Homeಮುಖಪುಟಉತ್ತರ ಪ್ರದೇಶ: ಪಬ್‌ಜಿ ಆಡುವುದನ್ನು ತಡೆದ ತಾಯಿಯನ್ನು ಕೊಲೆ ಮಾಡಿದ ಬಾಲಕ

ಉತ್ತರ ಪ್ರದೇಶ: ಪಬ್‌ಜಿ ಆಡುವುದನ್ನು ತಡೆದ ತಾಯಿಯನ್ನು ಕೊಲೆ ಮಾಡಿದ ಬಾಲಕ

- Advertisement -
- Advertisement -

ಮೊಬೈಲ್‌ನಲ್ಲಿ ಪಬ್‌ಜಿ ಗೇಮ್ ಆಡುವುದನ್ನು ತಡೆದ ತನ್ನ ತಾಯಿಯ ಮೇಲೆ 16 ವರ್ಷದ ಬಾಲಕನೊಬ್ಬ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಕೊಲೆ ಮಾಡಿ ಎರಡು ದಿನಗಳ ಕಾಲ ಆಕೆಯ ಶವವನ್ನು ಮನೆಯಲ್ಲಿಯೇ ಬಚ್ಚಿಟ್ಟಿದ್ದಾನೆ.

ಪಬ್‌ಜಿ ಗೇಮ್ ವ್ಯಸನಿಯಾಗಿದ್ದ ಮಗನನ್ನು ಆಟವಾಡದಂತೆ ತಾಯಿ ತಡೆಯುತ್ತಿದ್ದರು. ಬಾಲಕನ ತಂದೆ ಸೇನಾಧಿಕಾರಿಯಾಗಿದ್ದು, ಭಾನುವಾರ ಮುಂಜಾನೆ ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್‌ನಿಂದ ತನ್ನ ತಾಯಿಯನ್ನು ಶೂಟ್ ಮಾಡಿದ್ದಾನೆ. ತಲೆಗೆ ಗುಂಡು ತಗುಲಿದ ಸ್ವಲ್ಪ ಸಮಯದ ನಂತರ ಮಹಿಳೆ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಾವನ್ನಪ್ಪಿದ್ದ ತನ್ನ ತಾಯಿಯ ಮೃತದೇಹವನ್ನು ಮನೆಯಲ್ಲಿಯೇ ಬಚ್ಚಿಟ್ಟಿದ್ದ ಬಾಲಕ ಎರಡು ದಿನಗಳ ಕಾಲ ತನ್ನ ಒಂಬತ್ತು ವರ್ಷದ ತಂಗಿಯೊಂದಿಗೆ ಮನೆಯಲ್ಲಿದ್ದರು. ಶವದ ದುರ್ವಾಸನೆ ತಡೆಯಲು ಬಾಲಕ ರೂಮ್ ಫ್ರೆಶ್ನರ್ ಬಳಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಧರ್ಮಮಾರ್ಗದಲ್ಲಿ ಹೇಗೆ ನಡೆಯಬೇಕೆಂದು ತಿಳಿಸಿದ ಕೃತಿ ‘ಮನುಸ್ಮೃತಿ’: ಹೊಸ ಪಠ್ಯದಲ್ಲಿ ಉಲ್ಲೇಖ!

ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಬಾಲಕನ ಸಹೋದರಿ ಪೊಲೀಸರಿಗೆ ತಿಳಿಸಿದ್ದಾರೆ. ಪ್ರಕರಣದ ಆರಂಭದಲ್ಲಿ, ಸುಳ್ಳು ಕಥೆಯನ್ನು ಕಟ್ಟಿ ಕೆಲಸದ ನಿಮಿತ್ತ ಮನೆಗೆ ಭೇಟಿ ನೀಡಿದ ಎಲೆಕ್ಟ್ರಿಷಿಯನ್ ತನ್ನ ತಾಯಿಯನ್ನು ಗುಂಡಿಕ್ಕಿ ಕೊಂದಿದ್ದಾನೆ ಎಂದು ತಂದೆಗೆ ತಿಳಿಸಿದ್ದನು.

“ಬಾಲಕ ಪೊಲೀಸರಿಗೆ ಅದೇ ಕಥೆಯನ್ನು ಹೇಳಿದನು. ಆದರೆ ನಾವು ತನಿಖೆ ನಡೆಸಿದ್ದೇವೆ. ಇದು ಸಂಪೂರ್ಣವಾಗಿ ಕಾಲ್ಪನಿಕ ಎಂದು ನಮಗೆ ತಿಳಿದು ಬಂದಿದೆ. ಬಳಿಕ ನಾವು ಹುಡುಗನನ್ನು ಕಸ್ಟಡಿಗೆ ತೆಗೆದುಕೊಂಡೆವು” ಎಂದು ಲಕ್ನೋದ ಹಿರಿಯ ಪೊಲೀಸ್ ಅಧಿಕಾರಿ ಎಸ್‌ಎಂ ಖಾಸಿಮ್ ಅಬಿದಿ ಹೇಳಿದ್ದಾರೆ.

ಪೊಲೀಸರ ವಿಚಾರಣೆಯ ಸಮಯದಲ್ಲಿ ಬಾಲಕ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ಎಸ್‌ಎಂ ಖಾಸಿಮ್ ಅಬಿದಿ ತಿಳಿಸಿದ್ದಾರೆ.


ಇದನ್ನೂ ಓದಿ: ಹೈದರಾಬಾದ್ ಗ್ಯಾಂಗ್ ರೇಪ್ : ಸಂತ್ರಸ್ತೆಯ ವಿಡಿಯೋ ಹಂಚಿಕೊಂಡಿದ್ದ ಬಿಜೆಪಿ ಶಾಸಕನ ಮೇಲೆ FIR

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಎಎಪಿಯನ್ನು ಹತ್ತಿಕ್ಕಲು ಬಿಜೆಪಿ ಆಪರೇಷನ್ ಜಾದು ಆರಂಭಿಸಿದೆ..’; ಅರವಿಂದ್ ಕೇಜ್ರಿವಾಲ್

0
"ಪ್ರಧಾನಿ ನರೇಂದ್ರ ಮೋದಿ ಅವರು ಯಾರನ್ನಾದರೂ ಜೈಲಿಗೆ ಕಳುಹಿಸಬಹುದು" ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರೊಂದಿಗೆ ಇಂದು ಬಿಜೆಪಿ ಕೇಂದ್ರ ಕಚೇರಿಗೆ ಯೋಜಿತ...