದು ಗೋಳಾಡಿದ ಸವರ್ಣೀಯ ಜನ ಹಸುವಿನ ಸಗಣಿ, ಗಂಜಲ, ಹಾಲು, ತುಪ್ಪ, ಮೊಸರನ್ನು ಸುರಿದು ವೇದಗಳನ್ನು ಪಠಿಸುತ್ತಾ ಕೆರೆಯ ‘ಶುದ್ದೀಕರಣ’ ಮಾಡಿದರು. ದಲಿತರು ತಮ್ಮ ಹಕ್ಕುಗಳಿಗಾಗಿ ಆಗ್ರಹಿಸಿದರೆ ವಿದ್ಯಾವಂತ, ಪ್ರಗತಿಪರ ಹಿಂದೂಗಳು ಅವರ ಜೊತೆಗೂಡಿ ಹೋರಾಟ ಮಾಡಬಹುದು ಹಿಂದೂ ಧರ್ಮ ಸುಧಾರಣೆಗೆ ಇದು ಕೂಡ ನೆರವಾಗಬಹುದು ಎಂಬ ಅಂಬೇಡ್ಕರ್ ನಿರೀಕ್ಷೆ ಸುಳ್ಳಾಯಿತು. ಮಹಾಡ್, ಚೌಡಾರ್ ಸತ್ಯಾಗ್ರಹಗಳಲ್ಲಿ ಶಾಂತಿಯುತವಾಗಿ ಹೋರಾಟ ಮಾಡುತ್ತಿದ್ದವರ ಮೇಲೆ ಹಿಂಸಾತ್ಮಕವಾದ ದಾಳಿಗಳನ್ನು ಮೇಲ್ಜಾತಿಗಳು ಮಾಡಿದವು.

ಇದನ್ನೂ ಓದಿರಿ: ಚರಂಡಿಯಲ್ಲಿ ಇರಬೇಕಾದವನನ್ನು ಬಿಸಿ ನಾಗೇಶ್‌ ಪಠ್ಯ ಪರಿಷ್ಕರಣಾ ಸಮಿತಿ ಅಧ್ಯಕ್ಷ ಮಾಡಿದ್ದಾರೆ: ಬಿಕೆ ಹರಿಪ್ರಸಾದ್ ವಾಗ್ದಾಳಿ

ಇದಾದ ಒಂಬತ್ತು ತಿಂಗಳ ನಂತರ ಚೌಡಾರ್ ಸತ್ಯಾಗ್ರಹವನ್ನು ಅಂಬೇಡ್ಕರ್ ಆಯೋಜಿಸಿದರು. ಆಗ ಮತ್ತೆ ಸವರ್ಣೀಯರು ಹಿಂದೂಗಳು ಚೌಡಾರ್ ಕೆರೆ ಸಾರ್ವಜನಿಕ ಆಸ್ತಿಯಲ್ಲ ಖಾಸಗಿ ಸ್ವತ್ತು ಎಂದು ಕೋರ್ಟಿಗೆ ಹೋದರು. ಸತ್ಯಾಗ್ರಹ ತಡೆಯಲು ಪ್ರಯತ್ನ ಮಾಡಿದರು. ಇಷ್ಟೆಲ್ಲ ಪ್ರತಿಕೂಲ ಸನ್ನಿವೇಶಗಳ ನಡುವೆಯೂ ಸತ್ಯಾಗ್ರಹ ನಡೆಸಿದ ಅಂಬೇಡ್ಕರ್ ಡಿಸೆಂಬರ್ 25, 1927 ರಂದು ಹಿಂದೂ ಧರ್ಮದ ಆಧಾರವಾಗಿರುವ, ಬ್ರಾಹ್ಮಣ್ಯವನ್ನು ಎತ್ತಿ ಹಿಡಿಯುವ ಸೈದ್ದಾಂತಿಕ ಗ್ರಂಥವಾಗಿರುವ ‘ಮನುಸ್ಮೃತಿ’ಯನ್ನು ಸಾರ್ವಜನಿಕವಾಗಿ ಸುಟ್ಟು ಹಿಂದೂ ಧರ್ಮದ ಕರ್ಮಠತನ, ಅಸಮಾನತೆಯ ವಿರುದ್ಧ ಸಮರ ಸಾರಿದರು.

ವಿಶೇಷವೆಂದರೆ ಈ ಸಮಾವೇಶದಲ್ಲಿ ಮನುಸ್ಮೃತಿಗೆ ಸಾರ್ವಜನಿಕವಾಗಿ ಬೆಂಕಿ ಇಟ್ಟವರು ಬಾಪೂಸಾಹೇಬ ಸಹಸ್ರಬುದ್ಧೆ ಎನ್ನುವ ಪ್ರಗತಿಪರ ಬ್ರಾಹ್ಮಣರು. ಇದಾದ ಮೇಲೆ ಹಿಂದೂ ಧರ್ಮದ ಒಳಗಿದ್ದು ಅದನ್ನು ಸುಧಾರಿಸುವುದು ಸಾಧ್ಯವಿಲ್ಲ ಎಂದು ಮನಗಂಡು ಅಂಬೇಡ್ಕರ್ ಹಿಂದೂ ಧರ್ಮ ತ್ಯಜಿಸುವ ನಿರ್ಧಾರ ಮಾಡಿದರು‌. ಹಿಂದೂ ಧರ್ಮದಲ್ಲಿ ಹುಟ್ಟಿದ್ದೇನೆ ಆದರೆ ಹಿಂದೂವಾಗಿ ಸಾಯುವುದಿಲ್ಲ ಎಂದು ಸಾರ್ವಜನಿಕವಾಗಿ ಘೋಷಿಸಿದರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...

ಕಾಂಗ್ರೆಸ್ ಆಳ್ವಿಕೆಯಲ್ಲಿ ನುಸುಳಲುಕೋರರು ಬಹುಸಂಖ್ಯಾತರಾದರು; ನುಸುಳುಕೋರರಿಂದ ಅಸ್ಸಾಂ ರಕ್ಷಿಸಲು ಬಿಜೆಪಿಗೆ ಮತ ಹಾಕಿ: ಅಮಿತ್ ಶಾ

ಧೇಮಾಜಿ (ಅಸ್ಸಾಂ): ಕಾಂಗ್ರೆಸ್ ಆಳ್ವಿಕೆಯಲ್ಲಿ ಅಸ್ಸಾಂನ ಜನಸಂಖ್ಯಾಶಾಸ್ತ್ರ ಬದಲಾಗಿದೆ ಎಂದು ಹೇಳಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ , ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ನೇತೃತ್ವದ ಸರ್ಕಾರ ಈ ಪ್ರವೃತ್ತಿಯನ್ನು...

ಕೊಲ್ಕತ್ತಾ ಅಗ್ನಿ ಅವಘಡ| ಈವರೆಗೆ ವಾವ್ ಮೊಮೋ ಕಂಪನಿ ಗೋದಾಮು ಸೇರಿದಂತೆ ಇತರೆಡೆ 21 ಜನರು ಸಾವನ್ನಪ್ಪಿರುವ ಮಾಹಿತಿ ಲಭ್ಯ  

ಜನವರಿ 26 ರ ಮುಂಜಾನೆ ಕೋಲ್ಕತ್ತಾದ ಆನಂದಪುರ ಪ್ರದೇಶದಲ್ಲಿ ಸಂಭವಿಸಿದ ಭೀಕರ ಬೆಂಕಿ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಗುರುವಾರ 21 ಕ್ಕೆ ಏರಿದ್ದು, 28 ಜನರು ಇನ್ನೂ ನಾಪತ್ತೆಯಾಗಿದ್ದಾರೆ.  ಬೆಂಕಿಯ ಅವಘಡದಲ್ಲಿ ಎರಡು ಗೋದಾಮುಗಳು...

ಮುಟ್ಟಿನ ಆರೋಗ್ಯ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ : ಸುಪ್ರೀಂ ಕೋರ್ಟ್

ಮುಟ್ಟಿನ ಆರೋಗ್ಯ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಮೂಲಭೂತ ಹಕ್ಕು, ಬದುಕುವ ಹಕ್ಕಿನ ಭಾಗ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ (ಜ.30) ಮಹತ್ವದ ತೀರ್ಪು ನೀಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಿ,...

ಅತ್ಯಾಚಾರ ಪ್ರಕರಣದಲ್ಲಿ ಎಸ್‌ಪಿ ನಾಯಕ ಮೊಯಿದ್ ಖಾನ್ ಖುಲಾಸೆ: ಬಂಧನದ ಎರಡು ವರ್ಷಗಳ ನಂತರ ಬುಲ್ಡೋಜರ್ ನಿಂದ ಮನೆ ಕೆಡವಿದ್ದ ಯೋಗಿ ಸರ್ಕಾರ

2024 ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸಮಾಜವಾದಿ ಪಕ್ಷದ ನಾಯಕ ಮೊಯಿದ್ ಖಾನ್ ಅವರನ್ನು ಉತ್ತರ ಪ್ರದೇಶದ ಅಯೋಧ್ಯೆಯ ಪೋಕ್ಸೋ ನ್ಯಾಯಾಲಯವು ಖುಲಾಸೆಗೊಳಿಸಿದೆ.  ಅಪ್ರಾಪ್ತ ಬಾಲಕಿಯ ಮೇಲೆ ನಡೆದ...